ಜುಲೈ 25ರಂದು ಬಿ‍ಎಂ‍‍ಡಬ್ಲ್ಯು 7 ಸೀರಿಸ್ ಕಾರು ಬಿಡುಗಡೆ ಖಚಿತ

ಬಿಎಂಡಬ್ಲ್ಯು ಕಂಪನಿಯು, ತನ್ನ ಇತ್ತೀಚಿನ 7 ಸೀರಿಸ್‍‍ನ ನವೀಕೃತ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದನ್ನು ಖಚಿತಪಡಿಸಿದೆ. ಜುಲೈ 25 ರಂದು ಬಿಡುಗಡೆಯಾಗಲಿರುವ ಈ ಎಕ್ಸ್7 ಎಸ್‌ಯುವಿ ಕಾರಿನಲ್ಲಿ ಏಳು ಸೀಟುಗಳಿರಲಿವೆ. 2019 ರ ಬಿಎಂಡಬ್ಲ್ಯು 7 ಸೀರಿಸ್ ಕಾರ್ ಅನ್ನು ಈ ವರ್ಷದ ಆರಂಭದಲ್ಲಿ ಜಾಗತಿಕವಾಗಿ ಅನಾವರಣಗೊಳಿಸಲಾಗಿತ್ತು. ಈ ಕಾರಿನಲ್ಲಿ ಡಿಸೈನ್ ಹಾಗೂ ಮೆಕಾನಿಕಲ್ ಅಂಶಗಳನ್ನು ಸೇರಿದಂತೆ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ.

ಜುಲೈ 25ರಂದು ಬಿ‍ಎಂ‍‍ಡಬ್ಲ್ಯು 7 ಸೀರಿಸ್ ಕಾರು ಬಿಡುಗಡೆ ಖಚಿತ

ಪ್ರಪಂಚಾದ್ಯಂತ, ಈ ಸೆಡಾನ್ ಅನ್ನು ಸ್ಟಾಂಡರ್ಡ್ ಆಗಿ ಅಥವಾ ಉದ್ದವಾದ ವೀಲ್‌ಬೇಸ್ ಫಾರ್ಮಾಟ್‍‍ನಲ್ಲಿ ಮಾರಾಟ ಮಾಡಲಾಗುವುದು. ಆದರೆ, ಭಾರತದಲ್ಲಿ ವ್ಹೀಲ್‍‍ಬೇಸ್ ಮಾದರಿಗಳನ್ನು ಮಾತ್ರ ಮಾರಾಟ ಮಾಡಲಾಗುವುದು. ಇನ್ನು ವಿನ್ಯಾಸದ ಬಗ್ಗೆ ಹೇಳುವುದಾದರೆ, ಹೊಸ ಬಿಎಂಡಬ್ಲ್ಯು 7 ಸೀರಿಸ್ ಕಾರಿನಲ್ಲಿ ಎಕ್ಸ್7 ಎಸ್‌ಯುವಿಯಲ್ಲಿದ್ದಂತಹ ಸಿಗ್ನೇಚರ್ ಗ್ರಿಲ್‌ ಇರಲಿದೆ. ಹೊಸ ಕಾರಿನಲ್ಲಿರುವ ಫ್ರಂಟ್ ಗ್ರಿಲ್ ಹಿಂದಿನ ತಲೆಮಾರಿನ ಮಾದರಿಗಿಂತ 40%ನಷ್ಟು ದೊಡ್ಡ ಗಾತ್ರವನ್ನು ಹೊಂದಿರಲಿದೆ.

ಜುಲೈ 25ರಂದು ಬಿ‍ಎಂ‍‍ಡಬ್ಲ್ಯು 7 ಸೀರಿಸ್ ಕಾರು ಬಿಡುಗಡೆ ಖಚಿತ

ಗ್ರಿಲ್‍‍ನ ಎರಡೂ ಬದಿಯಲ್ಲಿಇಂಟಿಗ್ರೇಟೆಡ್ ಎಲ್ಇಡಿ ಡಿಆರ್‍ಎಲ್‍‍ಗಳಿದ್ದು, ನಯವಾಗಿರುವ, ಹೊಸದಾದ ವಿನ್ಯಾಸ ಹೊಂದಿರುವ ಎಲ್ಇಡಿ ಹೆಡ್ ಲ್ಯಾಂಪ್‍‍ಗಳಿವೆ. ಬಿಎಂಡಬ್ಲ್ಯು ಬಾನೆಟ್ ಹಾಗೂ ಮುಂಭಾಗದಲ್ಲಿರುವ ಬಂಪರ್ ಅನ್ನು ನವೀಕರಿಸಿದೆ. ಇದರಿಂದಾಗಿ ಕಾರು ಹೆಚ್ಚಿನ ಆಕ್ರಮಣಕಾರಿ ಲುಕ್ ಪಡೆಯಲಿದೆ. 2019 ರ ಬಿಎಂಡಬ್ಲ್ಯು 7 ಸೀರಿಸ್ ಕಾರಿನ ಸೈಡ್ ಪ್ರೊಫೈಲ್ ಸಹ ಆಕರ್ಷಕವಾಗಿರಲಿದೆ. ಸೆಡಾನ್‍‍ನ ಉದ್ದಕ್ಕೂ ರೇಖೆ ಇರಲಿದೆ. ಬಾಗಿಲುಗಳ ಕೆಳಭಾಗದಲ್ಲಿ ಅಳವಡಿಸಲಾಗಿರುವ ಕ್ರೋಮ್ ಸ್ಟ್ರಿಪ್‍‍ಗಳಿಂದಾಗಿ, ಈ ಐಷಾರಾಮಿ ಸೆಡಾನ್‌ ಹೆಚ್ಚುವರಿ ಪ್ರೀಮಿಯಂ ಲುಕ್ ಹೊಂದಲಿದೆ.

ಜುಲೈ 25ರಂದು ಬಿ‍ಎಂ‍‍ಡಬ್ಲ್ಯು 7 ಸೀರಿಸ್ ಕಾರು ಬಿಡುಗಡೆ ಖಚಿತ

ಕಾರಿನ ಹಿಂಭಾಗದಲ್ಲಿಯೂ ಸಹ ಐಷಾರಾಮಿ ಹಾಗೂ ಪ್ರೀಮಿಯಂ ಥೀಮ್‌ ನೀಡಲಾಗಿದೆ. ಈ ಕಾರಿನಲ್ಲಿ ಸಿಂಗಲ್ ಎಲ್‍ಇಡಿ ಸ್ಟ್ರಿಪ್‍‍ಗಳ ಜೊತೆಗೆ ಕನೆಕ್ಟ್ ಆಗಿರುವ ಎಲ್‍ಇ‍‍ಡಿ ಟೇಲ್ ಲೈಟ್‍‍ಗಳಿದ್ದು, ಬೂಟ್ ಲಿಡ್‍‍ನ ಉದ್ದಗಲಕ್ಕೂ ಚಲಿಸುತ್ತವೆ. ಹಿಂದಿನ ತಲೆಮಾರಿನ 7 ಸೀರಿಸ್‍‍ನ ಕಾರುಗಳಲ್ಲಿದ್ದಂತಹ, ಐಷಾರಾಮಿ ಫೀಚರ್‍‍ಗಳನ್ನು ಹಾಗೂ ಎಕ್ವಿಪ್‍‍ಮೆಂಟ್‍‍ಗಳನ್ನು ಹೊಂದಿದೆ. ಅವುಗಳೆಂದರೆ 2-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, 7.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ.

ಜುಲೈ 25ರಂದು ಬಿ‍ಎಂ‍‍ಡಬ್ಲ್ಯು 7 ಸೀರಿಸ್ ಕಾರು ಬಿಡುಗಡೆ ಖಚಿತ

ಹಿಂಬದಿಯ ಸೀಟಿನ ಪ್ರಯಾಣಿಕರ ಮನರಂಜನೆಗಾಗಿ 10 ಇಂಚಿನ ಹೈ-ಡೆಫಿನಿಷನ್ ಸ್ಕ್ರೀನ್‍‍ಗಳನ್ನು ನೀಡಲಾಗಿದೆ. ಪ್ರೀಮಿಯಂ ನಾಪಾ ಲೆದರ್ ಸೀಟ್‍‍ಗಳನ್ನು ಅಳವಡಿಸಲಾಗಿದೆ. 2019 ರ ಬಿಎಂಡಬ್ಲ್ಯು 7 ಸೀರಿಸ್ ಕಾರಿನಲ್ಲಿ, ಹಿಂದಿನ ಕಾರುಗಳಲ್ಲಿದ್ದಂತಹ ಇನ್-ಲೈನ್ ಸಿಕ್ಸ್-ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್‍‍ನಿಂದಾಗಿ ಎಕ್ಸ್ 7 ಎಸ್‌ಯುವಿಯ ಎಕ್ಸ್‌ಡ್ರೈವ್ 40 ಐ ಮತ್ತು ಎಕ್ಸ್‌ಡ್ರೈವ್ 30 ಡಿ ಕಾರುಗಳು ಪವರ್ ಪಡೆಯುತ್ತವೆ. ಈ ಮಾದರಿಗಳನ್ನು ಸಹ 7 ಸೀರಿಸ್ ಕಾರಿನ ಜೊತೆಗೆ ಬಿಡುಗಡೆಯಾಗುತ್ತಿವೆ. ಬಿಎಂಡಬ್ಲ್ಯುವಿನ ಹೈಬ್ರಿಡ್ 745ಎಲ್‍ಇ ಮಾದರಿಯನ್ನು ಮುಂಬರುವ ದಿನಗಳಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

MOST READ: ಇನ್ಮುಂದೆ ಹೊಸ ವಾಹನಗಳ ನೋಂದಣಿ ಅಷ್ಟು ಸುಲಭವಲ್ಲ..!

ಜುಲೈ 25ರಂದು ಬಿ‍ಎಂ‍‍ಡಬ್ಲ್ಯು 7 ಸೀರಿಸ್ ಕಾರು ಬಿಡುಗಡೆ ಖಚಿತ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಬಿಎಂಡಬ್ಲ್ಯು 7 ಸೀರಿಸ್‍‍ನವೀಕೃತ ಕಾರು, ದೇಶಿಯ ಮಾರುಕಟ್ಟೆಗೆ ಜರ್ಮನ್ ಮೂಲದ ಕಂಪನಿಯು ನೀಡುತ್ತಿರುವ ಪ್ರಮುಖ ಸೆಡಾನ್ ಕೊಡುಗೆಯಾಗಿದೆ. ಈ ಸೆಡಾನ್ ಭಾರತೀಯ ಮಾರುಕಟ್ಟೆಯಲ್ಲಿರುವ ಅತ್ಯಂತ ದುಬಾರಿ ಬೆಲೆಯ ಕಾರುಗಳಲ್ಲಿ ಒಂದಾಗಿದ್ದು, ಈ ಕಾರಿನ ಬೆಲೆಯು ಭಾರತದಲ್ಲಿರುವ ಎಕ್ಸ್ ಶೋರೂಂ ದರದಂತೆ ರೂ.1 ಕೋಟಿಗಳಾಗಲಿದೆ. ಬಿಡುಗಡೆಯಾದ ನಂತರ 2019 ಬಿಎಂಡಬ್ಲ್ಯು 7 ಸರಣಿಯು ಮರ್ಸಿಡಿಸ್ ಬೆಂಜ್ ಎಸ್-ಕ್ಲಾಸ್‌ ಕಾರಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
2019 BMW 7 Series Facelift India-Launch On 25th July — Will Rival The Mercedes-Benz S-Class - Read in kannada
Story first published: Thursday, June 27, 2019, 13:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X