ಶೀಘ್ರವೇ ಬ್ಯಾನ್ ಆಗಲಿವೆ ಈ ಆರು ಜನಪ್ರಿಯ ಕಾರುಗಳು..!

ಭಾರತೀಯ ಮಾರುಕಟ್ಟೆಯಲ್ಲಿ ತಮ್ಮದೇ ಆದ ಜನಪ್ರಿಯತೆಯೊಂದಿಗೆ ಮುನ್ನುಗ್ಗುತ್ತಿರುವ ಕೆಲವು ವಾಹನ ಉತ್ಪಾದನಾ ಸಂಸ್ಥೆಗಳಿಗೆ ಕೇಂದ್ರ ಸರ್ಕಾರವು ಜಾರಿಗೆ ತರುತ್ತಿರುವ ಹೊಸ ಕಾಯ್ದೆಗಳಿಂದಾಗಿ ಭಾರೀ ಹೊಡೆತ ನೀಡುತ್ತಿದ್ದು, ಇಷ್ಟುದಿನಗಳ ಕಾಲ ಮಾರುಕಟ್ಟೆಯಲ್ಲಿ ಹಾಟ್ ಚಿಪ್ಸ್‌ನಂತೆ ಮಾರಾಟವಾಗುತ್ತಿದ್ದ ಕೆಲವು ಕಾರುಗಳಿಗೆ ಸಂಕಷ್ಟ ಎದುರಾಗಿದೆ.

ಶೀಘ್ರವೇ ಬ್ಯಾನ್ ಆಗಲಿವೆ ಈ ಆರು ಜನಪ್ರಿಯ ಕಾರುಗಳು..!

ಹೌದು, ದೇಶದಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ವಾಹನ ಗುಣಮಟ್ಟದಲ್ಲಿ ಬದಲಾವಣೆ ತರುವ ಸಂಬಂಧ ಆಟೋ ಉದ್ಯಮದಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಗುತ್ತಿದ್ದು, ಕೇಂದ್ರದ ಸರ್ಕಾರದ ಹೊಸ ಕಾಯ್ದೆಗೆ ಅನುಗುಣವಾಗಿ ಬದಲಾವಣೆಗೊಳ್ಳಲು ಸಾಧ್ಯವಿರುವ ಸುಮಾರು 9 ಜನಪ್ರಿಯ ಕಾರುಗಳು ಸದ್ಯದಲ್ಲೇ ಮಾರುಕಟ್ಟೆಯಿಂದ ಸ್ಥಗಿತಗೊಳ್ಳುವುದು ಖಚಿತವಾಗಿದೆ.

ಶೀಘ್ರವೇ ಬ್ಯಾನ್ ಆಗಲಿವೆ ಈ ಆರು ಜನಪ್ರಿಯ ಕಾರುಗಳು..!

2019ರಿಂದ ಪ್ರತಿ ಕಾರು ಮಾದರಿಯಲ್ಲೂ ನಿರ್ದಿಷ್ಟ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಹೊಂದಿದ್ದರೇ ಮಾತ್ರವೇ ಕಾರು ಮಾರಾಟಕ್ಕೆ ಅವಕಾಶ ನೀಡುವ ಉದ್ದೇಶದಿಂದ ಇಂಡಿಯನ್ ಕ್ರ್ಯಾಶ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಆರಂಭಿಸಿದ್ದು, ಮಾರುತಿ ಸುಜುಕಿ ಸೇರಿದಂತೆ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳಿಗೆ ಈಗಾಗಲೇ ತಳಮಳ ಶುರುವಾಗಿದೆ.

ಶೀಘ್ರವೇ ಬ್ಯಾನ್ ಆಗಲಿವೆ ಈ ಆರು ಜನಪ್ರಿಯ ಕಾರುಗಳು..!

ಹಾಗಾದ್ರೆ ಸ್ಥಗಿತಗೊಳ್ಳಲಿರುವ ಕಾರುಗಳಲ್ಲಿರುವ ನ್ಯೂನತೆ ಏನು? ಯಾವ ಕಾರಣಕ್ಕಾಗಿ ಸ್ಥಗಿತಗೊಳ್ಳುತ್ತಿವೆ ಎನ್ನುವುದನ್ನು ತಿಳಿದ್ರೆ ನಿಜಕ್ಕೂ ನಿಮಗೆ ಶಾಕ್ ಆಗದೆ ಇರಲಾರದು. ಹೀಗಾಗಿ ನೀವು ಹೊಸ ಕಾರು ಖರೀದಿ ಮಾಡುವ ಪ್ಲ್ಯಾನ್ ಇದ್ದಲ್ಲಿ ಈ ಕೆಳಗಿನ ಕಾರುಗಳನ್ನು ಖರೀದಿಸುವ ಮುನ್ನ ಹತ್ತು ಬಾರಿ ಯೋಚಿಸುವುದು ಒಳಿತು.

ಶೀಘ್ರವೇ ಬ್ಯಾನ್ ಆಗಲಿವೆ ಈ ಆರು ಜನಪ್ರಿಯ ಕಾರುಗಳು..!

01. ಮಾರುತಿ ಸುಜುಕಿ ಒಮ್ನಿ

ಕಳೆದ ತಿಂಗಳು ಹಿಂದಷ್ಟೆ ನಡೆದಿದ್ದ ಮಾರುತಿ ಸುಜುಕಿ ನಿರ್ಮಾಣದ 15 ಪ್ರಮುಖ ಕಾರುಗಳು ಈ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಹತ್ತಕ್ಕೂ ಹೆಚ್ಚು ಕಾರು ಉತ್ಪನ್ನಗಳಲ್ಲಿ ಕನಿಷ್ಠ ಮಟ್ಟದ ಸುರಕ್ಷತೆ ಇಲ್ಲದಿರುವುದು ಖರೀದಿಗೆ ಯೋಗ್ಯವಲ್ಲದ ಎಂಬುವುದು ಸಾಬೀತಾಗಿದೆ.

ಶೀಘ್ರವೇ ಬ್ಯಾನ್ ಆಗಲಿವೆ ಈ ಆರು ಜನಪ್ರಿಯ ಕಾರುಗಳು..!

ವಾಸ್ತವವಾಗಿ ಕೆಲ ದಿನಗಳ ಹಿಂದಷ್ಟೆ ರೇಟಿಂಗ್ ಹೊಂದಿರುವ ಕಾರುಗಳನ್ನು ಮಾರಾಟ ಮಾಡಲು ವಿದೇಶಿ ಮಾರುಕಟ್ಟೆಗಳಲ್ಲಿ ಅನುಮತಿಯೇ ಇಲ್ಲದಿರುವ ಸಂದರ್ಭದಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಮಾತ್ರ ಭಾರತೀಯ ಮಾರುಕಟ್ಟೆಯಲ್ಲಿ ಆಲ್ಟೊ, ವ್ಯಾಗನ್ ಆರ್, ಓಮ್ನಿ ಮತ್ತು ಜಿಪ್ಸಿ ಕಾರುಗಳನ್ನ ಹಾಟ್ ಚಿಪ್ಸ್‌ನಂತೆ ಮಾರಾಟ ಮಾಡುತ್ತಿರುವುದು ಕಳವಳಕಾರಿ ಸಂಗತಿ ಅಂದ್ರೆ ತಪ್ಪಾಗುದಿಲ್ಲ.

ಶೀಘ್ರವೇ ಬ್ಯಾನ್ ಆಗಲಿವೆ ಈ ಆರು ಜನಪ್ರಿಯ ಕಾರುಗಳು..!

ಹೀಗಾಗಿ ಕನಿಷ್ಠ ಮಟ್ಟದ ಸುರಕ್ಷೆತೆಯನ್ನು ಸಹ ನೀಡಲು ಹಿಂದೆ ಮುಂದೆ ನೋಡುವ ಮಾರುತಿ ಸುಜುಕಿಗೆ ಇದೀಗ ಸಂಕಷ್ಟ ಎದುರಾಗಿದ್ದು, 2019ರಿಂದ ಜಾರಿಗೆ ಬರಲಿರುವ ಹೊಸ ಕಾಯ್ದೆಯಿಂದ ಸೊನ್ನೆ ರೇಟಿಂಗ್ ಪಡೆದಿರುವ ಓಮ್ನಿ ಮೂಲೆಗುಂಪಾಬೇಕಾದ ಅನಿವಾರ್ಯತೆಗಳಿವೆ.

ಶೀಘ್ರವೇ ಬ್ಯಾನ್ ಆಗಲಿವೆ ಈ ಆರು ಜನಪ್ರಿಯ ಕಾರುಗಳು..!

02. ಮಾರುತಿ ಸುಜುಕಿ ಜಿಪ್ಸಿ

ಮಾರುತಿ ಸುಜುಕಿ ಸಂಸ್ಥೆಯು ಒಮ್ನಿ ಮಾತ್ರವಲ್ಲದೇ ಇದೇ ವರ್ಷ 2018ರ ಡಿಸೆಂಬರ್‌ನಿಂದ ಜಿಪ್ಸಿ ಕಾರುಗಳ ಬುಕ್ಕಿಂಗ್ ಪ್ರಕ್ರಿಯೆಯನ್ನು ಬಂದ್ ಮಾಡಲು ನಿರ್ಧರಿಸಲಾಗಿದ್ದು, 2019ರ ಮಾರ್ಚ್ ಅಂತ್ಯಕ್ಕೆ ಪೂರ್ಣ ಪ್ರಮಾಣದಲ್ಲಿ ಉತ್ಪಾದನಾ ಚಟುವಟಿಕೆಯನ್ನು ನಿಲ್ಲಿಸುವುದಾಗಿ ಖಚಿತಪಡಿಸಿದೆ.

ಶೀಘ್ರವೇ ಬ್ಯಾನ್ ಆಗಲಿವೆ ಈ ಆರು ಜನಪ್ರಿಯ ಕಾರುಗಳು..!

ಅಪಘಾತಗಳ ಸಂದರ್ಭದಲ್ಲಿ ಪ್ರಯಾಣಿಕರಿಗೆ ಯಾವುದೇ ಕನಿಷ್ಠ ಮಟ್ಟದ ಸುರಕ್ಷೆ ಇಲ್ಲದಿರುವ ಕಾರುಗಳಿಂದ ಅಪಘಾತದ ತೀವ್ರತೆ ಮತ್ತಷ್ಟು ಏರಿಕೆಯಾಗಲಿದ್ದು, ಇದೇ ಕಾರಣಕ್ಕೆ ಕಠಿಣ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರವು ಕನಿಷ್ಠ ಸುರಕ್ಷಾ ಸೌಲಭ್ಯಗಳನ್ನು ಅಳವಡಿಸಿ ಮಾರಾಟ ಮಾಡಿ ಇಲ್ಲವೇ ಕಳಪೆ ಗುಣಮಟ್ಟದ ಕಾರುಗಳನ್ನು ವಾಪಸ್ ಪಡೆಯಿರಿ ಎಂದು ಕಾರು ಉತ್ಪಾದನಾ ಸಂಸ್ಥೆಗಳಿಗೆ ಖಡಕ್ ವಾರ್ನ್ ಮಾಡಿದೆ.

MOST READ: ತಂದೆ-ತಾಯಿಗೆ ಮರೆಯಾಲಾಗದ ಉಡುಗೊರೆ ನೀಡಿದ ಬೆಂಗಳೂರು ಯುವಕ

ಶೀಘ್ರವೇ ಬ್ಯಾನ್ ಆಗಲಿವೆ ಈ ಆರು ಜನಪ್ರಿಯ ಕಾರುಗಳು..!

03. ಟಾಟಾ ನ್ಯಾನೋ

ಅಗ್ಗದ ಬೆಲೆಯೊಂದಿಗೆ ಲಕ್ಷಾಂತರ ಮಧ್ಯಮ ವರ್ಗದ ಗ್ರಾಹಕರ ಕಾರು ಖರೀದಿಯ ಕನಸನ್ನು ನನಸು ಮಾಡಿದ್ದ ನ್ಯಾನೋ ಅಷ್ಟೇ ಪ್ರಮಾಣದಲ್ಲಿ ಆತಂಕಕಾರಿಯಾಗಿ ಪರಿಣಮಿಸುತ್ತಿದೆ. ಹೀಗಾಗಿ ನ್ಯಾನೋ ಕಾರುನ್ನು ಸ್ಥಗಿತಗೊಳಿಸುತ್ತಿರುವ ಟಾಟಾ ಸಂಸ್ಥೆಯು ಉತ್ತಮ ಸುರಕ್ಷೆತೆವುಳ್ಳ ಹೊಸ ಕಾರುಗಳ ಉತ್ಪಾದನೆ ಮೇಲೆ ಹೆಚ್ಚಿನ ಗಮನಹರಿಸುತ್ತಿದೆ.

ಶೀಘ್ರವೇ ಬ್ಯಾನ್ ಆಗಲಿವೆ ಈ ಆರು ಜನಪ್ರಿಯ ಕಾರುಗಳು..!

04. ಮಹೀಂದ್ರಾ ವೆರಿಟೋ ಮತ್ತು ವೆರಿಟೋ ವೈಬ್

ಮಹೀಂದ್ರಾ ಸಂಸ್ಥೆಯು ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಹೊಸ ಉತ್ಪನ್ನಗಳನ್ನ ಪರಿಚಯಿಸುತ್ತಿದ್ದು, ತನ್ನ ಜನಪ್ರಿಯ ಸೆಡಾನ್ ಮಾದರಿಯಾಗಿರುವ ವೆರಿಟೋ ಮತ್ತು ವೆರಿಟೋ ವೈಬ್ ಕಾರುಗಳ ಮಾರಾಟ ಬ್ರೇಕ್ ಹಾಕಲು ಮುಂದಾಗಿದೆ.

ಶೀಘ್ರವೇ ಬ್ಯಾನ್ ಆಗಲಿವೆ ಈ ಆರು ಜನಪ್ರಿಯ ಕಾರುಗಳು..!

2019ರ ಕೊನೆಯಲ್ಲಿ ಬಿಎಸ್ 6 ವೈಶಿಷ್ಟ್ಯತೆಯ ವಾಹನ ಮಾದರಿಗಳ ಮಾರಾಟವು ಕಡ್ಡಾಯವಾಗಿರಲಿದ್ದು, ಬಿಎಸ್ 4 ವಾಹನಗಳು ಸಹ ನಿಷೇಧಗೊಳ್ಳಲಿವೆ. ಹೀಗಾಗಿಯೇ ಭವಿಷ್ಯ ಯೋಜನೆಗಳಿಗಾಗಿ ಮಹೀಂದ್ರಾ ಸಂಸ್ಥೆಯು ತನ್ನ ಕಳಪೆ ಗುಣಮಟ್ಟದ ವೆರಿಟೋ ಉತ್ಪಾದನೆಯನ್ನ ಕೈಬಿಡುವುದು ಅನಿವಾರ್ಯವಾಗಲಿದೆ.

ಶೀಘ್ರವೇ ಬ್ಯಾನ್ ಆಗಲಿವೆ ಈ ಆರು ಜನಪ್ರಿಯ ಕಾರುಗಳು..!

ಒಂದು ವೇಳೆ ವೆರಿಟೋ ಮಾರಾಟ ಮುಂದುವರಿಸುವುದಾದರೇ ಮತ್ತಷ್ಟು ಹೊಸ ಸುರಕ್ಷಾ ಸೌಲಭ್ಯ ಮತ್ತು ಬಿಎಸ್ 6 ವಿನ್ಯಾಸಗಳನ್ನು ಸೇರಿಸಲೇಬೇಕಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ವೆರಿಟೋ ಉನ್ನತಿಕರಿಸುವ ಬದಲು ಹೊಸ ಉತ್ಪನ್ನಗಳತ್ತ ಗಮನಹರಿಸುವುದೇ ಉತ್ತಮ ನಿರ್ಧಾರ ಎನ್ನಬಹುದು.

ಶೀಘ್ರವೇ ಬ್ಯಾನ್ ಆಗಲಿವೆ ಈ ಆರು ಜನಪ್ರಿಯ ಕಾರುಗಳು..!

05. ಟಾಟಾ ಸುಮೊ

ಟಾಟಾ ಮೋಟಾರ್ಸ್‍ನ ಜನಪ್ರಿಯ ಕಾರಾದ ಸುಮೊ ಕಾರು ಶೀಘ್ರವೇ ಕಣ್ಮರೆಯಾಗಲಿದ್ದು, ಈ ಕಾರಿನ ಸ್ಥಾನವನ್ನು ಮತ್ತೊಂದು ಕಾರು ಸ್ಥಳಾಂತರಿಸಲಿದೆ ಎಂಬ ಮಾತು ಕೇಳಿ ಬರಿತ್ತಿದೆ. ದಶಕಗಳಿಂದ ಮತ್ತು ನಮ್ಮ ಬಾಲ್ಯದಲ್ಲಿ ಇದೇ ಕಾರುಗಳಲ್ಲಿ ಹೆಚ್ಚು ಸಂಚರಿಸುವ ಕ್ಷಣಗಳು ಇನ್ನು ನೆನಪಾಗಿಯೆ ಉಳಿಯಲಿದೆ.

ಶೀಘ್ರವೇ ಬ್ಯಾನ್ ಆಗಲಿವೆ ಈ ಆರು ಜನಪ್ರಿಯ ಕಾರುಗಳು..!

ಭಾರತದಲ್ಲಿ ಕಠಿಣವಾದ ಸುರಕ್ಷತಾ ಮಾರ್ಗದರ್ಶಿ ಸೂತ್ರಗಳ ಕಾರಣದಿಂದ ಟಾಟಾ ಸುಮೋ ಕೊನೆಗೊಳ್ಳುತ್ತದೆ ಎನ್ನಲಾಗುತ್ತಿದ್ದು, ಹೇಗಾದರೂ, ಟಾಟಾ ಸಂಸ್ಥೆಯು ಈ ಎಸ್‍ಯುವಿ ಹೆಸರನ್ನು ಮತ್ತೊಂದು ಕಾರಿಗೆ ನೀಡಿ, ಇಂತಹ ವಿನ್ಯಾವನ್ನು ಹೊಂದಿರುವ ಮತ್ತೊಂದು ಕಾರನ್ನು ಬಿಡುಗಡೆಗೊಳಿಸಲು ತಯಾರಿ ನಡೆಸುತ್ತಿದೆ.

ಶೀಘ್ರವೇ ಬ್ಯಾನ್ ಆಗಲಿವೆ ಈ ಆರು ಜನಪ್ರಿಯ ಕಾರುಗಳು..!

06. ಮಹೀಂದ್ರಾ ಜೈಲೊ

ಅರೆ ಇದೇನಿದು ಈ ಕಾರು ಇನ್ನು ಮಾರಾಟಗೊಳ್ಳುತ್ತಿದೆ ಈ ಕಾರು ಕೂಡಾ ಕಣ್ಮರೆಯಾಗಲಿದೆಯೆ ಎಂಬುದು ನಿಮ್ಮ ಸಂದೇಶವಿರಬಹುದು. ಸಧ್ಯಕ್ಕೆ ಈ ಕಾರು ಮಾರಾಟಗೊಳ್ಳುತ್ತಿದ್ದರೂ, ಮುಂದಕ್ಕೆ ಈ ಕಾರನ್ನು ಸ್ಥಗಿತಗೊಳಿಸಬೇಕು ಎಂದು ಮಹೀಂದ್ರಾ ಸಂಸ್ಥೆಯು ಯೋಜನೆಯಲ್ಲಿದೆ. ಈ ನಿಟ್ಟಿನಲ್ಲಿ ಮತ್ತೊಂದು ಜನಪ್ರಿಯ ಕಾರು ಜೈಲೊ ಕೂಡಾ ಕಣ್ಮರೆಯಾಬಹುದು ಎಂದು ಹೇಳಲಾಗುತ್ತಿದೆ.

MOST READ: ಪಾರ್ಟಿ ಮಾಡಕ್ಕೆ ಗೋವಾನಲ್ಲಿ ಹಣ ಸಾಕಾಗಿಲ್ಲಾಂದ್ರೆ ಹೀಗೆ ಮಾಡಿ ಹಣ ಸಂಪಾದಿಸಿ...

ಶೀಘ್ರವೇ ಬ್ಯಾನ್ ಆಗಲಿವೆ ಈ ಆರು ಜನಪ್ರಿಯ ಕಾರುಗಳು..!

ಜೈಲೊ ವಿಲಕ್ಷಣ ನೋಟವನ್ನು ಹೊಂದಿದ್ದರೂ ಸಹ ಬಹಳ ಆರಾಮದಾಯಕವಾದ ಮತ್ತು ವಿಶಾಲವಾದ ಒಳಾಂಗಣವನ್ನು ಹೊಂದಿತ್ತು, ಇದು ಮಾರಾಟದ ವಿಷಯದಲ್ಲಿ ಯೋಗ್ಯವಾಗಿ ಕಾರ್ಯನಿರ್ವಹಿಸಿತು ಎಂಬುದರ ಮುಖ್ಯ ಕಾರಣಗಳಲ್ಲಿ ಒಂದಾಗಿದ್ದರೂ, ಸ್ವಲ್ಪ ಸಮಯದಿಂದ ಕಂಪನಿಯು ಕಾರ್ ಅನ್ನು ಶೀಘ್ರದಲ್ಲಿಯೇ ಸ್ಥಗಿತಗೊಳಿಸುವುದರ ಬಗ್ಗೆ ಚಿಂತಿಸುತ್ತಿದೆ. ಆದಾಗ್ಯೂ, ಗಡುವನ್ನು ಹತ್ತಿರಕ್ಕೆ ಇಳಿಸುವುದರೊಂದಿಗೆ, ಜೈಲೊ ಕಾರುಗಳು ಶೀಘವೇ ಮಾರುಕಟ್ಟೆಯಿಂದ ಕಣ್ಮರೆಯಾಗಲಿದೆ.

Source: Cartoq

More from DriveSpark

Article Published On: Thursday, January 24, 2019, 11:54 [IST]
English summary
These Famous Cars Will Get Ban From Market Soon. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+