ಬಿಡುಗಡೆಯಾಯ್ತು ಹೊಸ ಹ್ಯುಂಡೈ ಐ20 ಆಕ್ಟಿವ್ ಕಾರು

ಹ್ಯುಂಡೈ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಹೊಸ ಐ20 ಆಕ್ಟಿವ್ ಕಾರನ್ನು ಬಿಡುಗಡೆಗೊಳಿಸಲಾಗಿದೆ. ಹೊಸ 2019ರ ಹ್ಯುಂಡೈ ಐ20 ಆಕ್ಟಿವ್ ಕಾರಿಗೆ ಪ್ರಸ್ತುತ ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕ ಬೆಲೆಯು ರೂ.7.74 ಲಕ್ಷಗಳಾಗಿವೆ. ಹೊಸ ಹ್ಯುಂಡೈ ಐ20 ಮಾದರಿಯನ್ನು ಸಣ್ಣ ಮಟ್ಟದ ನವೀಕರಣವನ್ನು ನಡೆಸಲಾಗಿದೆ.

ಬಿಡುಗಡೆಯಾಯ್ತು ಹೊಸ ಹ್ಯುಂಡೈ ಐ20 ಆಕ್ಟಿವ್ ಕಾರು

ಹೊಸ ಹ್ಯುಂಡೈ ಐ20 ಆಕ್ಟಿವ್ ಕಾರಿನ ಬೆಲೆಯು ಹಿಂದಿನ ಮಾದರಿಗೆ ಹೋಲಿಸಿದರೆ ತುಸು ದುಬಾರಿಯಾಗಿದೆ. ಈ ಕಾರಿನಲ್ಲಿ ಕೆಲವು ಹೆಚ್ಚುವರಿ ವೈಶಿಷ್ಟ್ಯಗಳು ಮತ್ತು ಇತರ ಸುರಕ್ಷತಾ ಉಪಕರಣಗಳನ್ನು ಅಳವಡಿಸಲಾಗಿದೆ. ಹೊಸ ಐ20 ಆಕ್ಟಿವ್‍ ಕಾರಿನಲ್ಲಿ ಹೊಸದಾಗಿ ಕೆಲವು ಸುರಕ್ಷತಾ ಉಪಕರಣಗಳನ್ನು ಅಳವಡಿಸಲಾಗಿದೆ. ಇದರಲ್ಲಿ ರಿವರ್ಸ್ ಪಾರ್ಕಿಂಗ್ ಸೆನ್ಸಾರ್‍‍ಗಳು, ಸ್ಪೀಡ್ ಅಲರ್ಟ್ ಸಿಸ್ಟಂ, ಡ್ರೈವರ್ ಮತ್ತು ಫ್ರಂಟ್ ಪ್ಯಾಸೆಂಜರ್ ಸೀಟ್ ಬೆಲ್ಟ್ ರಿಮೈಂಡರ್ ಮತ್ತು ರಿವರ್ಸ್ ಪಾರ್ಕಿಂಗ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಹೊಸ ಹ್ಯುಂಡೈ ಐ20 ಆಕ್ಟಿವ್ ಕಾರು

2019ರ ಹೊಸ ಹ್ಯುಂಡೈ ಐ20 ಆಕ್ಟಿವ್‍‍ನಲ್ಲಿ ಇತರ ಹಲವಾರು ವೈಶಿಷ್ಟ್ಯಗಳಿವೆ. ಅದರಲ್ಲಿ ಕಾಂಟ್ರಾಸ್ಟ್ ಫಿನಿಶ್ ಹೊಂದಿರುವ ಎಸಿ ವೆಂಟ್ಸ್, ಸೀಟ್‍‍ಗಳನ್ನು ಹೊಂದಿದೆ ಮತ್ತು ಆಕರ್ಷಕವಾದ ಡ್ಯಾಶ್‍‍ಬೋರ್ಡ್ ಹೊಂದಿದೆ. ಈ ವೈಶಿಷ್ಟ್ಯಗಳನ್ನು ಹೊರತುಪಡಿಸಿ ಬೇರೆ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ.

ಬಿಡುಗಡೆಯಾಯ್ತು ಹೊಸ ಹ್ಯುಂಡೈ ಐ20 ಆಕ್ಟಿವ್ ಕಾರು

ಹ್ಯುಂಡೈ ಐ20 ಆಕ್ಟಿವ್ ಕಾರಿನಲ್ಲಿ ಅ್ಯಪಲ್ ಕಾರ್‍‍ಪ್ಲೇ, ಆಂಡ್ರಾಯ್ಡ್ ಆಟೋ, ಆಟೋ ಕ್ಲೈಮೇಟ್ ಕಂಟ್ರೋಲ್, ಕೀಲೆಸ್ ಎಂಟ್ರಿ, ವೈರ್‍‍ಲೆಸ್ ಚಾರ್ಜಿಂಗ್, ಪುಶ್-ಬಟನ್ ಸ್ಟಾರ್ಟ್-ಸ್ಟಾಪ್ ಮತ್ತು 7 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಹೊಸ ಹ್ಯುಂಡೈ ಐ20 ಆಕ್ಟಿವ್ ಕಾರು

ಹೊಸ ಹ್ಯುಂಡೈ ಐ20 ಆಕ್ಟಿವ್‍ ಕಾರು ವಿನ್ಯಾಸದಲ್ಲಿ ಯಾವುದೇ ಬದಲಾವಣೆಯನ್ನು ನಡೆಸಿಲ್ಲ, ಹಳೇಯ ವಿನ್ಯಾಸವನ್ನೇ ಮುಂದುವರೆಸಿದೆ. ಹೊಸ ಕಾರಿನಲ್ಲಿ ಎಲ್‍ಇ‍ಡಿ ಹೆ‍ಡ್‍ಲ್ಯಾಂಪ್, ಡಿಆರ್‍ಎಲ್ ಮತ್ತು ಟೇಲ್ ಲ್ಯಾಂಪ್, ಫಾಗ್ ಲ್ಯಾಂಪ್ ಪ್ಲಾಸ್ಟಿಕ್ ಬಾಡಿ-ಕ್ಲಾಡಿಂಗ್, ಡೈಮೆಂಡ್ ಕಟ್ ಅಲಾಯ್ ವ್ಹೀಲ್ ಮತ್ತು ಮುಂಭಾಗದ ಬಂಪರ್‍‍ನಲ್ಲಿ ಫಾಕ್ಸ್ ಸ್ಕಿಡ್ ಪ್ಲೇಟ್‍‍ಗಳು ಹೊಂದಿವೆ. ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವ ಹೊಸ ಕಾರು ಆಕರ್ಷಕ ಲುಕ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಹೊಸ ಹ್ಯುಂಡೈ ಐ20 ಆಕ್ಟಿವ್ ಕಾರು

ಹ್ಯುಂಡೈ ಐ20 ಆಕ್ಟಿವ್ ಅನ್ನು ಎಸ್, ಎಸ್ಎಕ್ಸ್ ಮತ್ತು ಎಸ್ಎಕ್ಸ್ ಡ್ಯುಯಲ್ ಟೋನ್ ಎಂಬ ಮೂರು ರೂಪಾಂತರಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಎಲ್ಲಾ ಮೂರು ರೂಪಾಂತರಗಳು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ 1.2 ಲೀಟರ್ ಪೆಟ್ರೋಲ್ ಮತ್ತು 1.4 ಲೀಟರ್ ಡೀಸೆಲ್ ಆಯ್ಕೆಗಳನ್ನು ಒಳಗೊಂಡಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಬಿಡುಗಡೆಯಾಯ್ತು ಹೊಸ ಹ್ಯುಂಡೈ ಐ20 ಆಕ್ಟಿವ್ ಕಾರು

ಹೊಸ ಕಾರಿನಲ್ಲಿರುವ 1.2 ಲೀಟರ್ ಪೆಟ್ರೋಲ್ ಎಂಜಿನ್ 82 ಬಿ‍ಹೆಚ್‍ಪಿ ಪವರ್ ಮತ್ತು 115 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 1.4 ಲೀಟರ್ ಡೀಸೆಲ್ ಎಂಜಿನ್ 89 ಬಿ‍ಹೆಚ್‍ಪಿ ಪವರ್ ಮತ್ತು 220 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎರಡು ಎಂಜಿನ್‍ಗಳೊಂದಿಗೆ ಸ್ಟ್ಯಾಂಡರ್ಡ್ 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಟಾಪ್-ಸ್ಪೆಕ್ ಎಸ್‍ಎಕ್ಸ್ ರೂಪಾಂತರದಲ್ಲಿ ಮಾತ್ರ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಬಿಡುಗಡೆಯಾಯ್ತು ಹೊಸ ಹ್ಯುಂಡೈ ಐ20 ಆಕ್ಟಿವ್ ಕಾರು

ಹೊಸ ಹ್ಯುಂಡೈ ಐ20 ಆಕ್ಟಿವ್ ಕೇವಲ ಸಣ್ಣ ಮಟ್ಟದ ನವೀಕರಣವನ್ನು ಮಾಡಿ ಬಿಡುಗಡೆಗೊಳಿಸಿದೆ. ಹ್ಯುಂಡೈ ಹಲವಾರು ಸುರಕ್ಷಾತ ಉಪಕರಣಗಳನ್ನು ಅಳವಡಿಸಲಾಗಿದೆ. ಹೊಸ ಹ್ಯುಂಡೈ ಐ20 ಆಕ್ಟಿವ್ ದೇಶಿಯ ಮಾರುಕಟ್ಟೆಯಲ್ಲಿ ಪೋಕ್ಸ್ ವ್ಯಾಗನ್ ಪೊಲೊ ಕಾರಿಗೆ ಪೈಪೋಟಿಯನ್ನು ನೀಡಲಿದೆ.

Most Read Articles

Kannada
English summary
New (2019) Hyundai I20 Active Launched In india: Prices Start At Rs 7.74 Lakh - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X