ಮತ್ತೊಂದು ಎಲೆಕ್ಟ್ರಿಕ್ ಕಾರ್ ಬಿಡುಗಡೆ ಮಾಡಲಿದೆ ಎಂ‍‍ಜಿ ಮೋಟಾರ್

ಎಂ‍‍ಜಿ ಮೋಟಾರ್ ಭಾರತೀಯ ಮಾರುಕಟ್ಟೆಗಾಗಿ ಯೋಜನೆಗಳನ್ನು ರೂಪಿಸಿದ್ದು, ಮುಂದಿನ ಎರಡು ವರ್ಷಗಳಲ್ಲಿ ಐದು ಹೊಸ ವಾಹನಗಳನ್ನು ಬಿಡುಗಡೆಗೊಳಿಸಲಿದೆ. ಈ ಬ್ರಿಟಿಷ್ ಕಂಪನಿಯು ಎಷ್ಟು ಸಂಖ್ಯೆಯಲ್ಲಿ ವಾಹನಗಳನ್ನು ಬಿಡುಗಡೆ ಮಾಡಬೇಕೆಂಬ ಗುರಿಯನ್ನಿಟ್ಟು ಕೊಳ್ಳುವ ಮೊದಲು ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಲು ಬಯಸಿದೆ.

ಮತ್ತೊಂದು ಎಲೆಕ್ಟ್ರಿಕ್ ಕಾರ್ ಬಿಡುಗಡೆ ಮಾಡಲಿದೆ ಎಂ‍‍ಜಿ ಮೋಟಾರ್

ಈ ನಿಯಮವನ್ನು ಅನೇಕ ದಶಕಗಳಿಂದ ಪಾಲಿಸಿಕೊಂಡು ಬರುತ್ತಿದೆ. ಎಸ್‍ಎ‍ಐ‍‍‍ಸಿ ಮಾಲೀಕತ್ವದ ಈ ಕಂಪನಿಯು ತನ್ನ ಬ್ರಾಂಡಿನ ಕಾರುಗಳ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಮೂಡಿಸುವತ್ತ ಲಕ್ಷ್ಯ ನೀಡಲಿದೆ. ಈ ಪ್ರಿಮೀಯಂ ಎಸ್‍‍ಯು‍‍ವಿ ಕಾರಿನಲ್ಲಿ ಅನೇಕ ಫೀಚರ್‍‍ಗಳಿದ್ದು, ಈ ಸೆಗ್‍‍ಮೆಂಟಿನಲ್ಲಿರುವ ಬೇರೆ ಯಾವುದೇ ಕಾರುಗಳು ಈ ರೀತಿಯ ಫೀಚರ್‍‍ಗಳನ್ನು ಹೊಂದಿಲ್ಲ. ತನ್ನ ಪ್ರತಿಸ್ಪರ್ಧಿ ಕಂಪನಿಗಳಿಗಿಂತ ಹೆಚ್ಚಿನ ಟೆಕ್ನಿಕಲ್ ಅಂಶಗಳನ್ನು ಹೊಂದಿದೆ.

ಮತ್ತೊಂದು ಎಲೆಕ್ಟ್ರಿಕ್ ಕಾರ್ ಬಿಡುಗಡೆ ಮಾಡಲಿದೆ ಎಂ‍‍ಜಿ ಮೋಟಾರ್

ಎಂ‍‍ಜಿ ಮೋಟಾರ್ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ರಾಜೀವ್ ಛಾಬಾರವರು ಈ ವರ್ಷದ ಕೊನೆಯಲ್ಲಿ ಕಂಪನಿಯ ಫೇಸ್ 2 ಘಟಕದ ವಿಸ್ತರಣೆಯ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮತ್ತೊಂದು ಎಲೆಕ್ಟ್ರಿಕ್ ಕಾರ್ ಬಿಡುಗಡೆ ಮಾಡಲಿದೆ ಎಂ‍‍ಜಿ ಮೋಟಾರ್

ಅವರ ಪ್ರಕಾರ ಎಂ‍‍ಜಿ ಕಂಪನಿಯು ಮುಂದಿನ 3 ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿನ ಪ್ರಮುಖ ಪ್ರತಿಸ್ಪರ್ಧಿಗಳಾದ ಮಾರುತಿ ಸುಜುಕಿ ಹಾಗೂ ಹ್ಯುಂಡೈ ಕಂಪನಿಗಳೊಂದಿಗೆ ಪೈಪೋಟಿ ನೀಡುವಷ್ಟು ಮಟ್ಟಿಗೆ ಬೆಳೆಯಲಿದೆ.

ಮತ್ತೊಂದು ಎಲೆಕ್ಟ್ರಿಕ್ ಕಾರ್ ಬಿಡುಗಡೆ ಮಾಡಲಿದೆ ಎಂ‍‍ಜಿ ಮೋಟಾರ್

ಎಂ‍‍ಜಿ ಕಂಪನಿಯು ಗುಜರಾತ್‍‍ನಲ್ಲಿರುವ ಹಲೊಲ್ ಘಟಕದಲ್ಲಿ ರೂ.2,300 ಕೋಟಿಗಳಷ್ಟು ಹೂಡಿಕೆ ಮಾಡಿದೆ. ನಂತರದ ಹಂತದಲ್ಲಿ ಮತ್ತೆ ರೂ.2,800 ಕೋಟಿಗಳನ್ನು ಹೂಡಿಕೆ ಮಾಡಲಿದೆ. ಮೊದಲ ಹಂತವಾಗಿ ಕಂಪನಿಯು ಮುಂದಿನ ಮೂರು ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯ ಕಾರುಗಳನ್ನು ಮಾರಾಟ ಮಾಡುವ ಗುರಿ ಹೊಂದಿದೆ. ಗ್ರಾಹಕರ ತೃಪ್ತಿ ಹಾಗೂ ಕಡಿಮೆ ಬೆಲೆಗೆ ಕಾರುಗಳನ್ನು ಮಾರಾಟ ಮಾಡುವುದರಿಂದ ಭಾರತದಲ್ಲಿ ಗಟ್ಟಿಯಾದ ನೆಲೆಯನ್ನು ಕಂಡುಕೊಳ್ಳಬಹುದೆಂಬುದನ್ನು ಕಂಪನಿಯು ಅರಿತಿದೆ.

ಮತ್ತೊಂದು ಎಲೆಕ್ಟ್ರಿಕ್ ಕಾರ್ ಬಿಡುಗಡೆ ಮಾಡಲಿದೆ ಎಂ‍‍ಜಿ ಮೋಟಾರ್

ಎರಡನೇ ಹಂತದಲ್ಲಿ ಎಷ್ಟು ಸಂಖ್ಯೆಯ ಕಾರುಗಳನ್ನು ಮಾರಾಟ ಮಾಡಬೇಕೆಂಬ ಗುರಿಯನ್ನು ಇಟ್ಟುಕೊಳ್ಳಲಿದೆ. ಇದರ ಆಧಾರದ ಮೇಲೆ ಕಾರುಗಳನ್ನು ತಯಾರಿಸಲಿದೆ. ಎಂ‍‍ಜಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿರುವ ವಾಹನದ ಮಾರಾಟವನ್ನು ಶುರು ಮಾಡಲಿದೆ.

MOST READ: ಟ್ಯೂಬ್‍‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍‍ಲೆಸ್ ಟಯರ್ ಸದ್ದು ಶುರು

ಮತ್ತೊಂದು ಎಲೆಕ್ಟ್ರಿಕ್ ಕಾರ್ ಬಿಡುಗಡೆ ಮಾಡಲಿದೆ ಎಂ‍‍ಜಿ ಮೋಟಾರ್

ಇದಕ್ಕಾಗಿ ಈಗಾಗಲೇ ದೇಶಾದ್ಯಂತ 120 ಡೀಲರ್‍‍ಶಿಪ್‍‍ಗಳನ್ನು ತೆರೆಯಲಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿರುವ ಎರಡನೇ ಕಾರು ಎಲೆಕ್ಟ್ರಿಕ್ ಆಗಿರಲಿದ್ದು, ಇ‍‍ಝಡ್‍ಎಸ್ ಎಂಬ ಹೆಸರಿನಲ್ಲಿ ಈಗಾಗಲೇ ಟೀಸರ್ ಸಹ ಬಿಡುಗಡೆಗೊಳಿಸಿದೆ. ಈ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಈ ವರ್ಷದ ಡಿಸೆಂಬರ್‍‍ನಲ್ಲಿ ಬಿಡುಗಡೆಗೊಳಿಸಲಿದೆ.

MOST READ: ಮ್ಯಾನುವಲ್ ಕಾರ್ ಡ್ರೈವಿಂಗ್ ಮಾಡದಿದ್ರೆ ಲೈಸೆನ್ಸ್ ಸಿಗೋದಿಲ್ಲ

ಮತ್ತೊಂದು ಎಲೆಕ್ಟ್ರಿಕ್ ಕಾರ್ ಬಿಡುಗಡೆ ಮಾಡಲಿದೆ ಎಂ‍‍ಜಿ ಮೋಟಾರ್

7 ಸೀಟರ್‍‍ನ ಹೆಕ್ಟರ್ ಕಾರ್ ಅನ್ನು 2020ರ ಆರಂಭದಲ್ಲಿ ಬಿಡುಗಡೆಗೊಳಿಸಲಾಗುವುದು. ವಿಶ್ವ ಮಾರುಕಟ್ಟೆಯಲ್ಲಿ ಎಂಜಿ ಕಂಪನಿಯು ತನ್ನ ಮಾತೃ ಸಂಸ್ಥೆಯಾದ ಎಸ್‍ಎ‍ಐ‍‍ಸಿ ಬ್ರಾಂಡಿನಡಿಯಲ್ಲಿ ಹಲವಾರು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲಿದೆ.

MOST READ: ಬೆಂಗಳೂರಿನ ಉದ್ಯಮಿ ಮದುವೆಮನೆಯಲ್ಲಿ ಐಷಾರಾಮಿ ಕಾರು‍ಗಳ ಕಲರವ..!

ಮತ್ತೊಂದು ಎಲೆಕ್ಟ್ರಿಕ್ ಕಾರ್ ಬಿಡುಗಡೆ ಮಾಡಲಿದೆ ಎಂ‍‍ಜಿ ಮೋಟಾರ್

ರಾಜೀವ್ ಛಾಬಾರವರು ಮಾತನಾಡಿ ಎಂ‍‍ಜಿ ಕಂಪನಿಯು ತನ್ನ ಎರಡನೇ ಎಲೆಕ್ಟ್ರಿಕ್ ಕಾರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದ್ದು, ಈ ಕಾರಿನ ಬೆಲೆಯು ರೂ.10 ಲಕ್ಷಗಳಾಗಿರಲಿದೆ ಎಂದು ತಿಳಿಸಿದರು. ಎಲೆಕ್ಟ್ರಿಕ್ ವಾಹನಗಳು ಭವಿಷ್ಯದಲ್ಲಿ ಹೆಚ್ಚು ಸದ್ದು ಮಾಡಲಿದ್ದು, ಎಂಜಿ ಕಂಪನಿಯು ಎಲೆಕ್ಟ್ರಿಕ್ ಕಾರುಗಳಲ್ಲಿ ಯಶಸ್ಸನ್ನು ಕಾಣುವ ನಿರೀಕ್ಷೆಯಿದೆ.

Source: ET Auto

Article Published On: Tuesday, June 11, 2019, 12:45 [IST]
English summary
MG’s Second Electric Vehicle For India Could Cost Under Rs. 10 Lakh - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+