ಶುರುವಾಯ್ತು ಮಾರುತಿ ಸುಜುಕಿ ಎಕ್ಸ್‌ಎಲ್6 ಬುಕ್ಕಿಂಗ್
ಟೂರ್ ಹಾಗೂ ಟ್ಯಾಕ್ಸಿ ಪ್ರಯಾಣಿಕರನ್ನು ಗುರಿಯಾಗಿರಿಸಿಕೊಂಡಿರುವ ಮಾರುತಿ ಸುಜುಕಿಯ ಎಕ್ಸ್‌ಎಲ್6 ಎಂಪಿವಿಯನ್ನು ಆಗಸ್ಟ್ 21ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು. ಎರ್ಟಿಗಾ ಕಾರಿನ ಪ್ರಿಮೀಯಂ ಆವೃತ್ತಿಯಾದ ಎಕ್ಸ್‌ಎಲ್6 ದೇಶಿಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಮರಾಜೋ ಕಾರಿಗೆ ಪೈಪೋಟಿ ನೀಡಲಿದೆ.

ಮಾರುತಿ ಸುಜುಕಿಯ ಎಕ್ಸ್‌ಎಲ್6 ಕಾರ್ ಅನ್ನು 2+2+2 ಸೀಟುಗಳ ರಚನೆಯಲ್ಲಿ ನೀಡಲಾಗುವುದು. ಮಧ್ಯದ ಸಾಲು ಬೆಂಚ್ ಸೀಟಿನ ಬದಲಿಗೆ 2 ಪೈಲಟ್ ಆಸನಗಳನ್ನು ಹೊಂದಿರಲಿದೆ. ಇದರಿಂದಾಗಿ ಮಧ್ಯದ ಸಾಲಿನ ಪ್ರಯಾಣಿಕರ ಸವಾರಿ ಹೆಚ್ಚು ಆರಾಮದಾಯಕವಾಗಿರಲಿದೆ. ಮಧ್ಯದ ಪೈಲಟ್ ಆಸನಗಳನ್ನು ಎಂಪಿವಿಯಲ್ಲಿ ಪ್ರಯಾಣಿಸುವ ಪ್ರಮುಖ ಜನರು ಬಳಸುವ ಸಾಧ್ಯತೆಗಳಿವೆ. ಮಾರುತಿ ಸುಜುಕಿ ಇಂಡಿಯಾದ ಮಾರ್ಕೆಟಿಂಗ್ ಹಾಗೂ ಸೇಲ್ಸ್ ಕಾರ್ಯನಿರ್ವಾಹಕ ನಿರ್ದೇಶಕರಾದ ಶಶಾಂಕ್ ಶ್ರೀವಾಸ್ತವರವರು ಈ ಬಗ್ಗೆ ಮಾತನಾಡಿದ್ದಾರೆ.

ಮಾರುತಿ ಸುಜುಕಿ ಕಂಪನಿಯು ಯಾವಾಗಲೂ ಗ್ರಾಹಕರ ಬೇಡಿಕೆಗೆ ತಕ್ಕಂತಹ ವಾಹನಗಳನ್ನು ಬಿಡುಗಡೆಗೊಳಿಸುತ್ತಾ ಬಂದಿದೆ. ಎಕ್ಸ್‌ಎಲ್ 6, ಆರು ಸೀಟುಗಳನ್ನು ಹೊಂದಿರುವ ವಿಶಿಷ್ಟವಾದ ಪ್ರೀಮಿಯಂ ಎಂಪಿವಿ ಆಗಿದೆ. ಈ ಎಂಪಿವಿಯನ್ನು ನೆಕ್ಸಾ ಗ್ರಾಹಕರ ಆಕಾಂಕ್ಷೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ.

ಎಕ್ಸ್‌ಎಲ್ 6ದೊಂದಿಗೆ ನಾವು ನೆಕ್ಸಾದ ಮೊದಲ ಪ್ರೀಮಿಯಂ ಎಂಪಿವಿಯನ್ನು ಬಿಡುಗಡೆಗೊಳಿಸಲಿದ್ದೇವೆ. ಈ ಎಂಪಿವಿ ಸುರಕ್ಷಾ ಫೀಚರ್‍ಗಳ ಜೊತೆಗೆ ಹೆಚ್ಚಿನ ಸೌಲಭ್ಯ ಹಾಗೂ ಆರಾಮದಾಯಕ ಅನುಭವವನ್ನು ನೀಡಲಿದೆ.

ಎಕ್ಸ್‌ಎಲ್ 6 ಎಂಪಿವಿ ನಮ್ಮ ನೆಕ್ಸಾ ವಾಹನಗಳ ಪೋರ್ಟ್ ಫೊಲಿಯೋವನ್ನು ಮತ್ತಷ್ಟು ಹೆಚ್ಚಿಸಲಿದ್ದು, ನಮ್ಮ ಗ್ರಾಹಕರಿಗೆ ಹ್ಯಾಚ್‌ಬ್ಯಾಕ್, ಸೆಡಾನ್, ಎಸ್‌ಯುವಿ ಹಾಗೂ ನೆಕ್ಸಾದಲ್ಲಿ ಪ್ರೀಮಿಯಂ ಎಂಪಿವಿ ಉತ್ಪನ್ನಗಳನ್ನು ಒದಗಿಸುತ್ತದೆ. ಗ್ರಾಹಕರು ನಮ್ಮ ಹೊಸ ವಾಹನವನ್ನು ಸಹ ಆನಂದಿಸುತ್ತಾರೆ ಎಂಬ ಭರವಸೆಯಿದೆ ಎಂದು ತಿಳಿಸಿದರು.

ಮಾರುತಿ ಎಕ್ಸ್‌ಎಲ್ 6, ಡ್ಯುಯಲ್ ಕ್ರೋಮ್ ಸ್ಲಾಟ್‌ನಲ್ಲಿರುವ ಹೊಸ ಗ್ರಿಲ್, ಮರುವಿನ್ಯಾಸಗೊಳಿಸಲಾದ ಬಂಪರ್, ಆಂಗ್ಯುಲರ್ ಹೆಡ್‌ಲ್ಯಾಂಪ್, ಸ್ಟೈಲಿಶ್ ಬಾಡಿ ಕ್ಲಾಡಿಂಗ್, ಕಪ್ಪು ಬಣ್ಣದ ಬಿಡಿಭಾಗಗಳು, ಬ್ಲ್ಯಾಕ್ ಸಿ ಹಾಗೂ ಡಿ ಪಿಲ್ಲರ್ಸ್, ವಿಂಗ್ ಮಿರರ್, ಎಡ್ಜಿ ಟೇಲ್‍ಲ್ಯಾಂಪ್, ರೂಫ್ ರೇಲ್ ಹಾಗೂ ಹೊಸ ಅಲಾಯ್ ವ್ಹೀಲ್ ಡಿಸೈನ್‍ಗಳನ್ನು ಹೊಂದಿದೆ.

ಎಕ್ಸ್‌ಎಲ್ 6 ಪೂರ್ಣ ಪ್ರಮಾಣದ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದ್ದು, ಇದು ಕಾರಿನ ಆಕರ್ಷಣೆಯನ್ನು ಹೆಚ್ಚಿಸುವುದು ಮಾತ್ರವಲ್ಲದೇ ರಾತ್ರಿ ವೇಳೆಯಲ್ಲಿ ಹೆಚ್ಚಿನ ಪ್ರಮಾಣದ ಗೋಚರತೆಯನ್ನು ನೀಡುತ್ತದೆ.
MOST READ: ಆರ್ಟಿಕಲ್ 370 ರದ್ದಾದ ಬೆನ್ನಲ್ಲೆ ಜಮ್ಮು ಕಾಶ್ಮೀರದಲ್ಲಿ ಶುರುವಾಗಿದೆ ಹೊಸ ಕೈಗಾರಿಕಾ ಕ್ರಾಂತಿ

ಎರ್ಟಿಗಾದಲ್ಲಿರುವ 1.3 ಲೀಟರ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್‍ಗಳನ್ನು ಎಕ್ಸ್‌ಎಲ್6 ಎಂಪಿವಿಯಲ್ಲಿ ನೀಡುವುದಿಲ್ಲ. ಈ ಡೀಸೆಲ್ ಎಂಜಿನ್‍ಗಳು ಬಿಎಸ್ 4 ಆಧಾರಿತ ಎಂಜಿನ್‍ಗಳಿವೆ. ಎಕ್ಸ್‌ಎಲ್ 6 ಎಂಪಿವಿಯಲ್ಲಿ 1.5 ಲೀಟರಿನ ಕೆ 15 ಬಿ ಸ್ಮಾರ್ಟ್ ಹೈಬ್ರಿಡ್ ಬಿಎಸ್ 6 ಆಧಾರಿತ ಪೆಟ್ರೋಲ್ ಎಂಜಿನ್ ಅಳವಡಿಸಲಾಗುವುದು.
MOST READ: ಲೈಸೆನ್ಸ್ ನವೀಕರಣಕ್ಕೆ ಇನ್ಮುಂದೆ ಈ ಟೆಸ್ಟ್ ಕಡ್ಡಾಯವಂತೆ..!

ಈ ಎಂಜಿನ್ 6,000 ಆರ್‌ಪಿಎಂನಲ್ಲಿ ಗರಿಷ್ಠ 105 ಬಿಎಚ್‌ಪಿ ಪವರ್ ಹಾಗೂ 4,400 ಆರ್‌ಪಿಎಂನಲ್ಲಿ 138 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನಲ್ಲಿ 5 ಸ್ಪೀಡಿನ ಮ್ಯಾನ್ಯುವಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅನ್ನು ಸಹ ನೀಡಲಾಗುವುದು. ಈ ಎಂಜಿನ್ ಅನ್ನು ಎರ್ಟಿಗಾ ಹಾಗೂ ಸಿಯಾಜ್ ಕಾರುಗಳಲ್ಲೂ ಅಳವಡಿಸಲಾಗಿದೆ.
MOST READ: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅಪಘಾತ..!

ಮಾರುತಿ ಕಂಪನಿಯ ಪ್ರಕಾರ, ಎಕ್ಸ್‌ಎಲ್6 ಎಂಪಿವಿ ಸೆಗ್‍ಮೆಂಟಿನಲ್ಲಿ ಪ್ರಬಲ ಪೈಪೋಟಿ ನೀಡಲಿದೆ. ಇದರಲ್ಲಿರುವ ಸಿಗ್ನೇಚರ್ ಕ್ವಾಡ್ ಚೇಂಬರ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳಿಂದ ಆಕರ್ಷಕವಾಗಿ ಎದ್ದು ಕಾಣುವಂತಿದೆ. ಮುಂಭಾಗದ ಗ್ರಿಲ್ ಹಾಗೂ ಇಂಟಿರಿಯರ್‍ಗಳು ನೆಕ್ಸಾ ಸರಣಿಯಂತಿವೆ.

2ನೇ ಸಾಲಿನ ಪ್ಲಶ್ ಕ್ಯಾಪ್ಟನ್ ಸೀಟು, ತಡೆರಹಿತ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಹೊಂದಿರುವ ಸ್ಮಾರ್ಟ್‌ಪ್ಲೇ ಸ್ಟುಡಿಯೋ, ಕ್ರೂಸ್ ಕಂಟ್ರೋಲ್ ಹಾಗೂ ಇನ್ನಿತರ ಫೀಚರ್‍ಗಳನ್ನು, ಸ್ಟೈಲ್, ಸ್ಪೇಸ್ ಹಾಗೂ ಆಧುನಿಕತೆಯನ್ನು ಬಯಸುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಎಕ್ಸ್‌ಎಲ್6 ಅನ್ನು ಅಭಿವೃದ್ಧಿ ಪಡಿಸಲಾಗಿದೆ.
Image Courtesy: GaadiWaadi


Click it and Unblock the Notifications