ವೇಗದ ಕಾರುಗಳನ್ನು ಅನಾವರಣಗೊಳಿಸಿದ ಮರ್ಸಿಡಿಸ್
ಮರ್ಸಿಡಿಸ್ ಬೆಂಝ್ ಹೊಸ 45,4ಮ್ಯಾಟಿಕ್ ಪ್ಲಸ್ ಪವರ್‌ಟ್ರೇನ್ ಅನ್ನು ಒಳಗೊಂಡಿರುವ ಎರಡು ಕಾರುಗಳನ್ನು ಅನಾವರಣಗೊಳಿಸಿದೆ. ಮರ್ಸಿಡಿಸ್-ಎಎಂಜಿ ಪ್ರಕಾರ ಈ ಕಾರುಗಳಲ್ಲಿರುವ ಟರ್ಬೋಚಾರ್ಜ್ಡ್ ನಾಲ್ಕು ಸಿಲಿಂಡರ್ ಉತ್ಪಾದನಾ ಎಂಜಿನ್, ವಿಶ್ವದ ಅತ್ಯಂತ ಶಕ್ತಿಶಾಲಿ ಎಂಜಿನ್ ಆಗಿದೆ. ಗುಡ್‍ವುಡ್ ಫೆಸ್ಟಿವಲ್ ಆಫ್ ಸ್ಪೀಡ್‍ನಲ್ಲಿ ಈ ಎರಡೂ ಕಾರುಗಳನ್ನು ಪ್ರದರ್ಶಿಸಲಾಗಿದೆ. ಎಎಂಜಿ-ಮರ್ಸಿಡಿಸ್ ಎ45 ಹ್ಯಾಚ್‌ಬ್ಯಾಕ್ ಹಾಗೂ ಮರ್ಸಿಡಿಸ್ ಸಿಎಲ್‌ಎ 45 ನಾಲ್ಕು ಡೋರಿನ ಕೂಪೆ ಕಾರುಗಳಲ್ಲಿ ಉತ್ತಮವಾದ ಪರ್ಫಾಮೆನ್ಸ್ ಒದಗಿಸುವ ಭರವಸೆ ನೀಡಿದೆ.

ಈ ಎರಡೂ ಕಾರುಗಳು ಎಎಂಜಿ ನಿರ್ಮಿಸಿರುವ 2.0-ಲೀಟರ್ ಟರ್ಬೋಚಾರ್ಜ್ಡ್ ನಾಲ್ಕು ಸಿಲಿಂಡರ್ ಎಂಜಿನ್ ಹೊಂದಿವೆ. ಈ ಎಂಜಿನ್‍ಗಳ ಪ್ರತಿಯೊಂದು ಘಟಕಗಳ ಮೇಲೂ ಇವುಗಳನ್ನು ನಿರ್ಮಿಸಿದ ಎಎಂಜಿ ಎಂಜಿನಿಯರ್‍ಗಳು ವೈಯಕ್ತಿಕವಾಗಿ ಸಹಿ ಮಾಡಿದ್ದಾರೆ. ಎಂಟ್ರಿ ಲೆವೆಲ್ ಎಎಂಜಿ 45 ನಲ್ಲಿ ಅಳವಡಿಸಿರುವ ಎಂಜಿನ್ 378 ಬಿಹೆಚ್‌ಪಿ ಪವರ್ ಹಾಗೂ 480 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು ಮಾರುಕಟ್ಟೆಯಲ್ಲಿರುವ ಎಎಂಜಿ 45 ಗಿಂತ 11 ಬಿಹೆಚ್‌ಪಿ ಜಾಸ್ತಿಯಾಗಿದೆ.

ಗರಿಷ್ಟ ಪ್ರಮಾಣದ ಪ್ರಯೋಜನಗಳನ್ನು ಎ45ಎಸ್ ಹಾಗೂ ಸಿಎಲ್‌ಎ 45 ಎಸ್ ಮಾದರಿಗಳಲ್ಲಿ ಕಾಣಬಹುದು. ಈ ಮಾದರಿಗಳಲ್ಲಿರುವ ಎಂಜಿನ್‌ಗಳು 421 ಬಿಹೆಚ್‌ಪಿ ಹಾಗೂ 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತವೆ. ಇದು 2.0-ಲೀಟರ್ ಎಂಜಿನ್‌ಗಳಿಗಿಂತ ಹೆಚ್ಚಿನ ಪ್ರಮಾಣದಾಗಿದೆ. ಎಲ್ಲಾ ಮಾದರಿಗಳಲ್ಲಿ 8ಸ್ಪೀಡ್ ಎಎಂಜಿ ಸ್ಪೀಡ್‌ಶಿಫ್ಟ್ ಡಿಸಿಟಿ ಪ್ಯಾಡಲ್ ಶಿಫ್ಟ್ ಗೇರ್‌ಬಾಕ್ಸ್ ಅಳವಡಿಸಲಾಗಿದ್ದು, ಎಲ್ಲಾ ನಾಲ್ಕು ವ್ಹೀಲ್‍ಗಳಿಗೆ ಪವರ್ ನೀಡುತ್ತವೆ. ಸ್ಟ್ಯಾಂಡರ್ಡ್ ಎ45 ಹ್ಯಾಚ್‌ಬ್ಯಾಕ್ 0-100 ಕಿ.ಮೀ ವೇಗವನ್ನು 4.0 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ.

ಇದರ ಗರಿಷ್ಟ ವೇಗವನ್ನು ಪ್ರತಿ ಗಂಟೆಗೆ 250 ಕಿ.ಮೀಗಳಿಗೆ ನಿಗದಿಪಡಿಸಲಾಗಿದೆ. ಹೆಚ್ಚು ಬಲಶಾಲಿಯಾದ ಎಂಜಿನ್ ಹೊಂದಿರುವ ಎಸ್ ಮಾದರಿಯು 0-100 ಕಿ.ಮೀ ವೇಗವನ್ನು 3.9 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ. ಈ ಮಾದರಿಯ ಕಾರಿನ ಗರಿಷ್ಟ ವೇಗವನ್ನು, ಎಎಂಜಿ ಡ್ರೈವರ್ಸ್ ಪ್ಯಾಕೇಜ್ ಆಯ್ಕೆಗಳೊಂದಿಗೆ ಪ್ರತಿ ಗಂಟೆಗೆ 270 ಕಿ.ಮೀಗಳಿಗೆ ನಿಗದಿಪಡಿಸಲಾಗಿದೆ. 4 ಡೋರ್ ಕೂಪೆ ಸಿಎಲ್‌ಎ 45 ಮಾದರಿಗಳಲ್ಲಿನ 0-100 ಕಿ.ಮೀ ವೇಗವು 0.1 ಸೆಕೆಂಡುಗಳಷ್ಟು ವ್ಯತ್ಯಾಸವನ್ನು ಹೊಂದಿರಲಿದೆ.

ಈ ಮಾದರಿಯ ಕಾರುಗಳಲ್ಲಿರುವ ಸಸ್ಪೆಂಷನ್ ಹಾಗೂ ಬ್ರೇಕ್‌ಗಳನ್ನು ಅಪ್‍ಡೇಟ್ ಮಾಡಲಾಗಿದೆ. ಪರ್ಫಾಮೆನ್ಸ್ ಡ್ಯಾಂಪರ್ ಹಾಗೂ ಸ್ಪ್ರಿಂಗ್‍ಗಳನ್ನು ಸ್ಟಾಂಡರ್ಡ್ ಆಗಿ ನೀಡಲಾಗುತ್ತದೆ. ಮೂರು-ಮೋಡ್ ಅಡಾಪ್ಟಿವ್ ಸಿಸ್ಟಂ ಅನ್ನು ಹೆಚ್ಚುವರಿ ಆಯ್ಕೆಯಾಗಿ ನೀಡಲಾಗುವುದು. ಸ್ಟ್ಯಾಂಡರ್ಡ್ ಕಾರುಗಳು ನಾಲ್ಕು-ಪಿಸ್ಟನ್ ಮೊನೊ-ಬ್ಲಾಕ್ ಬ್ರೇಕಿಂಗ್ ಸಿಸ್ಟಂ ಬಳಸುತ್ತವೆ. ಎಎಂಜಿ 45ಎಸ್ ಖರೀದಿದಾರರು ಇನ್ನೂ ದೊಡ್ಡ ಗಾತ್ರದ ಆರು-ಪಿಸ್ಟನ್ ಸ್ಥಿರ ಕ್ಯಾಲಿಪರ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.

ಎ45 ಹಾಗೂ ಸಿಎಲ್‌ಎ 45 ಮಾದರಿಗಳ ಕಾರುಗಳಲ್ಲಿರುವ ಎಎಂಜಿ ಬಾಡಿಕಿಟ್‌ಗಳು, ಎಎಂಜಿ ಜಿಟಿ ನಾಲ್ಕು ಡೋರಿನ ಸೂಪರ್‌ಕಾರ್‌ನಿಂದ ಸ್ಫೂರ್ತಿ ಪಡೆದಿವೆ. ಆಕ್ರಮಣಕಾರಿ ಬಂಪರ್‌ಗಳು, ಫ್ಲೇರ್ಡ್ ವ್ಹೀಲ್ ಆರ್ಕ್, 19 ಇಂಚಿನ ವ್ಹೀಲ್ ಹಾಗೂ ಎಎಂಜಿಯ ಮುಂಭಾಗದ ಗ್ರಿಲ್ ಹೊಂದಿವೆ. ರೆಗ್ಯುಲರ್ ಎಎಂಜಿ 45 ಕಾರುಗಳು ಟ್ವಿನ್ ಎಕ್ಸಾಸ್ಟ್ ಟೇಲ್‌ಪೈಪ್‌ಗಳನ್ನು ಹೊಂದಿದ್ದರೆ, ಎಎಂಜಿ 45 ಎಸ್ ಮಾದರಿಗಳು ನಾಲ್ಕು ಟೇಲ್‌ಪೈಪ್‌ಗಳೊಂದಿಗೆ ದೊಡ್ಡ ಗಾತ್ರದ ಎಕ್ಸಾಸ್ಟ್ ಗಳನ್ನು ಹೊಂದಿವೆ.

ಶಬ್ದ ಮಟ್ಟವನ್ನು ನಿಯಂತ್ರಿಸಲು ಎಕ್ಸಾಸ್ಟ್ ಸಿಸ್ಟಂ ಆಟೋಮ್ಯಾಟಿಕ್ ಫ್ಲಾಪ್‌ಗಳನ್ನು ಹೊಂದಿದೆ. ಎಎಂಜಿ45 ಮಾದರಿಯ ಕಾರುಗಳ ಇಂಟಿರಿಯರ್‍ನ ಮುಂಭಾಗದಲ್ಲಿ ಕೆಂಪು ಬಣ್ಣದಿಂದ ಸ್ಟಿಚಿಂಗ್ ಮಾಡಲಾದ ಪರ್ಫಾರ್ಮೆನ್ಸ್ ಆಧಾರಿತ ಆಸನಗಳಿದ್ದು, ಇವುಗಳನ್ನು ಮೈಕ್ರೊಫೈಬರ್ ಹಾಗೂ ಲೆದರ್‍ನಿಂದ ತಯಾರಿಸಲಾಗಿದೆ. ಎಎಂಜಿ 45 ಎಸ್ ಮಾದರಿಗಳು ಕ್ಯಾಬಿನ್‌ನಾದ್ಯಂತ ಯಲ್ಲೋ ಹೈಲೈಟ್‍ಗಳನ್ನು ಹೊಂದಿವೆ.

ಎಸ್ ಮಾದರಿಯಲ್ಲಿ ಎಎಂಜಿ ಟ್ರ್ಯಾಕ್ ಪೇಸ್ ಡೇಟಾ ಲಾಗರ್ ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ. ಇವುಗಳನ್ನು ಸ್ಯಾಟಲೈಟ್ ನ್ಯಾವಿಗೇಶನ್ ಸಿಸ್ಟಂಗಳಿಗೆ ಸಂಪರ್ಕ ನೀಡಿ, ಲ್ಯಾಪ್ ಸಮಯದ ಮೇಲ್ವಿಚಾರಣೆ ಹಾಗೂ ವಿಶ್ಲೇಷಣೆ ಮಾಡಬಹುದಾಗಿದೆ. ಮರ್ಸಿಡಿಸ್-ಎಎಂಜಿ ಎ45 ಹಾಗೂ ಸಿಎಲ್‌ಎ 45 ಮಾದರಿಗಳಲ್ಲಿ ಡ್ರಿಫ್ಟ್ ಮೋಡ್ ಅನ್ನು ಅಳವಡಿಸಲಾಗಿದೆ. ಪ್ರತಿಯೊಂದು ಹಿಂಭಾಗದ ವ್ಹೀಲ್ ತನ್ನದೇ ಆದ ಕ್ಲಚ್ ಅನ್ನು ಹೊಂದಿದೆ.

ಇದರಿಂದಾಗಿ ಕಾರು ಪ್ರತಿಯೊಂದು ವ್ಹೀಲ್‍ಗಳಿಗೆ ಪವರ್ ನೀಡಲಿದೆ. ಫೋರ್ಡ್ ಫೋಕಸ್ ಆರ್‍ಎಸ್ ಅನ್ನು ಡ್ರಿಫ್ಟ್ ಮೋಡ್‍ನೊಂದಿಗೆ ಅಳವಡಿಸಲಾಗಿದೆ. ಎಎಂಜಿ 45 ಟ್ವಿನ್ ಕಾರುಗಳು ರಸ್ತೆ ಸುರಕ್ಷತೆಯನ್ನು ಅಳವಡಿಸಿಕೊಳ್ಳುವ ಸೂಚನೆ ನೀಡುತ್ತವೆ. 2019 ರ ಗುಡ್‌ವುಡ್ ಫೆಸ್ಟಿವಲ್ ಆಫ್ ಸ್ಪೀಡ್‌ನಲ್ಲಿ ಕಾರುಗಳನ್ನು ಪ್ರದರ್ಶಿಸಲಾಗಿದೆಯೇ ಹೊರತು, ಮರ್ಸಿಡಿಸ್-ಎಎಂಜಿ ಬೆಲೆಗಳ ಬಗ್ಗೆಯಾಗಲಿ ಅಥವಾ ಬಿಡುಗಡೆ ದಿನಾಂಕಗಳ ಬಗ್ಗೆಯಾಗಲಿ ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಇದೇ ಮೊದಲ ಬಾರಿಗೆ ಬಹುಶಃ ಕೊನೆಯ ಬಾರಿಗೆ ನಾವು ಫ್ಲಬ್ಬರ್‌ಗ್ಯಾಸ್ಟೆಡ್ ಪದವನ್ನು ಬಳಸುತ್ತೇವೆ. ಈ ಪದವು ಪರ್ಫಾಮೆನ್ಸ್ ಬಗ್ಗೆ ತಿಳಿಸುತ್ತದೆ. ಈ ಎರಡೂ ಕಾರುಗಳು ಬಿಡುಗಡೆಯಾದ ಕಡೆಯೆಲ್ಲಾ ಜನಪ್ರಿಯವಾಗಿವೆ. ಮರ್ಸಿಡಿಸ್ ಕಂಪನಿಯು ಈ ಕಾರುಗಳನ್ನು ಸೀಮಿತ ಸಂಖ್ಯೆಯಲ್ಲಿ ತಯಾರಿಸುವ ಸಾಧ್ಯತೆಗಳಿದ್ದು, ಎಂದಿನಂತೆ ದುಬಾರಿ ಬೆಲೆಯನ್ನು ಹೊಂದಿರಲಿವೆ.


Click it and Unblock the Notifications