2020ರ ಹೋಂಡಾ ಸಿಟಿ ಕಾರಿನಲ್ಲಿರುವ ಫೀಚರ್‍‍ಗಳಿವು..!

ಹೊಸ ತಲೆಮಾರಿನ ಹೋಂಡಾ ಸಿಟಿ ಕಾರ್ ಅನ್ನು ಮೊದಲ ಬಾರಿಗೆ ಥೈಲ್ಯಾಂಡ್‍‍ನಲ್ಲಿ ಅನಾವರಣಗೊಳಿಸಲಾಗಿದೆ. ಈ ಕಾರಿನಲ್ಲಿ ಹಲವು ಹೊಸ ಫೀಚರ್‍‍ಗಳನ್ನು ಅಳವಡಿಸಲಾಗಿದೆ. ಮುಂಬರುವ ತಿಂಗಳುಗಳಲ್ಲಿ ಈ ಕಾರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗುವುದು.

2020ರ ಹೋಂಡಾ ಸಿಟಿ ಕಾರಿನಲ್ಲಿರುವ ಫೀಚರ್‍‍ಗಳಿವು..!

ವಿಶ್ವ ಮಾರುಕಟ್ಟೆಯಲ್ಲಿರುವ ಹೋಂಡಾ ಸಿಟಿಯ 7ನೇ ತಲೆಮಾರಿನ ಕಾರ್ ಅನ್ನು ಅಪ್‍‍ಗ್ರೇಡ್‍‍ಗೊಳಿಸಲಾಗಿದೆ. ಈ ಕಾರು ಮಿಡ್ ರೇಂಜ್ ಸೆಡಾನ್ ಕಾರು ಪ್ರಿಯರ ನೆಚ್ಚಿನ ಕಾರ್ ಆಗಿದೆ. ಈ ಲೇಖನದಲ್ಲಿ ಇನ್ನು ಕೆಲ ದಿನಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಹೋಂಡಾ ಸಿಟಿ ಕಾರಿನಲ್ಲಿರುವ ಫೀಚರ್‍‍ಗಳ ಬಗ್ಗೆ ನೋಡೋಣ.

2020ರ ಹೋಂಡಾ ಸಿಟಿ ಕಾರಿನಲ್ಲಿರುವ ಫೀಚರ್‍‍ಗಳಿವು..!

ಕಾರಿನ ಲುಕ್

ಈ ಕಾರು ಹೊಸ ಹೋಂಡಾ ಅಕಾರ್ಡ್ ಹಾಗೂ ಸಿವಿಕ್ ಕಾರುಗಳಂತೆ ಕಾಣುತ್ತದೆ. ಮಾರುಕಟ್ಟೆಯಲ್ಲಿರುವ ಹೋಂಡಾ ಸಿಟಿ ಕಾರಿಗಿಂತ ವಿಭಿನ್ನವಾದ ವಿನ್ಯಾಸವನ್ನು ಈ ಕಾರಿಗೆ ನೀಡಲಾಗಿದೆ. ಈ ಕಾರಿನ ಮುಂಭಾಗದಲ್ಲಿ ಕ್ರೋಮ್ ಬಾರ್ ಗ್ರಿಲ್ ಸಿಸ್ಟಂ, ಬಲಶಾಲಿಯಾದ ಬಂಪರ್, ಎಲ್‍ಇ‍‍ಡಿ ಪ್ರೊಜೆಕ್ಟರ್ ಹೆಡ್‍‍ಲೈಟ್ ಹಾಗೂ ಡಿ‍ಆರ್‍ಎಲ್‍‍ಗಳಿವೆ.

2020ರ ಹೋಂಡಾ ಸಿಟಿ ಕಾರಿನಲ್ಲಿರುವ ಫೀಚರ್‍‍ಗಳಿವು..!

ವಿನ್ಯಾಸ

ಹೊಸ ಹೋಂಡಾ ಸಿಟಿ ಕಾರಿನ ರೂಫ್ ಅನ್ನು ಬದಲಿಸಲಾಗಿದೆ. ಶೋಲ್ಡರ್ ಲೈನ್ ಹೆಡ್ ಲೈಟ್‍ನಿಂದ ಟೇಲ್ ಲೈಟ್‍‍ವರೆಗೆ ಚಾಚಿಕೊಂಡಿದೆ. ಕಾರಿನಲ್ಲಿರುವ ಡೈಮಂಡ್ ಕಟ್ ಅಲಾಯ್ ವ್ಹೀಲ್‍‍ಗಳು ಕಾರಿಗೆ ವಿಶೇಷ ಲುಕ್ ನೀಡುತ್ತವೆ. ಟೇಲ್‍‍ಲೈಟಿನಲ್ಲಿ ಎಲ್‍ಇ‍‍ಡಿ ಲ್ಯಾಂಪ್‍‍ಗಳನ್ನು ಅಳವಡಿಸಲಾಗಿದೆ. ಬಂಪರ್ ಸಿಸ್ಟಂಗಳು ವಿಶೇಷವಾಗಿದ್ದು ಬಲಶಾಲಿಯಾಗಿವೆ.

2020ರ ಹೋಂಡಾ ಸಿಟಿ ಕಾರಿನಲ್ಲಿರುವ ಫೀಚರ್‍‍ಗಳಿವು..!

ಇಂಟಿರಿಯರ್

ಹೊಸ ಕಾರಿನ ಇಂಟಿರಿಯರ್‍‍ನಲ್ಲಿ ಹೊಸ ಡ್ಯಾಶ್‍‍ಬೋರ್ಡ್ ಸಿಸ್ಟಂ ಅಳವಡಿಸಲಾಗಿದೆ. ಹೊಸ ಕಾರಿನಲ್ಲಿ 8.0 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ, ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹಾಗೂ 3 ಸ್ಪೋಕಿನ ಸ್ಟೀಯರಿಂಗ್ ವ್ಹೀಲ್‍‍ಗಳನ್ನು ಅಳವಡಿಸಲಾಗಿದೆ.

2020ರ ಹೋಂಡಾ ಸಿಟಿ ಕಾರಿನಲ್ಲಿರುವ ಫೀಚರ್‍‍ಗಳಿವು..!

ಐಷಾರಾಮಿ ಸೀಟುಗಳು

ಐಷಾರಾಮಿ ಅನುಭವಕ್ಕಾಗಿ ಹೊಸ ಕಾರಿನಲ್ಲಿ ಹೆಚ್ಚಿನ ಗುಣಮಟ್ಟದ ಸೀಟುಗಳನ್ನು ಅಳವಡಿಸಲಾಗಿದೆ. ಕಾರಿನ ವ್ಹೀಲ್‍‍ಬೇಸ್‍‍ನಲ್ಲಿರುವ ಉದ್ದವು ಸ್ವಲ್ಪ ಚಿಕ್ಕದು ಎನಿಸಿದರೂ ಹಿಂಭಾಗದಲ್ಲಿರುವ ಸೀಟುಗಳು ಹೆಚ್ಚಿನ ಸ್ಪೇಸ್ ನೀಡುತ್ತವೆ.

2020ರ ಹೋಂಡಾ ಸಿಟಿ ಕಾರಿನಲ್ಲಿರುವ ಫೀಚರ್‍‍ಗಳಿವು..!

ಹೊಸ ಟರ್ಬೊ ಎಂಜಿನ್

ಥೈಲ್ಯಾಂಡ್‍‍ನಲ್ಲಿ ಅನಾವರಣಗೊಂಡಿರುವ ಹೊಸ ಕಾರಿನಲ್ಲಿ ಹೆಚ್ಚು ಗಮನ ಸೆಳೆದ ಅಂಶವೆಂದರೆ ಈ ಕಾರಿನಲ್ಲಿರುವ 1.0 ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್. ಈ ಎಂಜಿನ್ 120 ಬಿ‍‍ಹೆಚ್‍‍ಪಿ ಪವರ್ ಹಾಗೂ 200 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ಗೆ ಸಿವಿಟಿ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ. ಈ ಕಾರು ಪ್ರತಿ ಲೀಟರ್ ಪೆಟ್ರೋಲಿಗೆ 23.8 ಕಿ.ಮೀ ಮೈಲೇಜ್ ನೀಡುತ್ತದೆ.

MOST READ: ಡಿಸೆಂಬರ್ 1ರಿಂದ ಜಾರಿಗೆ ಬರಲಿರುವ ಫಾಸ್ಟ್‌ಟ್ಯಾಗ್ ಬಗ್ಗೆ ನಿಮಗೆಷ್ಟು ಗೊತ್ತು?

2020ರ ಹೋಂಡಾ ಸಿಟಿ ಕಾರಿನಲ್ಲಿರುವ ಫೀಚರ್‍‍ಗಳಿವು..!

ಆರ್‍ಎಸ್ ಮಾದರಿ

ಆರ್‍ಎಸ್ ಮಾದರಿಯ ಕಾರಿನಲ್ಲಿ ಬಾಡಿ ಸ್ಕರ್ಟ್, ಬ್ಲಾಕ್ ಗ್ರಿಲ್, ಸೈಡ್ ಮಿರರ್, ರೇರ್ ಸ್ಪಾಯಿಲರ್, ಲೆದರ್ ಅಪ್‍‍ಹೊಲೆಸ್ಟರಿ ಸೇರಿದಂತೆ ಹಲವಾರು ಫೀಚರ್‍‍ಗಳನ್ನು ನೀಡಲಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

2020ರ ಹೋಂಡಾ ಸಿಟಿ ಕಾರಿನಲ್ಲಿರುವ ಫೀಚರ್‍‍ಗಳಿವು..!

ಎಂಜಿನ್

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಹೋಂಡಾ ಸಿಟಿ ಕಾರಿನಲ್ಲಿ 1.0 ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್ ಅಳವಡಿಸಲಾಗುತ್ತದೆಯೇ ಇಲ್ಲವೇ ಎಂಬುದನ್ನು ಹೋಂಡಾ ಕಂಪನಿಯು ಖಚಿತಪಡಿಸಿಲ್ಲ. ಆದರೆ 1.5 ಲೀಟರಿನ ಪೆಟ್ರೋಲ್ ಹಾಗೂ 1.5 ಲೀಟರಿನ ಡೀಸೆಲ್ ಎಂಜಿನ್‍‍ನೊಂದಿಗೆ ಈ ಕಾರ್ ಅನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

2020ರ ಹೋಂಡಾ ಸಿಟಿ ಕಾರಿನಲ್ಲಿರುವ ಫೀಚರ್‍‍ಗಳಿವು..!

ಪವರ್ ಅಂಕಿ ಅಂಶ

1.5 ಲೀಟರಿನ ಪೆಟ್ರೋಲ್ ಎಂಜಿನ್ 117 ಬಿ‍‍ಹೆಚ್‍‍ಪಿ ಪವರ್ ಹಾಗೂ 145 ಎನ್‍ಎಂ ಟಾರ್ಕ್ ಉತ್ಪಾದಿಸಿದರೆ, 1.5 ಲೀಟರಿನ ಡೀಸೆಲ್ ಎಂಜಿನ್ 99 ಬಿ‍ಹೆಚ್‍ಪಿ ಪವರ್ ಹಾಗೂ 200 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ಗಳನ್ನು ಬಿ‍ಎಸ್ 6 ನಿಯಮಗಳಿಗೆ ತಕ್ಕಂತೆ ಅಪ್‍‍ಗ್ರೇಡ್‍‍ಗೊಳಿಸಿ ಮಾರಾಟ ಮಾಡಲಾಗುವುದು.

2020ರ ಹೋಂಡಾ ಸಿಟಿ ಕಾರಿನಲ್ಲಿರುವ ಫೀಚರ್‍‍ಗಳಿವು..!

ಸುರಕ್ಷಾ ಫೀಚರ್‍‍ಗಳು

ಹೊಸ ಹೋಂಡಾ ಸಿಟಿ ಕಾರಿನಲ್ಲಿ 6 ಏರ್‍‍ಬ್ಯಾಗ್, ಮಲ್ಟಿ ಆಂಗಲ್ ರೇರ್ ವೀವ್ ಕ್ಯಾಮರಾ, ಹಿಲ್ ಸ್ಟಾರ್ಟ್ ಅಸಿಸ್ಟ್, ವೆಹಿಕಲ್ ಸ್ಟಾಬಿಲಿಟಿ ಮ್ಯಾನೇಜ್‍‍ಮೆಂಟ್ ಸಿಸ್ಟಂ ಹಾಗೂ ಎ‍‍ಬಿ‍ಎಸ್ ಬ್ರೇಕಿಂಗ್ ಸಿಸ್ಟಂ ಸೇರಿದಂತೆ ಹಲವಾರು ಸುರಕ್ಷಾ ಫೀಚರ್‍‍ಗಳನ್ನು ನೀಡಲಾಗುವುದು.

2020ರ ಹೋಂಡಾ ಸಿಟಿ ಕಾರಿನಲ್ಲಿರುವ ಫೀಚರ್‍‍ಗಳಿವು..!

ಬೆಲೆಗಳು

ಹೊಸ ಹೋಂಡಾ ಸಿಟಿ ಕಾರ್ ಅನ್ನು ಮುಂದಿನ ವರ್ಷದ ಮಧ್ಯ ಭಾಗದಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಾಗುವುದು. ಮಾರುಕಟ್ಟೆಯಲ್ಲಿರುವ ಹೋಂಡಾ ಸಿಟಿ ಕಾರು ರೂ.9.80 ಲಕ್ಷದಿಂದ ರೂ.14.14 ಲಕ್ಷದವರೆಗಿನ ಬೆಲೆಯನ್ನು ಹೊಂದಿದೆ.

2020ರ ಹೋಂಡಾ ಸಿಟಿ ಕಾರಿನಲ್ಲಿರುವ ಫೀಚರ್‍‍ಗಳಿವು..!

ಹೊಸ ಕಾರು ಇದಕ್ಕಿಂತ ಹೆಚ್ಚಿನ ಬೆಲೆಯನ್ನು ಹೊಂದಿರಲಿದೆ. ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ 2020ರ ಹೋಂಡಾ ಸಿಟಿ ಕಾರು ಸಿಯಾಜ್ ಹಾಗೂ ವರ್ನಾ ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
Read more on ಹೋಂಡಾ honda
English summary
New Honda city top things you should know - Read in Kannada
Story first published: Tuesday, November 26, 2019, 12:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X