ಸ್ಥಗಿತಗೊಳ್ಳಲಿರುವ ಜನಪ್ರಿಯ ಮಿಟ್ಸುಬಿಷಿ ಪಜೆರೋ
ಮಿಟ್ಸುಬಿಷಿ ಕಂಪನಿಯು ಜಪಾನ್ ಮಾರುಕಟ್ಟೆಯಲ್ಲಿರುವ ತನ್ನ ಪಜೆರೋ ವಾಹನದ ಉತ್ಪಾದನೆಯನ್ನು ಸ್ಥಗಿತಗೊಳಿಸಲಿದೆ. ಈ ಹಳೇ ಮಾದರಿಯ ಎಸ್‍ಯುವಿಗೆ ಹಲವಾರು ತಿಂಗಳುಗಳಿಂದ ಬೇಡಿಕೆ ಕಡಿಮೆಯಾಗಿರುವುದೇ ಈ ನಿರ್ಧಾರಕ್ಕೆ ಕಾರಣವಾಗಿದೆ. ಮೋಟಾರ್ 1 ಸುದ್ದಿಸಂಸ್ಥೆಯ ವರದಿಯ ಪ್ರಕಾರ, ಸ್ಟಾಂಡರ್ಡ್ ಮಾದರಿಯ ಉತ್ಪಾದನೆಯನ್ನು ಈಗಾಗಲೇ ನಿಲ್ಲಿಸಲಾಗಿದ್ದು, ಈ ಐಕಾನ್ ಕಾರಿನ ನೆನಪಿಗಾಗಿ ಮಿಟ್ಸುಬಿಷಿ ಪಜೆರೋ ಕೊನೆ ಆವೃತ್ತಿಯನ್ನು ಜಪಾನ್ ನಲ್ಲಿ ಬಿಡುಗಡೆ ಮಾಡಿದೆ.

ಮಿಟ್ಸುಬಿಷಿ ಪಜೆರೋ ಪ್ರಪಂಚದಲ್ಲಿ ಅತಿ ಜನಪ್ರಿಯವಾಗಿರುವ ಎಸ್‍ಯುವಿಗಳಲ್ಲಿ ಒಂದಾಗಿದ್ದು, ಆಫ್ ರೋಡ್ ಮತ್ತು ಆನ್ ರೋಡ್ ಎರಡರಲ್ಲೂ ತನ್ನದೇ ಆದ ಛಾಪನ್ನು ಹೊಂದಿದೆ. ಪ್ರಬಲ ಪೈಪೋಟಿ ಎದುರಾದ ಹಿನ್ನೆಲೆಯಲ್ಲಿ ಮಿಟ್ಸುಬಿಷಿ ಪಜೆರೋ ಗೆ ಬದಲಾಗಿ ಬೇರೆ ಆಧುನಿಕ ಎಸ್‍ಯುವಿಗಳನ್ನು ಪರಿಚಯಿಸಿತ್ತು. ಪಜೆರೋ ವಾಹನವು ಸ್ಥಗಿತಗೊಳ್ಳುತ್ತಿರುವುದು ನಿರೀಕ್ಷಿತವಾಗಿದೆ. ಮಿಟ್ಸುಬಿಷಿ ಪಜೆರೋ 1982ರಲ್ಲಿ ಬಿಡುಗಡೆಯಾದಾಗಿನಿಂದ ವಿವಿಧ ಅಂತರ್ ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಹು ಬೇಗನೇ ಜನಪ್ರಿಯವಾಗಿತ್ತು. ಕಡಿಮೆ ಬೆಲೆಯಲ್ಲಿ ವಿಶ್ವಾಸಾರ್ಹವಾದ, ಒರಟಾದ ಮತ್ತು ಉತ್ತಮವಾಗಿ ಕೆಲಸ ಮಾಡುವ ಮಾದರಿಗಳನ್ನು ನೀಡಲಾಗಿತ್ತು.

ಕಳೆದ ಕೆಲವು ವರ್ಷಗಳಲ್ಲಿ ಎಸ್‍ಯುವಿ ಸೆಗ್ ಮೆಂಟಿನಲ್ಲಿ ಅನೇಕ ಬದಲಾವಣೆಗಳಾದ ಕಾರಣ, ಲಾಡರ್ ಫ್ರೇಮ್ ಚಾಸೀಸ್ ನಲ್ಲಿ ಇದ್ದ ಟೆಕ್ನಾಲಜಿ ಆಧುನಿಕವಾದ ಮೊನೊಕಾಕ್ ಬಾಡಿಗಳಿಗೆ ಬದಲಾದವು. ನಂತರ ಹಳೆ ಮಾದರಿಯ ಎಸ್‍ಯುವಿ ಗಳು ನಶಿಸಿದವು. ಮಿಟ್ಸುಬಿಷಿ ಪಜೆರೋ ಈ ಸಾಲಿನಲ್ಲಿರುವ ಕೊನೆಯ ಕೆಲವೇ ಕೆಲವು ಎಸ್‍ಯುವಿ ಗಳ ಪೈಕಿ ಒಂದಾಗಿದೆ.

2018ರಲ್ಲಿ ಮಿಟ್ಸುಬಿಷಿ ತನ್ನ ಕೊನೆಯ ಪಜೆರೋವನ್ನು ಯೂರೋಪಿಯನ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿ, ತನ್ನ ಬ್ರಾಂಡ್ ಅನ್ನು ಕೊನೆಗೊಳಿಸಿತು. ಪಜೆರೋ ಬ್ರಾಂಡಿನ ಹಿಂದಿನ ಮಾದರಿಗಳಿಗೆ ಭಾರತದಲ್ಲಿ ಬೇಡಿಕೆ ಇದ್ದ ಕಾರಣ ಈಗಿರುವ ಮಾದರಿಯ ಪಜೆರೋ ವನ್ನು ಭಾರತದಲ್ಲಿ ಮಿಟ್ಸುಬಿಷಿ ಮಾಂಟೆರೋ ಹೆಸರಿನಲ್ಲಿ ಬಿಡುಗಡೆಗೊಳಿಸಲಾಗಿತ್ತು.

2018ರಲ್ಲಿ ಮಿಟ್ಸುಬಿಷಿ ಮಾಂಟೆರೋವನ್ನು ಭಾರತದಲ್ಲಿ ಸ್ಥಗಿತಗೊಳಿಸಲಾಯಿತು. ಈಗ ಜಪಾನ್ ಮಾರುಕಟ್ಟೆಯಲ್ಲೂ ಸ್ಥಗಿತಗೊಳಿಸಲಾಗುತ್ತಿದೆ. ಜಪಾನ್ ನಲ್ಲಿ ಬಿಡುಗಡೆಗೊಳಿಸಿದ್ದ ಕೊನೆಯ ಆವೃತ್ತಿಯ ಮಿಟ್ಸುಬಿಷಿ ಪಜೆರೋ 3.2 ಲೀಟರಿನ ಡೀಸೆಲ್ ಎಂಜಿನ್ ಹೊಂದಿದ್ದು, 190 ಬಿಹೆಚ್‍ಪಿ ಮತ್ತು 441 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 5 ಸ್ಪೀಡಿನ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿದ್ದು, ಎಲ್ಲಾ 4 ವ್ಹೀಲ್ ಗಳಿಗೆ ಪವರ್ ನೀಡುತ್ತದೆ. 4 ಡಬ್ಲೂಡಿ, 2 ಸಿಸ್ಟಮ್ ನೊಂದಿಗೆ ಲಾಕೇಬಲ್ ರೇರ್ ಡಿಫರೇಂಶಿಯಲ್ ಹೊಂದಿದೆ.
MUST READ: ಮಾರುತಿ ಸುಜುಕಿ ವಿಟಾರಾ ಬ್ರಿಝಾ ಉತ್ಪಾದಿಸಲಿದೆ ಟೊಯೊಟಾ..!

ಕಾರಿನ ಒಳಗೆ 7 ಇಂಚಿನ ಟಚ್ ಸ್ಕ್ರೀನ್ ಇನ್ಫೊಟೆನ್ ಮೆಂಟ್ ಸಿಸ್ಟಂ, ಡ್ರೈವರ್ ಮತ್ತು ಪ್ಯಾಸೆಂಜರ್ ಗಳಿಗಾಗಿ ಎಲೆಕ್ಟ್ರಿಕ್ ಸೀಟುಗಳು, ಎಲೆಕ್ಟ್ರಿಕ್ ಸನ್ ರೂಫ್, ಲೆದರ್ ಅಪ್ ಹೊಲ್ ಸ್ಟ್ರಿ ಮುಂತಾದ ಸೌಲಭ್ಯಗಳನ್ನು ಒಳಗೊಂಡಿದೆ. ಇದನ್ನು ಪ್ರಪಂಚದ 70 ಕ್ಕೂ ಹೆಚ್ಚು ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಬಾಳಿಕೆ ಬರುವ ತನಕ ಮಾರಾಟ ಮಾಡಲಾಗುವುದು.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಅಮೆರಿಕ ಹೊರತು ಪಡಿಸಿ ಪ್ರಪಂಚದ ಎಲ್ಲಾ ಕಡೆಗಳಲ್ಲೂ ಎಸ್‍ಯುವಿ ಯ ಮಾರುಕಟ್ಟೆ ಬದಲಾಗಿದ್ದು, ಗ್ರಾಹಕರು ದೊಡ್ಡ ಗಾತ್ರದ ಕಡಿಮೆ ಮೈಲೇಜ್ ನೀಡುವ ಎಸ್‍ಯುವಿ ಗಳ ಬದಲಾಗಿ, ಕಡಿಮೆ ಗಾತ್ರದ ಆಧುನಿಕ ಸೌಲಭ್ಯಗಳನ್ನು ಹೊಂದಿರುವ, ಒಳ್ಳೆಯ ಡ್ರೈವಿಂಗ್ ಅನುಭವ ನೀಡುವ ವಾಹನಗಳಿಗೆ ಮೊರೆ ಹೋಗುತ್ತಿದ್ದಾರೆ. ಭಾರತದ ಗ್ರಾಹಕರೂ ಇದರಿಂದ ಹೊರತಾಗಿಲ್ಲ. ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಎಸ್‍ಯುವಿಗಳೇ ಇದಕ್ಕೆ ಸಾಕ್ಷಿ.


Click it and Unblock the Notifications








