'ಮೇಡ್ ಇನ್ ಇಂಡಿಯಾ' ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲಿದೆ ಎಂಜಿ ಮೋಟಾರ್

ಎಂಜಿ ಮೋಟಾರ್ ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಹೆಕ್ಟರ್ ಕಾರು ಬಿಡುಗಡೆಯ ಸಿದ್ದತೆಯಲ್ಲಿರುವ ಎಂಜಿ ಸಂಸ್ಥೆಯು ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಜೊತೆಗೆ ಎಲೆಕ್ಟ್ರಿಕ್ ಕಾರುಗಳನ್ನು ಸಹ ಬಿಡುಗಡೆಗಾಗಿ ಯೋಜನೆ ರೂಪಿಸಿದೆ. ಹೀಗಾಗಿ ಬಿಡುಗಡೆ ಮಾಡಲಿರುವ ತನ್ನ ಮೊದಲ ಎಲೆಕ್ಟ್ರಿಕ್ ಕಾರಿನ ಬಗೆಗೆ ಮಾಹಿತಿ ಹಂಚಿಕೊಂಡಿದ್ದು, ಹೊಸ ಇವಿ ಕಾರನ್ನು ಭಾರತದಲ್ಲೇ ನಿರ್ಮಾಣ ಮಾಡುವುದಾಗಿ ಹೇಳಿಕೊಂಡಿದೆ.

'ಮೇಡ್ ಇನ್ ಇಂಡಿಯಾ' ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲಿದೆ ಎಂಜಿ ಮೋಟಾರ್

2030ರ ವೇಳೆಗೆ ವಿಶ್ವಾದ್ಯಂತ ಶೇ.100ರಷ್ಟು ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸುವ ಸಂಬಂಧ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಜೊತೆ ಜೊತೆಗೆ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಎಂಜಿ ಮೋಟಾರ್ ಸಂಸ್ಥೆಯು ಸಹ ಹೆಕ್ಟರ್ ಕಾರು ಬಿಡುಗಡೆಯ ನಂತರ ಭಾರೀ ನೀರಿಕ್ಷೆಯಲ್ಲಿರುವ ಇಜೆಡ್ಎಸ್ ಎಲೆಕ್ಟ್ರಿಕ್ ಕಂಪ್ಯಾಕ್ಟ್ ಎಸ್‌ಯುವಿ ಕಾರನ್ನು ಬಿಡುಗಡೆ ಮಾಡುವ ಸುಳಿವು ನೀಡಿದೆ.

'ಮೇಡ್ ಇನ್ ಇಂಡಿಯಾ' ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲಿದೆ ಎಂಜಿ ಮೋಟಾರ್

ಜೊತೆಗೆ ಗುಜರಾತ್‌ ಹೊಲಾಲ್‌ನಲ್ಲಿ ಆರಂಭಗೊಂಡಿರುವ ಎಂಜಿ ಮೋಟಾರ್ ಕಾರು ಉತ್ಪಾದನಾ ಘಟಕದಲ್ಲೇ ಪೂರ್ಣ ಪ್ರಮಾಣದಲ್ಲಿ ಎಲೆಕ್ಟ್ರಿಕ್ ಕಾರನ್ನು ನಿರ್ಮಾಣ ಮಾಡಲಾಗುತ್ತಿದ್ದು, ಇದು ಹೊಸ ಕಾರಿನ ಬೆಲೆ ಇಳಿಕೆ ಸಾಕಷ್ಟು ಅನುಕೂಲಕರವಾಗಲಿದೆ ಎನ್ನಬಹುದು.

'ಮೇಡ್ ಇನ್ ಇಂಡಿಯಾ' ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲಿದೆ ಎಂಜಿ ಮೋಟಾರ್

ಸದ್ಯ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಇವಿ ಕಾರುಗಳಿಗಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಇಲ್ಲದ ಹಿನ್ನಲೆಯಲ್ಲಿ ವಿದೇಶಿ ಮಾರುಕಟ್ಟೆಗಳಿಂದ ಆಮದು ಮಾಡಿಕೊಳ್ಳಲಾದ ಎಲೆಕ್ಟ್ರಿಕ್ ಕಾರುಗಳನ್ನು ಭಾರತದಲ್ಲಿ ಮರುಅಭಿವೃದ್ಧಿಪಡಿಸಿ ಮಾರಾಟ ಮಾಡುವ ಯೋಜನೆಯಲ್ಲಿರುವಾಗ ಎಂಜಿ ಮೋಟಾರ್ ಸಂಸ್ಥೆಯು ಪೂರ್ಣ ಪ್ರಮಾಣದಲ್ಲಿ ದೇಶಿಯ ಮಾರುಕಟ್ಟೆಯಲ್ಲೇ ಅಭಿವೃದ್ಧಿಪಡಿಸಲಿದೆ.

'ಮೇಡ್ ಇನ್ ಇಂಡಿಯಾ' ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲಿದೆ ಎಂಜಿ ಮೋಟಾರ್

ಇದು ನೇರವಾಗಿ ಎಲೆಕ್ಟ್ರಿಕ್ ಕಾರುಗಳ ಬೆಲೆ ಇಳಿಕೆಗೆ ಸಾಕಷ್ಟು ಸಹಕಾರಿಯಾಗಿದ್ದು, ಇದರ ಜೊತೆಗೆ ಲೀಥಿಯಂ ಅಯಾನ್ ಬ್ಯಾಟರಿ ಉತ್ಪಾದನೆದಲ್ಲಿ ಸ್ವಾವಲಂಬಿಯಾಗಿರುವ ಎಂಜಿ ಸಂಸ್ಥೆಗೆ ಮತ್ತಷ್ಟು ಹೊಸ ಎಲೆಕ್ಟ್ರಿಕ್ ಕಾರು ಮತ್ತಷ್ಟು ಜನಪ್ರಿಯತೆ ತಂದುಕೊಡಲಿದೆ.

'ಮೇಡ್ ಇನ್ ಇಂಡಿಯಾ' ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲಿದೆ ಎಂಜಿ ಮೋಟಾರ್

ಇದೇ ಕಾರಣಕ್ಕೆ ಎಂಜಿ ಸಂಸ್ಥೆಯು ಇಜೆಡ್ಎಸ್ ಎಲೆಕ್ಟ್ರಿಕ್ ಕಾರುಗಳನ್ನು ಭಾರತದಲ್ಲಿ ರೂ.12 ಲಕ್ಷದಿಂದ ರೂ.15 ಲಕ್ಷದೊಳಗೆ ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಐಷಾರಾಮಿ ಎಲೆಕ್ಟ್ರಿಕ್ ಕಾರುಗಳ ಮಾದರಿಯಲ್ಲೇ ಬ್ಯಾಟರಿ ಸೌಲಭ್ಯದ ಜೊತೆಗೆ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ.

'ಮೇಡ್ ಇನ್ ಇಂಡಿಯಾ' ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲಿದೆ ಎಂಜಿ ಮೋಟಾರ್

ಇಜೆಡ್ಎಸ್ ಎಲೆಕ್ಟ್ರಿಕ್ ಹೊರತುಪಡಿಸಿ ಸಾಮಾನ್ಯ ಮಾದರಿಯ ಜೆಡ್ಎಸ್ ಕಾರು ಈಗಾಗಲೇ ಚೀನಿ ಮಾರುಕಟ್ಟೆಯಲ್ಲಿ ಮಾರಾಟಗೊಳ್ಳುತ್ತಿದ್ದು, ಮೂಲ ಕಾರಿನ ಮಾದರಿಯಲ್ಲೇ ವಿನೂತನ ವಿನ್ಯಾಸಗಳನ್ನು ಹೊತ್ತುಬರುತ್ತಿರುವ ಇಜೆಡ್ಎಸ್ ಕೂಡಾ ಅತ್ಯುತ್ತಮ ಮೈಲೇಜ್ ರೇಂಜ್‌ ಪ್ರೇರಣೆಯ ಬ್ಯಾಟರಿ ಸೌಲಭ್ಯಗಳನ್ನು ಹೊಂದಿರಲಿದೆ.

'ಮೇಡ್ ಇನ್ ಇಂಡಿಯಾ' ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲಿದೆ ಎಂಜಿ ಮೋಟಾರ್

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರತಿ ಚಾರ್ಜ್‌ಗೆ 300ಕಿ.ಮಿ ನೀಡುವ ಆರಂಭಿಕ ಆವೃತ್ತಿಯನ್ನು ಇಲ್ಲವೇ ಪ್ರತಿ ಚಾರ್ಜ್‌ಗೆ 420 ಕಿ.ಮಿ ಮೈಲೇಜ್ ನೀಡುವ ಹೈ ಎಂಡ್ ಮಾದರಿಯನ್ನು ಖರೀದಿಸಬಹುದಾಗಿದ್ದು, ಹೊಸ ಕಾರಿನ ಬೆಲೆಗಳು ಕೂಡಾ ಇತರೆ ಎಲೆಕ್ಟ್ರಿಕ್ ಕಾರುಗಳಿಂತಲೂ ಭಾರೀ ಅಗ್ಗವಾಗಿರಲಿವೆ.

'ಮೇಡ್ ಇನ್ ಇಂಡಿಯಾ' ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲಿದೆ ಎಂಜಿ ಮೋಟಾರ್

ಸದ್ಯ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗುತ್ತಿರುವ ಹ್ಯುಂಡೈ ಕೊನಾ ಮತ್ತು ಮಹೀಂದ್ರಾ ಎಕ್ಸ್‌ಯುವಿ300 ಎಲೆಕ್ಟ್ರಿಕ್ ಕಾರುಗಳ ಮೈಲೇಜ್ ರೇಂಜ್‌ಗೆ ಸರಿಸಮನಾಗಿ ಮಾರುಕಟ್ಟೆ ಪ್ರವೇಶಿಸುತ್ತಿರುವ ಇಜೆಡ್ಎಸ್ ಕಾರು ಇತರೆ ಎಲೆಕ್ಟ್ರಿಕ್ ಕಾರುಗಳಿಂತಲೂ ಅಚ್ಚರಿಯ ಬೆಲೆಗಳಲ್ಲಿ ಖರೀದಿಗೆ ಲಭ್ಯವಾಗುವ ನೀರಿಕ್ಷೆಯಲ್ಲಿದೆ.

'ಮೇಡ್ ಇನ್ ಇಂಡಿಯಾ' ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲಿದೆ ಎಂಜಿ ಮೋಟಾರ್

ಇದಲ್ಲದೇ ಭಾರತದಲ್ಲಿ ಈಗಾಗಲೇ ಹೊಸ ಕಾರಿನ ಸ್ಪಾಟ್ ಟೆಸ್ಟಿಂಗ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಉತ್ತಮ ಮೈಲೇಜ್ ಹೊಂದಿರುವ ಹೊಸ ಕಾರು ಭಾರತೀಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ಸಿದ್ದಗೊಳ್ಳುತ್ತಿದೆ.

Most Read Articles

Kannada
English summary
MG eZS Electric SUV Will Be Made In India. Read in Kannada.
Story first published: Wednesday, June 5, 2019, 14:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X