ಬಹಿರಂಗವಾಯ್ತು ಹೊಸ ಕ್ರೆಟಾ ಇಂಟಿರಿಯರ್ ಚಿತ್ರಗಳು

ಹ್ಯುಂಡೈ ಇಂಡಿಯಾ, ದೇಶಿಯ ಮಾರುಕಟ್ಟೆಯಲ್ಲಿರುವ ತನ್ನ ಜನಪ್ರಿಯ ಎಸ್‍‍ಯುವಿಯಾದ ಕ್ರೆಟಾವನ್ನು ಅಪ್‍‍ಡೇಟ್‍‍ಗೊಳಿಸುತ್ತಿದೆ. 2020ರ ಹೊಸ ಹ್ಯುಂಡೈ ಕ್ರೆಟಾ ಎಸ್‍‍‍ಯುವಿ 2020ರ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಬಹಿರಂಗವಾಯ್ತು ಹೊಸ ಕ್ರೆಟಾ ಇಂಟಿರಿಯರ್ ಚಿತ್ರಗಳು

ದೇಶಿಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷ ಬಿಡುಗಡೆಯಾಗಲಿರುವ ಹೊಸ ಕ್ರೆಟಾದ ಇಂಟಿರಿಯರ್ ಚಿತ್ರಗಳು ಆನ್‍‍ಲೈನ್‍‍ನಲ್ಲಿ ಸೋರಿಕೆಯಾಗಿವೆ. ಈ ಚಿತ್ರಗಳನ್ನು ಆಟೋಹೋಂ ಆನ್‍‍ಲೈನ್‍‍ನಲ್ಲಿ ಬಿಡುಗಡೆಗೊಳಿಸಿದೆ. ಈ ಚಿತ್ರಗಳಲ್ಲಿ ಕಾಣುವ ಇಂಟಿರಿಯರ್‍‍ಗಳು ಇತ್ತೀಚಿಗೆ ಬೀಜಿಂಗ್‍‍ನ ಆಟೋ ಶೋದಲ್ಲಿ ಪ್ರದರ್ಶಿಸಲಾದ, ಹ್ಯುಂಡೈ ಐಎಕ್ಸ್25 ಉತ್ಪಾದನಾ ಆವೃತ್ತಿಯ ಇಂಟಿರಿಯರ್‍‍ಗಳಾಗಿವೆ. ಹೊಸ ಕ್ರೆಟಾದಲ್ಲಿರುವ ಇಂಟಿರಿಯರ್‍‍ನಲ್ಲಿ ಹಲವಾರು ಬದಲಾವಣೆಗಳನ್ನು ಕಾಣಬಹುದು.

ಬಹಿರಂಗವಾಯ್ತು ಹೊಸ ಕ್ರೆಟಾ ಇಂಟಿರಿಯರ್ ಚಿತ್ರಗಳು

ಈಗ ಮಾರುಕಟ್ಟೆಯಲ್ಲಿರುವ ಕಾರಿಗಿಂತ ಹೆಚ್ಚು ಪ್ರಿಮೀಯಂ ಫೀಚರ್‍‍ಗಳನ್ನು ಹೊಸ ಕ್ರೆಟಾ ಎಸ್‍‍ಯುವಿ ಹೊಂದಿದೆ. ಹೊಸ ಕ್ರೆಟಾ ಕಾರಿನ ಇಂಟಿರಿಯರ್ ಅಪ್ ಹೊಲೆಸ್ಟರಿ, ಸೆಂಟರ್ ಕಂಸೋಲ್, ಡ್ಯಾಶ್ ಬೋರ್ಡ್ ಸೇರಿದಂತೆ ಎಲ್ಲ ಫೀಚರ್‍‍ಗಳನ್ನು ಕಪ್ಪು ಬಣ್ಣದಲ್ಲಿ ಹೊಂದಿದೆ.

ಬಹಿರಂಗವಾಯ್ತು ಹೊಸ ಕ್ರೆಟಾ ಇಂಟಿರಿಯರ್ ಚಿತ್ರಗಳು

ಸೆಂಟರ್ ಕಂಸೋಲ್ ಸಿಲ್ವರ್ ಅಸೆಂಟ್ ಹೊಂದಿದ್ದು, ಈ ಎಸ್‍‍ಯುವಿಗೆ ಪ್ರೀಮಿಯಂ ಲುಕ್ ನೀಡುತ್ತದೆ. ಸ್ಪೈ ಚಿತ್ರಗಳಲ್ಲಿ ದೊಡ್ಡ ಗಾತ್ರದ ಟಚ್‌ಸ್ಕ್ರೀನ್ ಡಿಸ್‍‍ಪ್ಲೇಯನ್ನು ಸಹ ಕಾಣಬಹುದು. ಈ ಡಿಸ್‍‍ಪ್ಲೇಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದ ಎಂಜಿ ಹೆಕ್ಟರ್‌ನಲ್ಲಿರುವಂತೆ ವರ್ಟಿಕಲ್ ಆಗಿ ಜೋಡಿಸಲಾಗಿದೆ.

ಬಹಿರಂಗವಾಯ್ತು ಹೊಸ ಕ್ರೆಟಾ ಇಂಟಿರಿಯರ್ ಚಿತ್ರಗಳು

ಈ ಡಿಸ್‍‍‍ಪ್ಲೇ ಯಾವುದೇ ಫಿಸಿಕಲ್ ಬಟನ್‍‍ಗಳನ್ನು ಹೊಂದಿಲ್ಲ. ಎಲ್ಲಾ ಕಂಟ್ರೊಲ್‍‍ಗಳನ್ನು ಡಿಸ್‍‍ಪ್ಲೇನಲ್ಲಿ ಇಂಟಿಗ್ರೇಟ್ ಮಾಡಲಾಗಿದೆ. ಹೊಸ ಎಸ್‍‍ಯುವಿಯಲ್ಲಿರುವ ಇನ್ನಿತರ ಫೀಚರ್‍‍ಗಳೆಂದರೆ ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್‍‍ಗಳಿವೆ.

ಬಹಿರಂಗವಾಯ್ತು ಹೊಸ ಕ್ರೆಟಾ ಇಂಟಿರಿಯರ್ ಚಿತ್ರಗಳು

ಇದರ ಜೊತೆಗೆ 360 ಡಿಗ್ರಿಯ ಪಾರ್ಕಿಂಗ್ ಕ್ಯಾಮರಾ ಹಾಗೂ ಸ್ಟೀಯರಿಂಗ್ ಮೌಂಟೆಡ್ ಆಡಿಯೋ ಹಾಗೂ ಕ್ರೂಸ್ ಕಂಟ್ರೋಲ್ ಫಂಕ್ಷನ್‍‍ಗಳಿವೆ. ಈ ಎಸ್‍‍ಯುವಿ ಹ್ಯುಂಡೈ ಕಂಪನಿಯ ಇತ್ತೀಚಿನ ಬ್ಲೂ ಲಿಂಕ್ ಕನೆಕ್ಟಿವಿಟಿ ಟೆಕ್ನಾಲಜಿ ಹೊಂದುವ ನಿರೀಕ್ಷೆಗಳಿವೆ.

ಬಹಿರಂಗವಾಯ್ತು ಹೊಸ ಕ್ರೆಟಾ ಇಂಟಿರಿಯರ್ ಚಿತ್ರಗಳು

ಈ ಫೀಚರ್ ಅನ್ನು ಮೊದಲ ಬಾರಿಗೆ ವೆನ್ಯೂ ಕಾಂಪ್ಯಾಕ್ಟ್ ಎಸ್‍‍ಯುವಿಯಲ್ಲಿ ಅಳವಡಿಸಲಾಗಿದೆ. ಹೊಸ ಕ್ರೆಟಾ ಎಸ್‍‍ಯುವಿಯಲ್ಲಿರುವ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಇ-ಸಿಮ್‍‍ನೊಂದಿಗೆ ಬರಲಿದೆ. ಇದರ ಜೊತೆಗೆ ವಾಯ್ಸ್ ಎನೆಬಲ್ಡ್ ಫಂಕ್ಷನ್‍‍ಗಳಿರಲಿವೆ.

MOST READ: ಈ ನಟಿ ಈಗ ಟುಕ್‍‍ಟುಕ್ ಆಟೋರಾಣಿ..!

ಬಹಿರಂಗವಾಯ್ತು ಹೊಸ ಕ್ರೆಟಾ ಇಂಟಿರಿಯರ್ ಚಿತ್ರಗಳು

ಇನ್ನೂ ಹೊಸ ಎಸ್‍‍ಯುವಿಯಲ್ಲಿರುವ ಎಂಜಿನ್ ಅಂಶಗಳ ಬಗ್ಗೆ ಹೇಳುವುದಾದರೆ, ಹ್ಯುಂಡೈ ಕಂಪನಿಯು ತನ್ನ ಸರಣಿಯಲ್ಲಿರುವ 1.4 ಲೀಟರಿನ ಡೀಸೆಲ್, 1.6 ಲೀಟರಿನ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‍‍ಗಳನ್ನು ಸ್ಥಗಿತಗೊಳಿಸಲಿದೆ.

MOST READ: ಪೊಲೀಸ್ ಸ್ಟಿಕ್ಕರ್ ಅಂಟಿಸಿಕೊಂಡು ಸಿಕ್ಕಿಬಿದ್ದ ಐನಾತಿ..!

ಬಹಿರಂಗವಾಯ್ತು ಹೊಸ ಕ್ರೆಟಾ ಇಂಟಿರಿಯರ್ ಚಿತ್ರಗಳು

ಈ ಎಂಜಿನ್‍‍ಗಳ ಬದಲಿಗೆ ಕಿಯಾ ಸೆಲ್ಟೋಸ್‍‍ನಲ್ಲಿರುವಂತಹ 1.4 ಲೀಟರಿನ ಟಿ‍‍ಜಿ‍‍ಡಿ‍ಐ ಪೆಟ್ರೋಲ್, 1.5 ಲೀಟರಿನ ಪೆಟ್ರೋಲ್ ಹಾಗೂ 1.5 ಲೀಟರಿನ ಡೀಸೆಲ್ ಎಂಜಿನ್‍‍ಗಳನ್ನು ಅಳವಡಿಸಲಾಗುವುದು. ಈ ಎಲ್ಲಾ ಎಂಜಿನ್‍‍ಗಳನ್ನೂ ಬಿ‍ಎಸ್ 6 ನಿಯಮಗಳಿಗೆ ತಕ್ಕಂತೆ ಅಭಿವೃದ್ಧಿಪಡಿಸಲಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಬಹಿರಂಗವಾಯ್ತು ಹೊಸ ಕ್ರೆಟಾ ಇಂಟಿರಿಯರ್ ಚಿತ್ರಗಳು

ಹೊಸ ಹ್ಯುಂಡೈ ಕ್ರೆಟಾ ಎಸ್‍‍ಯುವಿಯನ್ನು ಹಲವಾರು ಬಾರಿ ಭಾರತದ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಹೊಸ ಎಸ್‍‍ಯುವಿಯ ಹೊರಭಾಗವು ಸಂಪೂರ್ಣವಾಗಿ ಹೊಸ ವಿನ್ಯಾಸವನ್ನು ಹೊಂದಿದೆ. ಈ ಎಸ್‍‍ಯುವಿಯನ್ನು 2020ರ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಬಹಿರಂಗವಾಯ್ತು ಹೊಸ ಕ್ರೆಟಾ ಇಂಟಿರಿಯರ್ ಚಿತ್ರಗಳು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹ್ಯುಂಡೈ ಕ್ರೆಟಾ ದೇಶಿಯ ಮಾರುಕಟ್ಟೆಯ ಮಧ್ಯಮ ಗಾತ್ರದ ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿ ಮುಂಚೂಣಿಯಲ್ಲಿದೆ. ಹ್ಯುಂಡೈ ಕಂಪನಿಯು 2020ರ ಕ್ರೆಟಾ ಎಸ್‍‍ಯುವಿಯನ್ನು ಬಿಡುಗಡೆಗೊಳಿಸಿದ ನಂತರವೂ ಅಗ್ರಸ್ಥಾನದಲ್ಲಿ ಮುಂದುವರೆಯುವ ಉದ್ದೇಶವನ್ನು ಹೊಂದಿದೆ. ದೇಶಿಯ ಮಾರುಕಟ್ಟೆಯಲ್ಲಿ ಹೊಸದಾಗಿ ಬಿಡುಗಡೆಯಾಗಿರುವ ಕಿಯಾ ಸೆಲ್ಟೋಸ್ ಹಾಗೂ ಎಂಜಿ ಹೆಕ್ಟರ್ ವಾಹನಗಳಿಂದಾಗಿ ಕ್ರೆಟಾ ಎಸ್‍‍ಯುವಿಯ ಮಾರಾಟವು ಕುಸಿಯುವ ಸಾಧ್ಯತೆಗಳಿವೆ.

Image Courtesy: chejiahao.autohome.com.cn

Most Read Articles

Kannada
English summary
2020 Hyundai Creta Interior Spy Pics Leaked: Features Floating Touchscreen, 360-Degree Camera & More - Read in kannada
Story first published: Thursday, August 29, 2019, 16:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X