ಫೆ.22 ರಂದು ಬಿಡುಗಡೆಯಾಗಲಿದೆ ಫೋರ್ಡ್ ಎಂಡೀವರ್ ಫೇಸ್‌ಲಿಫ್ಟ್

ಟೊಯೊಟಾ ಫಾರ್ಚೂನರ್ ಹಿಂದಿಕ್ಕುವ ಏಕೈಕ ಕಾರು ಮಾದರಿ ಅಂದ್ರೆ ಅದು ಫೋರ್ಡ್ ಎಂಡೀವರ್ ಮಾತ್ರ. ಯಾಕೆಂದ್ರೆ ಫಾರ್ಚೂನರ್ ಮಾದರಿಯಲ್ಲೇ ಎಲ್ಲಾ ಹಂತದಲ್ಲೂ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ಎಂಡೀವರ್ ಇದೀಗ ಫೇಸ್‌ಲಿಫ್ಟ್ ಸೌಲಭ್ಯದೊಂದಿಗೆ ಮತ್ತಷ್ಟು ಜನಪ್ರಿಯತೆ ಸಾಧಿಸುವ ತವಕದಲ್ಲಿದೆ.

ಇದೇ ತಿಂಗಳು 22ರಂದು ಫೇಸ್‌ಲಿಫ್ಟ್ ಎಂಡೀವರ್ ಬಿಡುಗಡೆಗೊಳಿಸಲಿರುವ ಫೋರ್ಡ್ ಸಂಸ್ಥೆಯು ಈ ಬಾರಿ ಫಾರ್ಚೂನರ್ ಮಾರಾಟಕ್ಕೆ ಪ್ರಬಲ ಪೈಪೋಟಿ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದು, ಹೀಗಾಗಿ ಫೇಸ್‌ಲಿಫ್ಟ್ ಎಂಡೀವರ್ ಕಾರುಗಳು ಸದ್ಯ ಮಾರುಕಟ್ಟೆಯಲ್ಲಿರುವ ಕಾರು ಆವೃತ್ತಿಗಿಂತ ಹೆಚ್ಚಿನ ಗುಣಮಟ್ಟದ ಎಂಜಿನ್ ಮತ್ತು ತಾಂತ್ರಿಕ ಸೌಲಭ್ಯಗಳನ್ನು ಹೊತ್ತುಬರುವುದು ಖಚಿತವಾಗಿದೆ.

ಫೆ.22 ರಂದು ಬಿಡುಗಡೆಯಾಗಲಿದೆ ಫೋರ್ಡ್ ಎಂಡೀವರ್ ಫೇಸ್‌ಲಿಫ್ಟ್

ಇದಕ್ಕಾಗಿಯೇ ಹೊಸ ಫೇಸ್‌ಲಿಫ್ಟ್ ಎಂಡೀವರ್ ಆವೃತ್ತಿಯನ್ನು ವಿದೇಶಿ ಮಾರುಕಟ್ಟೆಗಳಲ್ಲಿ ಈಗಾಗಲೇ ಎವರೆಸ್ಟ್ ಹೆಸರಿನಲ್ಲಿ ಬಿಡುಗಡೆ ಮಾಡಿರುವ ಫೋರ್ಡ್ ಸಂಸ್ಥೆಯು ಅಂತರಾಷ್ಟ್ರೀಯ ಗುಣಮಟ್ಟದ ಸೌಲಭ್ಯಗಳನ್ನು ಭಾರತೀಯ ಆವೃತ್ತಿಯಲ್ಲೂ ಒದಗಿಸುವ ಭರವಸೆ ವ್ಯಕ್ತಪಡಿಸಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾರಿನಲ್ಲಿರುವ ತಾಂತ್ರಿಕ ಅಂಶಗಳ ಕುರಿತಾದ ಕೆಲವು ಮಾಹಿತಿಗಳು ಲಭ್ಯವಾಗಿದ್ದು, ಸುಧಾರಿತ ಮಾದರಿಯ ಗ್ರಿಲ್, ಫಾಗ್ ಲ್ಯಾಂಪ್, ಫ್ರಂಟ್ ಬಂಪರ್, ಚಕ್ರಗಳು ಮತ್ತು ಕಾರಿನ ಇಂಟಿರಿಯರ್ ವಿಭಾಗದಲ್ಲಿ ಗುರುತರ ಬದಲಾವಣೆ ತರುತ್ತಿರುವ ಫೋರ್ಡ್ ಸಂಸ್ಥೆಯು ಫಾರ್ಚೂನರ್ ಮತ್ತು ಮಹೀಂದ್ರಾ ಅಲ್ಟಾರಾಸ್ ಜಿ4 ಕಾರಿಗೆ ಪ್ರಬಲ ಪೈಪೋಟಿ ನೀಡಲಿದೆ.

ಫೆ.22 ರಂದು ಬಿಡುಗಡೆಯಾಗಲಿದೆ ಫೋರ್ಡ್ ಎಂಡೀವರ್ ಫೇಸ್‌ಲಿಫ್ಟ್

ಜೊತೆಗೆ 7-ಸೀಟರ್ ವೈಶಿಷ್ಟ್ಯತೆಗಳನ್ನು ಮತ್ತಷ್ಟು ಆರಾಮದಾಯಕಗೊಳಿಸಲಿದ್ದು, ಕೀ ಲೆಸ್ ಎಂಟ್ರಿ, ಸ್ಟಾರ್ಟ್/ಸ್ಟಾಪ್ ಪುಶ್ ಬಟನ್, ಸಿಕ್ಸ್ ಸ್ಪೋರ್ಕ್ 20-ಇಂಚಿನ ಟ್ವಿನ್ ಸ್ಪೋಕ್ ಅಲಾಯ್ ವೀಲ್ಹ್ ಸೇರಿದಂತೆ ಕಾರಿನ ಹೊರ ಭಾಗದ ವಿನ್ಯಾಸದಲ್ಲೂ ಕೆಲವು ಬದಲಾವಣೆ ಮಾಡಲಾಗುತ್ತಿದೆ.

ಎಂಜಿನ್ ಸಾಮರ್ಥ್ಯ
ವಿದೇಶಿ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಿರುವ ಫೇಸ್‌ಲಿಫ್ಟ್ ಎಂಡೀವರ್(ಎವೆರೆಸ್ಟ್) ಕಾರುಗಳು 2.0-ಲೀಟರ್ ಫೌರ್ ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದ್ದು, 10-ಸ್ಪೀಡ್ ಆಟೋಮ್ಯಾಟಿಕ್ ಗೇರ್‍‌ಬಾಕ್ಸ್‌ನೊಂದಿಗೆ ಸಿಂಗಲ್ ಟರ್ಬೋ ವರ್ಷನ್ ಮತ್ತು ಟ್ವಿನ್ ಟರ್ಬೋ ವರ್ಷನ್ ಎಂಬ ಎರಡು ಎಂಜಿನ್ ಆಯ್ಕೆ ಹೊಂದಿವೆ.

ಈ ಮೂಲಕ ಸಿಂಗಲ್ ಟರ್ಬೋ ವರ್ಷನ್ ಕಾರುಗಳು 180ಬಿಎಚ್‌ಪಿ, 420ಎನ್ಎಂ ಟಾರ್ಕ್ ಉತ್ಪಾದಿಸಿದಲ್ಲಿ ಟ್ವಿನ್ ಟರ್ಬೋ ವರ್ಷನ್ ಕಾರುಗಳು 213ಬಿಎಚ್‌ಪಿ, 500 ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿವೆ.

ಫೆ.22 ರಂದು ಬಿಡುಗಡೆಯಾಗಲಿದೆ ಫೋರ್ಡ್ ಎಂಡೀವರ್ ಫೇಸ್‌ಲಿಫ್ಟ್

ಆದ್ರೆ, ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಮಾರಾಟವಾಗುತ್ತಿರುವ ಎಂಡೀವರ್ ಕಾರುಗಳು 2.2-ಲೀಟರ್ ಫೋರ್ ಸಿಲಿಂಡರ್ ಡಿಸೇಲ್ ಎಂಜಿನ್ ಮತ್ತು 3.2-ಲೀಟರ್ ಫೈವ್ ಸಿಲಿಂಡರ್ ಡಿಸೇಲ್ ಎಂಜಿನ್‌ನೊಂದಿಗೆ ಮಾರಾಟವಾಗುತ್ತಿದ್ದು, ಫೇಸ್‌ಲಿಫ್ಟ್ ಎಂಡೀವರ್‌ನಲ್ಲೂ ಹಳೆಯ ಕಾರಿನ ಮಾದರಿಯಲ್ಲೇ ಎಂಜಿನ್ ಆಯ್ಕೆ ಮುಂದುವರಿಸುವ ಸಾಧ್ಯತೆಗಳಿವೆ.

ಇನ್ನು 2.2-ಲೀಟರ್ ಡಿಸೇಲ್ ಎಂಜಿನ್ ಮಾದರಿಯು 158ಬಿಎಚ್‌ಪಿ, 385ಎನ್ಎಂ ಟಾರ್ಕ್ ಉತ್ಪಾದಿಸಿದಲ್ಲಿ, 3.2-ಲೀಟರ್ ಡಿಸೇಲ್ ಎಂಜಿನ್ ಮಾದರಿಯು 197ಬಿಎಚ್‌ಪಿ, 470ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಎರಡು ಮಾದರಿಯಲ್ಲೂ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹಾಗೂ ಆಲ್ ವೀಲ್ಹ್ ಡ್ರೈವ್ ಸೌಲಭ್ಯ ಜೋಡಿಸಲಾಗಿದೆ.

ಫೆ.22 ರಂದು ಬಿಡುಗಡೆಯಾಗಲಿದೆ ಫೋರ್ಡ್ ಎಂಡೀವರ್ ಫೇಸ್‌ಲಿಫ್ಟ್

ಒಟ್ಟಿನಲ್ಲಿ 7-ಸೀಟರ್ ಫುಲ್ ಎಸ್‌ಯುವಿಗಳಲ್ಲೇ ಉತ್ತಮ ಕಾರು ಮಾದರಿಯಾಗಿರುವ ಫೋರ್ಡ್ ಎಂಡೀವರ್ ಇದೀಗ ಫೇಸ್‌ಲಿಫ್ಟ್ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದು, ಜನಪ್ರಿಯ ಫಾರ್ಚೂನರ್, ಮಹೀಂದ್ರಾ ಅಲ್ಟಾರಾಸ್ ಜಿ4, ಇಸುಝು ಎಂಯುಎಕ್ಸ್ ಫೇಸ್‌ಲಿಫ್ಟ್ ಕಾರು ಮಾರಾಟಕ್ಕೆ ತೀವ್ರ ಪೈಪೋಟಿ ನೀಡುವತ್ತ ಗಮನಹರಿಸಲಾಗಿದೆ.

Source: Team BHP

Article Published On: Tuesday, February 12, 2019, 15:50 [IST]
English summary
New Ford Endeavour Facelift Spied Ahead Of Launch — Exterior And Interior Updates Revealed. Read in Kannada.
Read more on ಫೋರ್ಡ್ ford
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+