ಕ್ರಾಶ್ ಟೆಸ್ಟ್ ನಲ್ಲಿ 5 ಸ್ಟಾರ್ ಪಡೆದ ಬಿಎಂಡಬ್ಲ್ಯು 3 ಸೀರಿಸ್ ಕಾರು
ಪ್ರತಿಯೊಬ್ಬರಿಗೂ ಪ್ರಯಾಣವೆಂದರೆ ಎಲ್ಲಿಲ್ಲದ ಅತ್ಯುತ್ಸಾಹ. ಪ್ರಯಾಣದ ಜೊತೆಗೆ ಸುರಕ್ಷತೆಗೂ ಆದ್ಯತೆ ನೀಡುತ್ತಾರೆ. ಕೆಲವು ಕಾರುಗಳಲ್ಲಿ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತದೆಯಾದರೂ ಅಪಘಾತವಾದಾಗಲೇ ಅವುಗಳ ನಿಜವಾದ ಬಂಡವಾಳ ಬಯಲಾಗುವುದು.

ಯುರೋ ನ್ಯೂ ಕಾರ್ ಅಸೆಸ್‍ಮೆಂಟ್ ಪ್ರೊಗ್ರಾಂ (ಎನ್‍ಎಸಿಎಪಿ) ಕಾರುಗಳ ಸುರಕ್ಷತೆಯನ್ನು ಪರೀಕ್ಷಿಸಿ ಅವುಗಳಿಗೆ ಪ್ರಮಾಣಪತ್ರವನ್ನು ನೀಡುತ್ತದೆ. ಇದರ ಜೊತೆಗೆ ಈ ಸಂಸ್ಥೆಯು ಕಾರುಗಳ ಪೂರ್ಣ ಗುಣಮಟ್ಟವನ್ನು ಸಹ ಪರೀಕ್ಷಿಸುತ್ತದೆ. ಎನ್‍ಸಿಎಪಿ, ಜೀಪ್ ಚಿರೊಕೀ, ಪಿಗೆಟ್ 208 ಕಾರುಗಳ ಜೊತೆಗೆ ಬಿಎಂಡಬ್ಲ್ಯು 1 ಸೀರಿಸ್ ಹಾಗೂ 3 ಸೀರಿಸ್ ಕಾರುಗಳ ಕ್ರಾಶ್ ಟೆಸ್ಟ್ ನಡೆಸಿತ್ತು.

ಈಗ ಇವುಗಳ ಫಲಿತಾಂಶವನ್ನು ಪ್ರಕಟಿಸಿದೆ. ಇದರಲ್ಲಿ, ಬಿಎಂಡಬ್ಲ್ಯು ಕಾರುಗಳು 5 ಸ್ಟಾರ್ ರೇಟಿಂಗ್ ಪಡೆದರೆ, ಜೀಪ್ ಚಿರೊಕೀ ಹಾಗೂ ಪಿಗೆಟ್ 208 ಕಾರುಗಳು 4 ಸ್ಟಾರ್ ಪಡೆದಿವೆ. ಎನ್‌ಸಿಎಪಿಯು ವಯಸ್ಕರಿಗೆ, ಮಕ್ಕಳಿಗೆ, ಪಾದಚಾರಿಗಳಿಗೆ ಹಾಗೂ ಸೇಫ್ಟಿ ಅಸಿಸ್ಟ್ ಎಂಬ ನಾಲ್ಕು ರೀತಿಯ ಟೆಸ್ಟ್ ಗಳನ್ನು ನಡೆಸುತ್ತದೆ.

ಈ ನಾಲ್ಕು ವಿಭಾಗದ ಟೆಸ್ಟ್ ಗಳಲ್ಲಿ 2019ರ ಬಿಎಂಡಬ್ಲ್ಯು 3 ಸೀರಿಸ್ ಕಾರು ಕ್ರಮವಾಗಿ 97%, 87%, 87% ಹಾಗೂ 76% ರೇಟಿಂಗ್ ಪಡೆದಿದೆ. ಈ 5 ಸ್ಟಾರ್ ರೇಟಿಂಗ್ ಅನ್ನು ಬಿಎಂಡಬ್ಲ್ಯು 3 ಸೀರಿಸ್‍ನ 5 ಡೋರ್ ಹ್ಯಾಚ್‌ಬ್ಯಾಕ್ ಹಾಗೂ 4 ಡೋರ್ ಸಲೂನ್ ಕಾರುಗಳಿಗಾಗಿ ನೀಡಲಾಗಿದೆ.

ಇದರಲ್ಲಿ 2.0 ಲೀಟರ್ ಡೀಸೆಲ್ ಹಾಗೂ 2.0 ಲೀಟರ್ ಪೆಟ್ರೋಲ್ ಎಂಜಿನ್ ಕಾರುಗಳು ಸೇರಿವೆ. ಇವುಗಳಲ್ಲಿ 316 ಡಿ, 318 ಡಿ, 320 ಡಿ, 318 ಐ, 320 ಐ, 330 ಐ, 320 ಎಕ್ಸ್‌ಡಿ , 330ಎಕ್ಸ್ ಐ ಹಾಗೂ 320ಎಕ್ಸ್ ಮಾದರಿಯ ಕಾರುಗಳಿವೆ.

ವಯಸ್ಕರ ಸುರಕ್ಷತೆಯ ಬಗ್ಗೆ ಹೇಳುವುದಾದರೆ, ಬಿಎಂಡಬ್ಲ್ಯು 3 ಸರಣಿಯು ಫ್ರಂಟಲ್ ಆಫ್‌ಸೆಟ್ ಡಿಫಾರ್ಮಬಲ್ ಬ್ಯಾರಿಯರ್‌ನಲ್ಲಿ 8ಕ್ಕೆ 7.9 ಅಂಕ ಹಾಗೂ ಮುಂಭಾಗದ ಅಗಲಕ್ಕೆ 8ಕ್ಕೆ 7.6 ಅಂಕಗಳನ್ನು ಪಡೆದುಕೊಂಡಿದೆ. ಹಿಂಭಾಗದಲ್ಲಿರುವ ವಿಪ್ಲ್ಯಾಷ್‍ಗೆ 2ಕ್ಕೆ 1.6 ಪಾಯಿಂಟ್‍ಗಳನ್ನು ಪಡೆದಿದೆ.

ಮಕ್ಕಳ ಸುರಕ್ಷತೆಯಲ್ಲಿ, ಈ ಟೆಸ್ಟ್ ಅನ್ನು 6ರಿಂದ 10 ವರ್ಷದ ಮಕ್ಕಳ ವಿಭಾಗದಲ್ಲಿ ನಡೆಸಲಾಯಿತು. ಇದರಲ್ಲಿ 24ಕ್ಕೆ 23.8 ಅಂಕಗಳನ್ನು ಪಡೆದಿದೆ. ಸುರಕ್ಷತಾ ಫೀಚರ್‍ಗಳಲ್ಲಿ 13ಕ್ಕೆ 7 ಅಂಕಗಳನ್ನು ಪಡೆದಿದೆ. ಪಾದಚಾರಿಗಳ ಟೆಸ್ಟ್ ನಲ್ಲಿ 3 ಸೀರಿಸ್ ಕಾರು 36ಕ್ಕೆ 31.6 ಅಂಕಗಳನ್ನು ಪಡೆದಿದೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಭಾರತದಲ್ಲಿ, ಬಿಎಂಡಬ್ಲ್ಯು 3 ಸೀರೀಸ್‍ನ 320 ಡಿ ಮಾದರಿಯ ಸ್ಪೋರ್ಟ್ ಹಾಗೂ ಐಷಾರಾಮಿ ಕಾರುಗಳನ್ನು ಹಾಗೂ 330ಐ ಎಂ ಮಾದರಿಯ ಸ್ಪೋರ್ಟ್ ವೇರಿಯಂಟ್‍ಗಳನ್ನು ಮಾರಾಟ ಮಾಡಲಾಗುತ್ತಿದೆ.
MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಈ ಕಾರುಗಳ ಬೆಲೆಯು ರೂ.41.40 ಲಕ್ಷಗಳಿಂದ - ರೂ.47.90 ಲಕ್ಷಗಳಾಗಿದೆ. ಈ ಕಾರುಗಳನ್ನು ಸಿಎಲ್‍ಎಆರ್ ಆರ್ಕಿಟೆಕ್ಚರ್ ಆಧಾರದ ಮೇಲೆ ನಿರ್ಮಿಸಿರುವುದರಿಂದ ಈ ಕಾರುಗಳು ಹೆಚ್ಚಿನ ಗಾತ್ರವನ್ನು ಹೊಂದಿವೆ.
MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!
ಈ ಕಾರುಗಳು ಎಲ್ಇಡಿ ಹೆಡ್ ಲ್ಯಾಂಪ್, ಎಲ್ ಶೇಪಿನ ಡಿಆರ್‍ಎಲ್ ಹಾಗೂ ಎಲ್‍ಇಡಿ ಟೇಲ್ ಲ್ಯಾಂಪ್‍ಗಳನ್ನು ಹೊಂದಿವೆ. ಇಂಟಿರಿಯರ್‍ನಲ್ಲಿ 8.8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅಳವಡಿಸಲಾಗಿದೆ.

ಬಿಎಂಡಬ್ಲ್ಯು 3 ಸೀರೀಸ್ 330 ಐ ಎಂ ಸ್ಪೋರ್ಟ್ ಕಾರಿನಲ್ಲಿ 2.0 ಲೀಟರ್, 4 ಸಿಲಿಂಡರ್, ಟರ್ಬೋಚಾರ್ಜ್ಡ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 256 ಬಿಹೆಚ್‍ಪಿ ಪವರ್ ಹಾಗೂ 400 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

320 ಡಿ ಕಾರಿನಲ್ಲಿ ಅಳವಡಿಸಲಾಗಿರುವ 2.0 ಲೀಟರ್, 4 ಸಿಲಿಂಡರ್, ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್, 190 ಬಿಹೆಚ್‍ಪಿ ಪವರ್ ಹಾಗೂ 400 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎರಡೂ ಎಂಜಿನ್‍ಗಳು 8 ಸ್ಪೀಡಿನ ಸ್ಟೆಪ್‍ಟ್ರಾನಿಕ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿವೆ.


Click it and Unblock the Notifications








