ಭಾರತಕ್ಕೂ ಕಾಲಿಡಲಿದೆ ಬಿಸಿ ದೋಸೆಯಂತೆ ಮಾರಾಟವಾಗುತ್ತಿರುವ ಎಂ‍ಜಿ ಇಝಡ್‍ಎಸ್

ಹೊಸ ಎಲೆಕ್ಟ್ರಿಕ್ ಎಂ‍ಜಿ ಇ‍ಝಡ್‍ಎಸ್ ಕಾರ್ ಅನ್ನು ಈ ವರ್ಷದ ಜುಲೈ 17ರಂದು ಬ್ರಿಟನ್ನಿನಲ್ಲಿ ಬಿಡುಗಡೆಗೊಳಿಸಲಾಗಿತ್ತು. ಮೊದಲ 1000 ಖರೀದಿದಾರರು ರಿಯಾಯಿತಿಯ ಜೊತೆಗೆ, ಉಚಿತವಾಗಿ ಹೋಂ ಚಾರ್ಜಿಂಗ್ ಯುನಿಟ್ ಅನ್ನು ಪಡೆದರು. ಬ್ರಿಟನ್ನಿನಲ್ಲಿ ಬಿಡುಗಡೆಗೊಳಿಸಲಾದ ಈ ಎಲೆಕ್ಟ್ರಿಕ್ ಕಾರಿನ ಮೂಲ ಮಾದರಿಯ ಬೆಲೆಯನ್ನು 21,495 ಪೌಂಡ್ ಎಂದು ನಿಗದಿಪಡಿಸಲಾಗಿತ್ತು.

ಭಾರತಕ್ಕೂ ಕಾಲಿಡಲಿದೆ ಬಿಸಿ ದೋಸೆಯಂತೆ ಮಾರಾಟವಾಗುತ್ತಿರುವ ಎಂ‍ಜಿ ಇ‍ಝಡ್‍ಎಸ್

ಬಿಡುಗಡೆಯಾದ ಕೇವಲ ಎರಡು ವಾರಗಳಲ್ಲಿ ಈ 5 ಸೀಟರಿನ 1,000 ಕಾರುಗಳನ್ನು ಮಾರಾಟ ಮಾಡಲಾಗಿದೆ. ಈ ಭರ್ಜರಿ ಮಾರಾಟದಿಂದ ಉತ್ತೇಜನಗೊಂಡಿರುವ ಬ್ರಿಟನ್ ಸರ್ಕಾರವು, ಮತ್ತೆ 1,000 ಗ್ರಾಹಕರಿಗೆ ಈ ರಿಯಾಯಿತಿಯನ್ನು ನೀಡಲಿದೆ. ಮೂಲ ಮಾದರಿಯ ಬೆಲೆಯು 21,465 ಪೌಂಡ್‍‍ಗಳಾಗಿವೆ. ಭಾರತದ ರೂಪಾಯಿ ಮೌಲ್ಯದಲ್ಲಿ ರೂ.18.87 ಲಕ್ಷಗಳು. ಇದರಲ್ಲಿ ಬ್ರಿಟನ್ ಸರ್ಕಾರವು 3,500 ಪೌಂಡ್ ಅನ್ನು, ಅಂದರೆ ರೂ.3.07 ಲಕ್ಷಗಳನ್ನು ಅನುದಾನದ ರೂಪದಲ್ಲಿ ನೀಡುತ್ತದೆ.

ಭಾರತಕ್ಕೂ ಕಾಲಿಡಲಿದೆ ಬಿಸಿ ದೋಸೆಯಂತೆ ಮಾರಾಟವಾಗುತ್ತಿರುವ ಎಂ‍ಜಿ ಇ‍ಝಡ್‍ಎಸ್

ಟಾಪ್ ಎಂಡ್ ಮಾದರಿಯ ಬೆಲೆಯು 23,495 ಪೌಂಡ್‍‍‍ಗಳಾಗಿದೆ. ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ರೂ.20.63 ಲಕ್ಷಗಳಾಗುತ್ತದೆ. ಇದರ ಜೊತೆಗೆ, ಬ್ರಿಟನ್ ಮೂಲದ ಕಾರು ತಯಾರಕ ಕಂಪನಿಯು ಕಾರು ಖರೀದಿಸುವ ಎಲ್ಲಾ ಗ್ರಾಹಕರಿಗೆ ಹೋಮ್ ಚಾರ್ಜಿಂಗ್ ಪಾಯಿಂಟ್ ಅನ್ನು ಸಂಪೂರ್ಣವಾಗಿ ಉಚಿತವಾಗಿ ನೀಡುತ್ತಿದೆ.

ಭಾರತಕ್ಕೂ ಕಾಲಿಡಲಿದೆ ಬಿಸಿ ದೋಸೆಯಂತೆ ಮಾರಾಟವಾಗುತ್ತಿರುವ ಎಂ‍ಜಿ ಇ‍ಝಡ್‍ಎಸ್

ಕೈಗೆಟಕುವ ದರದನ್ನು ಹೊಂದಿರುವುದರಿಂದ ಈ ಕಾರು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಎಂಜಿ ಇಝಡ್‌ಎಸ್‌ ಕಾರಿಗೆ ತೀವ್ರ ಪೈಪೋಟಿ ನೀಡುತ್ತಿರುವ ಹ್ಯುಂಡೈನ ಕೋನಾ ಎಲೆಕ್ಟ್ರಿಕ್ ಕಾರಿನ ಬೆಲೆಯು 27,250 ಪೌಂಡ್ ಅಂದರೆ ರೂ. 24 ಲಕ್ಷಗಳಾಗಿದೆ.

ಭಾರತಕ್ಕೂ ಕಾಲಿಡಲಿದೆ ಬಿಸಿ ದೋಸೆಯಂತೆ ಮಾರಾಟವಾಗುತ್ತಿರುವ ಎಂ‍ಜಿ ಇ‍ಝಡ್‍ಎಸ್

ಬ್ರಿಟನ್ ಮಾರುಕಟ್ಟೆಯಲ್ಲಿರುವ ಮತ್ತೊಂದು ಎಲೆಕ್ಟ್ರಿಕ್ ಕಾರ್ ಆದ ಕಿಯಾ ಕಂಪನಿಯ ಇ ನಿರೋ ಕಾರು ಸರ್ಕಾರದಿಂದ ಅನುದಾನ ಪಡೆದ ನಂತರ 32,995 ಪೌಂಡ್, ಅಂದರೆ ರೂ.29ಲಕ್ಷ ಬೆಲೆಯನ್ನು ಹೊಂದಿದೆ. ಎಂಜಿ ಇಝಡ್ಎಸ್ ಮುಂಬರುವ ದಿನಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ. ಭಾರತದಲ್ಲಿಯೂ ಸಹ ಈ ಕಾರು, ರೂ.23.7 ಲಕ್ಷ ಬೆಲೆಯನ್ನು ಹೊಂದಿರುವ, ಹ್ಯುಂಡೈ ಕೋನಾ ಕಾರಿಗೆ ಪೈಪೋಟಿ ನೀಡುತ್ತದೆ.

ಭಾರತಕ್ಕೂ ಕಾಲಿಡಲಿದೆ ಬಿಸಿ ದೋಸೆಯಂತೆ ಮಾರಾಟವಾಗುತ್ತಿರುವ ಎಂ‍ಜಿ ಇ‍ಝಡ್‍ಎಸ್

ಭಾರತದ ಮಾರುಕಟ್ಟೆಯಲ್ಲಿ ಎಂಜಿ ಇಝಡ್ಎಸ್ ಎಲೆಕ್ಟ್ರಿಕ್ ಎಸ್‌ಯುವಿಯ ಬೆಲೆ ಭಾರತದಲ್ಲಿನ ಎಕ್ಸ್ ಶೋರೂಂ ದರದಂತೆ ರೂ.18ರಿಂದ 19ಲಕ್ಷಗಳಿರುವ ಸಾಧ್ಯತೆಗಳಿವೆ. 2019ರ ಏಪ್ರಿಲ್‍‍ನಲ್ಲಿ ಜಾಗತಿಕ ಮಟ್ಟದಲ್ಲಿ ಪಾದಾರ್ಪಣೆ ಮಾಡಿದ ಎಂಜಿ ಮೋಟರ್‌ನ ಇಝಡ್‌ಎಸ್, ಭಾರತದಲ್ಲಿ ಬಿಡುಗಡೆಯಾಗಲಿರುವ ಕಂಪನಿಯ ಎರಡನೇ ವಾಹನವಾಗಿದೆ.

ಭಾರತಕ್ಕೂ ಕಾಲಿಡಲಿದೆ ಬಿಸಿ ದೋಸೆಯಂತೆ ಮಾರಾಟವಾಗುತ್ತಿರುವ ಎಂ‍ಜಿ ಇ‍ಝಡ್‍ಎಸ್

ದೇಶಿಯ ಮಾರುಕಟ್ಟೆಯಲ್ಲಿ ಕಂಪನಿಯ ಮೊದಲ ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ಮುಂಭಾಗದಲ್ಲಿ ಮೌಂಟ್ ಮಾಡಲಾದ ವೇಗದ ಚಾರ್ಜಿಂಗ್ ಸೌಲಭ್ಯ ಹೊಂದಿರುವ 44.5 ಕಿಲೋವ್ಯಾಟ್ ಲಿಥಿಯಂ ಅಯಾನ್ ಬ್ಯಾಟರಿಯನ್ನು ಒಂದು ಬಾರಿ ಚಾರ್ಜ್‌ ಮಾಡಿದರೆ 300 ಕಿ.ಮೀಗೂ ಅಧಿಕ ದೂರ ಪ್ರಯಾಣಿಸಬಹುದಾಗಿದೆ.

MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಭಾರತಕ್ಕೂ ಕಾಲಿಡಲಿದೆ ಬಿಸಿ ದೋಸೆಯಂತೆ ಮಾರಾಟವಾಗುತ್ತಿರುವ ಎಂ‍ಜಿ ಇ‍ಝಡ್‍ಎಸ್

ಈ ಎಸ್‍‍ಯು‍‍ವಿಯಲ್ಲಿರುವ ಸಿಂಗಲ್ ಎಲೆಕ್ಟ್ರಿಕ್ ಮೋಟರ್ 148 ಬಿಹೆಚ್‌ಪಿ ಪವರ್ ಹಾಗೂ 350 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಮೋಟರ್ 0 ರಿಂದ 100 ಕಿ.ಮೀ ವೇಗವನ್ನು 8.5 ಸೆಕೆಂಡುಗಳಲ್ಲಿ ಆಕ್ಸೆಲೆರೇಟ್ ಮಾಡುತ್ತದೆ. ಈ ಎಸ್‍‍ಯುವಿಯ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 140 ಕಿ.ಮೀ ಆಗಿದೆ.

MOST READ: ಭಾರತದ ವಿವಿಧ ರಾಜ್ಯಗಳ ಪೊಲೀಸರ ಬಳಿಯಿರುವ ಬೈಕುಗಳಿವು

ಭಾರತಕ್ಕೂ ಕಾಲಿಡಲಿದೆ ಬಿಸಿ ದೋಸೆಯಂತೆ ಮಾರಾಟವಾಗುತ್ತಿರುವ ಎಂ‍ಜಿ ಇ‍ಝಡ್‍ಎಸ್

ಈ ಎಸ್‍‍ಯುವಿಯ ಎಕ್ಸ್ ಟಿರಿಯರ್‍‍‍ನಲ್ಲಿ ಎಲ್‌ಇಡಿ ಡಿಆರ್‌ಎಲ್‌, ಆಟೋ ಹೆಡ್‌ಲ್ಯಾಂಪ್‌, ಎಲ್‌ಇಡಿ ಟೇಲ್ ಲ್ಯಾಂಪ್‌, ಇಂಟಿಗ್ರೇಟೆಡ್ ಚಾರ್ಜಿಂಗ್ ಪೋರ್ಟ್ ಹೊಂದಿರುವ ಸ್ಟಾರ್ ರೈಡರ್ ಗ್ರಿಲ್‍‍ಗಳಿವೆ. ಇಂಟಿರಿಯರ್‍‍ನಲ್ಲಿ ಸ್ಯಾಟಲೈಟ್ ನ್ಯಾವಿಗೇಶನ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಜೊತೆಗೆ 6 ಸ್ಪೀಕರ್ ಆಡಿಯೊ ಸಿಸ್ಟಂ ಹೊಂದಿರುವ 8 ಇಂಚಿನ ಹೈ ರೆಸಲ್ಯೂಶನ್ ಟಚ್‌ಸ್ಕ್ರೀನ್‍‍ಗಳಿವೆ.

MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಭಾರತಕ್ಕೂ ಕಾಲಿಡಲಿದೆ ಬಿಸಿ ದೋಸೆಯಂತೆ ಮಾರಾಟವಾಗುತ್ತಿರುವ ಎಂ‍ಜಿ ಇ‍ಝಡ್‍ಎಸ್

ಹೊಸ ಎಂಜಿ ಇಝಡ್ಎಸ್ ಎಸ್‍‍ಯುವಿಯನ್ನು ಗುಜರಾತ್‌ನ ಹಾಲೊಲ್‌ನಲ್ಲಿರುವ ಕಂಪನಿಯ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗುವುದು. ಇದೇ ಘಟಕದಲ್ಲಿಯೇ ಎಂ‍‍ಜಿ ಹೆಕ್ಟರ್ ಅನ್ನು ಸಹ ಉತ್ಪಾದಿಸಲಾಗುತ್ತಿದೆ. ಈ ಎಲೆಕ್ಟ್ರಿಕ್ ಎಸ್‍‍ಯು‍‍ವಿಯನ್ನು ದೇಶಿಯವಾಗಿ ನಿರ್ಮಿಸಲಾಗುತ್ತಿರುವ ಕಾರಣ ಕೈಗೆಟುಕುವ ಬೆಲೆಯನ್ನು ಹೊಂದಿರಲಿದೆ. ಈ ಕಾರಿನಲ್ಲಿ ಅಳವಡಿಸುವ ಪವರ್‌ಟ್ರೇನ್ ಅನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುವುದು.

Article Published On: Monday, August 26, 2019, 12:47 [IST]
English summary
MG eZS selling like hot cakes in uk launching soon in India - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+