ಮಾರುತಿ ಸುಜುಕಿ ವಿಟಾರಾ ಬ್ರಿಝಾ ಉತ್ಪಾದಿಸಲಿದೆ ಟೊಯೊಟಾ..!

ಮಾರುತಿ ಸುಜುಕಿ ಕಂಪನಿಯು ತನ್ನ ಹೊಸ ಮಾರುತಿ ಬ್ರಿಝಾ ಎಸ್‍ಯುವಿಯನ್ನು ಬಿಡದಿಯಲ್ಲಿರುವ ಟೊಯೊಟಾ ಕಿರ್ಲೊಸ್ಕರ್ ಮೋಟಾರ್ಸ್ ನ ಘಟಕದಲ್ಲಿ ಉತ್ಪಾದಿಸಲಿದೆ. ಈ ಬಗ್ಗೆ ಮಾರುತಿ ಸುಜುಕಿ ಕಂಪನಿಯು ಅಧಿಕೃತವಾಗಿ ಘೋಷಿಸಿದೆ. ಮಾರುತಿ ಸುಜುಕಿ ಕಂಪನಿ ಮತ್ತು ಟೊಯೊಟಾ ಕಂಪನಿಗಳ ನಡುವೆ ಆಗಿರುವ ಒಪ್ಪಂದದ ಪ್ರಕಾರ ಟೊಯೊಟಾ ಕಂಪನಿಯು ತನ್ನ ಘಟಕದಲ್ಲಿ ವಿಟಾರಾ ಬ್ರಿಝಾವನ್ನು ಉತ್ಪಾದಿಸಲಿದೆ.

ಮಾರುತಿ ಸುಜುಕಿ ವಿಟಾರಾ ಬ್ರಿಝಾ ಉತ್ಪಾದಿಸಲಿದೆ ಟೊಯೊಟಾ..!

ವರದಿಗಳ ಪ್ರಕಾರ, ಮಾರುತಿ ಸುಜುಕಿಯು ವಿಟಾರಾ ಬ್ರಿಝಾ ಉತ್ಪಾದನೆಯನ್ನು ಟೊಯೊಟಾ ಕಿರ್ಲೊಸ್ಕರ್ ಮೋಟಾರ್ಸ್ ಗೆ ವಹಿಸಲಿದೆ. 2017ರಿಂದ ಎರಡೂ ಕಂಪನಿಗಳು ಒಪ್ಪಂದಕ್ಕೆ ಬರಲು ತಯಾರಿ ನಡೆಸಿದ್ದವು, ಈ ಒಪ್ಪಂದವು 2018ರಲ್ಲಿ ಅಂತಿಮವಾಯಿತು. ಮಾರ್ಚ್ 2018ರಲ್ಲಿ ಮಾರುತಿ ಸುಜುಕಿ ಮತ್ತು ಟೊಯೊಟಾ ಮೋಟಾರ್ಸ್ ಗಳು ಜಂಟಿಯಾಗಿ ಕಾರು ಉತ್ಪಾದಿಸಲು ಒಪ್ಪಂದ ಮಾಡಿ ಕೊಂಡವು. ಟೊಯೊಟಾ - ಮಾರುತಿ ಸುಜುಕಿಯ ಸಹಯೋಗದಲ್ಲಿ ತಯಾರಾಗುವ ಮೊದಲ ಕಾರು ಮಾರುತಿ ಸುಜುಕಿ ಬಲೆನೋ ಆಗಿರಲಿದ್ದು, ಅದನ್ನು ಟೊಯೊಟಾ ಗ್ಲ್ಯಾಂಜ್ ಎಂಬ ಹೆಸರಿನೊಂದಿಗೆ ರಸ್ತೆಗಿಳೀಯುವುದು ಖಚಿತವಾಗಿದೆ.

ಮಾರುತಿ ಸುಜುಕಿ ವಿಟಾರಾ ಬ್ರಿಝಾ ಉತ್ಪಾದಿಸಲಿದೆ ಟೊಯೊಟಾ..!

ಈ ಯೋಜನೆಯಲ್ಲಿ ಸೇರಿರುವ ಮಾರುತಿ ಸುಜುಕಿಯ ಇತರ ಕಾರುಗಳೆಂದರೆ ಸಿಯಾಜ್, ಎರ್ಟಿಗಾ ಮತ್ತು ವಿಟಾರಾ ಬ್ರಿಝಾ. ವಿಟಾರಾ ಬ್ರಿಝಾ ಸದ್ಯಕ್ಕೆ ಮಾರುತಿ ಸುಜುಕಿಯಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ವಾಹನವಾಗಿದೆ.

ಮಾರುತಿ ಸುಜುಕಿ ವಿಟಾರಾ ಬ್ರಿಝಾ ಉತ್ಪಾದಿಸಲಿದೆ ಟೊಯೊಟಾ..!

ಈ ಸೆಗ್ ಮೆಂಟಿನಲ್ಲಿ ಟೊಯೊಟಾ ಕಂಪನಿಯ ಬೇರೆ ಯಾವುದೇ ವಾಹನವು ತಯಾರಾಗದ ಕಾರಣ ಟೊಯೊಟಾ ಸಹ ಈ ಕಾರನ್ನು ತನ್ನ ಘಟಕದಲ್ಲಿ ಉತ್ಪಾದಿಸಲು ಉತ್ಸುಕವಾಗಿದೆ. ಮಾರುತಿಯು ಈ ಕಾರನ್ನು ಸಂಪೂರ್ಣವಾಗಿ ಟೊಯೊಟಾದ ಬೆಂಗಳೂರು ಘಟಕದಲ್ಲಿ ಉತ್ಪಾದಿಸಲು ನಿರ್ಧರಿಸಿದೆ.

ಮಾರುತಿ ಸುಜುಕಿ ವಿಟಾರಾ ಬ್ರಿಝಾ ಉತ್ಪಾದಿಸಲಿದೆ ಟೊಯೊಟಾ..!

ಕಾರ್ ಆಂಡ್ ಬೈಕ್ ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿರುವ, ಮಾರುತಿ ಸುಜುಕಿಯ ಅಧ್ಯಕ್ಷ ಆರ್.ಸಿ ಭಾರ್ಗವ ರವರು, ಟೊಯೊಟಾ ತನ್ನ ಬೆಂಗಳೂರು ಉತ್ಪಾದನಾ ಘಟಕದಲ್ಲಿ ಹೆಚ್ಚುವರಿ ಜಾಗ ಹೊಂದಿದ್ದು, ಆ ಜಾಗದಲ್ಲಿ ನಾವು ನಮ್ಮ ಬ್ರಿಝಾವನ್ನು ಉತ್ಪಾದಿಸಲಿದ್ದೇವೆ, ಇದು ನಾವು ಹೂಡಿಕೆ ಮಾಡಬೇಕಿರುವ ಬಂಡವಾಳವನ್ನು ಉಳಿತಾಯ ಮಾಡಲಿದೆ ಎಂದು ತಿಳಿಸಿದರು. ನಾವು ಆ ಜಾಗವನ್ನು ಬಳಸಿಕೊಳ್ಳಲಿದ್ದೇವೆ. ಇದರಿಂದ ಇಬ್ಬರಿಗೂ ಅನುಕೂಲವಾಗಲಿದ್ದು, ನಮಗೆ ಉತ್ಪಾದನಾ ಘಟಕಕ್ಕಾಗಿ ಬಂಡವಾಳ ಹೂಡಿಕೆ ಮಾಡುವುದು ತಪ್ಪಿದರೆ, ಅವರಿಗೆ ಅವರ ಸಾಮರ್ಥ್ಯಕ್ಕೆ ತಕ್ಕ ಕಾರನ್ನು ಉತ್ಪಾದಿಸುವ ಅವಕಾಶ ಸಿಗಲಿದೆ. ಆದ ಕಾರಣ ಇಬ್ಬರೂ ಈ ಘಟಕದ ಸಂಪೂರ್ಣ ಪ್ರಯೋಜನ ಪಡೆಯಲಿದ್ದೇವೆ ಎಂದು ತಿಳಿಸಿದರು.

MUST READ: ಹೆಚ್ಎಕ್ಸ್200ಆರ್ ಬಿಡುಗಡೆ ಮಾಡಲಿರುವ ಹೀರೋ

ಮಾರುತಿ ಸುಜುಕಿ ವಿಟಾರಾ ಬ್ರಿಝಾ ಉತ್ಪಾದಿಸಲಿದೆ ಟೊಯೊಟಾ..!

ಟೊಯೊಟಾ ಕಂಪನಿಯು ಬೆಂಗಳೂರು ಹೊರವಲಯದ ಬಿಡದಿಯಲ್ಲಿ ಉತ್ಪಾದನಾ ಘಟಕವನ್ನು ಹೊಂದಿದ್ದು, ತನ್ನ ಘಟಕವನ್ನು ಪೂರ್ಣವಾಗಿ ಉತ್ಪಾದನೆಗಾಗಿ ಬಳಸುತ್ತಿಲ್ಲ. 1997ರಿಂದ ಕಾರ್ಯಾಚರಣೆ ಶುರು ಮಾಡಿದ ಮೊದಲ ಘಟಕದಲ್ಲಿ ಪ್ರತಿ ವರ್ಷ 1,00,000 ಟೊಯೊಟಾ ಇನೋವಾ ಕ್ರಿಸ್ಟಾ ಮತ್ತು ಫಾರ್ಚುನರ್ ಕಾರುಗಳನ್ನು ಉತ್ಪಾದಿಸಲಾಗುತ್ತಿದೆ.

ಮಾರುತಿ ಸುಜುಕಿ ವಿಟಾರಾ ಬ್ರಿಝಾ ಉತ್ಪಾದಿಸಲಿದೆ ಟೊಯೊಟಾ..!

2010 ರಲ್ಲಿ ಶುರು ಮಾಡಿದ ಎರಡನೇ ಘಟಕದಲ್ಲಿ ಪ್ರತಿ ವರ್ಷ 2,10,000 ಕಾರುಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದರೂ, ಅದನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತಿಲ್ಲವಾದ ಕಾರಣ ಮಾರುತಿ ಸುಜುಕಿಯು ತನ್ನ ವಿಟಾರಾ ಬ್ರಿಝಾ ಉತ್ಪಾದನೆಯನ್ನು ಟೊಯೊಟಾದ ಎರಡನೇ ಉತ್ಪಾದನಾ ಘಟಕದಲ್ಲಿ ಮಾಡಲು ತೀರ್ಮಾನಿಸಿದೆ.

ಮಾರುತಿ ಸುಜುಕಿ ವಿಟಾರಾ ಬ್ರಿಝಾ ಉತ್ಪಾದಿಸಲಿದೆ ಟೊಯೊಟಾ..!

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಟೊಯೊಟಾ ಮತ್ತು ಮಾರುತಿ ಸುಜುಕಿ ಎರಡೂ ಕಂಪನಿಗಳು ಆಟೋಮೊಬೈಲ್ ಇಂಡಸ್ಟ್ರಿಯ ದೊಡ್ಡ ಕಂಪನಿಗಳಾಗಿದ್ದು, ಎರಡೂ ಕಂಪನಿಗಳೂ ಅದ್ಭುತ ಕಾರುಗಳನ್ನು ಉತ್ಪಾದಿಸುತ್ತವೆ. ಹೊಸ ಒಪ್ಪಂದದಿಂದ ಎರಡೂ ಕಂಪನಿಗಳು ಒಬ್ಬರಿಗೊಬ್ಬರು ಸಾಮರ್ಥ್ಯವನ್ನು ಅರಿಯಲು ಸಹಕಾರಿಯಾಗುತ್ತದೆ. ಟೊಯೊಟಾದ ಅಡಿಯಲ್ಲಿ ವಿಟಾರಾ ಬ್ರಿಝಾದ ಕಾರು ಬಿಡುಗಡೆಯಾದ ನಂತರದಲ್ಲಿ ಟೊಯೊಟಾ, ತನ್ನ ಬೆಂಗಳೂರು ಘಟಕದಲ್ಲಿ ಮಾರುತಿ ಸುಜುಕಿ ಮತ್ತು ಟೊಯೊಟಾ ಲೋಗೋದಡಿಯಲ್ಲಿ ಎಸ್‍ಯುವಿ ವಾಹನಗಳನ್ನು ಉತ್ಪಾದಿಸಲಿದೆ.

Most Read Articles

Kannada
English summary
Toyota To Manufacture The Vitara Brezza For Maruti Suzuki At Bangalore Plant - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X