Just In
- 9 hrs ago
31 ಟನ್ ಸರಕು ಸಾಗಾಣಿಕೆ ಸಾಮರ್ಥ್ಯದ ಟಾಟಾ ಹೊಸ ಸಿಗ್ನಾ 3118.ಟಿ ಟ್ರಕ್ ಬಿಡುಗಡೆ
- 10 hrs ago
ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಫೋಕ್ಸ್ವ್ಯಾಗನ್ ಟಿಗ್ವಾನ್ ಎಸ್ಯುವಿ
- 11 hrs ago
ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ 2021ರ ರೆನಾಲ್ಟ್ ಟ್ರೈಬರ್ ಮಿನಿ ಎಂಪಿವಿ
- 11 hrs ago
ಮಾರ್ಚ್ ತಿಂಗಳಿನಲ್ಲಿ ದಟ್ಸನ್ ಕಾರುಗಳ ಮೇಲೆ ಲಭ್ಯವಿರುವ ರಿಯಾಯಿತಿಗಳಿವು
Don't Miss!
- Sports
ಐಪಿಎಲ್ ಕುರಿತ ಹೇಳಿಕೆಗೆ ಕ್ಷಮೆಯಾಚಿಸಿದ ವೇಗಿ ಡೇಲ್ ಸ್ಟೇನ್
- News
ಕೋವ್ಯಾಕ್ಸಿನ್ ಕೊರೊನಾ ಲಸಿಕೆ ಶೇ.81ರಷ್ಟು ಪರಿಣಾಮಕಾರಿ
- Lifestyle
ದಿನ ಭವಿಷ್ಯ: ಗುರುವಾರದ ರಾಶಿಫಲ ಹೇಗಿದೆ ನೋಡಿ
- Education
Vijayapura District Court Recruitment 2021: ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿ 2 ಬೆರಳಚ್ಚು-ನಕಲುಗಾರ ಹುದ್ದೆಗಳ ನೇಮಕಾತಿ
- Movies
ಬಿಗ್ಬಾಸ್: ಕೊಡಲಿ ಬಳಸಿ ನಾಮಿನೇಷನ್ ಕತ್ತಿಯಿಂದ ಬಚಾವಾದ ಗೀತಾ ಭಟ್
- Finance
ಚಿನ್ನದ ಬೆಲೆ ಕೊಂಚ ಇಳಿಕೆ: ಮಾರ್ಚ್ 03ರ ಬೆಲೆ ಎಷ್ಟಿದೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಲುಕ್‍ನಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ 2020ರ ಮಹೀಂದ್ರಾ ಬೊಲೆರೊ
ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಮಾಡಿಫೈಡ್ 2020ರ ಬೊಲೆರೊ ಕಾನ್ಸಪ್ಟ್ ರೆಂಡರಿಂಗ್ ವೀಡಿಯೋವೊಂದನ್ನು ಯುಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಲಾಗಿದೆ. ಬೊಲೆರೊ ಮಹೀಂದ್ರಾ ಕಂಪನಿಯ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ.

ಹಲವು ವರ್ಷಗಳಿಂದ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಎಸ್‍ಯುವಿಗಳಲ್ಲಿ ಒಂದಾಗಿದೆ. ಮಹೀಂದ್ರಾ ಬೊಲೆರೊ ಎಸ್‍ಯುವಿಯನ್ನು ಮೊದಲ ಬಾರಿಗೆ 2000ದಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಾಗಿತ್ತು. ಆಗಿನಿಂದ ಹಲವು ನವೀಕರಣಗಳನ್ನು ನಡೆಸಲಾಗಿದೆ. ಈಗ ವಿನ್ಯಾಸದಲ್ಲಿ ಪ್ರಮುಖ ಮಾರ್ಪಾಡುಗಳನ್ನು ನಡೆಸಿದ್ದಾರೆ. 2020ರ ಮಹೀಂದ್ರಾ ಬೊಲೆರೊ ಕಾನ್ಸಪ್ಟ್ ರೆಂಡರಿಂಗ್ ವೀಡಿಯೋವನ್ನು ಯುಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಲಾಗಿದೆ.

ಈ ವೀಡಿಯೋದಲ್ಲಿ 2020ರ ಹೊಸ ಬೊಲೆರೊದ ಕೆಲವು ಮಾಹಿತಿಗಳು ಬಹಿರಂಗವಾಗಿದೆ. ವೀಡಿಯೋದಲ್ಲಿ ಬಹಿರಂಗವಾದ ಬೊಲೆರೊ ಎಸ್‍ಯುವಿಯು ಬಾಕ್ಸೀ ವಿನ್ಯಾಸವನ್ನು ಹೊಂದಿದೆ. ಈ ಎಸ್‍ಯುವಿಯು ಮುಂಭಾಗವು ಮೆಷ್ ವಿನ್ಯಾಸ ಮತ್ತು ಹೊರಿಜೊಡಾಲ್ ಲೈನ್ ಜೊತೆಯಲ್ಲಿ ಏಳು ಸ್ಲಾಟ್ ಫ್ರಂಟ್ ಗ್ರಿಲ್ ಅನ್ನು ಹೊಂದಿದೆ.

ಈ ಎಸ್‍ಯುವಿಯಲ್ಲಿ ಎಲ್‍ಇಡಿ ಡಿಆರ್‍ಎಲ್‍ಗಳೊಂದಿಗೆ ಗ್ರಿಲ್ ಅನ್ನು ಜೋಡಿಸಲಾಗಿದೆ. ಮುಂಭಾಗದ ಗ್ರಿಲ್‍ನಲ್ಲಿ ಬೊಲೆರೊ ಎಂದು ಆಕರ್ಷಕವಾಗಿ ಹೆಸರು ಬರೆಯಲಾಗಿದ್ದು, ಆದರೆ ಮಹೀಂದ್ರಾ ಕಂಪನಿಯ ಲೋಗೊ ಮುಂಭಾಗದಲ್ಲಿ ಕಂಡುಬಂದಿಲ್ಲ.

ವೀಡಿಯೋದಲ್ಲಿ ಬೊಲೆರೊ ಬ್ಲ್ಯಾಕ್ ಬಂಪರ್ ಅನ್ನು ಹೊಂದಿದೆ. ಹೊಸ ಬೊಲೆರೊದಲ್ಲಿ ಆಫ್-ರೋಡ್ ಟಯರ್‍ಗಳ ಜೊತೆಗೆ ಹೊಸ ಅಲಾಯ್ ವ್ಹೀಲ್‍ಗಳನ್ನು ಅಳವಡಿಸಲಾಗಿದೆ. ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬೊಲೆರೊ ಎಸ್‍ಯುವಿನಲ್ಲಿ 1.5 ಲೀಟರ್ ಮೂರು ಸಿಲಿಂಡರ್ ಬಿಎಸ್-4 ಎಂಜಿನ್ ಅನ್ನು ಹೊಂದಿದೆ.

ಈ ಎಂಜಿನ್ 70 ಬಿಹೆಚ್‍ಪಿ ಪವರ್ ಮತ್ತು 195 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಇನ್ನೂ 2.0 ಲೀಟರ್ ನಾಲ್ಕು ಡೀಸೆಲ್ ಎಂಜಿನ್ ಅನ್ನು ಹೊಂದಿದ.

ಈ ಎಂಜಿನ್ 63 ಬಿಹೆಚ್‍ಪಿ ಪವರ್ ಮತ್ತು 180 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೊಸ ಬೊಲೆರೊ ಎಸ್‍ಯುವಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಎಬಿಎಸ್ ಜೊತೆ ಇಬಿಡಿ, ಡ್ಯುಯಲ್ ಏರ್‌ಬ್ಯಾಗ್, ಹೈ ಸ್ಪೀಡ್ ಅಲರ್ಟ್, ರೇರ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ರಿಮೈಂಡರ್ ಅಲರ್ಟ್‍ಗಳನ್ನು ಅಳವಡಿಸುವ ಸಾಧ್ಯತೆಗಳಿದೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!
ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಜನಪ್ರಿಯ ಎಸ್‍ಯುವಿಯಾದ ಬೊಲೆರೊ ಹೆಚ್ಚು ಮಾರಾಟವಾಗುವ ಎಸ್‍ಯುವಿಗಳಲ್ಲಿ ಒಂದಾಗಿದೆ. ಶೀಘ್ರದಲ್ಲೇ ಬೊಲೆರೊ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಿದೆ.

2.5 ಲೀಟರ್ ಡೀಸೆಲ್ ಎಂಜಿನ್ ಅನ್ನು ನವೀಕರಿಸುವುದರ ಬಗ್ಗೆ ಮಾಹಿತಿ ಇಲ್ಲ. ಹೊಸ ಬೊಲೆರೊ ಎಸ್‍ಯುವಿಯ ವಿನ್ಯಾಸವನ್ನು ಬದಲಾಯಿಸಿ ಆಕರ್ಷಕ ಲುಕ್ ಅನ್ನು ನೀಡಿದೆ. ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬೊಲೆರೊ ಎಸ್‍ಯುವಿಯ ಬೆಲೆ ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.7.49 ಲಕ್ಷದಿಂದ 9.08 ಲಕ್ಷಗಳಾಗಿದೆ.

ಬಿಎಸ್-6 ಮಾಲಿನ್ಯ ನಿಯಮ ಮುಂದಿನ ವರ್ಷದ ಏಪ್ರಿಲ್ ತಿಂಗಳಲ್ಲಿ ಜಾರಿಯಾಗಿರುವುದರಿಂದ ಬೊಲೆರೊ ಎಸ್‍ಯುವಿಯನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಸಾರವಾಗಿ ನವೀಕರಿಸುತ್ತದೆ. ಇದರಿಂದ 2020ರ ಬೊಲೆರೊ ಬೆಲೆಯು ಪ್ರಸ್ತುತ ಬೆಲೆಗಿಂತ ತುಸು ಹೆಚ್ಚಾಗಿರಲಿದೆ.
Source: SRK Designs/YouTube