ಫೋರ್ಡ್ ಎಂಡೀವರ್ ಫೇಸ್‌ಲಿಫ್ಟ್ ಬಿಡುಗಡೆ- ಆರಂಭಿಕ ಬೆಲೆ ರೂ.28.19 ಲಕ್ಷ

ಫೋರ್ಡ್ ಇಂಡಿಯಾ ಸಂಸ್ಥೆಯು ತನ್ನ ಜನಪ್ರಿಯ ಎಂಡೀವರ್ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆಗೊಳಿಸಿದ್ದು, ಮಹತ್ವದ ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಹೊಸ ಕಾರು ಈ ಬಾರಿ ಟೊಯೊಟಾ ಫಾರ್ಚೂನರ್ ಎಸ್‌ಯುವಿ ಕಾರಿಗೆ ಭಾರೀ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಫೋರ್ಡ್ ಎಂಡೀವರ್ ಫೇಸ್‌ಲಿಫ್ಟ್ ಬಿಡುಗಡೆ- ಆರಂಭಿಕ ಬೆಲೆ ರೂ.28.19 ಲಕ್ಷ

ಫೋರ್ಡ್ ಸಂಸ್ಥೆಯು ಈ ಬಾರಿ ಎಂಡೀವರ್ ಉತ್ಪಾದನೆಯಲ್ಲಿ ಕೆಲವು ಬದಲಾವಣೆಗಳನ್ನು ತಂದಿದ್ದು, ಈ ಹಿಂದೆ ಖರೀದಿಗೆ ಲಭ್ಯವಿದ್ದ ಟೈಟಾನಿಯಂ ಮತ್ತು ಟೈಟಾನಿಯಂ ಪ್ಲಸ್ ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸಿ ಕೇವಲ ಮೂರು ಪ್ರಮುಖ ವೆರಿಯೆಂಟ್‌ಗಳನ್ನು ಮಾತ್ರ ಮುಂದುವರಿಸಿದೆ. ಹೊಸ ಆವೃತ್ತಿಗಳಲ್ಲಿ 2.2-ಲೀಟರ್ ಆವೃತ್ತಿಗಳಲ್ಲಿ ಎರಡು ಆಯ್ಕೆಗಳು ಮತ್ತು 3.2-ಲೀಟರ್ ಆವೃತ್ತಿಯಲ್ಲಿ ಕೇವಲ ಒಂದು ಆಯ್ಕೆ ಇರಿಸಲಾಗಿದ್ದು, ಎಂಜಿನ್ ಬಲಿಷ್ಠತೆ ಮೇಲೆ ಕಾರಿನ ಬೆಲೆಗಳು ಅನ್ವಯವಾಗುತ್ತವೆ.

ಫೋರ್ಡ್ ಎಂಡೀವರ್ ಫೇಸ್‌ಲಿಫ್ಟ್ ಬಿಡುಗಡೆ- ಆರಂಭಿಕ ಬೆಲೆ ರೂ.28.19 ಲಕ್ಷ

ಫೋರ್ಡ್ ಎಂಡೀವರ್ ವೆರಿಯೆಂಟ್‌ಗಳು ಮತ್ತು ಬೆಲೆಗಳು(ದೆಹಲಿ ಎಕ್ಸ್‌ಶೋರೂಂ ಪ್ರಕಾರ)

ವೆರಿಯೆಂಟ್‌ಗಳು

ಬೆಲೆಗಳು
2.2 ಲೀಟರ್ ಟೈಟಾನಿಯಂ ಎಂಟಿ

ರೂ. 28.19 ಲಕ್ಷ

2.2 ಲೀಟರ್ ಟೈಟಾನಿಯಂ ಎಟಿ

ರೂ. 30.60 ಲಕ್ಷ

3.2 ಲೀಟರ್ ಟೈಟಾನಿಯಂ ಪ್ಲಸ್ ಎಟಿ

ರೂ. 32.97 ಲಕ್ಷ

ಫೋರ್ಡ್ ಎಂಡೀವರ್ ಫೇಸ್‌ಲಿಫ್ಟ್ ಬಿಡುಗಡೆ- ಆರಂಭಿಕ ಬೆಲೆ ರೂ.28.19 ಲಕ್ಷ

ಎಂಜಿನ್ ಸಾಮರ್ಥ್ಯ

ಮೇಲೆ ಹೇಳಿದ ಹಾಗೆ, 2.2-ಲೀಟರ್ ಡೀಸೆಲ್ ಎಂಜಿನ್‌ನಲ್ಲಿ ಆರಂಭಿಕ ಆವೃತ್ತಿಯಾದ ಟೈಟಾನಿಯಂ ಎಂಟಿ ಮಾದರಿಯು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿದ್ದರೆ, ಟೈಟಾನಿಯಂ ಎಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆವೃತ್ತಿಯು 6-ಸ್ಪೀಡ್ ಗೇರ್‌ಬಾಕ್ಸ್ ಸೌಲಭ್ಯದೊಂದಿಗೆ 158-ಬಿಎಚ್‌ಪಿ ಮತ್ತು 385-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿವೆ.

ಫೋರ್ಡ್ ಎಂಡೀವರ್ ಫೇಸ್‌ಲಿಫ್ಟ್ ಬಿಡುಗಡೆ- ಆರಂಭಿಕ ಬೆಲೆ ರೂ.28.19 ಲಕ್ಷ

ಹಾಗೆಯೇ 3.2-ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಟೈಟಾನಿಯಂ ಪ್ಲಸ್ ಎಟಿ ಮಾದರಿಯು ಸಹ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‍‌ಬಾಕ್ಸ್‌ನೊಂದಿಗೆ 197-ಬಿಎಚ್‌ಪಿ ಮತ್ತು 470-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, 4x4 ಡ್ರೈವ್ ಟೆಕ್ನಾಲಜಿ ಸೌಲಭ್ಯ ಪಡೆದುಕೊಂಡಿದೆ.

ಫೋರ್ಡ್ ಎಂಡೀವರ್ ಫೇಸ್‌ಲಿಫ್ಟ್ ಬಿಡುಗಡೆ- ಆರಂಭಿಕ ಬೆಲೆ ರೂ.28.19 ಲಕ್ಷ

ಇನ್ನು 2.2 ವೆರಿಯೆಂಟ್‌ಗಳಲ್ಲಿ 2x2 ಡ್ರೈವ್ ಟೆಕ್ನಾಲಜಿ ಬಳಕೆ ಮಾಡಲಾಗಿದ್ದು, ಈ ಹಿಂದಿನ ಮಾದರಿಗಿಂತ ಹೊಸ ಮಾದರಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಾಗಿದೆ. ಇದರಲ್ಲಿ ಪ್ರಮುಖವಾಗಿ ಕಾರಿನ ಮುಂಭಾಗದ ಫ್ರಂಟ್ ಗ್ರಿಲ್ ಮತ್ತು ಫೋರ್ಡ್ ಕಾರುಗಳ ಆಕರ್ಷಣೆಯಾಗಿರುವ ಕ್ರೋಮ್ ಸ್ಲಾಟ್‌ನಲ್ಲೂ ಈ ಬಾರಿ ಹೊಸತನ ತರಲಾಗಿದೆ.

ಫೋರ್ಡ್ ಎಂಡೀವರ್ ಫೇಸ್‌ಲಿಫ್ಟ್ ಬಿಡುಗಡೆ- ಆರಂಭಿಕ ಬೆಲೆ ರೂ.28.19 ಲಕ್ಷ

ಇನ್ನುಳಿದಂತೆ ಹೊಸ ಕಾರಿನಲ್ಲಿ ಈ ಹಿಂದಿನ ಕೆಲವು ಸೌಲಭ್ಯಗಳನ್ನೇ ಮುಂದುವರಿಸಲಾಗಿದ್ದು, ಹೆಚ್‌ಡಿಐ ಸ್ಮೋಕ್ಡ್ ಹೆಡ್‌ಲ್ಯಾಂಪ್ ಯುನಿಟ್, ಎಲ್ಇಡಿ ಟೈಲ್‌ಲೈಟ್, 18-ಇಂಚಿನ ಅಲಾಯ್ ವೀಲ್ಹ್, ನವೀಕೃತ ಮುಂಭಾಗದ ಬಂಪರ್, ರೈನ್ ಸೆನ್ಸಾರ್ ವೈಪರ್ಸ್, ಸೆಮಿ ಪ್ಯಾರಾಲೆಲ್ ಅಸಿಸ್ಟ್, ಪ್ಯಾನರೋಮಿಕ್ ಸನ್‌ರೂಫ್ ಸೌಲಭ್ಯವಿದೆ.

ಫೋರ್ಡ್ ಎಂಡೀವರ್ ಫೇಸ್‌ಲಿಫ್ಟ್ ಬಿಡುಗಡೆ- ಆರಂಭಿಕ ಬೆಲೆ ರೂ.28.19 ಲಕ್ಷ

ಕಾರಿನ ಒಳಭಾಗದ ತಾಂತ್ರಿಕ ಅಂಶಗಳಲ್ಲೂ ಕೆಲವು ಬದಲಾವಣೆಗಳನ್ನು ತರಲಾಗಿದ್ದು, ಸ್ಟಿರಿಂಗ್ ಮೌಟೆಂಡ್ ಆಡಿಯೋ ಕಂಟ್ರೋಲ್, ಡ್ಯುಯಲ್-ಜೋನ್ ಕ್ಲೈಮೆಟ್ ಕಂಟ್ರೋಲ್, 8.0-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೊತೆ ಆ್ಯಪಲ್ ಕಾರ್ ಪ್ಲೇ, ಅಂಡ್ರಾಯಿಡ್ ಆಟೋ ಮತ್ತು 10-ಸ್ಪಿಕರ್ಸ್ ಸೌಂಡ್ ಸಿಸ್ಟಂ ಹೊಂದಿದೆ.

ಫೋರ್ಡ್ ಎಂಡೀವರ್ ಫೇಸ್‌ಲಿಫ್ಟ್ ಬಿಡುಗಡೆ- ಆರಂಭಿಕ ಬೆಲೆ ರೂ.28.19 ಲಕ್ಷ

ಸುರಕ್ಷಾ ಸೌಲಭ್ಯ

ಎಂಡೀವರ್ ಕಾರು ಕೆೇವಲ ಎಂಜಿನ್‌ನಲ್ಲಿ ಬಲಿಷ್ಠ ಮಾತ್ರವಲ್ಲ ಸುರಕ್ಷತೆಯಲ್ಲೂ ಹೆಚ್ಚು ಗಮನಸೆಳೆಯುತ್ತದೆ. ಹೊಸ ಕಾರಿನಲ್ಲಿ ಈ ಬಾರಿ ಏಳು ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಅಸಿಸ್ಟ್, ಪಾರ್ಕಿಂಗ್ ಕ್ಯಾಮೆರಾ, ಕಾರಿನ ಹಿಂಭಾಗದಲ್ಲಿ ಮತ್ತು ಮುಂಭಾಗದಲ್ಲಿ ಸೆನ್ಸಾರ್ ಬಳಸಲಾಗಿದೆ.

MOST READ: ಕಾರು ಖರೀದಿಸಲು ಬಂದ ಮಹಿಳೆ ಮಾಡಿದ ಎಡವಟ್ಟಿನಿಂದ ಡೀಲರ್ಸ್ ಕಕ್ಕಾಬಿಕ್ಕಿ

ಫೋರ್ಡ್ ಎಂಡೀವರ್ ಫೇಸ್‌ಲಿಫ್ಟ್ ಬಿಡುಗಡೆ- ಆರಂಭಿಕ ಬೆಲೆ ರೂ.28.19 ಲಕ್ಷ

ಒಟ್ಟಿನಲ್ಲಿ ಈ ಹಿಂದಿನ ಆವೃತ್ತಿಗಿಂತ ಫೇಸ್‌ಲಿಫ್ಟ್ ಆವೃತ್ತಿಯು ಮಹತ್ವದ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಫುಲ್ ಸೈಜ್ ಎಸ್‌ಯುವಿ ಮಾದರಿಗಳಾದ ಟೊಯೊಟಾ ಫಾರ್ಚೂನರ್, ಮಹೀಂದ್ರಾ ಅಲ್ಟುರಾಸ್ ಜಿ4 ಮತ್ತು ಇಸುಝು ಎಂಯು-ಎಕ್ಸ್ ಮಾದರಿಗಳಿಗೆ ತೀವ್ರ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

Article Published On: Friday, February 22, 2019, 17:05 [IST]
English summary
Ford has launched its 2019 Endeavour SUV in India. The new 2019 Ford Endeavour comes with a starting price of Rs 28.19 lakh and Rs 32.97 lakh for the top-spec variant. Read in Kannada.
Read more on ಫೋರ್ಡ್ ford
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+