ಬೆಂಝ್ ಕಾರು ಖರೀದಿಸಿದ ವಜ್ರಕಾಯ ಬೆಡಗಿ
ಕನ್ನಡತಿ ನಭಾ ನಟೇಶ್‍ರವರು ನಟಿಸಿದ್ದ ಐಸ್ಮಾರ್ಟ್ ಶಂಕರ್ ತೆಲುಗು ಚಿತ್ರವು ಯಶಸ್ವಿಯಾಗಿತ್ತು. ಪುರಿ ಜಗನ್ನಾಥ್ ನಿರ್ದೇಶನದ ಈ ಚಿತ್ರವು ಆಂಧ್ರ ಹಾಗೂ ತೆಲಂಗಾಣದಲ್ಲಿ ಭಾರೀ ಯಶಸ್ಸನ್ನು ಕಂಡಿತು. ಈ ಚಿತ್ರದಲ್ಲಿ ನಭಾರವರು ಚಾಂದಿನಿ ಎಂಬ ಪಾತ್ರದಲ್ಲಿ ನಟಿಸಿದ್ದರು.

ಈ ಚಿತ್ರದಲ್ಲಿ ಬರುವ ಜಿಂದಾಬಾದ್ ಜಿಂದಾಬಾದ್ ಹಾಗೂ ಧಿಮಾಕ್ ಖರಾಬ್ ಹಾಡುಗಳಲ್ಲಿ ಡ್ಯಾನ್ಸ್ ಮಾಡಿ ಜನರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದರು. ಇದರ ಜೊತೆಗೆ ನಭಾ ನಟೇಶ್‍ರವರು ತಮ್ಮ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಹತ್ತು ಲಕ್ಷ ಫಾಲೋವರ್‍ಗಳನ್ನು ಹೊಂದಿದ್ದಾರೆ.

ಅಂದ ಹಾಗೆ ನಭಾ ನಟೇಶ್‍ರವರು ಶಿವರಾಜ್‍ಕುಮಾರ್ ನಟನೆಯ ವಜ್ರಕಾಯ ಚಿತ್ರದಲ್ಲಿ ನಟಿಸುವ ಮೂಲಕ ತಮ್ಮ ಸಿನಿ ಬದುಕನ್ನು ಆರಂಭಿಸಿದ್ದರು. ಇದಾದ ನಂತರ ತೆಲುಗು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ.

ಈಗ ನಭಾ ನಟೇಶ್‍ರವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇತ್ತೀಚಿಗೆ ನಭಾರವರು ದುಬಾರಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ್ದಾರೆ. ನಭಾರವರು ತಾವು ಖರೀದಿಸಿರುವ ಕೆಂಪು ಬಣ್ಣದ ಬೆಂಝ್ ಕಾರಿನ ಮುಂದೆ ಪೋಸ್ ನೀಡಿ ಆ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

ನಭಾರವರು ಹತ್ತು ಲಕ್ಷ ಫಾಲೋವರ್‍ಗಳ ಬಗ್ಗೆ ಹಾಗೂ ಹೊಸ ಕಾರಿನ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟಿನಲ್ಲಿ - ಒಂದು ಮಿಲಿಯನ್ ಇನ್ಸ್ಟಾಗ್ರಾಂ ಫಾಲೋವರ್‍ಗಳಿಗೆ ಕೃತಜ್ಞತೆಗಳು. ಮಾದಕ ಸವಾರಿಗಾಗಿ ಹೊಸ ಕಾರ್ ಅನ್ನು ಖರೀದಿಸಿದ್ದೇನೆ ಕೃತಜ್ಞತೆಗಳು ಎಂದು ಹೇಳಿದ್ದಾರೆ.

ನಭಾ ನಟೇಶ್‍ರವರು ಖರೀದಿಸಿರುವ ಬೆಂಝ್ ಕಾರಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.40 ಲಕ್ಷಗಳಾಗುತ್ತದೆ. ಈ ಕಾರಿನಲ್ಲಿ ಇಬಿಡಿ ಹೊಂದಿರುವ ಯಾಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್), ಎಲೆಕ್ಟ್ರಾನಿಕ್ ಸ್ಟಾಬಿಲಿಟಿ ಪ್ರೋಗ್ರಾಂಗಳಿವೆ.

ಇದರ ಜೊತೆಗೆ ಡ್ರೈವರ್, ಪ್ಯಾಸೆಂಜರ್‍ಗಳಿಗಾಗಿ ಏರ್‍ಬ್ಯಾಗ್, ಬೂಟ್ ಒಪನರ್ ಹೊಂದಿರುವ ರಿಮೋಟ್ ಸೆಂಟ್ರಲ್ ಲಾಕಿಂಗ್, ಪನೊರಾಮಿಕ್ ಸನ್‍ರೂಫ್ ಹಾಗೂ ಎಲ್‍ಸಿಡಿ ಡಿಸ್‍ಪ್ಲೇ ಇನ್ಫೋಟೆನ್‍ಮೆಂಟ್ ಸಿಸ್ಟಂಗಳಿವೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಈ ಕಾರಿನಲ್ಲಿ ಬಿ180 ಬ್ಲೂ ಎಫಿಶಿಯನ್ಸಿ ಡಿಒಹೆಚ್‍ಸಿ ವಾಲ್ವ್ ಟ್ರೇನ್‍ನ 2143 ಸಿಸಿಯ, 4 ಸಿಲಿಂಡರಿನ ಇನ್‍ಲೈನ್, 4 ವಾಲ್ವ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 3,600 ಆರ್‍ಪಿಎಂನಲ್ಲಿ 134 ಬಿಹೆಚ್‍ಪಿ ಪವರ್ ಹಾಗೂ 1,400 ಆರ್‍ಪಿಎಂನಲ್ಲಿ 300 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.
MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಈ ಎಂಜಿನ್‍ನಲ್ಲಿ 7 ಸ್ಪೀಡಿನ ಆಟೋಮ್ಯಾಟಿಕ್ ಗೇರ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಈ ಕಾರು ಎಆರ್‍ಎಐ ಪ್ರಮಾಣಪತ್ರದಂತೆ ಪ್ರತಿ ಲೀಟರ್ ಡೀಸೆಲಿಗೆ 18.5 ಕಿ.ಮೀ ಮೈಲೇಜ್ ನೀಡುತ್ತದೆ. ಇನ್ನು ಈ ಕಾರಿನ ಗಾತ್ರದ ಬಗ್ಗೆ ಹೇಳುವುದಾದರೆ, ಈ ಕಾರು 4,299 ಎಂಎಂ ಉದ್ದ, 1780 ಎಂಎಂ ಅಗಲ ಹಾಗೂ 1433 ಎಂಎಂ ಎತ್ತರವನ್ನು ಹೊಂದಿದೆ.
MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಈ ಕಾರಿನಲ್ಲಿರುವ ವ್ಹೀಲ್‍ಬೇಸ್‍ನ ಗಾತ್ರವು 2699 ಎಂಎಂ ಆಗಿದೆ. 50 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಹೊಂದಿರುವ ಈ ಕಾರು 341 ಲೀಟರ್‍ನಷ್ಟು ಬೂಟ್ ಸ್ಪೇಸ್ ಅನ್ನು ಹೊಂದಿದೆ. ಈ ಕಾರಿನಲ್ಲಿ ಅಲಾಯ್ ವ್ಹೀಲ್‍ಗಳನ್ನು ಅಳವಡಿಸಲಾಗಿದೆ. ಮುಂಭಾಗ ಹಾಗೂ ಹಿಂಭಾಗದಲ್ಲಿ ಒಂದೇ ರೀತಿಯ 205 / 55 ಆರ್16 ಟಯರ್‍ಗಳನ್ನು ಅಳವಡಿಸಲಾಗಿದೆ.


Click it and Unblock the Notifications








