ಮತ್ತಷ್ಟು ದುಬಾರಿಯಾಗಲಿವೆ ಮರ್ಸಿಡಿಸ್ ಬೆಂಝ್ ಕಾರುಗಳು
ಭಾರತೀಯರ ನೆಚ್ಚಿನ ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ತನ್ನ ಸರಣಿಯಲ್ಲಿರುವ ಎಲ್ಲಾ ಕಾರುಗಳ ಬೆಲೆಯನ್ನು ಹೆಚ್ಚಿಸಲಿದೆ. 2020ರಲ್ಲಿ ಪ್ರಸ್ತುತ ಬೆಲೆಗಿಂತ ಶೇ.3 ರಷ್ಟು ಬೆಲೆಯನ್ನು ಹೆಚ್ಚಿಸಲಿದೆ.

ಜರ್ಮನ್ ಆಟೋಮೋಟಿವ್ ಬ್ರ್ಯಾಂಡ್ ತನ್ನಇನ್‍ಫುಟ್ ಮತ್ತು ಸರಕುಗಳ ಬೆಲೆಯನ್ನು ಹೆಚ್ಚಿಸಲಿದೆ. ಮರ್ಸಿಡಿಸ್ ಬೆಂಝ್ ಇಂಡಿಯಾದ ಎಂಡಿ ಮತ್ತು ಸಿಇಒ ಮಾರ್ಟಿನ್ ಶ್ವೆಂಕ್ ಅವರು ಮಾತನಾಡಿ, ಕಂಪನಿಯು ತಮಗೆ ಬರುವ ಆದಾಯವನ್ನು ಎಲ್ಲಾ ವಿಶ್ಲೇಷಿಸುತ್ತಿದೆ.

ತಮ್ಮ ಸ್ಥಳೀಯ ಉತ್ಪಾದಕರಿಗೆ ಹೆಚ್ಚಿನ ಒತ್ತಡವಿದೆ. ಗ್ರಾಹಕರು ಬಯಸುವ ಗುಣಮಟ್ಟವನ್ನು ಕಾಪಾಡಲು ಬೆಲೆ ಏರಿಕೆ ಮಾಡುವುದು ಅನಿರ್ವಾಯವಾಗಿದೆ. ಇದು ಬಿಟ್ಟು ಕಂಪನಿಗೆ ಬೇರೆ ದಾರಿ ಇಲ್ಲ ಎಂದು ಹೇಳಿದರು.

ಸ್ಟಾರ್ ಎಜಿಲಿಟಿ ಪ್ಲಸ್, ವಿಶ್ ಬಾಕ್ಸ್, ಸ್ಟಾರ್ ಫೈನಾನ್ಸ್ ಮುಂತಾದ ಬ್ರ್ಯಾಂಡ್‍ನ ಆರ್ಥಿಕ ಬೆಂಬಲ ಕಾರ್ಯಕ್ರಮಗಳಿಂದಾಗಿ ಮೊದಲಿನಂತೆಯೇ ಮರ್ಸಿಡಿಸ್ ಬೆಂಝ್ ಉತ್ಪನ್ನವನ್ನು ಖರೀದಿಸಲು ಉತ್ತಮ ಅವಕಾಶಗಳನ್ನು ನೀಡುತ್ತಲೇ ಇರುತ್ತೇವೆ ಎಂದು ಮಾರ್ಟಿನ್ ಹೇಳಿದರು.

ಹಲವಾರು ಪ್ರಮುಖ ಕಂಪನಿಗಳು ಜನಪ್ರಿಯ ಕಾರುಗಳನ್ನು ಬಿಡುಗಡೆಗೊಳಿಸಿದರೂ, ಬೆಂಝ್ ಬ್ರ್ಯಾಂಡ್ ಭಾರತದ ಮಾರುಕಟ್ಟೆಯಲ್ಲಿ ನೆಚ್ಚಿನ ಐಷಾರಾಮಿ ಆಯ್ಕೆಯಾಗಿ ಉಳಿಯಲು ಈ ಕಾರ್ಯಕ್ರಮಗಳು ಸಹಕಾರಿಯಾಗಿವೆ.

1994ರಲ್ಲಿ ಸ್ಥಾಪನೆಯಾದ ಮರ್ಸಿಡಿಸ್ ಬೆಂಝ್ ಇಂಡಿಯಾ ತನ್ನ 25ನೇ ವಾರ್ಷಿಕೋತ್ಸವವನ್ನು ಇತ್ತೀಚಿಗೆ ಆಚರಿಸಿತು. ಭಾರತದ ಪ್ರಮುಖ ನಗರಗಳಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಯು 95 ಮಳಿಗೆಗಳನ್ನು ಹೊಂದಿದೆ.

ಜರ್ಮನ್ ಬ್ರಾಂಡ್‌ನ ಪರ್ಫಾಮೆನ್ಸ್ ಮಾದರಿ ವಿಭಾಗವಾದ ಎಎಂಜಿ ( ಫ್ರೆಕ್ಟ್, ಮೆಲ್ಚರ್ ಮತ್ತು ಗ್ರೊನಾಸ್ಪಾಚ್) ಆರು ನಗರಗಳಲ್ಲಿ ತನ್ನದೇ ಆದ ವಿಶೇಷ ಕೇಂದ್ರಗಳನ್ನು ಹೊಂದಿದೆ. ಪ್ರಮುಖ ನಗರಗಳಾದ ನವದೆಹಲಿ, ಮುಂಬೈ, ಹೈದರಾಬಾದ್, ಬೆಂಗಳೂರು, ಕೊಚ್ಚಿ ಮತ್ತು ಪುಣೆಯಲ್ಲಿ ಕೇಂದ್ರಗಳಿವೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ಇಂಡಿಯಾ 15 ಕ್ಕೂ ಹೆಚ್ಚು ಸಾಮಾನ್ಯ ಮಾದರಿಗಳನ್ನು, 8ಎಎಂಜಿಗಳನ್ನು ಮತ್ತು ಒಂದು ಮೇಬ್ಯಾಕ್(ಎಸ್560 ಮತ್ತು ಎಸ್650)ಗಳನ್ನು ಮಾರಾಟ ಮಾಡುತ್ತಿದೆ.

ಮರ್ಸಿಡಿಸ್ ಬೆಂಝ್ ಇಂಡಿಯಾ ತನ್ನ 2020ರ ಹೊಸ ಜಿಎಲ್‍ಸಿ ಫೇಸ್‍ಲಿಫ್ಟ್ ಎಸ್‍ಯುವಿಯನ್ನು ಇತ್ತೀಚಿಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಮರ್ಸಿಡಿಸ್ ಬೆಂಝ್ ಜಿಎಲ್‍ಸಿ ಎಸ್‍ಯುವಿಯ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.52.75 ಲಕ್ಷಗಳಾಗಿದೆ.
MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಈ ಎಸ್‍ಯುವಿಯನ್ನು ಜಿಎಲ್‍ಸಿ 200 ಹಾಗೂ ಜಿಎಲ್‍ಸಿ 220 ಡಿ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಟಾಪ್ ಎಂಡ್ ಮಾದರಿಯ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.57.75 ಲಕ್ಷಗಳಾಗಿದೆ.

2020ರ ಮರ್ಸಿಡಿಸ್ ಬೆಂಜ್ ಜಿಎಲ್‌ಸಿ ಎಸ್‍ಯುವಿಯನ್ನು ಎರಡು ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುವುದು. ಇದರಲ್ಲಿ 2.0 ಲೀಟರಿನ ಹೊಸ ಟರ್ಬೊ ಪೆಟ್ರೋಲ್ ಎಂಜಿನ್ 255 ಬಿಹೆಚ್‌ಪಿ ಪವರ್ ಮತ್ತು 370 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಇನ್ನೂ 2.0 ಲೀಟರಿನ ಡೀಸೆಲ್ ಯುನಿಟ್ 192 ಬಿಹೆಚ್‍ಪಿ ಪವರ್ ಹಾಗೂ 400 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎರಡೂ ಎಂಜಿನ್‍ಗಳಲ್ಲಿ 9 ಸ್ಪೀಡಿನ ಜಿ ಟ್ರಾನಿಕ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಯುನಿಟ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುತ್ತದೆ.

ಐಷಾರಾಮಿ ಕಾರು ವಿಭಾಗದಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಯ ಸೆಡಾನ್ ಅಥವಾ ಸಲೂನ್ ಸೆಗ್‍ಮೆಂಟ್‍ನ ಕಾರುಗಳು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಗಳಿಸುತ್ತಿವೆ. ಬೆಂಝ್ ಸಿಎಲ್ಎ, ಸಿ-ಕ್ಲಾಸ್, ಇ-ಕ್ಲಾಸ್ ಮತ್ತು ಬೆಂಚ್‍ಮಾರ್ಕ್ ಎಸ್-ಕ್ಲಾಸ್‍ನಂತಹ ಆವೃತ್ತಿಗಳಿಗೆ ಆಡಿ, ಬಿಎಂಡಬ್ಲ್ಯು ಅಥವಾ ಜಾಗ್ವರ್ ಕಾರುಗಳು ಪೈಪೋಟಿ ನೀಡಿದರೂ ಬೆಂಝ್ ಕಾರುಗಳು ಉತ್ತಮವಾಗಿ ಮಾರಾಟವಾಗುತ್ತಿವೆ.


Click it and Unblock the Notifications








