ಕಾರುಗಳ ಬೆಲೆಯಲ್ಲಿ ಏರಿಕೆ- ಮರ್ಸಿಡಿಸ್ ಬೆಂಝ್ ಖರೀದಿ ಮತ್ತಷ್ಟು ದುಬಾರಿ..!

ಆಮದು ಸುಂಕ ಹೆಚ್ಚಳ ಮತ್ತು ಸೆಸ್ ದರ ಏರಿಕೆಯಾಗಿರುವ ಕಾರಣ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ್ದು, ಮರ್ಸಿಡಿಸ್ ಬೆಂಝ್ ಕೂಡಾ ತನ್ನ ಪ್ರಮುಖ ಕಾರುಗಳ ಬೆಲೆಯಲ್ಲಿ ಭಾರೀ ಬದಲಾವಣೆ ತಂದಿದೆ. ಶೇ.3 ರಷ್ಟು ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ್ದು, ಕಾರುಗಳ ಬೆಲೆ ಕನಿಷ್ಠ ರೂ. 1.20 ಲಕ್ಷದಿಂದ ರೂ. 3 ಲಕ್ಷದ ತನಕ ಬೆಲೆ ಹೆಚ್ಚಳವಾಗಲಿವೆ.

ಕಾರುಗಳ ಬೆಲೆಯಲ್ಲಿ ಏರಿಕೆ- ಮರ್ಸಿಡಿಸ್ ಬೆಂಝ್ ಖರೀದಿ ಮತ್ತಷ್ಟು ದುಬಾರಿ..!

ಬೀಡಿಭಾಗಗಳ ಆಮದು ಮೇಲಿನ ಹೆಚ್ಚಿದ ಸುಂಕದಿಂದಾಗಿ ಕಾರು ಉತ್ಪಾದನಾ ವೆಚ್ಚಗಳು ಹೆಚ್ಚುತ್ತಿದ್ದು, ಮರ್ಸಿಡಿಸ್ ಬೆಂಝ್ ಸಂಸ್ಥೆಯು ತನ್ನ ಜನಪ್ರಿಯ ಕಾರು ಮಾದರಿಗಳ ದರಗಳನ್ನು ಹೆಚ್ಚಿಸಿದೆ. ಅಗಸ್ಟ್ 1ರಿಂದ ಹೊಸ ದರಗಳು ಅನ್ವಯವಾಗಲಿದ್ದು, ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಮೇಲಿನ ಸೆಸ್ ಪ್ರಮಾಣದಲ್ಲೂ ಹೆಚ್ಚಳ ಮಾಡಿರುವುದು ಕೂಡಾ ಹೊಸ ಕಾರುಗಳ ಬೆಲೆಯಲ್ಲಿ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಕಾರುಗಳ ಬೆಲೆಯಲ್ಲಿ ಏರಿಕೆ- ಮರ್ಸಿಡಿಸ್ ಬೆಂಝ್ ಖರೀದಿ ಮತ್ತಷ್ಟು ದುಬಾರಿ..!

2019ರ ಆರಂಭದಲ್ಲಿ ಶೇ.1ರಿಂದ ಶೇ.1.50 ರಷ್ಟು ಬೆಲೆ ಹೆಚ್ಚಳ ನಂತರದ ಇದೀಗ ಮತ್ತೊಮ್ಮೆ ಬೆಲೆ ಹೆಚ್ಚಳಕ್ಕೆ ಮುಂದಾಗಿರುವ ಮರ್ಸಿಡಿಸ್ ಬೆಂಝ್, ಕಾರು ಮಾರಾಟದಲ್ಲಿ ಹಿನ್ನಡೆ ಅನುಭವಿಸಿದ್ದರೂ ಸಹ ಇದೀಗ ಉತ್ಪಾದನಾ ವೆಚ್ಚ ನಿರ್ವಹಣೆಯನ್ನು ಸರಿದೂಗಿಸಲು ಬೆಲೆ ಹೆಚ್ಚಳ ಮಾಡುತ್ತಿದೆ.

ಕಾರುಗಳ ಬೆಲೆಯಲ್ಲಿ ಏರಿಕೆ- ಮರ್ಸಿಡಿಸ್ ಬೆಂಝ್ ಖರೀದಿ ಮತ್ತಷ್ಟು ದುಬಾರಿ..!

ಮರ್ಸಿಡಿಸ್ ಬೆಂಝ್ ಮಾತ್ರವಲ್ಲದೇ ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ಈಗಾಗಲೇ ಹೊಸ ದರ ಪಟ್ಟಿಯನ್ನು ಸಿದ್ದಪಡಿಸುತ್ತಿದ್ದು, ಸೆಪ್ಟೆಂಬರ್ 1ರಿಂದ ಜಾರಿಗೆ ಬರುವಂತೆ ಬೆಲೆ ಏರಿಕೆಗೆ ಸಿದ್ದತೆ ನಡೆಸಿವೆ. ಶೇ.2ರಿಂದ ಶೇ.3 ರಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆಗಳಿದ್ದು, ಕೇಂದ್ರ ಸರ್ಕಾರದ ಹೊಸ ನಿಯಮದಂತೆ ಹೊಸ ಕಾರುಗಳಲ್ಲಿ ಕೆಲವು ಕಡ್ಡಾಯ ಸುರಕ್ಷಾ ಸೌಲಭ್ಯಗಳನ್ನು ಅಳವಡಿಸುವುದು ಕೂಡಾ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.

ಕಾರುಗಳ ಬೆಲೆಯಲ್ಲಿ ಏರಿಕೆ- ಮರ್ಸಿಡಿಸ್ ಬೆಂಝ್ ಖರೀದಿ ಮತ್ತಷ್ಟು ದುಬಾರಿ..!

ಇನ್ನು ಜರ್ಮನ್ ಕಾರು ತಯಾರಕ ಕಂಪನಿ ಮರ್ಸಿಡಿಸ್ ಬೆಂಝ್ ತನ್ನ ಮಾತೃ ಸಂಸ್ಥೆಯಾದ ಡೈಮ್ಲರ್ ಮೂಲಕ 2040ರ ವೇಳೆಗೆ ಕಾರ್ಬನ್ ಬಳಕೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ ಎಂದು ಮ್ಯಾನೇಜರ್ ಮ್ಯಾಗಜಿನ್ ವರದಿ ಮಾಡಿದ್ದು, ಹೊಸ ಸಿಇಒ ಓಲಾ ಕೆಲ್ಲೆನಿಯಸ್‍ರವರು ನಿರ್ಧರಿಸಿರುವಂತೆ 2021ರ ವೇಳೆಗೆ ಜರ್ಮನ್ ಕಾರು ತಯಾರಕ ಕಂಪನಿಯು 10,000 ಉದ್ಯೋಗಗಳನ್ನು ಕಡಿತಗೊಳಿಸುವ ನಿರ್ಧಾರಕ್ಕೆ ಬಂದಿದೆ.

ಕಾರುಗಳ ಬೆಲೆಯಲ್ಲಿ ಏರಿಕೆ- ಮರ್ಸಿಡಿಸ್ ಬೆಂಝ್ ಖರೀದಿ ಮತ್ತಷ್ಟು ದುಬಾರಿ..!

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ವರದಿ ಪ್ರಕಾರ, ಕೆಲ್ಲೆನಿಯಸ್ ರವರು ಡೈಮ್ಲರ್ ಕಂಪನಿಯನ್ನು ಪರಿಸರ ಸ್ನೇಹಿಯಾಗಿ ಮಾಡಲು ಯೋಚಿಸಿದ್ದು, ಇದು ಈಗಿರುವ ಸಿಇಒ ಡೈಟರ್ ಜೆಟ್ಸ್ ರವರ ಚಿಂತನೆಗೆ ವಿರುದ್ಧವಾಗಿದೆ. ಶೂನ್ಯ ವಾಯು ಮಾಲಿನ್ಯ ಸಿದ್ಧಾಂತವು ಕಾರು ತಯಾರಕ ಕಂಪನಿಯ ನೂತನ ಧ್ಯೇಯವಾಗಲಿದೆ. ಮ್ಯಾನೇಜರ್ ಮ್ಯಾಗಜಿನ್ ಪ್ರಕಾರ ಶೂನ್ಯ ವಾಯು ಮಾಲಿನ್ಯವು ವಿವಿಧ ಹಂತಗಳಲ್ಲಿ ಜರುಗಲಿದ್ದು, ಡೈಮ್ಲರ್ ಪ್ಲಾಂಟ್ ನಲ್ಲಿರುವ ಸಿಬ್ಬಂದಿ ಮತ್ತು ಪೂರೈಕೆದಾರರನ್ನು 2040ರ ವೇಳೆಗೆ ಕಾರ್ಬನ್ ನಿಂದ ಮುಕ್ತ ಮಾಡಿ ಪರಿಸರ ಸ್ನೇಹಿಯನ್ನಾಗಿಸುವ ಗುರಿ ಹೊಂದಲಾಗಿದೆ.

ಕಾರುಗಳ ಬೆಲೆಯಲ್ಲಿ ಏರಿಕೆ- ಮರ್ಸಿಡಿಸ್ ಬೆಂಝ್ ಖರೀದಿ ಮತ್ತಷ್ಟು ದುಬಾರಿ..!

ಹೀಗಾಗಿಯ ಉದ್ಯೋಗ ಕಡಿತಗಳು ಸಾಮಾಜಿಕವಾಗಿ ಸ್ವೀಕಾರರ್ಹವಾಗಿರಬೇಕು, ಮ್ಯಾಗಜಿನ್ ಪ್ರಕಾರ ಡೈಮ್ಲರ್ ಯಾವುದೇ ಉದ್ಯೋಗಗಳನ್ನು ಭರ್ತಿ ಮಾಡುತ್ತಿಲ್ಲ. ಮ್ಯಾನೇಜರ್ ಮ್ಯಾಗಜೀನ್ ವರದಿಯ ಮೇಲೆ ವಿಸ್ತೃತ ವರದಿ ಪ್ರಕಟಿಸಿರುವ ರಾಯಿಟರ್ಸ್ ಪ್ರಕಾರ, ಡೈಮ್ಲರ್ 2021ರ ವೇಳೆಗೆ ವೆಚ್ಚ ಕಡಿತದಿಂದ ಮತ್ತು ಪ್ಯಾಸೆಂಜರ್ ಕಾರುಗಳ ಮಾರಾಟದಿಂದ 6 ಬಿಲಿಯನ್ ಯೂರೋಗಳಷ್ಟು ಲಾಭವನ್ನು ನಿರೀಕ್ಷಿಸುತ್ತಿದೆ. ಡೈಮ್ಲರ್ 2 ಬಿಲಿಯನ್ ಯೂರೋಗಳಷ್ಟು ಲಾಭವನ್ನು ಟ್ರಕ್ ಡಿವಿಷನ್ ವಿಭಾಗದಲ್ಲಿನ ವೆಚ್ಚ ಕಡಿತದಿಂದ ನಿರೀಕ್ಷಿಸುತ್ತಿದೆ ಎಂದು ಹೇಳಲಾಗಿದೆ.

ಕಾರುಗಳ ಬೆಲೆಯಲ್ಲಿ ಏರಿಕೆ- ಮರ್ಸಿಡಿಸ್ ಬೆಂಝ್ ಖರೀದಿ ಮತ್ತಷ್ಟು ದುಬಾರಿ..!

ಇದಲ್ಲದೇ ರಾಯಿಟರ್ಸ್ ವರದಿಯಲ್ಲಿ ಹೇಳಿರುವಂತೆ, ಮ್ಯಾನೇಜರ್ ಮ್ಯಾಗಜಿನ್ ಪ್ರಕಾರ ಹೊಸ ಸಿಇಒ ಆಗಿ ಓಲಾ ಕೆಲ್ಲೆನಿಯಸ್ ಅಧಿಕಾರ ಸ್ವೀಕರಿಸಲಿದ್ದು, ಮಾಲಿನ್ಯ ತಡೆ ಮತ್ತು ಉತ್ಪಾದನಾ ವೆಚ್ಚ ತಗ್ಗಿಸುವ ನಿಟ್ಟಿನಲ್ಲಿ ಹಲವು ಕಠಿಣ ಕ್ರಮಗಳನ್ನು ಪ್ರಕಟಿಸಲಿದ್ದಾರೆ ಎನ್ನಲಾಗಿದೆ.

ಕಾರುಗಳ ಬೆಲೆಯಲ್ಲಿ ಏರಿಕೆ- ಮರ್ಸಿಡಿಸ್ ಬೆಂಝ್ ಖರೀದಿ ಮತ್ತಷ್ಟು ದುಬಾರಿ..!

ಜೊತೆಗೆ ಫ್ರೆಂಚ್ ಮತ್ತು ಜಪಾನ್ ಕಾರು ತಯಾರಕ ಕಂಪನಿಗಳಾದ ರೆನಾಲ್ಟ್ ಮತ್ತು ನಿಸ್ಸಾನ್‌ನೊಂದಿಗಿನ ಚಾಲ್ತಿಯಲ್ಲಿರುವ ಯೋಜನೆಗಳನ್ನು ಮರ್ಸಿಡಿಸ್ ಕಂಪನಿಯು ಮುಂದುವರಿಸದಿರಲು ನಿರ್ಧರಿಸಲಾಗಿದ್ದು, ಪರಿಸರ ಸ್ನೇಹಿಯಾಗುವತ್ತ ಮಹತ್ತರ ಹೆಜ್ಜೆ ಇಡುತ್ತಿದೆ.

Article Published On: Thursday, July 25, 2019, 11:11 [IST]
English summary
Mercedes-Benz To Hike Car Prices By 3% From August. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+