ದುಬಾರಿ ಬೆಲೆಯ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ವ್ಯಾನ್ ಭಾರತದಲ್ಲಿ ಬಿಡುಗಡೆ

ಮರ್ಸಿಡಿಸ್ ಬೆಂಝ್ ಸಂಸ್ಥೆಯು ಭಾರತವನ್ನು ಹೊರತುಪಡಿಸಿ ವಿಶ್ವದ ಪ್ರಮುಖ 90 ರಾಷ್ಟ್ರಗಳಲ್ಲಿ ಈಗಾಗಲೇ ವಿ-ಕ್ಲಾಸ್ ವ್ಯಾನ್ ಮಾದರಿಗಳ ಮಾರಾಟದಲ್ಲಿ ಜನಪ್ರಿಯತೆ ಸಾಧಿಸಿದ್ದು, ಇದೇ ಮೊದಲ ಬಾರಿಗೆ ಹೊಸ ವಿ-ಕ್ಲಾಸ್ ವ್ಯಾನ್‌ ಮಾದರಿಯನ್ನು ದೇಶಿಯ ಮಾರುಕಟ್ಟೆಗೂ ಸಹ ಪರಿಚಯಿಸಿದೆ.

ದುಬಾರಿ ಬೆಲೆಯ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ವ್ಯಾನ್ ಭಾರತದಲ್ಲಿ ಬಿಡುಗಡೆ

ಜರ್ಮನ್ ಬ್ರಾಂಡ್ ಮರ್ಸಿಡಿಸ್ ಬೆಂಝ್ ಸಂಸ್ಥೆಯು ಭಾರತದಲ್ಲಿ ಅತಿ ಹೆಚ್ಚು ಐಷಾರಾಮಿ ಕಾರುಗಳನ್ನು ಮಾರಾಟ ಮಾಡುವ ನಂ.1 ಆಟೋ ಉತ್ಪಾದನಾ ಸಂಸ್ಥೆಯಾಗಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ 15 ಕಾರು ಆವೃತ್ತಿಗಳನ್ನು ಮಾರಾಟ ಮಾಡುತ್ತಿದೆ. ಇದೀಗ ಮತ್ತೊಂದು ವಿಶೇಷ ವಿನ್ಯಾಸವುಳ್ಳ ವಿ-ಕ್ಲಾಸ್ ವ್ಯಾನ್ ಮಾದರಿಯನ್ನು ಹೊಸದಾಗಿ ಬಿಡುಗಡೆಗೊಳಿಸಿದ್ದು, ಲಗ್ಷುರಿ ಮಲ್ಟಿ ಪರ್ಪಸ್ ವೆಹಿಕಲ್ ವಿಭಾಗದಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದೆ.

ದುಬಾರಿ ಬೆಲೆಯ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ವ್ಯಾನ್ ಭಾರತದಲ್ಲಿ ಬಿಡುಗಡೆ

ಐಷಾರಾಮಿ ಸೌಲಭ್ಯಗಳ ಪ್ರೇರಿತ ವಿ-ಕ್ಲಾಸ್ ಬೆಲೆಯನ್ನು ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ.68.04 ಲಕ್ಷಕ್ಕೆ ಮತ್ತು ಹೈಎಂಡ್ ಮಾದರಿಯನ್ನು ರೂ.81.90 ಲಕ್ಷಕ್ಕೆ ಬೆಲೆ ನಿಗದಿ ಮಾಡಲಾಗಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 6 ಸೀಟರ್ ಮತ್ತು 7 ಸೀಟರ್ ಆವೃತ್ತಿಗಳನ್ನು ಆಯ್ಕೆ ಮಾಡಬಹುದಾಗಿದೆ.

ದುಬಾರಿ ಬೆಲೆಯ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ವ್ಯಾನ್ ಭಾರತದಲ್ಲಿ ಬಿಡುಗಡೆ

ವಿ-ಕ್ಲಾಸ್ ಎಕ್ಸ್‌ಪ್ರಿಷನ್ ಮಾದರಿಯ 7 ಸೀಟರ್ ಮಾದರಿಯಾಗಿದ್ದು ಇದರ ಬೆಲೆಯು ಎಕ್ಸ್‌‌ಶೋರೂಂ ಪ್ರಕಾರ ರೂ. 68.04 ಲಕ್ಷ ಬೆಲೆ ಹೊಂದಿದ್ದು, ವಿ-ಕ್ಲಾಸ್ ಎಕ್ಸ್‌ಕ್ಲೂಸಿವ್ ಮಾದರಿಯು 6 ಸೀಟರ್ ಮಾದರಿಯೊಂದಿಗೆ ಎಕ್ಸ್‌ಶೋರೂಂ ಪ್ರಕಾರ ರೂ. 81.90 ಲಕ್ಷಕ್ಕೆ ಖರೀದಿಗೆ ಲಭ್ಯವಿದೆ.

ದುಬಾರಿ ಬೆಲೆಯ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ವ್ಯಾನ್ ಭಾರತದಲ್ಲಿ ಬಿಡುಗಡೆ

2012ರಿಂದ 2014ರ ಅವಧಿಯಲ್ಲಿ ಭಾರತದಲ್ಲಿ ಬಿಡುಗಡೆಯಾಗಿ ಬೇಡಿಕೆಯಿಲ್ಲದೇ ಸ್ಥಗಿತಗೊಂಡಿದ್ದ ಎಂಬಿ100, ಎಂಬಿ140 ಮತ್ತು ಆರ್-ಕ್ಲಾಸ್ ಎಂಪಿವಿ ಕಾರುಗಳ ಮಾರಾಟದಲ್ಲಿ ಆದ ಹಿನ್ನಡೆಯನ್ನು ಅರಿತಿರುವ ಮರ್ಸಿಡಿಸ್ ಬೆಂಝ್ ಸಂಸ್ಥೆಯು ಈ ಬಾರಿ ಮಾರುಕಟ್ಟೆ ಅಧ್ಯಯನದೊಂದಿಗೆ ವಿ-ಕ್ಲಾಸ್ ಮಾರಾಟಕ್ಕೆ ಚಾಲನೆ ನೀಡಿದೆ.

ದುಬಾರಿ ಬೆಲೆಯ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ವ್ಯಾನ್ ಭಾರತದಲ್ಲಿ ಬಿಡುಗಡೆ

7 ಸೀಟರ್ ವಿ-ಕ್ಲಾಸ್ ಮಾದರಿಯು 3,430-ಎಂಎಂ ವೀಲ್ಹ್‌ಬೆಸ್, 5,370-ಎಂಎಂ ಉದ್ದಳತೆ ಹೊಂದಿದ್ದಲ್ಲಿ 6-ಸೀಟರ್ ಮಾದರಿಯು 3,200-ಎಂಎಂ ವೀಲ್ಹ್‌ಬೆಸ್, 5,140-ಎಂಎಂ ಉದ್ದಳತೆಯೊಂದಿಗೆ 7 ಸೀಟರ್‌ಗಿಂತಲೂ ತುಸು ಹೆಚ್ಚಿನ ಮಟ್ಟದ ಐಷಾರಾಮಿ ಸೌಲತ್ತುಗಳನ್ನು ಹೊಂದಿರಲಿದೆ.

ದುಬಾರಿ ಬೆಲೆಯ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ವ್ಯಾನ್ ಭಾರತದಲ್ಲಿ ಬಿಡುಗಡೆ

ವಿ-ಕ್ಲಾಸ್ 7 ಸೀಟರ್‌ಗಿಂತಲೂ ಹೆಚ್ಚಿನ ಬೆಲೆ ಹೊಂದಿರುವ 6-ಸೀಟರ್ ಮಾದರಿಯಲ್ಲಿ ಕೆಲವು ವಿಶೇಷ ಸೌಲಭ್ಯಗಳನ್ನು ನೀಡಲಾಗಿದ್ದು, ಕಾರಿನ ಒಳಭಾಗದಲ್ಲೇ ಕುಳಿತು ಸಭೆ ನಡೆಸಬಹುದಾದ ಟೆಬಲ್ ಪ್ಯಾಕೇಜ್, ಎಲೆಕ್ಟ್ರಿಕ್ ಸ್ಲಿಡಿಂಗ್ ಡೋರ್, 17-ಇಂಚಿನ ಅಲಾಯ್ ವೀಲ್ಹ್‌ಗಳು ಮತ್ತು ಒಳಭಾಗದಲ್ಲೇ ಕಾರಿನ ಸುತ್ತ ನೋಡಬಹುದಾದ 360 ಡಿಗ್ರಿ ಕ್ಯಾಮೆರಾ ಸೌಲಭ್ಯವಿದೆ.

ದುಬಾರಿ ಬೆಲೆಯ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ವ್ಯಾನ್ ಭಾರತದಲ್ಲಿ ಬಿಡುಗಡೆ

ಪ್ರಮುಖವಾಗಿ ಕಾರಿನ ನೋಟವನ್ನು ಹೆಚ್ಚಿಸುವ ಹೈ ಪರ್ಫಾಮೆನ್ಸ್ ಎಲ್‌ಇಡಿ ಹೆಡ್‌ಲ್ಯಾಂಪ್ ಜೊತೆ ಇಂಟಲಿಜೆಂಟ್ ಲೈಟ್ ಸಿಸ್ಟಂ, ಆ್ಯಂಬಿಯೆಂಟ್ ಲೈಟಿಂಗ್ ಸಿಸ್ಟಂ, ನಪ್ಪಾ ಲೆದರ್ ಪ್ರೇರಿತ ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್ಹ್ ಮತ್ತು ಸುರಕ್ಷತೆಗಾಗಿ 6 ಏರ್‌ಬ್ಯಾಗ್ ಪಡೆದುಕೊಂಡಿದೆ.

ದುಬಾರಿ ಬೆಲೆಯ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ವ್ಯಾನ್ ಭಾರತದಲ್ಲಿ ಬಿಡುಗಡೆ

ಹಾಗೆಯೇ 7 ಸೀಟರ್ ಮಾದರಿಯಲ್ಲೂ ಸಹ 16-ಇಂಚಿನ ಅಲಾಯ್ ವೀಲ್‌ಗಳು, ಕಂಫರ್ಟ್ ಸಸ್ಷೆಷನ್, ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್ಹ್, ಸ್ಪೋಟ್ ಪೆಡಲ್, ಡೈನಾಮಿಕ್ ಎಲ್ಇಡಿ ಹೆಡ್‌ಲ್ಯಾಂಪ್ ಜೊತೆ ಇಂಟಲಿಜೆಂಟ್ ಲೈಟ್ ಸಿಸ್ಟಂ ಜೊತೆಗೆ ಸ್ಮಾರ್ಟ್ ಎಂಟ್ರಿ ಸೌಲಭ್ಯಗಳನ್ನು ಎರಡು ಮಾದರಿಯಲ್ಲೂ ಇರಿಸಲಾಗಿದೆ.

MOST READ: ಟಾಟಾ ನ್ಯಾನೋ ಬರುವುದಕ್ಕೂ ಮುನ್ನ ಬಂದು ಹೋದ 'ಮೀರಾ' ಕಾರಿನ ಕಥೆ ಗೊತ್ತಾ?

ದುಬಾರಿ ಬೆಲೆಯ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ವ್ಯಾನ್ ಭಾರತದಲ್ಲಿ ಬಿಡುಗಡೆ

ಎಂಜಿನ್ ಸಾಮರ್ಥ್ಯ

ಭಾರತದಲ್ಲಿ 2020ರ ಏಪ್ರಿಲ್ 1ರಿಂದ ಕಡ್ಡಾಯಗೊಳ್ಳಲಿರುವ ಬಿಎಸ್-6 ಎಂಜಿನ್ ಮಾದರಿಯನ್ನು ಈಗಲೇ ಅಳವಡಿಸಿಕೊಂಡಿರುವ ವಿ-ಕ್ಲಾಸ್ ಕಾರುಗಳು 2.0-ಲೀಟರ್ ಡೀಸೆಲ್ ಎಂಜಿನ್‌ ಪಡೆದಿದ್ದು, 7-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್‌ಮಿಷನ್‌ನೊಂದಿಗೆ 160-ಬಿಎಚ್‌ಪಿ ಮತ್ತು 380-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ದುಬಾರಿ ಬೆಲೆಯ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ವ್ಯಾನ್ ಭಾರತದಲ್ಲಿ ಬಿಡುಗಡೆ

ಲಭ್ಯವಿರುವ ಬಣ್ಣಗಳು

ವಿ-ಕ್ಲಾಸ್ ಕಾರುಗಳು 4 ಪ್ರಮುಖ ಮೆಟಾಲಿಕ್ ಬಣ್ಣಗಳ ಆಯ್ಕೆ ಹೊಂದಿದ್ದು, ಬ್ರಿಲಿಂಟ್ ಸಿಲ್ವರ್, ಕವಾನ್‌ಸೈಟ್ ಬ್ಲ್ಯೂ, ಒಬ್ಸಿಡಿನ್ ಬ್ಲ್ಯಾಕ್ ಮತ್ತು ಮೌಂಟೆನ್ ಕ್ರಿಸ್ಟಲ್ ವೈಟ್‌ ಬಣ್ಣಗಳಲ್ಲಿ ಖರೀದಿಸಬಹುದು.

MOST READ: ಶೀಘ್ರವೇ ಬ್ಯಾನ್ ಆಗಲಿವೆ ಈ ಆರು ಜನಪ್ರಿಯ ಕಾರುಗಳು..!

ದುಬಾರಿ ಬೆಲೆಯ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ವ್ಯಾನ್ ಭಾರತದಲ್ಲಿ ಬಿಡುಗಡೆ

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಭಾರತದಲ್ಲಿ ಕಾರು ಮಾರಾಟ ಆರಂಭಿ 25ನೇ ವರ್ಷಾಚಾರಣೆ ಸಂಭ್ರಮದಲ್ಲಿರು ಮರ್ಸಿಡಿಸ್ ಬೆಂಝ್ ಸಂಸ್ಥೆಯು ಹೊಸ ವಿ-ಕ್ಲಾಸ್ ವ್ಯಾನ್ ಮೂಲಕ ಉದ್ಯಮ ವಲಯದಲ್ಲಿ ಭಾರೀ ಬೇಡಿಕೆ ಗಿಟ್ಟಿಸಿಕೊಳ್ಳುವ ತವಕದಲ್ಲಿದೆ.

Most Read Articles

Kannada
English summary
Mercedes-Benz V-Class Launched In India At Rs 68.4 Lakh. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X