ಎಂಜಿ ಮೋಟಾರ್ ಹೆಕ್ಟರ್ ಉತ್ಪಾದನೆಗೆ ಸದ್ಯದಲ್ಲೇ ಸಿಗಲಿದೆ ಭರ್ಜರಿ ಚಾಲನೆ

ಆಟೋ ಉದ್ಯಮದಲ್ಲಿ ತೀವ್ರ ಬೆಳವಣೆಯ ಹಿನ್ನೆಲೆಯಲ್ಲಿ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳು ಜಾಗತಿಕವಾಗಿ ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಣೆ ಮಾಡುತ್ತಿದ್ದು, ಭಾರತೀಯ ಮಾರುಕಟ್ಟೆಯಲ್ಲೂ ಕೂಡಾ ಎಂಜಿ ಮೋಟಾರ್, ಕಿಯಾ ಮೋಟಾರ್ಸ್, ಪಿಎಸ್ಎ ಗ್ರೂಪ್ ಸೇರಿದಂತೆ ಹಲವು ಹೊಸ ಕಾರು ಉತ್ಪಾದನಾ ಸಂಸ್ಥೆಗಳು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿವೆ.

ಎಂಜಿ ಮೋಟಾರ್ ಹೆಕ್ಟರ್ ಉತ್ಪಾದನೆಗೆ ಸದ್ಯದಲ್ಲೇ ಸಿಗಲಿದೆ ಭರ್ಜರಿ ಚಾಲನೆ

ಸದ್ಯ ತನ್ನ ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿರುವ ಎಂಜಿ ಮೋಟಾರ್ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಕಾರು ಉತ್ಪನ್ನಗಳನ್ನು ಸಿದ್ದಗೊಳಿಸಿ ಮಾರಾಟಕ್ಕೆ ಅಣಿಯಾಗುತ್ತಿದೆ. ಹೀಗಾಗಿ ಮೊದಲ ಹಂತದಲ್ಲಿ ಬಿಡುಗಡೆಯಾಗುವ ಹೆಕ್ಟರ್ ಎಸ್‌ಯುವಿಯನ್ನು ಮೊನ್ನೆಯಷ್ಟೇ ಅನಾವರಣಗೊಳಿಸಿರುವ ಎಂಜಿ ಮೋಟಾರ್ ಸಂಸ್ಥೆಯು ಹೊಸ ಕಾರಿನ ಉತ್ಪಾದನೆಗೆ ಇದೇ ತಿಂಗಳು 29ರಂದು ಅಧಿಕೃತವಾಗಿ ಚಾಲನೆ ನೀಡುತ್ತಿರುವುದಾಗಿ ಮಾಹಿತಿ ಹಂಚಿಕೊಂಡಿದೆ.

ಎಂಜಿ ಮೋಟಾರ್ ಹೆಕ್ಟರ್ ಉತ್ಪಾದನೆಗೆ ಸದ್ಯದಲ್ಲೇ ಸಿಗಲಿದೆ ಭರ್ಜರಿ ಚಾಲನೆ

ಇನ್ನು ಬ್ರಿಟಿಷ್ ಮೂಲದ ಎಂಜಿ ಮೋಟಾರ್ ಸಂಸ್ಥೆಯು ಮೊದಲ ಬಾರಿಗೆ ದೇಶಿಯ ಮಾರುಕಟ್ಟೆಯ ಪ್ರವೇಶ ಪಡೆಯುತ್ತಿದ್ದು, ಈ ನಿಟ್ಟಿನಲ್ಲಿ ಬೃಹತ್ ಬಂಡವಾಳದೊಂದಿಗೆ ಕಳೆದ ವರ್ಷವಷ್ಟೇ ತನ್ನ ಮೊದಲ ಉತ್ಪಾದನಾ ಘಟಕವನ್ನು ಆರಂಭಗೊಳಿಸಿದ್ದಲ್ಲೇ ಇದೀಗ ಬಿಡುಗಡೆಯಾಗಲಿರುವ ಮೊದಲ ಕಾರನ್ನು ಅನಾವರಣಗೊಳಿಸಿ ಎಸ್‌ಯುವಿ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದೆ.

ಎಂಜಿ ಮೋಟಾರ್ ಹೆಕ್ಟರ್ ಉತ್ಪಾದನೆಗೆ ಸದ್ಯದಲ್ಲೇ ಸಿಗಲಿದೆ ಭರ್ಜರಿ ಚಾಲನೆ

ಹೆಕ್ಟರ್ ಹೆಸರಿನಲ್ಲಿ ಭಾರತೀಯ ರಸ್ತೆಗಳಲ್ಲಿ ಸದ್ದು ಮಾಡಲಿರುವ ಹೊಸ ಎಂಜಿ ಮೋಟಾರ್ ಸಂಸ್ಥೆಯ ಹೊಸ ಕಾರು ಜೀಪ್ ಕಂಪಾಸ್ ಎಸ್‌ಯುವಿ ಮಾದರಿಯಲ್ಲೇ ಬಾಡಿ ಕಿಟ್ ಹೊಂದಿದ್ದು, 2019ರ ಮಧ್ಯಂತರದಲ್ಲಿ ಹೊಸ ಕಾರು ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.

ಎಂಜಿ ಮೋಟಾರ್ ಹೆಕ್ಟರ್ ಉತ್ಪಾದನೆಗೆ ಸದ್ಯದಲ್ಲೇ ಸಿಗಲಿದೆ ಭರ್ಜರಿ ಚಾಲನೆ

ಜೊತೆಗೆ ಮುಂಬರುವ ದಿನಗಳಲ್ಲಿ ಜಾರಿಗೆ ಬರಲಿರುವ ಬಿಎಸ್-6 ಎಂಜಿನ್ ಸೌಲಭ್ಯ ಹೊಂದಿರುವ ಹೊಸ ಹೆಕ್ಟರ್ ಕಾರು 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್(ಎಫ್‌ಸಿಎ ಯಿಂದ ಎರವಲು) ಪಡೆದುಕೊಂಡಿದ್ದು, ಪೆಟ್ರೋಲ್ ಆವೃತ್ತಿಯು 160-ಬಿಎಚ್‌ಪಿ, 200-ಎನ್ಎಂ ಉತ್ಪಾದಿಸಿದ್ದಲ್ಲಿ ಡೀಸೆಲ್ ಆವೃತ್ತಿಯು 170-ಬಿಎಚ್‌ಪಿ, 340-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಎಂಜಿ ಮೋಟಾರ್ ಹೆಕ್ಟರ್ ಉತ್ಪಾದನೆಗೆ ಸದ್ಯದಲ್ಲೇ ಸಿಗಲಿದೆ ಭರ್ಜರಿ ಚಾಲನೆ

ಹೆಕ್ಟರ್ ಸದ್ಯ ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ವುಲಿಂಗ್ ಅಲ್ಮಾಜ್ ಹೆಸರಿನೊಂದಿಗೆ ಮತ್ತು ಚೀನಾದಲ್ಲಿ ಬಾಔನ್ 530 ಹೆಸರಿನಲ್ಲಿ ಮಾರಾಟವಾಗುತ್ತಿದ್ದು, ಇದೇ ಕಾರು ಕೆಲವು ತಾಂತ್ರಿಕ ಬದಲಾವಣೆಗಳೊಂದಿಗೆ ಭಾರತದಲ್ಲಿ ಹೆಕ್ಟರ್ ಹೆಸರಿನೊಂದಿಗೆ ರಸ್ತೆಗಿಳಿಯುತ್ತಿದೆ. ಇದು ಎಸ್‌ಯುವಿ ಮಾದರಿಗಳಲ್ಲೇ ವಿಶೇಷ ಸೌಲಭ್ಯ ಹೊಂದಿದ್ದು, ಸಿ ಸೆಗ್ಮೆಂಟ್ ಎಸ್‌ಯುವಿ ಆವೃತ್ತಿಗಳಲ್ಲಿ ಭಾರೀ ಬೇಡಿಕೆ ಗಿಟ್ಟಿಸಿಕೊಳ್ಳುವ ನೀರಿಕ್ಷೆಯಲ್ಲಿದೆ.

ಎಂಜಿ ಮೋಟಾರ್ ಹೆಕ್ಟರ್ ಉತ್ಪಾದನೆಗೆ ಸದ್ಯದಲ್ಲೇ ಸಿಗಲಿದೆ ಭರ್ಜರಿ ಚಾಲನೆ

ಕಾರಿನ ಬೆಲೆಗಳು(ಅಂದಾಜು)

ಎಂಜಿ ಮೋಟಾರ್ ಹೆಕ್ಟರ್ ಕಾರುಗಳು ಸಿ ಸೆಗ್ಮೆಂಟ್ ಎಸ್‌ಯುವಿ ಕಾರುಗಳಲ್ಲೇ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಹೊಸ ಕಾರಿನ ಬೆಲೆಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 15 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 19 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

MOST READ: ಜಾವಾ ಬೈಕ್ ಸಂಸ್ಥೆಯ ವಿರುದ್ದ ಸಿಡಿದೆದ್ದ ಗ್ರಾಹಕರು

ಎಂಜಿ ಮೋಟಾರ್ ಹೆಕ್ಟರ್ ಉತ್ಪಾದನೆಗೆ ಸದ್ಯದಲ್ಲೇ ಸಿಗಲಿದೆ ಭರ್ಜರಿ ಚಾಲನೆ

ಗ್ರಾಹಕರ ಬೇಡಿಕೆಯಂತೆ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಪ್ರೇರಿತ ಹ್ಯಾಚ್‌ಬ್ಯಾಕ್. ಸೆಡಾನ್, ಎಸ್‌ಯುವಿ ಕಾರುಗಳನ್ನು ಅಷ್ಟೇ ಅಲ್ಲದೇ ಎಲೆಕ್ಟ್ರಿಕ್ ಕಾರುಗಳನ್ನು ಸಹ ಅಭಿವೃದ್ದಿ ಮಾಡಲಿರುವ ಎಂಜಿ ಮೋಟಾರ್ ಸಂಸ್ಥೆಯು ಭಾರತದಲ್ಲಿ ಬೃಹತ್ ಪ್ರಮಾಣದ ಹೂಡಿಕೆ ಮಾಡಿದ್ದು, 2019ರ ಎರಡನೇ ತ್ರೈಮಾಸಿಕ ಅವಧಿಗೆ ತನ್ನ ಹೊಸ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಬಗ್ಗೆ SAIC ಸಂಸ್ಥೆಯು ಸುಳಿವು ನೀಡಿದೆ.

ಎಂಜಿ ಮೋಟಾರ್ ಹೆಕ್ಟರ್ ಉತ್ಪಾದನೆಗೆ ಸದ್ಯದಲ್ಲೇ ಸಿಗಲಿದೆ ಭರ್ಜರಿ ಚಾಲನೆ

ಇದಕ್ಕಾಗಿಯೇ ಗುಜರಾತ್‌ನಲ್ಲಿ 170 ಎಕರೆ ಭೂಮಿಯನ್ನು ಕೂಡಾ ಖರೀದಿಸಿರುವ ಎಂಜಿ ಮೋಟಾರ್ ಸಂಸ್ಥೆಯು ಹೊಸ ಕಾರು ಉತ್ಪಾದನಾ ಘಟಕಕ್ಕೆ ಈಗಾಗಲೇ ಚಾಲನೆ ನೀಡಿದ್ದು, ಪ್ರತಿ ವರ್ಷ 80 ಸಾವಿರ ಕಾರುಗಳ ಉತ್ಪಾದನೆಯ ಗುರಿಯೊಂದಿಗೆ ಭಾರತದಲ್ಲಿ ಹಲವು ಕಾರು ಉತ್ಪಾದನಾ ಸಂಸ್ಥೆಗಳಿಗೆ ಪ್ರಬಲ ಪೈಪೋಟಿ ನೀಡಲು ಯೋಜನೆ ರೂಪಿಸಿದೆ.

MOST READ: ಎಲೆಕ್ಟ್ರಿಕ್ ಕಾರು ಖರೀದಿದಾರರಿಗೆ ಎಸ್‌ಬಿಐನಿಂದ ಬಂಪರ್ ಆಫರ್

ಎಂಜಿ ಮೋಟಾರ್ ಹೆಕ್ಟರ್ ಉತ್ಪಾದನೆಗೆ ಸದ್ಯದಲ್ಲೇ ಸಿಗಲಿದೆ ಭರ್ಜರಿ ಚಾಲನೆ

ಹೀಗಾಗಿ ಹೊಸ ಕಾರುಗಳನ್ನು ನಿಗದಿತ ಅವಧಿಯೊಳಗೆ ಪರಿಚಯಿಸಲು ದೇಶಾದ್ಯಂತ ಈಗಾಗಲೇ 45ಕ್ಕೂ ಹೆಚ್ಚು ಅಧಿಕೃತ ಕಾರು ಮಾರಾಟ ಮಳಿಗೆಗಳನ್ನು ಹೊಂದಿರುವ ಎಂಜಿ ಮೋಟಾರ್ ಸಂಸ್ಥೆಯು, ಕಾರು ಮಾರಾಟಕ್ಕೆ ಚಾಲನೆ ನೀಡುವ ವೇಳೆಗೆ 100ಕ್ಕೂ ಹೆಚ್ಚು ಡೀಲರ್ಸ್ ತೆರೆಯುವ ಯೋಜನೆ ಹೊಂದಿದೆ.

Most Read Articles

Kannada
English summary
MG Hector Production To Start On April 29. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X