ಭಾರತದಲ್ಲೂ ಬಿಡುಗಡೆಯಾಗಲಿದೆ ಫೋರ್ಡ್ ಪುಮಾ ಕಂಪ್ಯಾಕ್ಟ್ ಎಸ್‌‌ಯುವಿ?

ಫೋರ್ಡ್ ಸಂಸ್ಥೆಯು ಹೊಸ ಕಾರುಗಳ ಮಾರಾಟದಲ್ಲಿ ಕೆಲವು ಬದಲಾವಣೆಗಳನ್ನು ತರುತ್ತಿದ್ದು, ಜಾಗತಿಕ ಮಟ್ಟದ ಬೇಡಿಕೆಗೆ ಅನುಗುಣವಾಗಿ ಹಳೆಯ ಮಾದರಿಗಳನ್ನು ಉನ್ನತಿಕರಿಸುವುದರ ಜೊತೆಗೆ ಕೆಲವು ಹೊಸ ಕಾರು ಮಾದರಿಗಳನ್ನು ಸಹ ಪರಿಚಯಿಸುತ್ತಿದೆ. ಇದರಲ್ಲಿ ಪುಮಾ ಕಂಪ್ಯಾಕ್ಟ್ ಎಸ್‌ಯುವಿ ಕೂಡಾ ಒಂದಾಗಿದ್ದು, ಕಳೆದ ವಾರವಷ್ಟೇ ಯುರೋಪ್ ಮಾರುಕಟ್ಟೆಯಲ್ಲಿ ಅನಾವರಣಗೊಂಡಿರುವ ಈ ಕಾರು ಭಾರತದಲ್ಲೂ ಬಿಡುಗಡೆಯಾಗುವ ಸುಳಿವು ನೀಡಿದೆ.

ಭಾರತದಲ್ಲೂ ಬಿಡುಗಡೆಯಾಗಲಿದೆ ಫೋರ್ಡ್ ಪುಮಾ ಕಂಪ್ಯಾಕ್ಟ್ ಎಸ್‌‌ಯುವಿ?

ಹೌದು, ಫೋರ್ಡ್ ಸಂಸ್ಥೆಯು ಸದ್ಯ ಭಾರತದಲ್ಲಿ ಮಹೀಂದ್ರಾ ಜೊತೆಗೂಡಿ ಹೊಸ ಕಾರುಗಳ ಉತ್ಪಾದನೆಗೆ ಚಾಲನೆ ನೀಡಿದ್ದು, ಸಹಭಾಗಿತ್ವದಲ್ಲಿ ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿ ಮಹೀಂದ್ರಾ ಮತ್ತು ಫೋರ್ಡ್ ಸಂಸ್ಥೆಗಳು ಭಾರತೀಯ ಗ್ರಾಹಕರ ಆದ್ಯತೆಗೆ ತಕ್ಕಂತೆ ವಿವಿಧ ನಮೂನೆಯ ಹಲವು ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ. ಅದರಲ್ಲೂ ಫೋರ್ಡ್ ಸಂಸ್ಥೆಯು ಜಾಗತಿಕ ಮಾರುಕಟ್ಟೆಗಳಲ್ಲಿ ಜನಪ್ರಿಯವಾಗಿರುವ ಹಲವು ಕಾರು ಮಾದರಿಗಳನ್ನು ಮಹೀಂದ್ರಾ ಜೊತೆಗೂಡಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಇರಾದೆಯಲ್ಲಿದೆ.

ಭಾರತದಲ್ಲೂ ಬಿಡುಗಡೆಯಾಗಲಿದೆ ಫೋರ್ಡ್ ಪುಮಾ ಕಂಪ್ಯಾಕ್ಟ್ ಎಸ್‌‌ಯುವಿ?

ಹೀಗಾಗಿ ಕಳೆದ ವಾರವಷ್ಟೇ ಅನಾವರಣಗೊಂಡಿರುವ ಪುಮಾ ಕಂಪ್ಯಾಕ್ಟ್ ಎಸ್‌ಯುವಿ ಆವೃತ್ತಿಯು ಭಾರತದಲ್ಲೂ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಹೊಸ ಪುಮಾ ಕಾರು ಹಲವು ವಿಶೇಷತೆಗಳೊಂದಿಗೆ ಮಧ್ಯಮ ಗಾತ್ರದ ಐಷಾರಾಮಿ ಕಾರು ಖರೀದಿದಾರರನ್ನು ಸೆಳೆಯುವ ತವಕದಲ್ಲಿದೆ.

ಭಾರತದಲ್ಲೂ ಬಿಡುಗಡೆಯಾಗಲಿದೆ ಫೋರ್ಡ್ ಪುಮಾ ಕಂಪ್ಯಾಕ್ಟ್ ಎಸ್‌‌ಯುವಿ?

ಈ ಹಿಂದೆ ಯುರೋಪ್ ರಾಷ್ಟ್ರಗಳಲ್ಲಿ 1997ರಿಂದ 2002ರ ಅವಧಿಯಲ್ಲಿ ಖರೀದಿಗೆ ಲಭ್ಯವಿದ್ದ ಸ್ಪೋರ್ಟ್ ಕೂಪೆ ಪುಮಾ ಕಾರಿನ ಹೆಸರನ್ನೇ ಹೊಸ ಕಂಪ್ಯಾಕ್ಟ್ ಎಸ್‌ಯುವಿಗೆ ಎರವಲು ಪಡೆಯಲಾಗಿದ್ದು, ಎಂಟ್ರಿ ಲೆವೆಲ್ ಕಂಪ್ಯಾಕ್ಟ್ ಮಾದರಿಯಾದ ಇಕೋ ಸ್ಪೋರ್ಟ್‌ ಕಾರಿಗಿಂತಲೂ ಮೇಲೆ ಮತ್ತು ಕಿಯೆಗಾ ಕಾರಿಗಿಂತಲೂ ಕೆಳ ದರ್ಜೆಯ ಕಾರು ಮಾದರಿಯಾಗಿ ಮಾರಾಟವಾಗಲಿದೆ.

ಭಾರತದಲ್ಲೂ ಬಿಡುಗಡೆಯಾಗಲಿದೆ ಫೋರ್ಡ್ ಪುಮಾ ಕಂಪ್ಯಾಕ್ಟ್ ಎಸ್‌‌ಯುವಿ?

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ತಾಂತ್ರಿಕ ಸೌಲಭ್ಯವುಳ್ಳ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಿಗೆ ಉತ್ತಮ ಬೇಡಿಕೆ ಕಂಡುಬರುತ್ತಿದ್ದು, ರೂ. 12 ಲಕ್ಷದಿಂದ ರೂ. 16 ಲಕ್ಷ ಬೆಲೆ ಅಂತರದಲ್ಲಿರುವ ಕಾರುಗಳು ಇದೀಗ ದೇಶಿಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಇದೇ ಕಾರಣಕ್ಕೆ ಕಿಯಾದಿಂದ ಸೆಲ್ಟೊಸ್, ಹೋಂಡಾದಿಂದ ಹೆಚ್‌ಆರ್‌ವಿ, ಎಂಜಿ ಮೋಟಾರ್‌ನಿಂದ ಹೆಕ್ಟರ್ ಮತ್ತು ಟೊಯೊಟಾ ಸಿ-ಹೆಚ್ಆರ್ ಕಾರುಗಳು ಭಾರತದಲ್ಲಿ ಬಿಡುಗಡೆಗಾಗಿ ಸಿದ್ದಗೊಳ್ಳುತ್ತಿವೆ.

ಭಾರತದಲ್ಲೂ ಬಿಡುಗಡೆಯಾಗಲಿದೆ ಫೋರ್ಡ್ ಪುಮಾ ಕಂಪ್ಯಾಕ್ಟ್ ಎಸ್‌‌ಯುವಿ?

ಇತ್ತ ಸಂಪೂರ್ಣವಾಗಿ ಐಷಾರಾಮಿಯೂ ಅಲ್ಲದೇ ಅಗ್ಗದ ಕೆಳ ದರ್ಜೆಯ ಕಾರು ಮಾದರಿಯೂ ಆಗಿರದ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳು ಗ್ರಾಹಕರಿಗೆ ಐಷಾರಾಮಿ ಪ್ರಯಾಣದ ಅನುಭವ ನೀಡಲಿದ್ದು, ಹಲವು ಪ್ರೀಮಿಯಂ ಫೀಚರ್ಸ್‌ಗಳು ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಲ್ಲಿ ಕಾಣಬಹುದಾಗಿದೆ.

ಭಾರತದಲ್ಲೂ ಬಿಡುಗಡೆಯಾಗಲಿದೆ ಫೋರ್ಡ್ ಪುಮಾ ಕಂಪ್ಯಾಕ್ಟ್ ಎಸ್‌‌ಯುವಿ?

ಇದರಿಂದ ಫೋರ್ಡ್ ಸಂಸ್ಥೆಯು ಸಹ ಯುರೋಪ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಪುಮಾ ಹೊಸ ಕಾರನ್ನು ಭಾರತದಲ್ಲೂ ಬಿಡುಗಡೆಗೊಳಿಸುವ ಬಗ್ಗೆ ಯೋಜನೆಯಲ್ಲಿದ್ದು, ಮುಂಬರುವ ದಿನಗಳಲ್ಲಿ ಹೊಸ ಕಾರಿನ ಬಿಡುಗಡೆಯ ಕುರಿತು ಮಾಹಿತಿ ಹೊರಹಾಕಲಿದೆ. ಇನ್ನು ಫೋರ್ಡ್ ಸಂಸ್ಥೆಯು ಮಹೀಂದ್ರಾ ಜೊತೆಗೂಡಿರುವುದು ಕಾರು ಮಾರಾಟದಲ್ಲಿ ಹೊಸ ಬದಲಾವಣೆ ಕಾರಣವಾಗಿದ್ದು, ಎರಡು ಸಂಸ್ಥೆಗಳು ಜೊತೆಯಾಗಿ ಮಹತ್ವದ ಯೋಜನೆ ರೂಪಿಸಿವೆ.

ಭಾರತದಲ್ಲೂ ಬಿಡುಗಡೆಯಾಗಲಿದೆ ಫೋರ್ಡ್ ಪುಮಾ ಕಂಪ್ಯಾಕ್ಟ್ ಎಸ್‌‌ಯುವಿ?

ಭಾರತೀಯ ಆಟೋ ಉದ್ಯಮದಲ್ಲಿ ಫೋರ್ಡ್ ಮತ್ತು ಮಹೀಂದ್ರಾ ಸಂಸ್ಥೆಗಳು ತಮ್ಮದೆ ಆದ ಜನಪ್ರಿಯತೆ ಹೊಂದಿದ್ದು, ಇದೀಗ ಭವಿಷ್ಯ ಯೋಜನೆಗಳಿಗಾಗಿ ಪರಸ್ಪರ ಕೈ ಜೋಡಿಸಿವೆ. ಸಹಭಾಗಿತ್ವದ ಆಧಾರದ ಮೇಲೆ ಹೊಸ ಕಾರುಗಳ ನಿರ್ಮಾಣ, ಎಂಜಿನ್ ಅಭಿವೃದ್ದಿಗಾಗಿ ಪರಸ್ಪರ ಜೊತೆಯಾಗಲಿದ್ದು, ಎಸ್‌ಯುವಿ ಕಾರುಗಳ ಮೇಲೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಿವೆ.

ಭಾರತದಲ್ಲೂ ಬಿಡುಗಡೆಯಾಗಲಿದೆ ಫೋರ್ಡ್ ಪುಮಾ ಕಂಪ್ಯಾಕ್ಟ್ ಎಸ್‌‌ಯುವಿ?

ಮಾಹಿತಿಗಳ ಪ್ರಕಾರ, ಮಹೀಂದ್ರಾ ಮತ್ತು ಫೋರ್ಡ್ ಸಂಸ್ಥೆಯು ತನ್ನ ಮೊದಲ ಜಂಟಿ ಕಾರು ಆವೃತ್ತಿಯನ್ನು 2020ರ ಆರಂಭದಲ್ಲಿ ಬಿಡುಗಡೆ ಮಾಡಲಿದ್ದು, ತದನಂತರ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಒಟ್ಟು ಒಂಬತ್ತು ವಿವಿಧ ನಮೂನೆಯ ಎಸ್‌ಯುವಿ ಮತ್ತು ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳನ್ನು ಬಿಡುಗಡೆ ಮಾಡಲಿದೆಯೆಂತೆ.

MOST READ: ಒಂದೇ ನೋಂದಣಿ ಸಂಖ್ಯೆಯಲ್ಲಿ ಎರಡು ಕಾರು- ಕೊನೆಗೂ ತಗ್ಲಾಕಿಕೊಂಡ ನೋಡಿ ನಕಲಿ ಮಾಲೀಕ

ಭಾರತದಲ್ಲೂ ಬಿಡುಗಡೆಯಾಗಲಿದೆ ಫೋರ್ಡ್ ಪುಮಾ ಕಂಪ್ಯಾಕ್ಟ್ ಎಸ್‌‌ಯುವಿ?

ಇದೇ ಕಾರಣಕ್ಕೆ ಸಹಭಾಗಿತ್ವ ಯೋಜನೆಗಾಗಿ ಎರಡು ಸಂಸ್ಥೆಗಳು ಬರೋಬ್ಬರಿ ರೂ. 4,300 ಕೋಟಿ ಬಂಡವಾಳ ಹೂಡಿಕೆ ಮಾಡಿದ್ದು, ಹೊಸ ಯೋಜನೆ ಅಡಿ ನಿರ್ಮಾಣವಾಗುವ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಹೆಸರಿನೊಂದಿಗೆ ಮತ್ತು ವಿದೇಶಿ ಮಾರುಕಟ್ಟೆಗೆ ರಫ್ತುಗೊಳ್ಳುವ ಕಾರುಗಳಿಗೆ ಫೋರ್ಡ್ ಬ್ಯಾಡ್ಜ್ ಬಳಕೆಯೊಂದಿಗೆ ಮಾರಾಟಗೊಳ್ಳಲಿವೆ.

Article Published On: Wednesday, June 26, 2019, 13:02 [IST]
English summary
New Ford Puma Compact-SUV Unveiled
Read more on ಫೋರ್ಡ್ ford
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+