ಎಂಜಿ ಹೆಕ್ಟರ್‍‍ಗೆ ಹೆಚ್ಚುತ್ತಿರುವ ಡಿಮ್ಯಾಂಡ್ - ವಿಸ್ತರಿಸಲಾದ ಕಾಯುವಿಕೆಯ ಅವಧಿ

ಎಂಜಿ ಸಂಸ್ಥೆಯು ತಮ್ಮ ಹೆಕ್ಟರ್ ಎಸ್‍ಯುವಿ ಕಾರನ್ನು ಜೂನ್ 27 ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದರೂ ಸಹ, ಅದೇ ತಿಂಗಳ 4 ರಿಂದ ಕಾರು ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಲಾಗಿತ್ತು. ಬಿಡುಗಡೆಗೂ ಮುನ್ನವೇ ಮಾರುಕಟ್ಟೆಯಲ್ಲಿ ಸದ್ದು ಮಾಡಿದ ಈ ಕಾರನ್ನು ಖರೀದಿ ಮಾಡಲು ಸಾವಿರಾರು ಗ್ರಾಹಕರು ಬುಕ್ಕಿಂಗ್ ಅನ್ನು ಮಾಡಿಕೊಂಡಿದ್ದು, ಇಲ್ಲಿಯವರೆಗೂ ಸುಮಾರು 13,000 ಸಂಖ್ಯೆಯಲ್ಲಿ ಬುಕ್ಕಿಂಗ್ ಪಡೆದುಕೊಂಡಿದೆ.

ಎಂಜಿ ಹೆಕ್ಟರ್‍‍ಗೆ ಹೆಚ್ಚುತ್ತಿರುವ ಡಿಮ್ಯಾಂಡ್ - ವಿಸ್ತರಿಸಲಾದ ಕಾಯುವಿಕೆಯ ಅವಧಿ

ಇಷ್ಟೆಲ್ಲಾ ಮಾರುಕಟ್ಟೆಯಲ್ಲಿ ಹೈಪ್ ಹುಟ್ಟುಹಾಕಿದ ಎಂಜಿ ಹೆಕ್ಟರ್ ಕಾರು, ಬುಕ್ಕಿಂಗ್ ಹೆಚ್ಚಿನ ಸಂಖ್ಯೆಯಲ್ಲಿ ಪಡೆಯುತ್ತಿರುವ ಕಾರಣ ಈ ಕಾರಿನ ಕಾಯುವಿಕೆಯ ಅವಧಿ ಕೂಡಾ ಹೆಚ್ಚಳವಾಗುತ್ತಾ ಹೋಗುತ್ತಿದೆ. ಬುಕ್ಕಿಂಗ್ ಮಾಡಿಕೊಂಡ 13,000 ಮಂದಿಗೆ ವಾಹನವನ್ನು ತಲುಪಿಸಲು ಎಂಜಿ ಮೋಟಾರ್, ತಮ್ಮ ಉತ್ಪಾದನಾ ಘಟಕದಲ್ಲಿ ಪ್ರತೀ ತಿಂಗಳು ಸುಮಾರು 2000 ವಾಹನಗಳನ್ನು ಉತ್ಪಾದನೆ ಮಾಡುವುದಾಗಿ ಭರವಸೆ ನೀಡಲಾಗಿದೆ.

ಎಂಜಿ ಹೆಕ್ಟರ್‍‍ಗೆ ಹೆಚ್ಚುತ್ತಿರುವ ಡಿಮ್ಯಾಂಡ್ - ವಿಸ್ತರಿಸಲಾದ ಕಾಯುವಿಕೆಯ ಅವಧಿ

ಪೆಟ್ರೋಲ್ ವೇರಿಯೆಂಟ್‍ಗೆ ಹೆಚ್ಚುತ್ತಿರುವ ಡಿಮ್ಯಾಂಡ್

ಆಟೋ ಕಾರ್ ಇಂಡಿಯಾ ವರದಿ ಪ್ರಕಾರ ಎಂಜಿ ಹೆಕ್ಟರ್ ಎಸ್‍ಯುವಿ ಕಾರಿನ ಟಾಪ್ ವೇರಿಯೆಂಟ್‍ಗೆ ಬುಕ್ಕಿಂಗ್ ಹೆಚ್ಚಾದ ಕಾರಣ ದೆಹಲಿಯಲ್ಲಿ ಈ ವೇರಿಯೆಂಟ್‍ ಅನ್ನು ಬುಕ್ ಮಾಡಿದರವರಿಗೆ ಸುಮಾರು 7 ತಿಂಗಳ ವರೆಗೂ ಕಾಯಬೇಕು ಎಂದು ಹೇಳಲಾಗಿದ್ದು, ಇನ್ನುಳಿದ ನಗರ ಪ್ರದೇಶಗಳಲ್ಲಿ ಸುಮಾರು 5 ರಿಂದ 6 ತಿಂಗಳ ವರಗೂ ಕಾಯುವಿಕೆಯ ಅವಧಿಯನ್ನು ವಿಸ್ತರಿಸಲಾಗಿದೆ.

ಎಂಜಿ ಹೆಕ್ಟರ್‍‍ಗೆ ಹೆಚ್ಚುತ್ತಿರುವ ಡಿಮ್ಯಾಂಡ್ - ವಿಸ್ತರಿಸಲಾದ ಕಾಯುವಿಕೆಯ ಅವಧಿ

ಇಷ್ಟೆ ಅಲ್ಲದೆಯೆ ಈ ಕಾರಿನ ಗ್ಲಾಝ್ ರೆಡ್ ಬಣ್ಣದಲ್ಲಿರುವ 1.5 ಲೀಟರ್ ಪೆಟ್ರೋಲ್ ಡಿಸಿಟಿ ಎಂಜಿನ್ ಆಧಾರಿತ ಕಾರಿಗೂ ಸಹ ಅಷ್ಟೆ ಡಿಮ್ಯಾಂಡ್ ಇದ್ದು, ಈ ಕಾರಿನ ಕಾಯುವಿಕೆ ಅವಧಿಯು ಕುಡಾ ದೇಶದೆಲ್ಲೆಡೆ 7 ತಿಂಗಳ ವರೆಗು ವಿಸ್ತರಿಸಲಾಗಿದೆ. ಇನ್ನುಳಿದ 1.5 ಲೀಟರ್ ಪೆಟ್ರೋಲ್ ಹೈಬ್ರಿಡ್ ಮತ್ತು 2.0 ಲೀಟರ್ ಡೀಸೆಲ್ ಎಂಜಿನ್ ಕಾರು ಮಾದರಿಗಳ ಕಾಯುವಿಕೆಯ ಅವಧಿಯು 3 ರಿಂದ 4 ತಿಂಗಳವರೆಗಿವೆ ಎಂದು ಹೇಳಲಾಗಿದೆ.

ಎಂಜಿ ಹೆಕ್ಟರ್‍‍ಗೆ ಹೆಚ್ಚುತ್ತಿರುವ ಡಿಮ್ಯಾಂಡ್ - ವಿಸ್ತರಿಸಲಾದ ಕಾಯುವಿಕೆಯ ಅವಧಿ

ಇನ್ನುಳಿದ ಹಾಗೆ ಡೀಸೆಲ್ ಮಾದರಿಯ ಎಂಜಿ ಹೆಕ್ಟರ್ ಕಾರುಗಳಿಗೆ ಬುಕ್ಕಿಂಗ್ ಸಂಖ್ಯೆಯು ಹೆಚ್ಚು ಬಾರದ ಕಾರಣ, ಡೀಸೆಲ್ ಮಾದರಿಯ ಕಾರುಗಳಿಗೆ ಕೆಲವು ನಗರಗಳಲ್ಲಿ ಸುಮಾರು 3 ರಿಂದ ನಾಲ್ಕು ತಿಂಗಳ ವರೆಗು ಕಾಯುವಿಕೆಯ ಅವಧಿಯನ್ನು ಘೋಷಿಸಲಾಗಿದೆ. ಏಕೆಂದರೆ ಈ ವೇರಿಯೆಂಟ್‍ನಲ್ಲಿ ಪೆಟ್ರೋಲ್ ಮಾದರಿಯಲ್ಲಿ ನೀಡಲಾದ ಕೆಲವು ವೇರಿಯೆಂಟ್‍‍ಗಳು ಲಭ್ಯವಿಲ್ಲವಾದ ಕಾರಣ ಇವುಗಳಿಗೆ ಬುಕ್ಕಿಂಗ್ ಕಡಿಮೆಯಾಗಿದೆ.

ಎಂಜಿ ಹೆಕ್ಟರ್‍‍ಗೆ ಹೆಚ್ಚುತ್ತಿರುವ ಡಿಮ್ಯಾಂಡ್ - ವಿಸ್ತರಿಸಲಾದ ಕಾಯುವಿಕೆಯ ಅವಧಿ

ಕೇರಳದಲ್ಲಿ ಎಂಜಿ ಹೆಕ್ಟರ್‍‍ಗೆ ಹೆಚ್ಚು ಬೇಡಿಕೆ

ಇನ್ನು ಡೀಲರ್‍‍ಗಳ ಪೈಕಿ ಬಂದರೆ ಕೊಚಿನ್‍ನಲ್ಲಿರುವ ಎಂಜಿ ಮೋಟಾರ್‍ ಡೀಲರ್‍‍ನ ಬಳಿ ಸುಮಾರು 1000ಕ್ಕು ಹೆಚ್ಚಿನ ಬುಕ್ಕಿಂಗ್ ಅನ್ನು ಪಡೆದಿದ್ದು, ಡೀಲರ್‍‍‍ವೈಸ್ ಬುಕ್ಕಿಂಗ್‍ನಲ್ಲಿ ಮೊದಲನೆಯ ಸ್ಥಾನವನ್ನು ಪಡೆದಿದೆ. ಹಾಗಯೆ ಎರಡನೆಯ ಸ್ಥಾನವನ್ನು ಗುರ್‍‍ಗಾವ್‍ನಲ್ಲಿನ ಡೀಲರ್‍‍ಗಳು ಸುಮಾರು 650ಕ್ಕು ಹೆಚ್ಚಿನ ಬುಕ್ಕಿಂಗ್ ಅನ್ನು ಪಡೆದಿದ್ದು, ಇದರಲ್ಲಿ 400 ಬುಕ್ಕಿಂಗ್‍ಗಳು ಕೇವಲ ಡಿಸಿಟಿ ಆಟೋಮ್ಯಾಟಿಕ್ ವೇರಿಯೆಂಟ್‍ಗ ಬಂದಿದೆಯಂತೆ.

ಎಂಜಿ ಹೆಕ್ಟರ್‍‍ಗೆ ಹೆಚ್ಚುತ್ತಿರುವ ಡಿಮ್ಯಾಂಡ್ - ವಿಸ್ತರಿಸಲಾದ ಕಾಯುವಿಕೆಯ ಅವಧಿ

ಕಾರಿನ ಬೆಲೆ

ಸಧ್ಯ ಈ ಸೆಗ್ಮೆಂಟ್‍ನಲ್ಲಿ ಮುನ್ನುಗ್ಗುತ್ತಿರುವ ಟಾಟಾ ಹ್ಯಾರಿಯರ್ ಕಾರನು ಹಿಂದಿಕ್ಕಲು ಬಿಡುಗಡೆಗೊಂಡ ಎಂಜಿ ಹೆಕ್ಟರ್ ಎಸ್‍ಯುವಿ ಕಾರು ಹ್ಯಾರಿಯರ್ ಕಾರಿಗಿಂತಲೂ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಿದ್ದು, ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 12.18 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ.

ಎಂಜಿ ಹೆಕ್ಟರ್‍‍ಗೆ ಹೆಚ್ಚುತ್ತಿರುವ ಡಿಮ್ಯಾಂಡ್ - ವಿಸ್ತರಿಸಲಾದ ಕಾಯುವಿಕೆಯ ಅವಧಿ

ಎಂಜಿನ್ ಸಾಮರ್ಥ್ಯ

ಹೆಕ್ಟರ್ ಹೊಸ ಕಾರು ಪೆಟ್ರೋಲ್ ಆವೃತ್ತಿಯಲ್ಲಿ 1.5 ಲೀಟರ್ ಎಂಜಿನ್‌ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 143-ಬಿಎಚ್‌ಪಿ ಮತ್ತು 250-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಡೀಸೆಲ್ ಮಾದರಿಯು ಎಫ್‌ಸಿಎ ಸಂಸ್ಥೆಯಿಂದ ಎರವಲು ಪಡೆಯಲಾದ 2.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್‌ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮೂಲಕ 170-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಇದರಲ್ಲಿ ಸಾಮಾನ್ಯ ಮಾದರಿಯ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಜೊತೆ ಹೆಕ್ಟರ್ ಕಾರಿನ ಪೆಟ್ರೋಲ್ ಹೈ ಎಂಡ್ ಆವೃತ್ತಿಯಲ್ಲಿ 48ವೋಲ್ಟ್ ಬ್ಯಾಟರಿಯೊಂದಿಗೆ ಸ್ಮಾರ್ಟ್ ಹೈಬ್ರಿಡ್ ಎಂಜಿನ್ ಜೋಡಿಸಲಾಗಿದೆ.

ಎಂಜಿ ಹೆಕ್ಟರ್‍‍ಗೆ ಹೆಚ್ಚುತ್ತಿರುವ ಡಿಮ್ಯಾಂಡ್ - ವಿಸ್ತರಿಸಲಾದ ಕಾಯುವಿಕೆಯ ಅವಧಿ

ಕಾರಿನ ಮೈಲೇಜ್

*ಪೆಟ್ರೋಲ್ ವರ್ಷನ್(ಆಟೋಮ್ಯಾಟಿಕ್ ಗೇರ್‌ಬಾಕ್ಸ್)- ಪ್ರತಿ ಲೀಟರ್‌ಗೆ 13.96 ಕಿ.ಮಿ

*ಪೆಟ್ರೋಲ್ ವರ್ಷನ್(ಮ್ಯಾನುವಲ್ ಗೇರ್‌ಬಾಕ್ಸ್)- ಪ್ರತಿ ಲೀಟರ್‌ಗೆ 14.16 ಕಿ.ಮಿ

*ಪೆಟ್ರೋಲ್ ಎಂಜಿನ್ ಜೊತೆ 48 ವೊಲ್ಟ್ ಮೈಲ್ಡ್ ಹೈಬ್ರಿಡ್(ಮ್ಯಾನುವಲ್ ಗೇರ್‌ಬಾಕ್ಸ್) - ಪ್ರತಿ ಲೀಟರ್‌ಗೆ 15.81 ಕಿ.ಮಿ

*ಡಿಸೇಲ್ ವರ್ಷನ್(ಮ್ಯಾನುವಲ್ ಗೇರ್‌ಬಾಕ್ಸ್)- ಪ್ರತಿ ಲೀಟರ್‌ಗೆ 17.41 ಕಿ.ಮಿ

ಎಂಜಿ ಹೆಕ್ಟರ್‍‍ಗೆ ಹೆಚ್ಚುತ್ತಿರುವ ಡಿಮ್ಯಾಂಡ್ - ವಿಸ್ತರಿಸಲಾದ ಕಾಯುವಿಕೆಯ ಅವಧಿ

ಫೀಚರ್ಸ್

ಜೊತೆಗೆ ಹೆಕ್ಟರ್ ಕಾರು ಮಾದರಿಯು ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊತ್ತುಬಂದಿದ್ದು, ಬ್ಲ್ಯಾಕ್ ಕಲರ್ ಥೀಮ್ ಇಂಟಿರಿಯರ್‌ನೊಂದಿಗೆ ಆಡಿಯೋ ಸಿಸ್ಟಂ, ಕ್ಲೈಮೆಟ್ ಕಂಟ್ರೋಲ್, ಇನ್ಪೋಟೈನ್‌ಮೆಂಟ್ ಕಂಟ್ರೋಲ್, ನೆವಿಗೇಷನ್ ನಿಯಂತ್ರಿಸಬಲ್ಲ 10.4-ಇಂಚಿನ ವರ್ಟಿಕಲ್ ಸ್ಟ್ರಾಕ್ಡ್ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಡಿಸ್‌ಪ್ಲೈ ಸೇರಿದಂತೆ ಇನ್ನು ಹಲವಾರು ಫೀಚರ್‍‍ಗಳನ್ನು ನೀಡಲಾಗಿದೆ.

ಇದರಲ್ಲಿ ಐ ಸ್ಮಾರ್ಟ್ ಕನೆಕ್ವಿವಿಟಿ ಸೌಲಭ್ಯವು ಹೆಕ್ಟರ್ ಕಾರಿಗೆ ಮತ್ತಷ್ಟು ಮೆರಗು ತಂದಿರುವುದಲ್ಲದೇ ಕಾರಿಗೂ ಗರಿಷ್ಠ ಭದ್ರತೆ ಒದಗಿಸಲಿದ್ದು, ಪ್ಯಾಕೇಜ್ ಸೌಲಭ್ಯ ಹೊಂದಿರುವ ಐ ಸ್ಮಾರ್ಟ್ ಕನೆಕ್ಟಿವಿಟಿನಲ್ಲಿ ಧ್ವನಿ ಹಿಂಬಾಲಿಸುವಿಕೆ, ಲೈವ್ ವೆಹಿಕಲ್ ಟ್ರಾಕಿಂಗ್, ವೆಹಿಕಲ್ ಸ್ಟೆಟಸ್, ಜಿಯೋ ಫೆನ್ಸ್ ಸೇರಿದಂತೆ 50ಕ್ಕೂ ಹೆಚ್ಚು ಫೀಚರ್ಸ್ ಇದರಲ್ಲಿವೆ.

ಎಂಜಿ ಹೆಕ್ಟರ್‍‍ಗೆ ಹೆಚ್ಚುತ್ತಿರುವ ಡಿಮ್ಯಾಂಡ್ - ವಿಸ್ತರಿಸಲಾದ ಕಾಯುವಿಕೆಯ ಅವಧಿ

ಹಾಗೆಯೇ ಹೊಸ ಕಾರಿನಲ್ಲಿ ಆ್ಯಂಬಿಯೆಂಟ್ ಲೈಟ್ಸ್ (8 ಬಣ್ಣಗಳಲ್ಲಿ), ಲೆದರ್ ಅಪ್‌ಹೊಲಿಸ್ಟ್ರೈ( ಟಾಪ್ ಎಂಡ್ ಮಾಡೆಲ್‌ಗಳಲ್ಲಿ), 6 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಚಾಲಕ ಸೀಟು, ಪನೊರೊಮಿಕ್ ಸನ್‌ರೂಫ್, ಟಿಲ್ಟ್ ಆ್ಯಂಡ್ ಟೆಲಿಸ್ಕೊಪಿಕ್ ಸ್ಟಿರಿಂಗ್, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್, ಆಟೋ ಎಸಿ ಜೊತೆ ರಿಯರ್ ವೆಂಟ್ಸ್ , ಪ್ರೀಮಿಯಂ ಇನ್ಫಿನಿಟಿ ಸೌಂಡ್ ಸಿಸ್ಟಂ, ಫ್ರಂಟ್ ಆ್ಯಂಡ್ ರಿಯರ್ ಪವರ್ ವಿಂಡೋ, ಫಾಸ್ಟ್ ಚಾರ್ಜಿಂಗ್, ಅಂಡ್ರಾಯಿಡ್ ಆಡಿಯೋ, ಫುಶ್ ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ಪವರ್ ಅಡ್ಜೆಸ್ಟ್ ರಿಯರ್ ವ್ಯೂ ಮಿರರ್ ಸೌಲಭ್ಯಗಳಿವೆ.

ಎಂಜಿ ಹೆಕ್ಟರ್‍‍ಗೆ ಹೆಚ್ಚುತ್ತಿರುವ ಡಿಮ್ಯಾಂಡ್ - ವಿಸ್ತರಿಸಲಾದ ಕಾಯುವಿಕೆಯ ಅವಧಿ

ರಿಮೋಟ್ ಕೀ ಲೆಸ್ ಎಂಟ್ರಿ, ವೆಲ್‌ಕಮ್ ಲೈಟ್, ಹೈಟ್ ಅಡ್ಜೆಸ್ಟ್ ಹೆಡ್ ರೆಸ್ಟ್, ಫ್ರಂಟ್ ಮತ್ತು ರಿಯರ್ ಫಾಸ್ಟ್-ಚಾರ್ಜಿಂಗ್ ಪೋರ್ಟ್ಸ್, ಗ್ಲೋ ಬಾಕ್ಸ್, ಡ್ರೈವರ್ ಆರ್ಮ್ ರೆಸ್ಟ್, 60:40 ಅನುಪಾತದಲ್ಲಿ ಮಡಚಬಹುದಾದ ಹಿಂಬದಿ ಆಸನ, ಆಟೋ ಎಸಿ, ಪವರ್ ಅಡ್ಜೆಸ್ಟ್ ರಿಯರ್ ವ್ಯೂ ಮಿರರ್ ಸೌಲಭ್ಯವು ಪ್ರತಿ ವೆರಿಯೆಂಟ್‌ನಲ್ಲೂ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಎಂಜಿ ಹೆಕ್ಟರ್‍‍ಗೆ ಹೆಚ್ಚುತ್ತಿರುವ ಡಿಮ್ಯಾಂಡ್ - ವಿಸ್ತರಿಸಲಾದ ಕಾಯುವಿಕೆಯ ಅವಧಿ

ಸೇಫ್ಟಿ ಫೀಚರ್ಸ್

ಹೆಕ್ಟರ್ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಆರ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಬಿಎಸ್ ಜೊತೆಗೆ ಇಬಿಡಿ ಮತ್ತು ಬ್ರೇಕ್ ಅಸಿಸ್ಟ್, ಹಿಲ್ ಹೋಲ್ಡ್ ಕಂಟ್ರೋಲ್, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ರಿಯರ್ ಡಿಫಾಗರ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಮತ್ತು ISOFIX ಚೈಲ್ಡ್-ಸೀಟ್ ಮೌಂಟ್ಸ್ ಸೌಲಭ್ಯ ನೀಡಲಾಗಿದೆ.

More from DriveSpark

Article Published On: Wednesday, July 3, 2019, 17:32 [IST]
English summary
MG Hector Waiting Period Extended To 7 Months - Petrol Variant Getting Huge Demand. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+