ಭಾರತದಲ್ಲಿ ಮರ್ಸಿಡಿಸ್-ಎಎಂಜಿ ಸಿ43 ಕೂಪೆ ಕಾರು ಬಿಡುಗಡೆ

ಜರ್ಮನಿಯ ಐಷಾರಾಮಿ ವಾಹನ ಸಂಸ್ಥೆ ಮರ್ಸಿಡಿಸ್ ಬೆಂಝ್, ಭಾರತದಲ್ಲಿ ಅತಿ ನೂತನ ಎಎಂಜಿ ಸಿ43 ಕೂಪೆ ಕಾರು ಮಾದರಿಯನ್ನು ಬಿಡುಗಡೆಗೊಳಿಸಿದ್ದು, ತನ್ಮೂಲಕ ದೇಶದಲ್ಲಿ ಪರ್ಫಾಮೆನ್ಸ್ ಕಾರುಗಳ ಶ್ರೇಣಿಯನ್ನು ಮತ್ತಷ್ಟು ಬಲ ವೃದ್ಧಿಸಿಕೊಂಡಿದೆ.

ಭಾರತದಲ್ಲಿ ಮರ್ಸಿಡಿಸ್-ಎಎಂಜಿ ಸಿ43 ಕೂಪೆ ಕಾರು ಬಿಡುಗಡೆ

ನೂತನ ಮರ್ಸಿಡಿಸ್ ಬೆಂಝ್ ಎಎಂಜಿ ಸಿ43 ಕೂಪೆ ಶಕ್ತಿಶಾಲಿ ಕಾರು ಮಾದರಿಯು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 75 ಲಕ್ಷ ಬೆಲೆದೊಂದಿಗೆ ತುಸು ದುಬಾರಿಯೆನಿಸಲಿದೆ. ಇದು ಪ್ರಸಕ್ತ ಸಾಲಿನಲ್ಲಿ ಮರ್ಸಿಡಿಸ್ ಬೆಂಝ್ ಸಂಸ್ಥೆಯು ದೇಶದಲ್ಲಿ ಬಿಡುಗಡೆ ಮಾಡುತ್ತಿರುವ 5ನೇ ಎಎಂಜಿ ಮಾದರಿಯಾಗಿದ್ದು, ಈ ಮೂಲಕ ಪರ್ಫಾಮೆನ್ಸ್ ಮಾದರಿಗಳಲ್ಲಿ ಬಹುದೊಡ್ಡ ಬದಲಾವಣೆ ತರಲಾಗುತ್ತಿದೆ.

ಭಾರತದಲ್ಲಿ ಮರ್ಸಿಡಿಸ್-ಎಎಂಜಿ ಸಿ43 ಕೂಪೆ ಕಾರು ಬಿಡುಗಡೆ

ಈ ಹಿಂದೆ 2016ರಲ್ಲಿ ಬಿಡುಗಡೆಯಾಗಿದ್ದ ಎಎಂಜಿ ಸಿ43 ಮಾದರಿಗಿಂತಲೂ ಹೊಸದಾಗಿ ಬಿಡುಗಡೆಯಾಗಿರುವ ಎಎಂಜಿ ಸಿ43 ಕೂಪೆ ಮಾದರಿಯು ಸಾಕಷ್ಟು ಸುಧಾರಿತ ತಂತ್ರಜ್ಞಾನಗಳನ್ನ ಪಡೆದುಕೊಂಡಿರುವುದಲ್ಲದೇ ಹೆಚ್ಚುವರಿಯಾಗಿ 23 ಬಿಎಚ್‌ಪಿ ಉತ್ಪಾದನೆ ಮಾಡುವಷ್ಟು ಎಂಜಿನ್ ಪರ್ಫಾಮೆನ್ಸ್‌ನಲ್ಲಿ ಬದಲಾವಣೆಗೊಳಿಸಲಾಗಿದೆ.

ಭಾರತದಲ್ಲಿ ಮರ್ಸಿಡಿಸ್-ಎಎಂಜಿ ಸಿ43 ಕೂಪೆ ಕಾರು ಬಿಡುಗಡೆ

ಎಂಜಿನ್ ಸಾಮರ್ಥ್ಯ

ಮರ್ಸಿಡಿಸ್-ಎಎಂಜಿ ಸಿ43 ಕೂಪೆ ಕಾರು 3.0-ಲೀಟರ್ ಟ್ವಿನ್ ಟರ್ಬೋಚಾರ್ಜ್ಡ್ ವಿ6 ಎಂಜಿನ್ ಹೊಂದಿದ್ದು, 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸಹಾಯದೊಂದಿಗೆ 385-ಬಿಎಚ್‌ಪಿ ಮತ್ತು 520-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಭಾರತದಲ್ಲಿ ಮರ್ಸಿಡಿಸ್-ಎಎಂಜಿ ಸಿ43 ಕೂಪೆ ಕಾರು ಬಿಡುಗಡೆ

ಇದಲ್ಲದೇ ಹೊಸ ಕಾರಿನಲ್ಲಿ ಇದೇ ಮೊದಲ ಬಾರಿಗೆ ಆಲ್ ವೀಲ್ಡ್ ಡ್ರೈವ್ ಟೆಕ್ನಾಲಜಿಯನ್ನು ಸಹ ಪರಿಚಯಿಸಲಾಗಿದ್ದು, ಹೊಸ ಎಂಜಿನ್ ಬಲವು ಮುಂಭಾಗದ ಚಕ್ರಗಳಿಗೆ ಶೇ.31 ರಷ್ಟು ಬಲ ಒದಗಿಸಿದ್ದಲ್ಲಿ ಹಿಂಭಾಗ ಚಕ್ರಗಳಿಗೆ ಶೇ. 69 ರಷ್ಟು ಶಕ್ತಿ ಒದಗಿಸುತ್ತವೆ.

ಭಾರತದಲ್ಲಿ ಮರ್ಸಿಡಿಸ್-ಎಎಂಜಿ ಸಿ43 ಕೂಪೆ ಕಾರು ಬಿಡುಗಡೆ

ಈ ಮೂಲಕ 4.7 ಸೇಕೆಂಡುಗಳಲ್ಲಿ ಸೊನ್ನೆಯಿಂದ ನೂರು ಕಿ.ಮಿ ವೇಗ ಪಡೆದುಕೊಳ್ಳುವ ಮರ್ಸಿಡಿಸ್-ಎಎಂಜಿ ಸಿ43 ಕೂಪೆ ಕಾರು ಮಾದರಿಯು ಗಂಟೆಗೆ 250 ಕಿ.ಮಿ ಟಾಪ್ ಸ್ಪೀಡ್ ಹೊಂದಿದ್ದು, 18-ಇಂಚಿನ ಎಎಂಜಿ 5-ಸ್ಪೋಕ್ ಅಲಾಯ್ ಚಕ್ರಗಳ ಜೋಡಣೆ ಪಡೆದಿದೆ.

MOST READ: ವಾಹನ ಮಾಲೀಕರೇ ಇತ್ತ ಗಮನಿಸಿ- ಥರ್ಟ್ ಪಾರ್ಟಿ ವಿಮಾ ಮೊತ್ತದಲ್ಲಿ ಭಾರೀ ಬದಲಾವಣೆ..!

ಭಾರತದಲ್ಲಿ ಮರ್ಸಿಡಿಸ್-ಎಎಂಜಿ ಸಿ43 ಕೂಪೆ ಕಾರು ಬಿಡುಗಡೆ

ಹಾಗೆಯೇ ಕಾರಿನ ಒಳಭಾಗದ ವಿನ್ಯಾಸಗಳನ್ನು ಈ ಬಾರಿ ಕೆಲವು ಮಹತ್ವದ ಬದಲಾವಣೆಗಳನ್ನು ತರಲಾಗಿದ್ದು, ಲೆದರ್ ಹೊದಿಕೆಯ ತ್ರಿ ಸ್ಪೋಕ್ ಫ್ಲ್ಯಾಟ್ ಬಾಟಮ್ ಸ್ಟಿರಿಂಗ್ ವೀಲ್ಹ್, 12.3-ಇಂಚಿನ ಟಚ್ ಕಂಟ್ರೋಲ್ ಇನ್ಪೋಟೈನ್‌ಮೆಂಟ್ ಡಿಸ್‌ಪ್ಲೇ, ಆ್ಯರ್ಟಿಕೋ ಹ್ಯಾಂಡ್‌ಮೆಡ್ ಲೆದರ್ ಸೀಟುಗಳು ಹೊಸ ಕಾರಿನ ಪ್ರಮುಖ ಆಕರ್ಷಣೆಯಾಗಿವೆ.

ಭಾರತದಲ್ಲಿ ಮರ್ಸಿಡಿಸ್-ಎಎಂಜಿ ಸಿ43 ಕೂಪೆ ಕಾರು ಬಿಡುಗಡೆ

ಇನ್ನು ಹೊಸ ಕಾರು ಬಿಡುಗಡೆ ಕುರಿತಂತೆ ಮಾಡನಾಡಿರುವ ಮರ್ಸಿಡಿಸ್ ನಿರ್ದೇಶಕ ಮತ್ತು ಸಿಇಒ ಆಗಿರುವ ಮಾರ್ಟಿನ್ ಸ್ವಿಂಕ್ ಅವರು, ಭಾರತೀಯ ಮಾರುಕಟ್ಟೆಯಲ್ಲಿ ಪರ್ಫಾಮೆನ್ಸ್ ಕಾರು ಮಾದರಿಗಳಿಗೆ ಉತ್ತಮ ಬೇಡಿಕೆ ಕಂಡುಬರುತ್ತಿದ್ದು, ಈ ಹಿಂದಿನ ಎಎಂಜಿ ಮಾದರಿಗಳಾದ 43, 45, 63 ಮತ್ತು ಜಿಟಿ ರೇಂಜ್‌ ಪ್ರೇರಣೆಯೊಂದಿಗೆ ಎಎಂಜಿ ಸಿ43 ಕೂಪೆ ಮಾದರಿಯನ್ನು ಹೊರತರಲಾಗಿದೆ ಎಂದಿದ್ದಾರೆ.

MOST READ: 15 ಸಾವಿರ ಸಿಸಿ ಎಂಜಿನ್ ಸಾಮರ್ಥ್ಯದೊಂದಿಗೆ ರಸ್ತೆಗಿಳಿದ ವಿಶ್ವದ ಅತಿದೊಡ್ಡ ಮಾಡಿಫೈ ಎಸ್‌ಯುವಿ ಕಾರು

ಭಾರತದಲ್ಲಿ ಮರ್ಸಿಡಿಸ್-ಎಎಂಜಿ ಸಿ43 ಕೂಪೆ ಕಾರು ಬಿಡುಗಡೆ

ಒಟ್ಟಿನಲ್ಲಿ ಪರ್ಫಾಮೆನ್ಸ್ ಪ್ರಿಯರಿಗಾಗಿ ಎಎಂಜಿ ಆವೃತ್ತಿಗಳನ್ನು ಶುರು ಮಾಡಿರುವ ಮರ್ಸಿಡಿಸ್ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಬದಲಾವಣೆ ತರುತ್ತಿದ್ದು, ಎಎಂಜಿ ವಿಭಾಗದ ರೈಡ್ ಕಂಟ್ರೋಲ್ ಸಸ್ಪೆನ್ಷನ್ ವ್ಯವಸ್ಥೆಯೊಂದಿಗೆ ವಿದ್ಯುನ್ಮಾನವಾಗಿ ಶಾಕ್ ಅಬ್ಸಾರ್ಬರ್ ನಿಯಂತ್ರಿಸಲಿದೆ.

Most Read Articles

Kannada
English summary
Mercedes-AMG C43 Coupe Launched In India At Rs 75 Lakh. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X