ಜೂನ್ ಆರಂಭದಲ್ಲಿ ಎಂಜಿ ಮೋಟಾರ್ ಹೆಕ್ಟರ್ ಬಿಡುಗಡೆ ಪಕ್ಕಾ..!

ಎಸ್‌ಯುವಿ ಪ್ರಿಯರ ಬಹುನೀರಿಕ್ಷಿತ ಎಂಜಿ ಮೋಟಾರ್ ಹೆಕ್ಟರ್ ಎಸ್‌ಯುವಿ ಮಾದರಿಯು ಜೂನ್ ಆರಂಭದಲ್ಲಿ ಬಿಡುಗಡೆಯಾಗುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದ್ದು, ಹೊಸ ಕಾರು ಖರೀದಿಗಾಗಿ ಇದೇ ತಿಂಗಳು 15ರ ನಂತರ ಅಧಿಕೃತ ಬುಕ್ಕಿಂಗ್ ಪ್ರಕ್ರಿಯೆಗೂ ಚಾಲನೆ ನೀಡಲಾಗುತ್ತಿದೆ. ಹಾಗಾದ್ರೆ ಹೊಸ ಕಾರು ವಿಶೇಷತೆ ಏನು? ಬೆಲೆ ಎಷ್ಟಿರಬಹುದು ಎನ್ನುವ ಮಾಹಿತಿಗಳು ಇಲ್ಲಿವೆ ನೋಡಿ..

ಜೂನ್ ಆರಂಭದಲ್ಲಿ ಎಂಜಿ ಮೋಟಾರ್ ಹೆಕ್ಟರ್ ಬಿಡುಗಡೆ ಪಕ್ಕಾ..!

ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಹೊಸ ಕಾರು ಉತ್ಪಾದನಾ ಸಂಸ್ಥೆಗಳ ಪ್ರವೇಶ ಜೋರಾಗಿದ್ದು, ಎಂಜಿ ಮೋಟಾರ್, ಕಿಯಾ ಮೋಟಾರ್ಸ್, ಪಿಎಸ್ಎ ಗ್ರೂಪ್ ಸೇರಿದಂತೆ ಹಲವು ಹೊಸ ಕಾರು ಉತ್ಪಾದನಾ ಸಂಸ್ಥೆಗಳು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿವೆ. ಇದರಲ್ಲಿ ಎಂಜಿ ಮೋಟಾರ್ ತನ್ನ ವಿನೂತನ ಮಾದರಿಯ ಹೆಕ್ಟರ್ ಎಸ್‌ಯುವಿ ಮೂಲಕ ಗ್ರಾಹಕರ ಆಕರ್ಷಣೆ ಕಾರಣವಾಗಿದ್ದು, ಜೂನ್ ಆರಂಭದಲ್ಲಿ ಬಿಡುಗಡೆಯಾಗುವ ಬಗ್ಗೆ ಆಟೋ ಕಾರ್ ಇಂಡಿಯಾ ಸುದ್ದಿಸಂಸ್ಥೆ ವರದಿ ಮಾಡಿದೆ.

ಜೂನ್ ಆರಂಭದಲ್ಲಿ ಎಂಜಿ ಮೋಟಾರ್ ಹೆಕ್ಟರ್ ಬಿಡುಗಡೆ ಪಕ್ಕಾ..!

ದೇಶಿಯ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಕಾರು ಉತ್ಪನ್ನಗಳನ್ನು ಸಿದ್ದಗೊಳಿಸಿ ಮಾರಾಟಕ್ಕೆ ಅಣಿಯಾಗುತ್ತಿರುವ ಎಂಜಿ ಮೋಟಾರ್ ಸಂಸ್ಥೆಯು ಈಗಾಗಲೇ ಹೊಸ ಕಾರಿನ ಉತ್ಪಾದನೆಗೂ ಸಹ ಚಾಲನೆ ನೀಡಿದ್ದು, ಆಸಕ್ತ ಗ್ರಾಹಕರಿಗೆ ಸದ್ಯದಲ್ಲೇ ಟೆಸ್ಟ್ ಡ್ರೈವ್‌ಗೆ ನೀಡಲು ಸಿದ್ದತೆ ನಡೆಸಿದೆ.

ಜೂನ್ ಆರಂಭದಲ್ಲಿ ಎಂಜಿ ಮೋಟಾರ್ ಹೆಕ್ಟರ್ ಬಿಡುಗಡೆ ಪಕ್ಕಾ..!

ಹಲವು ವಿಶೇಷತೆಗಳಿಗೆ ಕಾರಣವಾಗಿರುವ ಹೆಕ್ಟರ್ ಎಸ್‌ಯುವಿ ಮಾದರಿಯು ಮಾರುಕಟ್ಟೆಯಲ್ಲಿರುವ ಪ್ರಮುಖ ಎಸ್‌ಯುವಿ ಕಾರುಗಳಿಗೆ ತೀವ್ರ ಪೈಪೋಟಿ ನೀಡುವ ಸುಳಿವು ನೀಡಿದ್ದು, ಇ-ಸಿಮ್ ಪ್ರೇರಿತ ಗೂಗಲ್ ಆಂಡ್ರಾಯಿಡ್ ಆಪರೇಟಿಂಗ್ ಸಿಸ್ಟಂ ಪಡೆದುಕೊಂಡ ದೇಶದ ಮೊದಲ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಜೂನ್ ಆರಂಭದಲ್ಲಿ ಎಂಜಿ ಮೋಟಾರ್ ಹೆಕ್ಟರ್ ಬಿಡುಗಡೆ ಪಕ್ಕಾ..!

ಹೆಕ್ಟರ್ ಕಾರು ಜೀಪ್ ಕಂಪಾಸ್ ಎಸ್‌ಯುವಿ ಮಾದರಿಯಲ್ಲೇ ಬಾಡಿ ಕಿಟ್ ಹೊಂದಿದ್ದು, ಬಿಎಸ್-6 ಎಂಜಿನ್ ಸೌಲಭ್ಯದೊಂದಿಗೆ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್(ಎಫ್‌ಸಿಎ ಯಿಂದ ಎರವಲು) ಪಡೆದುಕೊಂಡಿದೆ. ಈ ಮೂಲಕ ಪೆಟ್ರೋಲ್ ಆವೃತ್ತಿಯು 160-ಬಿಎಚ್‌ಪಿ, 200-ಎನ್ಎಂ ಉತ್ಪಾದಿಸಿದ್ದಲ್ಲಿ ಡೀಸೆಲ್ ಆವೃತ್ತಿಯು 170-ಬಿಎಚ್‌ಪಿ, 340-ಎನ್ಎಂ ಟಾರ್ಕ್ ಉತ್ಪಾದನೆ ಸಾಮಾರ್ಥ್ಯ ಹೊಂದಿದ್ದು, ಕಾರಿನ ಬೆಲೆಗಳು ಕೂಡಾ ಆಕರ್ಷಕವಾಗಿರಲಿವೆ ಎನ್ನಲಾಗಿದೆ.

ಜೂನ್ ಆರಂಭದಲ್ಲಿ ಎಂಜಿ ಮೋಟಾರ್ ಹೆಕ್ಟರ್ ಬಿಡುಗಡೆ ಪಕ್ಕಾ..!

ಹೆಕ್ಟರ್ ಕಾರು ಸದ್ಯ ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ವುಲಿಂಗ್ ಅಲ್ಮಾಜ್ ಹೆಸರಿನೊಂದಿಗೆ ಮತ್ತು ಚೀನಾದಲ್ಲಿ ಬಾಔನ್ 530 ಹೆಸರಿನಲ್ಲಿ ಮಾರಾಟವಾಗುತ್ತಿದ್ದು, ಇದೇ ಕಾರು ಕೆಲವು ತಾಂತ್ರಿಕ ಬದಲಾವಣೆಗಳೊಂದಿಗೆ ಭಾರತದಲ್ಲಿ ಹೆಕ್ಟರ್ ಹೆಸರಿನೊಂದಿಗೆ ರಸ್ತೆಗಿಳಿಯುತ್ತಿದೆ. ಇದು ಎಸ್‌ಯುವಿ ಮಾದರಿಗಳಲ್ಲೇ ವಿಶೇಷ ಸೌಲಭ್ಯ ಹೊಂದಿದ್ದು, ಸಿ ಸೆಗ್ಮೆಂಟ್ ಎಸ್‌ಯುವಿ ಆವೃತ್ತಿಗಳಲ್ಲಿ ಭಾರೀ ಬೇಡಿಕೆ ಗಿಟ್ಟಿಸಿಕೊಳ್ಳುವ ನೀರಿಕ್ಷೆಯಲ್ಲಿದೆ.

ಜೂನ್ ಆರಂಭದಲ್ಲಿ ಎಂಜಿ ಮೋಟಾರ್ ಹೆಕ್ಟರ್ ಬಿಡುಗಡೆ ಪಕ್ಕಾ..!

ಕಾರಿನ ಬೆಲೆಗಳು(ಅಂದಾಜು)

ಎಂಜಿ ಮೋಟಾರ್ ಹೆಕ್ಟರ್ ಕಾರುಗಳು ಸಿ ಸೆಗ್ಮೆಂಟ್ ಎಸ್‌ಯುವಿ ಕಾರುಗಳಲ್ಲೇ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಹೊಸ ಕಾರಿನ ಬೆಲೆಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 15 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 19 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಜೂನ್ ಆರಂಭದಲ್ಲಿ ಎಂಜಿ ಮೋಟಾರ್ ಹೆಕ್ಟರ್ ಬಿಡುಗಡೆ ಪಕ್ಕಾ..!

ಇನ್ನು ಬ್ರಿಟಿಷ್ ಮೂಲದ ಎಂಜಿ ಮೋಟಾರ್ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಚೀನಾದ ಆಟೋ ದೈತ್ಯ SAIC ಸಂಸ್ಥೆಯ ಭಾರತೀಯ ಗ್ರಾಹಕರ ಬೇಡಿಕೆಯಂತೆ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಪ್ರೇರಿತ ಹ್ಯಾಚ್‌ಬ್ಯಾಕ್. ಸೆಡಾನ್, ಎಸ್‌ಯುವಿ ಕಾರುಗಳನ್ನು ಅಷ್ಟೇ ಅಲ್ಲದೇ ಎಲೆಕ್ಟ್ರಿಕ್ ಕಾರುಗಳನ್ನು ಸಹ ಅಭಿವೃದ್ದಿಪಡಿಸುತ್ತಿದ್ದು, ಎಂಜಿ ಮೋಟಾರ್ ಹೆಸರಿನಲ್ಲೇ SAIC ಸಂಸ್ಥೆಯು ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ.

ಜೂನ್ ಆರಂಭದಲ್ಲಿ ಎಂಜಿ ಮೋಟಾರ್ ಹೆಕ್ಟರ್ ಬಿಡುಗಡೆ ಪಕ್ಕಾ..!

ಇದಕ್ಕಾಗಿಯೇ ಗುಜರಾತ್‌ನಲ್ಲಿ 170 ಎಕರೆ ಭೂಮಿಯನ್ನು ಕೂಡಾ ಖರೀದಿಸಿರುವ SAIC ಸಂಸ್ಥೆಯು ಹೊಸ ಕಾರು ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ್ದು, ಪ್ರತಿ ವರ್ಷ 80 ಸಾವಿರ ಕಾರುಗಳ ಉತ್ಪಾದನೆಯ ಗುರಿಯೊಂದಿಗೆ ಭಾರತದ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳಿಗೆ ಪ್ರಬಲ ಪೈಪೋಟಿ ನೀಡಲು ಯೋಜನೆ ರೂಪಿಸಿದೆ.

Most Read Articles

Kannada
English summary
MG Hector Bookings & Launch Details Revealed. Read in Kannada.
Story first published: Thursday, May 2, 2019, 13:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X