ಆಗಸ್ಟ್ ನಲ್ಲಿ ಬಿಡುಗಡೆಯಾಗಲಿರುವ 5 ಹೊಸ ಕಾರುಗಳಿವು

ಕಳೆದ ಕೆಲವು ತಿಂಗಳುಗಳಿಂದ ಭಾರತದ ಕಾರು ಮಾರುಕಟ್ಟೆಯು ಕುಸಿತವನ್ನು ಕಾಣುತ್ತಿದ್ದರೂ, ಹೊಸ ಕಾರುಗಳು ಬಿಡುಗಡೆಯಾಗುತ್ತಲೇ ಇವೆ. ಕೆಲವು ಕಂಪನಿಗಳು ಮೊದಲ ಬಾರಿಗೆ ತಮ್ಮ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿವೆ. ಮುಂಬರುವ ದಿನಗಳಲ್ಲಿ ಯಾವೆಲ್ಲಾ ಕಂಪನಿಗಳು ಯಾವ ಕಾರುಗಳನ್ನು ಬಿಡುಗಡೆಗೊಳಿಸಲಿವೆ ಎಂಬುದನ್ನು ನೋಡೋಣ.

ಆಗಸ್ಟ್ ನಲ್ಲಿ ಬಿಡುಗಡೆಯಾಗಲಿರುವ 5 ಹೊಸ ಕಾರುಗಳಿವು

ಹ್ಯುಂಡೈ ಗ್ರ್ಯಾಂಡ್ ಐ10

ಬಿಡುಗಡೆ: ಆಗಸ್ಟ್ 20, 2019

ಹ್ಯುಂಡೈ ಭಾರತದಲ್ಲಿ ಹೊಸ ಗ್ರ್ಯಾಂಡ್ ಐ10 ಅನ್ನು ಬಿಡುಗಡೆಗೊಳಿಸಲಿದೆ. ಇದು ರಿಫ್ರೆಶ್ ಸ್ಟೈಲಿಂಗ್ ಅನ್ನು ಹೊಂದಿರಲಿದೆ. ವಿನ್ಯಾಸದ ಬಗ್ಗೆ ಹೇಳುವುದಾದರೆ, ಹೊಸ ಹ್ಯುಂಡೈ ಗ್ರ್ಯಾಂಡ್ ಐ10 ಹೊಸ ಬಗೆಯ ದೊಡ್ಡ ಗಾತ್ರದ ಗ್ರಿಲ್, ಹೊಸ ಅಲಾಯ್ ವ್ಹೀಲ್ ಡಿಸೈನ್, ಶಾರ್ಪ್ ಹೆಡ್‌ಲೈಟ್‌ ಹಾಗೂ ಹೊಸ ಟೇಲ್‍‍ಲೈಟ್ ವಿನ್ಯಾಸವನ್ನು ಹೊಂದಿದೆ. ಇಂಟಿರಿಯರ್‍‍ನಲ್ಲಿ ಮರುವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್ ಹಾಗೂ ಹೊಸ ಸೀಟುಗಳಿರಲಿದ್ದು ಕಾರಿನ ಒಳಭಾಗದಲ್ಲಿ ಹೆಚ್ಚಿನ ಜಾಗವಿರಲಿದೆ.

ಆಗಸ್ಟ್ ನಲ್ಲಿ ಬಿಡುಗಡೆಯಾಗಲಿರುವ 5 ಹೊಸ ಕಾರುಗಳಿವು

ಹೊಸ ಗ್ರ್ಯಾಂಡ್ ಐ10 ಭಾಗಶಃ ಡಿಜಿಟಲ್, ಭಾಗಶಃ ಅನಲಾಗ್ ಆದ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್‍‍‍ಪ್ಲೇ ಹೊಂದಿರುವ 8.0 ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್ ಹೊಂದಿರಲಿದೆ. ಈ ಅಂಶಗಳನ್ನು ಇತ್ತೀಚೆಗೆ ಬಿಡುಗಡೆಯಾದ ಹ್ಯುಂಡೈ ವೆನ್ಯೂ ಕಾಂಪ್ಯಾಕ್ಟ್ ಎಸ್‌ಯುವಿನಲ್ಲಿಯೂ ಸಹ ಅಳವಡಿಸಲಾಗಿತ್ತು. ಈ ಹೊಸ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನಲ್ಲಿ ಬಿ‍ಎಸ್6 ಆಧಾರಿತ 1.2-ಲೀಟರ್ ಕಪ್ಪಾ ಪೆಟ್ರೋಲ್ ಎಂಜಿನ್‌ಯಿದ್ದು, 83 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸುತ್ತದೆ.

ಆಗಸ್ಟ್ ನಲ್ಲಿ ಬಿಡುಗಡೆಯಾಗಲಿರುವ 5 ಹೊಸ ಕಾರುಗಳಿವು

1.2 ಲೀಟರ್‍‍ನ ಯು2 ಡೀಸೆಲ್ ಎಂಜಿನ್ ಸಹ ಬಿಎಸ್6 ಆಧಾರಿತವಾಗಿದ್ದು, ಹೊಸ ಗ್ರ್ಯಾಂಡ್ ಐ10 ಕಾರಿಗೆ ಹೊಸ ಹುರುಪು ನೀಡಲಿದೆ. ಹ್ಯುಂಡೈ 2019ರ ಆಗಸ್ಟ್ 20 ರಂದು ಭಾರತದಲ್ಲಿ ಹೊಸ ಕಾರನ್ನು ಬಿಡುಗಡೆಗೊಳಿಸಲಾಗುವುದು. ಈಗಿರುವ ಹ್ಯಾಚ್‌ಬ್ಯಾಕ್ ಕಾರಿಗಿಂತ ಹೊಸ ಕಾರಿನ ದರವು ಸ್ವಲ್ಪ ಹೆಚ್ಚಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಹೊಸ ಕಾರಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.5 ರಿಂದ 7 ಲಕ್ಷಗಳಾಗುವ ಸಾಧ್ಯತೆಗಳಿವೆ.

ಆಗಸ್ಟ್ ನಲ್ಲಿ ಬಿಡುಗಡೆಯಾಗಲಿರುವ 5 ಹೊಸ ಕಾರುಗಳಿವು

ಮಾರುತಿ ಸುಜುಕಿ ಎಕ್ಸ್‌ಎಲ್ 6

ಬಿಡುಗಡೆ: ಆಗಸ್ಟ್ 21, 2019

ಮಾರುತಿ ಸುಜುಕಿ ಎಕ್ಸ್‌ಎಲ್ 6 ಕಾರು, ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಆಧಾರಿತ ಕ್ರಾಸ್‌ಒವರ್ ಆಗಿದೆ. ಹೊಸ ಮಾದರಿಯ ಕಾರು ಬಾಡಿ ಕ್ಲಾಡಿಂಗ್, ಹೊಸ ಅಲಾಯ್ ವ್ಹೀಲ್, ಮರುವಿನ್ಯಾಸಗೊಳಿಸಲಾದ ಮುಂಭಾಗದ ತುದಿ, ಫ್ಲಾಟರ್ ಹುಡ್, ಟ್ರೆಪ್ ಜಾಯಿಡಲ್ ಗ್ರಿಲ್ ಹಾಗೂ ಆಂಗುಲರ್ ಎಲ್ಇಡಿ ಡಿಆರ್‍ಎಲ್‍‍ಗಳೊಂದಿಗೆ ಹೊಸ ಹೆಡ್‍‍ಲೈಟ್‍‍ಗಳನ್ನು ಹೊಂದಿದೆ. ಇಂಟಿರಿಯರ್‍‍ನಲ್ಲಿ, ಎಕ್ಸ್‌ಎಲ್ 6 ಹೆಸರೇ ಸೂಚಿಸುವಂತೆ, ಕ್ರಾಸ್‌ಒವರ್ ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಸೀಟುಗಳೊಂದಿಗೆ ಆರು ಸೀಟುಗಳನ್ನು ಹೊಂದಿದೆ.

ಆಗಸ್ಟ್ ನಲ್ಲಿ ಬಿಡುಗಡೆಯಾಗಲಿರುವ 5 ಹೊಸ ಕಾರುಗಳಿವು

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಎಂಜಿನ್‌ ಬಗ್ಗೆ ಹೇಳುವುದಾದರೆ, ಎಕ್ಸ್‌ಎಲ್‌ 6, 1.5-ಲೀಟರ್‍‍ನ ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌ ಹೊಂದಿದ್ದು, 105 ಬಿಹೆಚ್‌ಪಿ ಹಾಗೂ 138 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಎಂಜಿನ್‍‍ನಲ್ಲಿ 5 ಸ್ಪೀಡ್‍‍ನ ಮ್ಯಾನುವಲ್ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ. 4 ಸ್ಪೀಡ್ ಟಾರ್ಕ್ ಕನ್ವರ್ಟರ್ ಸ್ವಯಂಚಾಲಿತ ಗೇರ್‌ಬಾಕ್ಸ್ ಅನ್ನು ಅಳವಡಿಸುವ ಸಾಧ್ಯತೆಗಳಿವೆ. ಮಾರುತಿ ಸುಜುಕಿ ಕಂಪನಿಯು ಎಕ್ಸ್‌ಎಲ್ 6 ಅನ್ನು ಆಗಸ್ಟ್ 21, 2019 ರಂದು ಬಿಡುಗಡೆಗೊಳಿಸಲಿದೆ.

ಆಗಸ್ಟ್ ನಲ್ಲಿ ಬಿಡುಗಡೆಯಾಗಲಿರುವ 5 ಹೊಸ ಕಾರುಗಳಿವು

ಬಿಎಂಡಬ್ಲ್ಯು 3 ಸರಣಿ

ಬಿಡುಗಡೆ: ಆಗಸ್ಟ್ 21, 2019

ಬಿಎಂಡಬ್ಲ್ಯು 3 ಸರಣಿಯ ಏಳನೇ ತಲೆಮಾರಿನ ಕಾರ್ ಅನ್ನು ಆಗಸ್ಟ್ 21 ರಂದು ಬಿಡುಗಡೆಗೊಳಿಸಲಾಗುವುದು. ಹೊಸ 3 ಸೀರಿಸ್‍‍ನ ಕಾರು 5 ಹಾಗೂ 7 ಸೀರಿಸ್ ಕಾರುಗಳಲ್ಲಿದ್ದ ಕ್ಲಸ್ಟರ್ ಆರ್ಕಿಟೆಕ್ಚರ್ (ಸಿಎಲ್ಎಆರ್) ಪ್ಲಾಟ್‌ಫಾರ್ಮ್‌ನ ಮೇಲೆ ಆಧಾರಿತವಾಗಿದೆ. ಹೊಸ 3 ಸೀರಿಸ್ ಕಾರು ಅದಕ್ಕೆ ಮುಂಚೆಯಿದ್ದ ಕಾರಿಗಿಂತ ದೊಡ್ಡದಾಗಿ, ಹಗುರವಾಗಿ, ಸುರಕ್ಷಿತವಾಗಿದೆ. ಮಾರುಕಟ್ಟೆಯಲ್ಲಿರುವ ಕಾರಿಗೆ ಹೋಲಿಸಿದರೆ ಹೊಸ 3 ಸೀರಿಸ್‍‍ನ ಸ್ಟೈಲ್ ಅನ್ನು ಸ್ವಲ್ಪಮಟ್ಟಿಗೆ ಬದಲಾಯಿಸಲಾಗಿದೆ.

ಆಗಸ್ಟ್ ನಲ್ಲಿ ಬಿಡುಗಡೆಯಾಗಲಿರುವ 5 ಹೊಸ ಕಾರುಗಳಿವು

ಭಾರತದಲ್ಲಿನ 3 ಸೀರಿಸ್‍‍ಗಾಗಿ, ಚಾಲ್ತಿಯಲ್ಲಿರುವ ಬಿಎಂಡಬ್ಲ್ಯು ಕಾರಿನಲ್ಲಿದ್ದ 2.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಬಳಸಲಾಗಿದೆ. ಆದರೆ ಈ ಎಂಜಿನ್ 258 ಬಿಹೆಚ್‌ಪಿ ಹಾಗೂ 400 ಎನ್ಎಂ ಟಾರ್ಕ್ ಉತ್ಪಾದಿಸಲಿದೆ. 2.0 ಲೀಟರ್ ಡೀಸೆಲ್ ಎಂಜಿನ್, 190 ಬಿಹೆಚ್‌ಪಿ ಹಾಗೂ 400 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಎರಡೂ ಎಂಜಿನ್‌ಗಳು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಹೊಂದಿರಲಿವೆ.

ಆಗಸ್ಟ್ ನಲ್ಲಿ ಬಿಡುಗಡೆಯಾಗಲಿರುವ 5 ಹೊಸ ಕಾರುಗಳಿವು

ಕಿಯಾ ಸೆಲ್ಟೋಸ್

ಬಿಡುಗಡೆ: ಆಗಸ್ಟ್ 22, 2019

ಕಿಯಾ ಕಳೆದ ಕೆಲವು ತಿಂಗಳುಗಳಿಂದ ನಮ್ಮ ಮಾರುಕಟ್ಟೆಯನ್ನು ಪ್ರವೇಶಿಸಲು ತಯಾರಿ ನಡೆಸುತ್ತಿದೆ. ಸೆಲ್ಟೋಸ್ ಎಸ್‍‍ಯುವಿಯ ಬಿಡುಗಡೆಯೊಂದಿಗೆ ಭಾರತಕ್ಕೆ ಕಾಲಿಡಲಿದೆ. ಕಿಯಾ ಸೆಲ್ಟೋಸ್ ಎಸ್‌ಯುವಿಯನ್ನು ಮೊದಲ ಬಾರಿಗೆ 2018 ರ ಆಟೋ ಎಕ್ಸ್‌ಪೋದಲ್ಲಿ ಕಾನ್ಸೆಪ್ಟ್ ರೂಪದಲ್ಲಿ ಪ್ರದರ್ಶಿಸಲಾಗಿತ್ತು. 2019ರ ಜೂನ್ 20 ರಂದು ದೆಹಲಿಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾದಾರ್ಪಣೆ ಮಾಡಿತು.

ಆಗಸ್ಟ್ ನಲ್ಲಿ ಬಿಡುಗಡೆಯಾಗಲಿರುವ 5 ಹೊಸ ಕಾರುಗಳಿವು

ವಿನ್ಯಾಸದ ಬಗ್ಗೆ ಹೇಳುವುದಾದರೆ, ಸೆಲ್ಟೋಸ್ ಕಂಪನಿಯ ಬೋಲ್ಡ್ ಟೈಗರ್ ನೋಸ್ ಗ್ರಿಲ್ ಹೊಂದಿರಲಿದೆ. ಸ್ಟೈಲಿಶ್ ನೋಸ್ ಹಾಗೂ ಶಾರ್ಪ್ ಹೆಡ್‌ಲೈಟ್ ಹಾಗೂ ಬಂಪರ್ ಡಿಸೈನ್‍‍ಗಳನ್ನು ಹೊಂದಿರಲಿದೆ. ಇಂಟಿರಿಯರ್ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, 360 ಡಿಗ್ರಿ ಕ್ಯಾಮೆರಾ, ವೈರ್‌ಲೆಸ್ ಚಾರ್ಜಿಂಗ್, ಇನ್ ಕಾರ್ ವೈಫೈ, ಹೆಡ್ ಅಪ್ ಡಿಸ್‍‍ಪ್ಲೇ ಹಾಗೂ ಆಂಬಿಯೆಂಟ್ ಲೈಟಿಂಗ್ ಪ್ಯಾಕೇಜ್‌ಗಳನ್ನು ಹೊಂದುವ ಸಾಧ್ಯತೆಗಳಿವೆ.

ಆಗಸ್ಟ್ ನಲ್ಲಿ ಬಿಡುಗಡೆಯಾಗಲಿರುವ 5 ಹೊಸ ಕಾರುಗಳಿವು

ಮೆಕಾನಿಕಲ್ ಅಂಶಗಳ ಬಗ್ಗೆ ಹೇಳುವುದಾದರೆ ಸೆಲ್ಟೋಸ್ 1.5 ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‍‍ಗಳನ್ನು ಹೊಂದಿದ್ದು, ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳನ್ನು ಹೊಂದಿರಲಿದೆ. ಸ್ಪೋರ್ಟಿಯರ್ ಮಾದರಿಯು ಅಭಿವೃದ್ಧಿಯ ಹಂತದಲ್ಲಿದ್ದು, 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ ಡ್ಯುಯಲ್ ಕ್ಲಚ್ ಸ್ವಯಂಚಾಲಿತ ಗೇರ್‌ಬಾಕ್ಸ್ ಮತ್ತು ಪ್ಯಾಡಲ್ ಶಿಫ್ಟರ್‌ಗಳನ್ನು ಅಳವಡಿಸಲಾಗುವುದು. ಕಿಯಾ ಸೆಲ್ಟೋಸ್ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ 2019ರ ಆಗಸ್ಟ್ 22ರಂದು ಬಿಡುಗಡೆಗೊಳಿಸಲಾಗುವುದು.

ಆಗಸ್ಟ್ ನಲ್ಲಿ ಬಿಡುಗಡೆಯಾಗಲಿರುವ 5 ಹೊಸ ಕಾರುಗಳಿವು

ರೆನಾಲ್ಟ್ ಟ್ರೈಬರ್

ಬಿಡುಗಡೆ: ಆಗಸ್ಟ್ 2019

ರೆನಾಲ್ಟ್ ತನ್ನ ಹೊಸ ಸಬ್ 4 ಮೀಟರ್ 7 ಸೀಟರ್‍‍ಗಳನ್ನು ಬಿಡುಗಡೆಗೊಳಿಸಲು ಸಿದ್ಧವಾಗಿದೆ. ಹೊಸ ಕಾರಿಗೆ ಟ್ರೈಬರ್ ಎಂದು ಹೆಸರಿಸಲಾಗಿದೆ. ಈ ಮಾದರಿಯು ರೆನಾಲ್ಟ್ ಕ್ವಿಡ್‌ನ ಸಿಎಮ್‌ಎಫ್-ಎ ಪ್ಲಾಟ್‌ಫಾರ್ಮ್‌ನ ಮಾರ್ಪಡಿಸಿದ ಆವೃತ್ತಿಯ ಮೇಲೆ ನಿರ್ಮಾಣವಾಗಿದೆ. ಕಂಪನಿಯು ಭಾರತದಲ್ಲಿ ಬಿಡುಗಡೆಗೊಳಿಸಿರುವ ಕಾರುಗಳಲ್ಲಿ ಕ್ವಿಡ್‍ ಕಾರಿಗಿಂತ ಮೇಲಿನ ಸ್ಥಾನದಲ್ಲಿರುತ್ತದೆ. ಟ್ರೈಬರ್‌ನ ಪ್ರಮುಖ ಅಂಶವೆಂದರೆ ಅದರಲ್ಲಿರುವ ಫ್ಲೆಕ್ಸಿಬಲ್ ಸೀಟಿಂಗ್ ಅರೆಂಜ್‍‍ಮೆಂಟ್. ಇದರಿಂದಾಗಿ ಈ ಕಾರಿನಲ್ಲಿ ಏಳು ಜನರು ಕುಳಿತುಕೊಳ್ಳಬಹುದು.

ಆಗಸ್ಟ್ ನಲ್ಲಿ ಬಿಡುಗಡೆಯಾಗಲಿರುವ 5 ಹೊಸ ಕಾರುಗಳಿವು

ಮೆಕಾನಿಕಲ್ ಅಂಶಗಳ ಬಗ್ಗೆ ಹೇಳುವುದಾದರೆ, ರೆನಾಲ್ಟ್ ಟ್ರೈಬರ್ 1.0-ಲೀಟರ್‍‍ನ ಮೂರು-ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ ಹೊಂದಿದೆ. ಈ ಎಂಜಿನ್ 72 ಬಿ‍‍ಹೆಚ್‌ಪಿ ಹಾಗೂ 96 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಎಎಂಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗಳನ್ನು ಹೊಂದಿರಲಿದೆ. ರೆನಾಲ್ಟ್ ಅಧಿಕೃತವಾಗಿ ಟ್ರೈಬರ್ ಕಾರ್ ಅನ್ನು ಜೂನ್ 19, 2019 ರಂದು ಅನಾವರಣಗೊಳಿಸಿತ್ತು. ಈ ಕಾರ್ ಅನ್ನು ಆಗಸ್ಟ್ 15ರ ನಂತರ ಬಿಡುಗಡೆಗೊಳಿಸಲಾಗುವುದು.

Most Read Articles

Kannada
English summary
5 new cars launching in August 2019 - Read in kannada
Story first published: Friday, July 26, 2019, 11:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X