ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ 2019ರ ಹ್ಯುಂಡೈ ಸ್ಯಾಂಟ್ರೋ ಅಪ್‌ಡೆಟ್
ಹ್ಯುಂಡೈ ಇಂಡಿಯಾ ಸಂಸ್ಥೆಯು ತನ್ನ ಜನಪ್ರಿಯ ಸ್ಯಾಂಟ್ರೋ ಹ್ಯಾಚ್‌ಬ್ಯಾಕ್ ಕಾರನ್ನು ಹೊಸ ಸುರಕ್ಷಾ ಮಾನದಂಡಗಳಿಗೆ ಅನುಗುಣವಾಗಿ ಉನ್ನತೀಕರಿಸಿದ್ದು, ಸುಧಾರಿತ ತಂತ್ರಜ್ಞಾನ ಸೌಲಭ್ಯಗಳಿಂದಾಗಿ ಸ್ಯಾಂಟ್ರೋ ಕಾರಿನ ಬೆಲೆಗಳು ಕೂಡಾ ತುಸು ದುಬಾರಿ ಎನ್ನಿಸಲಿವೆ.

ಕಳೆದ ವರ್ಷ ನವೆಂಬರ್‌ನಲ್ಲಿ ಸ್ಯಾಂಟ್ರೋ ಕಾರನ್ನು ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹೊಸ ವಿನ್ಯಾಸದಲ್ಲಿ ಪರಿಚಯಿಸಿದ್ದ ಹ್ಯುಂಡೈ ಸಂಸ್ಥೆಯು ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ್ನೇ ಸೃಷ್ಠಿಸಿತ್ತು. ಇದೀಗ ಹೊಸ ಸ್ಯಾಂಟ್ರೋ ಕಾರಿನ ಮಾರಾಟದಲ್ಲಿ ಕೆಲವು ಬದಲಾವಣೆಗಳನ್ನು ತಂದಿರುವ ಹ್ಯುಂಡೈ ಸಂಸ್ಥೆಯು ಹೊಸ ಸುರಕ್ಷಾ ಮಾನದಂಡಗಳಿಗೆ ಅನುಗುಣವಾಗಿ ಸ್ಯಾಂಟ್ರೋ ಆರಂಭಿಕ ಆವೃತ್ತಿಯಲ್ಲಿ ಹೆಚ್ಚಿನ ಮಟ್ಟದ ತಾಂತ್ರಿಕ ಅಂಶಗಳನ್ನು ಸೇರ್ಪಡೆಗೊಳಿಸಿದೆ.

ಕಳೆದ ವರ್ಷದ ಸ್ಯಾಂಟ್ರೋ ಕಾರನ್ನು ಡಿಲೈಟ್, ಎರಾ, ಮ್ಯಾಗ್ನಾ, ಸ್ಪೋಟ್ಜ್, ಆಸ್ಟ್ರಾ ಎನ್ನುವ ಐದು ಆವೃತ್ತಿಗಳಲ್ಲಿ ಬಿಡುಗಡೆ ಮಾಡಿತ್ತು. ಆದ್ರೆ ಇದರಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿರುವ ಎರಾ ಆವೃತ್ತಿಯನ್ನು ಈ ಬಾರಿ ಸ್ಥಗಿತಗೊಳಿಸಿರುವ ಹ್ಯುಂಡೈ ಸಂಸ್ಥೆಯು ಡಿಲೈಟ್ ಮತ್ತು ಮ್ಯಾಗ್ನಾ ಕಾರುಗಳಲ್ಲಿ ಕೆಲವು ತಾಂತ್ರಿಕ ಸೌಲಭ್ಯಗಳನ್ನು ಉನ್ನತಿಕರಿಸಿದೆ.

ಆರಂಭಿಕ ಮಾದರಿಯಾದ ಡಿಲೈಟ್ ಆವೃತ್ತಿಯು ಈ ಬಾರಿ ಎಸಿ ಸೌಲಭ್ಯವನ್ನು ಪಡೆದುಕೊಂಡಿರುವುದಲ್ಲದೇ ಬಾಡಿ ಕಲರ್ ಫ್ರಂಟ್ ಬಂಪರ್, ಡ್ಯುಯಲ್ ಟೋನ್ ರಿಯರ್ ಬಂಪರ್ ಮತ್ತು ಮುಂಭಾಗದಲ್ಲಿ ಪವರ್ ವಿಂಡೋ ಸೌಲಭ್ಯವನ್ನು ಪಡೆದಿದೆ.

ಹಾಗೆಯೇ ಮ್ಯಾಗ್ನಾ ಪೆಟ್ರೋಲ್ ಮತ್ತು ಸಿಎನ್‌ಜಿ ಆವೃತ್ತಿಯಲ್ಲಿ ಫ್ರಂಟ್ ಡೋರ್ ಸ್ಪೀಕರ್ಸ್ ವೈಶಿಷ್ಟ್ಯತೆಯ ಹೊಸ ಮ್ಯೂಸಿಕ್ ಸಿಸ್ಟಂ ಜೋಡಣೆ ಮಾಡಲಾಗಿದ್ದು, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ ಸೌಲಭ್ಯವನ್ನು ಜೋಡಣೆ ಮಾಡಲಾಗಿದೆ. ಇದರಲ್ಲಿ ಸ್ಪೋರ್ಟ್ಜ್ ಪ್ಲಸ್ ಮಾದರಿ ಕೂಡಾ ಸಹ ಪ್ರಯಾಣಿಕರ ವಿಭಾಗದ ಏರ್‌ಬ್ಯಾಗ್, ರಿಯಲ್ ವ್ಯೂ ಕ್ಯಾಮೆರಾ ಮತ್ತು ಸೀಟ್ ಬೆಲ್ಟ್ ರಿಮೆಂಡರ್ ಸೌಲಭ್ಯ ಪಡೆದಿದೆ.

ಹೊಸ ಸುರಕ್ಷಾ ಸೌಲಭ್ಯಗಳಿಂದಾಗಿ ಸ್ಯಾಂಟ್ರೋ ಕಾರುಗಳ ಬೆಲೆಯು ರೂ.15 ಸಾವಿರದಷ್ಟು ಹೆಚ್ಚಳವಾಗಿದ್ದು, ಹೊಸ ಸೌಲಭ್ಯ ಪ್ರೇರಿತ ಕಾರನ್ನು ಖರೀದಿ ಮಾಡಲು ಬಯಸುವ ಗ್ರಾಹಕರನ್ನು ಇಂದಿನಿಂದಲೇ ಬುಕ್ಕಿಂಗ್ ಕೂಡಾ ಮಾಡಬಹುದು.

ಇನ್ನು ಪ್ರೀಮಿಯಂ ಇಂಟಿರಿಯರ್ ವೈಶಿಷ್ಟ್ಯತೆಗಳನ್ನು ಹೊತ್ತು ಬಂದಿರುವ ಹೊಸ ಸ್ಯಾಂಟ್ರೋ ಕಾರಿನ ಒಳಭಾಗದ ವಿನ್ಯಾಸಗಳು ಎಂಟ್ರಿ ಲೆವಲ್ ಕಾರುಗಳಲ್ಲೇ ವಿಶೇಷವಾಗಿದ್ದು, ವೀಲ್ಹ್ ಆರ್ಚ್ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಕಾರಿನ ಕ್ಯಾಬಿನ್ ಸ್ಥಳಾವಕಾಶ ಕೂಡಾ ಹೆಚ್ಚಿದೆ.

ಇದರಿಂದ ಕಾರು ಚಾಲನೆಗೆ ಮತ್ತಷ್ಟು ಅನುಕೂಲಕರವಾಗಿದ್ದು, ದೂರದ ಪ್ರಯಾಣದ ವೇಳೆ ಹಿಂಬದಿಯಲ್ಲಿ ಕುಳಿತು ಪ್ರಯಾಣಿಸುವವರಿಗೆ ಕ್ಯಾಬಿನ್ ವಿಸ್ತರಣೆ ಮಾಡಿರುವುದು ಸಾಕಷ್ಟು ಸಹಕಾರಿಯಾಗಲಿದೆ ಎನ್ನಬಹುದು.
MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಹೈ ಎಂಡ್ ಮಾದರಿಗಳಲ್ಲಿ ಪ್ರೀಮಿಯಂ ವೈಶಿಷ್ಟ್ಯತೆಗಳಾದ 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಅಂಡ್ರಾಯಿಡ್ ಆಟೋ, ಆ್ಯಪಲ್ ಕಾರ್ ಪ್ಲೇ, ಮಿರರ್ ಲಿಂಕ್, ಎಲೆಕ್ಟ್ರಿಕ್ ಅಡ್ಜೆಸ್ಟ್‌ಮೆಂಟ್ ರಿಯರ್ ವ್ಯೂವ್ ಮಿರರ್, ಮಲ್ಟಿ ಇನ್ಫಾರ್ಮೆಷನ್ ಡಿಸ್‌ಪ್ಲೇ, ರಿಯರ್ ವೈಪರ್ ಮತ್ತು ರಿಯರ್ ಡಿಫಾಗರ್ ಸೌಲಭ್ಯವಿದೆ.

ಎಂಜಿನ್ ಸಾಮರ್ಥ್ಯ
ನ್ಯೂ ಜನರೇಷನ್ ಹ್ಯುಂಡೈ ಸ್ಯಾಂಟ್ರೊ ಕಾರು 1.1-ಲೀಟರ್ (1,100 ಸಿಸಿ) ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಎಎಂಟಿ ಆಯ್ಕೆಯೊಂದಿಗೆ 68-ಬಿಎಚ್‌ಪಿ ಮತ್ತು 99-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.
MOST READ: ಜೀಪ್ ಕಂಪಾಸ್ ಕಾರಿನ ರಿಪೇರಿ ಬಿಲ್ ಕೇಳಿ ಮಾಲೀಕ ಕಕ್ಕಾಬಿಕ್ಕಿ..!

ಇದಲ್ಲದೇ ಹೊಸ ಸ್ಯಾಂಟ್ರೋ ಕಾರಿನ ಮ್ಯಾಗ್ನಾ ಮತ್ತು ಸ್ಪೋರ್ಟ್ಜ್ ವೆರಿಯೆಂಟ್‌ಗಳಲ್ಲಿ ಸಿಎನ್‌ಜಿ ಇಂಧನ ಆಯ್ಕೆ ಲಭ್ಯವಿದ್ದು, ಪೆಟ್ರೋಲ್ ಕಾರು ಪ್ರತಿ ಲೀಟರ್‌ಗೆ 20.3 ಕಿ.ಮಿ ಮೈಲೇಜ್ ನೀಡಿದ್ದಲ್ಲಿ ಸಿಎನ್‌ಜಿ ಮಾದರಿಯು ಪ್ರತಿ ಕೆಜಿ ಸಿಎನ್‌ಜಿಗೆ 30.5 ಕಿ.ಮಿ ನಷ್ಟು ಗರಿಷ್ಠ ಮೈಲೇಜ್ ನೀಡುತ್ತೆ.

ಈ ಮೂಲಕ ಎಂಟ್ರಿ ಲೆವಲ್ ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಸಂಸ್ಥೆಗೆ ತ್ರೀವ ಪೈಪೋಟಿ ನೀಡುತ್ತಿರುವ ಹ್ಯುಂಡೈ ಸಂಸ್ಥೆಯು ಸ್ಯಾಂಟ್ರೋ ಕಾರನ್ನು ಉನ್ನತೀಕರಿಸುವ ಮೂಲಕ ಮಾರುತಿ ಆಲ್ಟೊ 800, ಸೆಲೆರಿಯೊ ಮತ್ತು ಟಾಟಾ ಮೋಟಾರ್ಸ್ ನಿರ್ಮಾಣದ ಟಿಯಾಗೊ, ರೆನಾಲ್ಟ್ ಕ್ವಿಡ್ ಕಾರುಗಳಿಗೆ ಮತ್ತಷ್ಟು ಟಕ್ಕರ್ ನೀಡಲಿದೆ.
Source: MyCarHelpline


Click it and Unblock the Notifications