ಅಮಿತಾಬ್ ಬಚ್ಚನ್‍ರವರ ಕಾರ್ ಕಲೆಕ್ಷನ್‍ಗೆ ಮತ್ತೊಂದು ಐಷಾರಾಮಿ ಕಾರು ಸೇರ್ಪಡೆ..
ಬಾಲಿವುಡ್‍ನ ಸರ್ಕಾರ್ ಅಮಿತಾಬ್ ಬಚ್ಚನ್‍ರವರು ಕಾರು ಪ್ರಿಯರೆಂದು ಹಲವರಿಗೆ ತಿಳಿದಿರುವ ವಿಶಯ. ತಮ್ಮ ಕಾರ್ ಕಲೆಕ್ಷನ್‍ನಲ್ಲಿ ಲ್ಯಾಂಡ್ ರೋವರ್ ರೇಂಜ್ ರೋವರ್ ಆಟೋಬಯೊಗ್ರಫಿ, ರೋಲ್ಸ್ ರಾಯ್ಸ್ ಘೋಸ್ಟ್, ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಮತ್ತು ಮರ್ಸಿಡೀಸ್ ಬೆಂಝ್ ಎಸ್-ಕ್ಲಾಸ್ ಕಾರುಗಳಿದ್ದು, ಇದೀಗ ಹೊಸದಾಗಿ ಮತ್ತೊಂದು ಐಷಾರಾಮಿ ಕಾರು ಸೇರ್ಪಡೆಯಾಗಿದೆ.

ಬಾಲಿವುಡ್‍ನ ಹಿರಿಯ ನಟರಲ್ಲಿ ಒಬ್ಬರಾದ ಅಮಿತಾಬ್ ಬಚ್ಚನ್‍ರವರು ಇತ್ತೀಚೆಗೆ ಮರ್ಸಿಡೀಸ್ ಸಂಸ್ಥೆಯ ಮರ್ಸಿಡೀಸ್-ಬೆಂಝ್ -ಕ್ಲಾಸ್ ವ್ಯಾನ್ ಅನ್ನು ಖರೀದಿಸಿದ್ದಾರೆ. ಐಷಾರಾಮಿ ಸೌಲಭ್ಯಗಳ ಪ್ರೇರಿತ ವಿ-ಕ್ಲಾಸ್ ಬೆಲೆಯನ್ನು ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ.68.04 ಲಕ್ಷಕ್ಕೆ ಮತ್ತು ಹೈಎಂಡ್ ಮಾದರಿಯನ್ನು ರೂ.81.90 ಲಕ್ಷಕ್ಕೆ ಬೆಲೆ ನಿಗದಿ ಮಾಡಲಾಗಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 6 ಸೀಟರ್ ಮತ್ತು 7 ಸೀಟರ್ ಆವೃತ್ತಿಗಳನ್ನು ಆಯ್ಕೆ ಮಾಡಬಹುದಾಗಿದೆ.

2012ರಿಂದ 2014ರ ಅವಧಿಯಲ್ಲಿ ಭಾರತದಲ್ಲಿ ಬಿಡುಗಡೆಯಾಗಿ ಬೇಡಿಕೆಯಿಲ್ಲದೇ ಸ್ಥಗಿತಗೊಂಡಿದ್ದ ಎಂಬಿ100, ಎಂಬಿ140 ಮತ್ತು ಆರ್-ಕ್ಲಾಸ್ ಎಂಪಿವಿ ಕಾರುಗಳ ಮಾರಾಟದಲ್ಲಿ ಆದ ಹಿನ್ನಡೆಯನ್ನು ಅರಿತಿರುವ ಮರ್ಸಿಡಿಸ್ ಬೆಂಝ್ ಸಂಸ್ಥೆಯು ಈ ಬಾರಿ ಮಾರುಕಟ್ಟೆ ಅಧ್ಯಯನದೊಂದಿಗೆ ವಿ-ಕ್ಲಾಸ್ ಮಾರಾಟಕ್ಕೆ ಚಾಲನೆ ನೀಡಿದೆ.

7 ಸೀಟರ್ ವಿ-ಕ್ಲಾಸ್ ಮಾದರಿಯು 3,430-ಎಂಎಂ ವೀಲ್ಹ್‌ಬೆಸ್, 5,370-ಎಂಎಂ ಉದ್ದಳತೆ ಹೊಂದಿದ್ದಲ್ಲಿ 6-ಸೀಟರ್ ಮಾದರಿಯು 3,200-ಎಂಎಂ ವೀಲ್ಹ್‌ಬೆಸ್, 5,140-ಎಂಎಂ ಉದ್ದಳತೆಯೊಂದಿಗೆ 7 ಸೀಟರ್‌ಗಿಂತಲೂ ತುಸು ಹೆಚ್ಚಿನ ಮಟ್ಟದ ಐಷಾರಾಮಿ ಸೌಲತ್ತುಗಳನ್ನು ಹೊಂದಿರಲಿದೆ.

ವಿ-ಕ್ಲಾಸ್ 7 ಸೀಟರ್‌ಗಿಂತಲೂ ಹೆಚ್ಚಿನ ಬೆಲೆ ಹೊಂದಿರುವ 6-ಸೀಟರ್ ಮಾದರಿಯಲ್ಲಿ ಕೆಲವು ವಿಶೇಷ ಸೌಲಭ್ಯಗಳನ್ನು ನೀಡಲಾಗಿದ್ದು, ಕಾರಿನ ಒಳಭಾಗದಲ್ಲೇ ಕುಳಿತು ಸಭೆ ನಡೆಸಬಹುದಾದ ಟೆಬಲ್ ಪ್ಯಾಕೇಜ್, ಎಲೆಕ್ಟ್ರಿಕ್ ಸ್ಲಿಡಿಂಗ್ ಡೋರ್, 17-ಇಂಚಿನ ಅಲಾಯ್ ವೀಲ್ಹ್‌ಗಳು ಮತ್ತು ಒಳಭಾಗದಲ್ಲೇ ಕಾರಿನ ಸುತ್ತ ನೋಡಬಹುದಾದ 360 ಡಿಗ್ರಿ ಕ್ಯಾಮೆರಾ ಸೌಲಭ್ಯವಿದೆ.

ಪ್ರಮುಖವಾಗಿ ಕಾರಿನ ನೋಟವನ್ನು ಹೆಚ್ಚಿಸುವ ಹೈ ಪರ್ಫಾಮೆನ್ಸ್ ಎಲ್‌ಇಡಿ ಹೆಡ್‌ಲ್ಯಾಂಪ್ ಜೊತೆ ಇಂಟಲಿಜೆಂಟ್ ಲೈಟ್ ಸಿಸ್ಟಂ, ಆ್ಯಂಬಿಯೆಂಟ್ ಲೈಟಿಂಗ್ ಸಿಸ್ಟಂ, ನಪ್ಪಾ ಲೆದರ್ ಪ್ರೇರಿತ ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್ಹ್ ಮತ್ತು ಸುರಕ್ಷತೆಗಾಗಿ 6 ಏರ್‌ಬ್ಯಾಗ್ ಪಡೆದುಕೊಂಡಿದೆ.

ಹಾಗೆಯೇ 7 ಸೀಟರ್ ಮಾದರಿಯಲ್ಲೂ ಸಹ 16-ಇಂಚಿನ ಅಲಾಯ್ ವೀಲ್‌ಗಳು, ಕಂಫರ್ಟ್ ಸಸ್ಷೆಷನ್, ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್ಹ್, ಸ್ಪೋಟ್ ಪೆಡಲ್, ಡೈನಾಮಿಕ್ ಎಲ್ಇಡಿ ಹೆಡ್‌ಲ್ಯಾಂಪ್ ಜೊತೆ ಇಂಟಲಿಜೆಂಟ್ ಲೈಟ್ ಸಿಸ್ಟಂ ಜೊತೆಗೆ ಸ್ಮಾರ್ಟ್ ಎಂಟ್ರಿ ಸೌಲಭ್ಯಗಳನ್ನು ಎರಡು ಮಾದರಿಯಲ್ಲೂ ಇರಿಸಲಾಗಿದೆ.

ಎಂಜಿನ್ ಸಾಮರ್ಥ್ಯ
ಭಾರತದಲ್ಲಿ 2020ರ ಏಪ್ರಿಲ್ 1ರಿಂದ ಕಡ್ಡಾಯಗೊಳ್ಳಲಿರುವ ಬಿಎಸ್-6 ಎಂಜಿನ್ ಮಾದರಿಯನ್ನು ಈಗಲೇ ಅಳವಡಿಸಿಕೊಂಡಿರುವ ವಿ-ಕ್ಲಾಸ್ ಕಾರುಗಳು 2.0-ಲೀಟರ್ ಡೀಸೆಲ್ ಎಂಜಿನ್ ಪಡೆದಿದ್ದು, 7-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್‌ಮಿಷನ್‌ನೊಂದಿಗೆ 160-ಬಿಎಚ್‌ಪಿ ಮತ್ತು 380-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಲಭ್ಯವಿರುವ ಬಣ್ಣಗಳು
ವಿ-ಕ್ಲಾಸ್ ಕಾರುಗಳು 4 ಪ್ರಮುಖ ಮೆಟಾಲಿಕ್ ಬಣ್ಣಗಳ ಆಯ್ಕೆ ಹೊಂದಿದ್ದು, ಬ್ರಿಲಿಂಟ್ ಸಿಲ್ವರ್, ಕವಾನ್‌ಸೈಟ್ ಬ್ಲ್ಯೂ, ಒಬ್ಸಿಡಿನ್ ಬ್ಲ್ಯಾಕ್ ಮತ್ತು ಮೌಂಟೆನ್ ಕ್ರಿಸ್ಟಲ್ ವೈಟ್ ಬಣ್ಣಗಳಲ್ಲಿ ಖರೀದಿಸಬಹುದು.


Click it and Unblock the Notifications








