2020ಕ್ಕೆ ಮಾರುತಿ ಸುಜುಕಿ 7 ಸೀಟರ್ ವಿಟಾರಾ ಎಸ್‌ಯುವಿ ಬಿಡುಗಡೆ ಪಕ್ಕಾ!

ದೇಶದ ಜನಪ್ರಿಯ ಕಾರು ಉತ್ಪಾದನಾ ಮತ್ತು ಮಾರಾಟ ಸಂಸ್ಥೆಯಾದ ಮಾರುತಿ ಸುಜುಕಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರು ಉತ್ಪನ್ನಗಳನ್ನು ಪರಿಚಯಿಸುವ ಇರಾದೆಯಲ್ಲಿದ್ದು, ಸದ್ಯ ಮಾರುಕಟ್ಟೆಲ್ಲಿರುವ ಮಧ್ಯಮ ಗಾತ್ರದ ಪ್ರಮುಖ ಎಸ್‌ಯುವಿಗಳಿಗೆ ಪೈಪೋಟಿ ನೀಡಬಲ್ಲ ವಿಟಾರಾ ಎಸ್‌ಯುವಿ ಕಾರನ್ನು ಬಿಡುಗಡೆಗಾಗಿ ಸಿದ್ದಗೊಳಿಸುತ್ತಿದೆ.

2020ಕ್ಕೆ ಮಾರುತಿ ಸುಜುಕಿ 7 ಸೀಟರ್ ವಿಟಾರಾ ಎಸ್‌ಯುವಿ ಬಿಡುಗಡೆ ಪಕ್ಕಾ!

ವಿಟಾರಾ ಬ್ರೆಝಾ ಕಾರುಗಳಿಂತಲೂ ವಿಭಿನ್ನವಾಗಿರುವ ವಿಟಾರಾ ಕಾರುಗಳು ಎಸ್ ಕ್ರಾಸ್‌ ಕಾರುಗಳಿಂತಲೂ ಹೆಚ್ಚಿನ ಮಟ್ಟದ ಐಷಾರಾಮಿ ಸೌಲಭ್ಯಗಳನ್ನು ಹೊಂದಿರಲಿದ್ದು, 2020ರ ಮೊದಲ ತ್ರೈಮಾಸಿಕ ಅವಧಿಗೆ ಭಾರತದಲ್ಲಿ ಬಿಡುಗಡೆಗೊಳಿಸುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಕಾರಿನ ಉತ್ಪಾದನಾ ಕಾರ್ಯಯೋಜನೆ ಭರದಿಂದ ಸಾಗಿದ್ದು, ಹಂಗೇರಿಯಲ್ಲಿರುವ ಸುಜುಕಿ ಸಂಸ್ಥೆಯ ಉತ್ಪಾದನಾ ಘಟಕದಲ್ಲಿ ಹೊಸ ವಿಟಾರಾ ಕಾರುಗಳು ಅಂತಿಮ ಹಂತದ ರೂಪ ಪಡೆದುಕೊಳ್ಳುತ್ತಿವೆ.

2020ಕ್ಕೆ ಮಾರುತಿ ಸುಜುಕಿ 7 ಸೀಟರ್ ವಿಟಾರಾ ಎಸ್‌ಯುವಿ ಬಿಡುಗಡೆ ಪಕ್ಕಾ!

ಮಾರುತಿ ಸುಜುಕಿ ಸಂಸ್ಥೆಯು ಈ ಹಿಂದಿನ ವಿಟಾರಾ ಗ್ರ್ಯಾಂಡ್ ಎಸ್‌ಯುವಿ ಮಾರಾಟದಲ್ಲಿ ಆದ ಹಿನ್ನಡೆಯನ್ನು ಹೊಸ ಕಾರಿನ ಮೂಲಕ ಸುಧಾರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದು, 2020ರಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಹ್ಯುಂಡೈ ಕ್ರೆಟಾ 7 ಸೀಟರ್ ಮತ್ತು ಮಹೀಂದ್ರಾ ಎಕ್ಸ್‌ಯುವಿ 500 ನೆಕ್ಸ್ಟ್ ಜನರೇಷನ್ ಕಾರುಗಳಿಗೆ ಈ ಕಾರು ತೀವ್ರ ಪೈಪೋಟಿ ನೀಡಲಿದೆ.

2020ಕ್ಕೆ ಮಾರುತಿ ಸುಜುಕಿ 7 ಸೀಟರ್ ವಿಟಾರಾ ಎಸ್‌ಯುವಿ ಬಿಡುಗಡೆ ಪಕ್ಕಾ!

ಹೀಗಾಗಿ ಮಿಡ್ ರೇಂಜ್ ಎಸ್‍ಯುವಿ ವೈಶಿಷ್ಟ್ಯತೆ ಹೊಂದಿರುವ ವಿಟಾರಾ ಕಾರು ಕೂಡಾ 2020ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಮೇಳದಲ್ಲಿ ಪ್ರದರ್ಶನ ನಂತರ ಬಿಡುಗಡೆಗೊಳಿಸಲು ನಿರ್ಧರಿಸುವ ಮಾರುತಿ ಸುಜುಕಿಯ ಹೊಸ ಎಸ್‍ಯುವಿ ಕಾರು ಅನ್ನು ಈಗಾಗಲೇ ದೇಶದ ವಿವಿಧ ಕಡೆಗಳಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕೂಡಾ ನಡೆಸಲಾಗಿದೆ.

2020ಕ್ಕೆ ಮಾರುತಿ ಸುಜುಕಿ 7 ಸೀಟರ್ ವಿಟಾರಾ ಎಸ್‌ಯುವಿ ಬಿಡುಗಡೆ ಪಕ್ಕಾ!

ಸದ್ಯ ಸುಜುಕಿ ವಿಟಾರಾ ಸಾಮಾನ್ಯ 5 ಸೀಟರ್ ಮಾದರಿಯು ಈಗಾಗಲೇ ಯೂರೋಪ್‍ನ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ ಮಾರಾಟಗೊಳ್ಳುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಲ್ಲಿ ದೊರೆಯುತ್ತಿದೆ. ಹೀಗಾಗಿ ಭಾರತದಲ್ಲಿ ಬಿಡುಗಡೆಯಾಗಲಿರುವ 7 ಸೀಟರ್ ಮಾದರಿಯ ವಿಟಾರಾ ಕಾರು ಕೂಡಾ ಆಕರ್ಷಣೆಗೆ ಕಾರಣವಾಗಲಿದ್ದು, ಕಾರಿನ ಬೆಲೆಯು ಆರಂಭಿಕವಾಗಿ ರೂ. 13 ಲಕ್ಷ ದಿಂದ ರೂ. 17 ಲಕ್ಷದೊಳಗೆ ನಿರ್ಧರಿಸುವ ಸಾಧ್ಯತೆಯಿದೆ.

2020ಕ್ಕೆ ಮಾರುತಿ ಸುಜುಕಿ 7 ಸೀಟರ್ ವಿಟಾರಾ ಎಸ್‌ಯುವಿ ಬಿಡುಗಡೆ ಪಕ್ಕಾ!

ಎಂಜಿನ್ ಸಾಮರ್ಥ್ಯ

ವಿದೇಶಿ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿರುವ ವಿಟಾರಾ ಕಾರುಗಳು ಕೇವಲ ಪೆಟ್ರೋಲ್ ಆವೃತ್ತಿಯಲ್ಲಿ ಮಾತ್ರವೇ ಲಭ್ಯವಿದ್ದು, 1.0-ಲೀಟರ್ ಮತ್ತು 1.4-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಆಯ್ಕೆಗಳನ್ನು ಹೊಂದಿದ್ದು, 140-ಬಿಹೆಚ್‍ಪಿ ಮತ್ತು 230-ಎನ್ಎಂ ಟಾರ್ಕ್ಅನ್ನು ಉತ್ಪಾದನಾ ಸಾಮರ್ಥ್ಯ ಪಡೆದಿವೆ.

2020ಕ್ಕೆ ಮಾರುತಿ ಸುಜುಕಿ 7 ಸೀಟರ್ ವಿಟಾರಾ ಎಸ್‌ಯುವಿ ಬಿಡುಗಡೆ ಪಕ್ಕಾ!

ಆದ್ರೆ ಭಾರತದಲ್ಲಿ 7 ಸೀಟರ್ ಆವೃತ್ತಿ ಬರಲಿರುವ ವಿಟಾರಾ ಕಾರುಗಳಲ್ಲಿ 1.0-ಲೀಟರ್ ಬೂಸ್ಟರ್‌ಜೆಟ್ ಟರ್ಬೋ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗುತ್ತಿದೆ ಎಂಬ ಮಾಹಿತಿಗಳಿದ್ದು, ಡೀಸೆಲ್ ಆವೃತ್ತಿಯು 1.5-ಲೀಟರ್ ಎಂಜಿನ್ ಹೊಂದಿರಲಿವೆ ಎನ್ನಲಾಗಿದೆ.

MOST READ: ಮಗುವಿನ ಪ್ರಾಣವನ್ನು ಉಳಿಸಲು 600 ಕಿ.ಮೀ ದೂರವನ್ನು ಕೇವಲ 720 ನಿಮಿಷಗಳಲ್ಲಿ ತಲುಪಿದ ಆಂಬ್ಯುಲೆನ್ಸ್ ಡ್ರೈವರ್

2020ಕ್ಕೆ ಮಾರುತಿ ಸುಜುಕಿ 7 ಸೀಟರ್ ವಿಟಾರಾ ಎಸ್‌ಯುವಿ ಬಿಡುಗಡೆ ಪಕ್ಕಾ!

ಜೊತೆಗೆ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮಾರುತಿ ಸುಜುಕಿ ವಿಟಾರಾ ಕಾರುಗಳು ಫ್ರಂಟ್ ವೀಲ್ ಡ್ರೈವ್ ಎಸ್‍ಯುವಿ ರೂಪದಲ್ಲಿ ಬರಬಹುದು ಎಂದು ಅಂದಾಜಿಸಲಾಗಿದ್ದು, ಗ್ಲೋಬಲ್ ಮಾರುಕಟ್ಟೆಯಲ್ಲಿನ ವಿಟಾರಾಗಳು ಆಲ್ ವೀಲ್ ಡ್ರೈವ್ ರೂಪದಲ್ಲಿ ದೊರೆಯುತ್ತಿದೆ.

2020ಕ್ಕೆ ಮಾರುತಿ ಸುಜುಕಿ 7 ಸೀಟರ್ ವಿಟಾರಾ ಎಸ್‌ಯುವಿ ಬಿಡುಗಡೆ ಪಕ್ಕಾ!

ಇದಲ್ಲದೇ ಹೊಸ ರೂಪದ ವಿಟಾರಾ ಕಾರುಗಳು ಎಸ್‌ಯುವಿ ಕಾರುಗಳಲ್ಲೇ ವಿಶೇಷ ಗುಣಲಕ್ಷಣಗಳನ್ನು ಹೊಂದಿದ್ದು, 7 ಸೀಟರ್ ವಿನ್ಯಾಸದೊಂದಿಗೆ ಪ್ರಯಾಣಿಕರ ಸುರಕ್ಷತೆಗಾಗಿ ಎಬಿಎಸ್, ಇಬಿಡಿ, 6 ಏರ್‍‍ಬ್ಯಾಗ್‌‌ಗಳು, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಮತ್ತು ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿರಲಿದೆ.

MOST READ: ಜಗತ್ತಿನ ಅತಿ ದುಬಾರಿ ಕಾರ್ ಕೀ ಬೆಲೆ ಕೇಳಿದ್ರೆ ನಿಮಗೆ ಅಚ್ಚರಿಯಾಗುತ್ತೆ..!

2020ಕ್ಕೆ ಮಾರುತಿ ಸುಜುಕಿ 7 ಸೀಟರ್ ವಿಟಾರಾ ಎಸ್‌ಯುವಿ ಬಿಡುಗಡೆ ಪಕ್ಕಾ!

ಈ ಮೂಲಕ ಎಸ್‌ಯುವಿ ಪ್ರಿಯರನ್ನು ಸೆಳೆಯುವ ನೀರಿಕ್ಷೆಯಲ್ಲಿರುವ ಮಾರುತಿ ಸುಜುಕಿ ಸಂಸ್ಥೆಯು ಪ್ರೀಮಿಯಂ ಕಾರು ಮಾರಾಟ ವಿಭಾಗದಲ್ಲಿನ ಕೊರತೆಯನ್ನು ನಿಗಿಸಲು ವಿಟಾರಾ ಬಿಡುಗಡೆಗೊಳಿಸುತ್ತಿದ್ದು, 7 ಸೀಟರ್ ಕ್ರೆಟಾ ಫೇಸ್‌ಲಿಫ್ಟ್, ನೆಕ್ಸ್ಟ್ ಜನರೇಷನ್ ಮಹೀಂದ್ರಾ ಎಕ್ಸ್‌ಯುವಿ 500, ಟಾಟಾ ಹ್ಯಾರಿಯರ್, ಎಂಜಿ ಮೋಟಾರ್ ಹೆಕ್ಟರ್, ಕಿಯಾ ಎಸ್‌ಪಿ ಕಾನ್ಸೆಪ್ಟ್ ಕಾರುಗಳಿಗೂ ಇದು ಪೈಪೋಟಿ ನೀಡಲಿದೆ.

Article Published On: Saturday, April 20, 2019, 16:19 [IST]
English summary
Maruti Suzuki Vitara Expected To Be Launched In 2020. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+