ಸ್ಪಾಟ್ ಟೆಸ್ಟ್‌ನಲ್ಲಿ ಕಂಡುಬಂದ 2020ರ ಲ್ಯಾಂಡ್ ರೋವರ್ ಡಿಫೆಂಡರ್

ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍‍ಯು‍ವಿಯನ್ನು 2020ರ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಗೊಳಿಸಲಾಗುವುದು. ಈ ಎಸ್‍‍ಯು‍ವಿಯನ್ನು ಬಿಡುಗಡೆಗೊಳಿಸುವ ಮೊದಲು ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಲಾಗಿದೆ. ಓವರ್‍‍‍ಡ್ರೈವ್‍‍ನ ಸ್ಪೈ ಚಿತ್ರಗಳು ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟ್ ನಡೆಸಿರುವುದನ್ನು ಬಹಿರಂಗಪಡಿಸಿವೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಂಡುಬಂದ 2020ರ ಲ್ಯಾಂಡ್ ರೋವರ್ ಡಿಫೆಂಡರ್

ಗ್ಲೋಬಲ್-ಸ್ಪೆಕ್ ಮಾದರಿಯಲ್ಲಿ ಟೇಲ್‍ಗೇಟ್ ಮೌಂಟೆಡ್ ಸ್ಪೇರ್ ವ್ಹೀಲ್‍‍ಗಳಿದ್ದು, 5-ಡೋರ್ ಆವೃತ್ತಿಯಾಗಿದೆ ಎಂಬುದನ್ನು ಸ್ಪೈ ಚಿತ್ರಗಳು ಬಹಿರಂಗಪಡಿಸುತ್ತವೆ. ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಮುಂದಿನ ವರ್ಷ ಬಿಡುಗಡೆಯಾಗಲಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಂಡುಬಂದ 2020ರ ಲ್ಯಾಂಡ್ ರೋವರ್ ಡಿಫೆಂಡರ್

5 ಡೋರ್‍‍ಗಳ ಡಿಫೆಂಡರ್ 110 ಗ್ಲೋಬಲ್ ಸ್ಪೆಕ್ ಮಾದರಿಯು ಒಟ್ಟು ನಾಲ್ಕು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ ಎರಡು ಪೆಟ್ರೋಲ್ ಎಂಜಿನ್ ಆಗಿದ್ದು ಮತ್ತೆ ಎರಡು ಡೀಸೆಲ್ ಮತ್ತು ಹೈಬ್ರಿಡ್ ಎಂಜಿನ್ ಆಗಿದೆ. ಇದರಲ್ಲಿ 2.0 ಲೀಟರ್ ನಾಲ್ಕು ಸಿಲಿಂಡರ್ ಪಿ300 ಎಂಜಿನ್ 269 ಬಿಹೆಚ್‍ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 3.0 ಲೀಟರಿನ ಆರು ಸಿಲಿಂಡರ್ ಪಿ400 ಹೈಬ್ರಿಡ್-ಪೆಟ್ರೋಲ್ ಎಂಜಿನ್ 396 ಬಿ‍ಹೆಚ್‍ಪಿ ಪವರ್ ಮತ್ತು 500 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಂಡುಬಂದ 2020ರ ಲ್ಯಾಂಡ್ ರೋವರ್ ಡಿಫೆಂಡರ್

ಡೀಸೆಲ್ ಎಂಜಿನ್ ಆಯ್ಕೆಯಲ್ಲಿ 2.0 ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ನೀಡಲಾಗುವುದು. ಲೋವರ್ ಸ್ಪೆಕ್‍ ಪಿ200 ಎಂಜಿನ್ 179 ಬಿಹೆಚ್‍‍ಪಿ ಪವರ್ ಮತ್ತು 430 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೈ ಸ್ಪೆಕ್ ಪಿ240 ಎಂಜಿನ್ 237 ಬಿಹೆಚ್‍‍ಪಿ ಪವರ್ ಮತ್ತು 430 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಲ್ಲಾ ಎಂಜಿನ್‍‍ಗಳು 8 ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಯುನಿ‍ಟ್‍ ಅನ್ನು ಹೊಂದಿವೆ. 2020ರ ಡಿಫೆಂಡರ್ ಆಫ್-ರೋಡ್ ಅಗತ್ಯಗಳಿಗೆ ತಕ್ಕಂತೆ ಅಲ್-ವ್ಹೀಲ್ ಡ್ರೈವ್ ಸಿಸ್ಟಂನೊಂದಿಗೆ ಎರಡು-ಸ್ಪೀಡ್ ಟ್ರಾನ್ಸ್ ಫರ್ ಯು‍ನಿ‍ಟ್‍ಗಳನ್ನು ಹೊಂದಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಂಡುಬಂದ 2020ರ ಲ್ಯಾಂಡ್ ರೋವರ್ ಡಿಫೆಂಡರ್

ಹೊಸ ಡಿಫೆಂಡರ್‍‍ನಲ್ಲಿ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್ ಜೊತೆಯಲ್ಲಿ ಯು-ಆಕಾರದ ಎಲ್‍ಇ‍ಡಿ ಡಿಆರ್‍ಎಲ್, ಎಲ್‍ಇಡಿ ಟೇಲ್‍ ಲೈ‍ಟ್‍, ಡ್ಯುಯಲ್ ಟೋನ್ ಬಣ್ಣದ ಆಯ್ಕೆ, ರೂಫ್, ಎರಡು ತುದಿಗಳಲ್ಲಿ ಸಿಲ್ವರ್ ಸ್ಕರ್ಫ್ ಪ್ಲೇಟ್‍ ಅನ್ನು ಹೊಂದಿದೆ. ದೊಡ್ದ ಗಾತ್ರದ ಬಂಪರ್ ಮತ್ತು ಆಕರ್ಷಕ ವಿನ್ಯಾಸ ಹೊಂದಿರುವ ಡಿಫೆಂಡರ್ ಉತ್ತಮ ಆಫ್-ರೋಡ್ ವಾಹನವಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಂಡುಬಂದ 2020ರ ಲ್ಯಾಂಡ್ ರೋವರ್ ಡಿಫೆಂಡರ್

ಲ್ಯಾಂಡ್ ರೋವರ್ ಡಿಫೆಂಡರ್‍‍ನ ಇಂಟಿರಿಯರ್‍‍ನಲ್ಲಿ ಹಲವಾರು ಫೀಚರ್‍‍ಗಳಿವೆ. ಇಂಟಿರಿಯರ್ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಫ್ಯಾಬ್ರಿಕ್ ಮತ್ತು ಲೆದರ್ ಸೀಟುಗಳು, ಹೆಡ್‍-ಅಪ್ ಡಿಸ್‍‍ಪ್ಲೇ, 12.3 ಇಂಚಿನ ಪೂರ್ಣ ಪ್ರಮಾಣದ ಡಿ‍‍ಜಿ‍ಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, 10 ಇಂಚಿನ ಟಚ್‍‍ಸ್ಕ್ರೀನ್ ಇನ್ಪೋಟೈನ್‍‍ಮೆಂಟ್ ಸಿಸ್ಟಂ, ವೈರ್‍‍ಲೆಸ್ ಸ್ಮಾರ್ಟ್‍‍ಫೋನ್ ಚಾರ್ಜಿಂಗ್ ಸೇರಿದಂತೆ ಹಲವು ಫೀಚರ್‍‍ಗಳಿವೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಸ್ಪಾಟ್ ಟೆಸ್ಟ್‌ನಲ್ಲಿ ಕಂಡುಬಂದ 2020ರ ಲ್ಯಾಂಡ್ ರೋವರ್ ಡಿಫೆಂಡರ್

ಲ್ಯಾಂಡ್ ರೋವರ್ ಡಿಫೆಂಡರ್ ಅನ್ನು ಕಠಿಣವಾದ ದಾರಿಗಳಲ್ಲಿಯೂ ಸುಲಭವಾಗಿ ಸಾಗುವ ಹಾಗೆ ಅಭಿವೃದ್ದಿಪಡಿಸಲಾಗಿದೆ. ಡಿಫೆಂಡರ್‍‍ನಲ್ಲಿ ಕ್ರೂಸ್ ಕಂಟ್ರೋಲ್, 360 ಡಿಗ್ರಿ 3 ಡಿ ಸರೌಂಡ್ ಕ್ಯಾಮರಾ, ಸ್ಟ್ರೀಮ್ ಕ್ರಾಸಿಂಗ್‍‍ಗಳಿಗೆ ವೇಡ್ ಸೆನ್ಸಿಂಗ್ ಮತ್ತು ಡ್ರೈವರ್ ಕಂಡಿಷನ್ ಮಾನಿಟರಿಂಗ್ ಅನ್ನು ಆಫ್-ರೋಡ್‍‍‍ಗೆ ಸಹಕಾರಿಯಾಗುವ ಇತರ ವೈಶಿಷ್ಟ್ಯಗಳ ಒಳಗೊಂಡಿದೆ. ಈ ಎಸ್‍‍ಯು‍ವಿಯಲ್ಲಿ ಸುರಕ್ಷತೆಗಾಗಿ ಹಲವಾರು ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಸ್ಪಾಟ್ ಟೆಸ್ಟ್‌ನಲ್ಲಿ ಕಂಡುಬಂದ 2020ರ ಲ್ಯಾಂಡ್ ರೋವರ್ ಡಿಫೆಂಡರ್

ಆಫ್‍ರೋಡ್ ವಾಹನಗಳು ಎಂದಾಕ್ಷಣ ನೆನಪಿಗೆ ಬರುವ ಪ್ರಮುಖ ವಾಹನಗಳಲ್ಲಿ ಲ್ಯಾಂಡ್ ರೋವರ್ ಕೂಡ ಒಂದಾಗಿದೆ. ಈ ಎಸ್‍‍ಯು‍ವಿಯು ಆಕರ್ಷಕ ಲುಕ್ ಅನ್ನು ಹೊಂದಿದೆ. ಕಠಿಣ ದಾರಿಗಳಲ್ಲಿ ಈ ಆಫ್-ರೋಡ್ ವಾಹನವು ಸುಲಭವಾಗಿ ಸಾಗುವಂತೆ ಅಭಿವೃದ್ದಿಪಡಿಸಲಾಗಿದೆ. ಲ್ಯಾಂಡ್ ರೋವರ್ ಡಿಫೆಂಡರ್ ಆಫ್-ರೋಡ್ ಪ್ರಿಯರಿಗೆ ನೆಚ್ಚಿನ ಆಯ್ಕೆಯಾಗಿದೆ

More from DriveSpark

Article Published On: Friday, October 25, 2019, 18:17 [IST]
English summary
2020 Land Rover Defender Spied Testing Ahead Of Launch In India: Spy Pics & Details - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+