ಭಾರತದಲ್ಲಿ 7 ಸೀಟರ್ ಹೆಕ್ಟರ್ ಬಿಡುಗಡೆ ಪಕ್ಕಾ ಎಂದ ಎಂಜಿ ಮೋಟಾರ್

ಎಂಜಿ ಮೋಟಾರ್ ಸಂಸ್ಥೆಯು ಕಳೆದ 2 ದಿನಗಳ ಹಿಂದಷ್ಟೇ ಐದು ಆಸನವುಳ್ಳ ಹೆಕ್ಟರ್ ಎಸ್‌ಯುವಿ ಆವೃತ್ತಿಯನ್ನು ಅನಾವರಣಗೊಳಿಸುವ ಮೂಲಕ ಜೂನ್ ಆರಂಭದಲ್ಲಿ ಬಿಡುಗಡೆ ಮಾಡುವುದಾಗಿ ಮಾಹಿತಿ ಹಂಚಿಕೊಂಡಿದ್ದು, ಇದೇ ವೇಳೆ ಹೆಕ್ಟರ್ ಮಾದರಿಯಲ್ಲೇ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಐದು ಆಸನವುಳ್ಳ ಆವೃತ್ತಿ ಜೊತೆಗೆ ಏಳು ಆಸನವುಳ್ಳ ಆವೃತ್ತಿಯನ್ನು ಸಹ ಪರಿಚಯಿಸುವುದಾಗಿ ಸುಳಿವು ನೀಡಿದೆ.

ಭಾರತದಲ್ಲಿ 7 ಸೀಟರ್ ಹೆಕ್ಟರ್ ಬಿಡುಗಡೆ ಪಕ್ಕಾ ಎಂದ ಎಂಜಿ ಮೋಟಾರ್

ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ರೂ.15 ಲಕ್ಷದಿಂದ ರೂ.20 ಲಕ್ಷದೊಳಗೆ ದೊರೆಯುವ 7 ಸೀಟರ್ ಎಸ್‌ಯುವಿ ಆವೃತ್ತಿಗಳಿಗೆ ವಿಶೇಷ ಬೇಡಿಕೆಯಿದ್ದು, ಈ ನಿಟ್ಟಿನಲ್ಲಿ ಇದೀಗ ಬಿಡುಗಡೆಯಾಗುತ್ತಿರುವ ಐದು ಆಸನವುಳ್ಳ ಹೆಕ್ಟರ್ ಕಾರನಲ್ಲೇ ಮುಂಬರುವ ದಿನಗಳಲ್ಲಿ ಏಳು ಆಸನ ಮಾದರಿಯ ಆಯ್ಕೆಯನ್ನು ನೀಡುವ ಬಗ್ಗೆ ಚಿಂತಿಸಲಾಗಿದೆ ಎಂದು ಎಂಜಿ ಮೋಟಾರ್ ಹಿರಿಯ ಅಧಿಕಾರಿಗಳು ಮಾಧ್ಯಮ ಸಂವಾದದಲ್ಲಿ ದೃಡಪಡಿಸಿದ್ದಾರೆ.

ಭಾರತದಲ್ಲಿ 7 ಸೀಟರ್ ಹೆಕ್ಟರ್ ಬಿಡುಗಡೆ ಪಕ್ಕಾ ಎಂದ ಎಂಜಿ ಮೋಟಾರ್

ಇಷ್ಟು ದಿನಗಳ ಕಾಲ ಹೆಕ್ಟರ್ ಮಾದರಿಯು ಐದು ಆಸನವುಳ್ಳ ಮಾದರಿಯಲ್ಲೇ ಬಿಡುಗಡೆಯಾಗುತ್ತೆ ಎಂದುಕೊಂಡಿದ್ದ ಎಸ್‌ಯುವಿ ಪ್ರಿಯರಿಗೆ ಎಂಜಿ ಮೋಟಾರ್ ಹೊಸ ಸುದ್ದಿ ನೀಡಿದ್ದು, ಮಹೀಂದ್ರಾ ಎಕ್ಸ್‌ಯುವಿ 500 ಮತ್ತು ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಿ ಸಿದ್ದವಾಗಿರುವ ಏಳು ಆಸನವುಳ್ಳ ಟಾಟಾ ಹ್ಯಾರಿಯರ್(ಕ್ಯಾಸಿನಿ) ಕಾರಿಗೆ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಭಾರತದಲ್ಲಿ 7 ಸೀಟರ್ ಹೆಕ್ಟರ್ ಬಿಡುಗಡೆ ಪಕ್ಕಾ ಎಂದ ಎಂಜಿ ಮೋಟಾರ್

ಮಾಹಿತಿಗಳ ಪ್ರಕಾರ, ಮುಂದಿನ ತಿಂಗಳು ಜೂನ್ ಒಂದನೇ ಅಥವಾ ಎರಡನೇ ವಾರದಲ್ಲಿ ಐದು ಆಸನವುಳ್ಳ ಹೆಕ್ಟರ್ ಕಾರು ಬಿಡುಗಡೆಯಾಗಿದ್ದಲ್ಲಿ ಏಳು ಆಸನ ಮಾದರಿಯನ್ನು 2020ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಮಾಡಿದ ನಂತರವಷ್ಟೇ ಬಿಡುಗಡೆ ಮಾಡವಾಗುವುದು ಎನ್ನಲಾಗಿದೆ.

ಭಾರತದಲ್ಲಿ 7 ಸೀಟರ್ ಹೆಕ್ಟರ್ ಬಿಡುಗಡೆ ಪಕ್ಕಾ ಎಂದ ಎಂಜಿ ಮೋಟಾರ್

ಹೀಗಾಗಿ ಅನಾವರಣಗೊಳಿಸಲಾದ ಐದು ಆಸನವುಳ್ಳ ಮಾದರಿಗಿಂತ ಏಳು ಆಸನವುಳ್ಳ ಕಾರು ಗಾತ್ರದಲ್ಲಿ ದೊಡ್ಡದಾಗಿರಲಿದ್ದು, ಇತರೆ ಎಸ್‌ಯುವಿ ಕಾರುಗಳಿಂತಲೂ ಮೂರನೇ ಸಾಲಿನಲ್ಲಿ ಕೂರುವ ಪ್ರಯಾಣಿಕರಿಗೆ ಹೆಚ್ಚಿನ ಸ್ಥಳಾವಕಾಶ ಕಲ್ಪಿಸಲಾಗುವುದು ಎನ್ನಲಾಗಿದೆ.

ಭಾರತದಲ್ಲಿ 7 ಸೀಟರ್ ಹೆಕ್ಟರ್ ಬಿಡುಗಡೆ ಪಕ್ಕಾ ಎಂದ ಎಂಜಿ ಮೋಟಾರ್

ಇನ್ನು ಬಿಡುಗಡೆಗೆ ಸಿದ್ದವಾಗಿರುವ ಐದು ಆಸನವುಳ್ಳ ಹೆಕ್ಟರ್ ಎಸ್‌ಯುವಿ ಕಾರು ಗ್ರಾಹಕರ ಬೇಡಿಕೆಯೆಂತೆ ಪೆಟ್ರೋಲ್ ಮತ್ತು ಡೀಸೆಲ್ ವರ್ಷನ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದೆ. ಇದರಲ್ಲಿ ಪೆಟ್ರೋಲ್ ಆವೃತ್ತಿಯು 1.5 ಲೀಟರ್ ಎಂಜಿನ್‌ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 141-ಬಿಎಚ್‌ಪಿ ಮತ್ತು 250-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು.

ಭಾರತದಲ್ಲಿ 7 ಸೀಟರ್ ಹೆಕ್ಟರ್ ಬಿಡುಗಡೆ ಪಕ್ಕಾ ಎಂದ ಎಂಜಿ ಮೋಟಾರ್

ಹಾಗೆಯೇ ಡೀಸೆಲ್ ಮಾದರಿಯು ಎಫ್‌ಸಿಎ ಸಂಸ್ಥೆಯಿಂದ ಎರವಲು ಪಡೆಯಲಾದ 2.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಪಡೆದುಕೊಂಡಿರಲಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 168-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು. ಜೊತೆಗೆ ಹೆಕ್ಟರ್ ಕಾರಿನ ಪೆಟ್ರೋಲ್ ಹೈಎಂಡ್ ಆವೃತ್ತಿಯು 48ವೋಲ್ಟ್ ಬ್ಯಾಟರಿಯೊಂದಿಗೆ ಸ್ಮಾರ್ಟ್ ಹೈಬ್ರಿಡ್ ಎಂಜಿನ್ ಹೊಂದಿರಲಿದ್ದು, ಉತ್ತಮ ಪರ್ಫಾಮೆನ್ಸ್ ನೀಡಬಲ್ಲದು.

ಭಾರತದಲ್ಲಿ 7 ಸೀಟರ್ ಹೆಕ್ಟರ್ ಬಿಡುಗಡೆ ಪಕ್ಕಾ ಎಂದ ಎಂಜಿ ಮೋಟಾರ್

ಹೊಸ ಕಾರಿನಲ್ಲಿ ಫುಲ್ ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಫಾಗ್ ಲ್ಯಾಂಪ್, ರಿಮೋಟ್ ಕಾರ್ ಆಪರೇಷನ್, ಸ್ಮಾರ್ಟ್ ಸಿಮ್ ಪ್ರೇರಿತ ಇಂಟರ್‌ನೆಟ್ ಸೌಲಭ್ಯ, 10.4-ಇಂಚಿನ ಟಚ್ ಇನ್ಪೋಟೈನ್ ಸಿಸ್ಟಂ, 8-ಸ್ಪೀಕರ್ಸ್‌ಗಳು, ಆನ್ ಲೈನ್ ನೆವಿಗೇಷನ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, 7-ಇಂಚಿನ ಮಲ್ಟಿ ಇನ್ಪಾರ್ಮೆಷನ್ ಡಿಸ್‌ಪ್ಲೇ, ಪವರ್ ಅಡ್ಜೆಸ್ಟೆಬಲ್ ರಿಯರ್ ವ್ಯೂ ಮಿರರ್ ಮತ್ತು ಎಲ್ಇಡಿ ಟೈಲ್ ಲ್ಯಾಂಪ್ ಪಡೆದುಕೊಂಡಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಭಾರತದಲ್ಲಿ 7 ಸೀಟರ್ ಹೆಕ್ಟರ್ ಬಿಡುಗಡೆ ಪಕ್ಕಾ ಎಂದ ಎಂಜಿ ಮೋಟಾರ್

ಜೊತೆಗೆ ಹೊಸ ಕಾರಿನಲ್ಲಿ ರೂಫ್ ರೈಲ್ಸ್, ಎಲ್ಇಡಿ ಟರ್ನ್ ಇಂಡಿಕೇಟರ್, 360 ಡಿಗ್ರಿ ವ್ಯೂವ್ ಕ್ಯಾಮೆರಾ, ಎರಡು ಕಡೆಗಳಲ್ಲಿ ಫಾಸ್ಟ್ ಚಾರ್ಜಿಂಗ್ ಯುಎಸ್‌ಬಿ ಪೋರ್ಟ್, ರಿಯರ್ ಎಸಿ ವೆಂಟ್ಸ್, ಸನ್ ಗ್ಲಾಸ್ ಹೊಲ್ಡರ್, ಡ್ರೈವರ್ ಆರ್ಮ್ ರೆಸ್ಟ್, ಪನಾರೊಮಿಕ್ ಸನ್‌ರೂಫ್, 17-ಇಂಚಿನ ಅಲಾಯ್ ವೀಲ್ಹ್, ರಿಯರ್ ಸೀಟ್ ಆರ್ಮ್ ರೆಸ್ಟ್, ಆರು ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟ್ ಸೌಲಭ್ಯದೊಂದಿಗೆ ಲೆದರ್ ಸೀಟ್‌ಗಳನ್ನು ಜೋಡಿಸಲಾಗಿದೆ.

ಭಾರತದಲ್ಲಿ 7 ಸೀಟರ್ ಹೆಕ್ಟರ್ ಬಿಡುಗಡೆ ಪಕ್ಕಾ ಎಂದ ಎಂಜಿ ಮೋಟಾರ್

ಪ್ರಯಾಣಿಕರ ಸುರಕ್ಷತೆಗಾಗಿ ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್ ಜೊತೆಗೆ ಇಬಿಡಿ, 6 ಏರ್‌ಬ್ಯಾಗ್‌ಗಳು, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಕ್ರೂಸ್ ಕಂಟ್ರೊಲರ್ ISOFIX ಚೈಲ್ಡ್ ಸೀಟ್, ಎಲೆಕ್ಟ್ರಿಕ್ ಹ್ಯಾಂಡಲ್ ಬ್ರೇಕ್ ಸೇರಿದಂತೆ ಹಲವು ಹೊಸ ಫೀಚರ್ಸ್ ಈ ಕಾರಿನಲ್ಲಿವೆಯೆಂತೆ.

ಭಾರತದಲ್ಲಿ 7 ಸೀಟರ್ ಹೆಕ್ಟರ್ ಬಿಡುಗಡೆ ಪಕ್ಕಾ ಎಂದ ಎಂಜಿ ಮೋಟಾರ್

ಕಾರಿನ ಬೆಲೆಗಳು(ಅಂದಾಜು)

ಎಂಜಿ ಮೋಟಾರ್ ಹೆಕ್ಟರ್ ಕಾರುಗಳು ಸಿ ಸೆಗ್ಮೆಂಟ್ ಎಸ್‌ಯುವಿ ಕಾರುಗಳಲ್ಲೇ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಹೊಸ ಕಾರಿನ ಬೆಲೆಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 15 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 19 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ. ಇದರಲ್ಲಿ ಏಳು ಆಸನ ಮಾದರಿಯು ಕೂಡಾ ಹೆಚ್ಚು ಕಡಿಮೆ ಐದು ಆಸನವುಳ್ಳ ಮಾದರಿಯಲ್ಲೇ ಬೆಲೆ ಪಡೆದುಕೊಳ್ಳಲಿದ್ದು, ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಕೆಲವು ಫೀಚರ್ಸ್ ತೆಗೆದುಹಾಕಿ ಬೆಲೆ ಕಡಿತ ಮಾಡಿ ಮಾರಾಟ ಮಾಡುವ ಗುರಿ ಹೊಂದಲಾಗಿದೆ.

Article Published On: Friday, May 17, 2019, 14:49 [IST]
English summary
MG Hector Seven-Seater SUV Confirmed For India — Launch Expected In Early-2020. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+