ಹೊಸ ವಿನ್ಯಾಸದ ಮಹೀಂದ್ರಾ ಬೊಲೆರೊ ಸಿಟಿ ಪಿಕ್-ಅಪ್ ಬಿಡುಗಡೆ
ಪ್ರಯಾಣಿಕ ಕಾರುಗಳ ಜೊತೆ ವಾಣಿಜ್ಯ ಬಳಕೆಯ ವಾಹನಗಳ ಉತ್ಪಾದನೆಯಲ್ಲೂ ಮುಂಚೂಣಿಯಲ್ಲಿರುವ ಮಹೀಂದ್ರಾ ಸಂಸ್ಥೆಯು ತನ್ನ ಜನಪ್ರಿಯ ಬೊಲೆರೊ ಪಿಕ್-ಅಪ್ ಟ್ರಕ್ ಮಾದರಿಯಲ್ಲಿ ಹೊಸದಾಗಿ ಸಿಟಿ ಪಿಕ್-ಅಪ್ ಮಾದರಿಯನ್ನು ಬಿಡುಗಡೆಗೊಳಿಸಿದೆ.

ಹೊಸದಾಗಿ ಬಿಡುಗಡೆಯಾಗಿರುವ ಬೊಲೆರೊ ಸಿಟಿ ಪಿಕ್-ಅಪ್ ಮಾದರಿಯು ಹೊಸ ವಿನ್ಯಾಸದೊಂದಿಗೆ ನಗರ ಪ್ರದೇಶಗಳಲ್ಲಿ ಸರಾಗವಾಗಿ ಸಂಚರಿಸಲು ಅನುಕೂಲಕವಾಗುವಂತಹ ವೈಶಿಷ್ಟ್ಯತೆ ಹೊಂದಿದ್ದು, ಹೊಸ ವಾಹನದ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.6.25 ಲಕ್ಷ ನಿಗದಿ ಮಾಡಲಾಗಿದೆ. ಈ ಹಿಂದಿನ ಸಾಮಾನ್ಯ ಆವೃತ್ತಿಗಿಂತಲೂ ವಿಸ್ತರಿತ ಕ್ಯಾಬಿನ್ ಜೊತೆಗೆ ಹೆಚ್ಚು ಸಾಮಾರ್ಥ್ಯವುಳ್ಳ ರಿಯರ್ ಸಸ್ಫೆಷನ್ ಜೋಡಣೆ ಮಾಡಲಾಗಿದೆ.

ಹೀಗಾಗಿ ಸರಕು ಸಾಗಾಣಿಕೆಗಾಗಿ ಈ ಬಾರಿ ವಿಶೇಷವಾಗಿ ಸಿದ್ದಗೊಂಡಿರುವ ಮಹೀಂದ್ರಾ ಬೊಲೆರೊ ಸಿಟಿ ಪಿಕ್-ಅಪ್ 2.5-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಹೊಸ ವಾಹನವು 63-ಬಿಎಚ್‌ಪಿ ಮತ್ತು 195-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಜೊತೆಗೆ ಹೊಸ ಪಿಕ್-ಅಪ್ ವಾಹನದಲ್ಲಿ ಕ್ಯಾಬಿನ್ ಗ್ರಾತವನ್ನು ಹೆಚ್ಚಳ ಮಾಡಿರುವ ಹಿನ್ನಲೆಯಲ್ಲಿ ಚಾಲಕನ ಆಸದ ಜೊತೆಗೆ ಸಹಪ್ರಯಾಣಿಕರ ಸೀಟಿನ ಗಾತ್ರದಲ್ಲೂ ತುಸು ಬದಲಾವಣೆಯಾಗಿದ್ದು, ಆರಾಮದಾಯಕ ವಾಹನ ಚಾಲನೆಗೆ ಇದು ಸಹಕಾರಿಯಾಗಿದೆ.

ಮಧ್ಯಮ ಗಾತ್ರದ ವಾಣಿಜ್ಯ ವಹಿಹಾಟುಗಳಿಗೆ ಬೊಲೆರೊ ಸಿಟಿ ಪಿಕ್-ಅಪ್ ವಾಹನವು ಸಾಕಷ್ಟು ಸಹಕಾರಿಯಾಗಿದ್ದು, ಹೊಸ ವಾಹನವು ಈ ಬಾರಿ ಆಕರ್ಷಕ ಮಾದರಿಯಲ್ಲಿ 8.7 X 5.6 ಫೀಟ್ ಕಾರ್ಗೋ ಬಾಕ್ಸ್ ಪಡೆದುಕೊಂಡಿದೆ. ಈ ಮೂಲಕ ಹೊಸ ವಾಹನವು 1.4-ಟನ್ ಸಕಲು ಸಾಗಾಟ ಸಾಮರ್ಥ್ಯವನ್ನು ಹೊಂದಿದ್ದು, ಪ್ರತಿಸ್ಪರ್ಧಿ ವಾಹನಗಳಿಂತಲೂ ಇದು ಹೆಚ್ಚು ಆಕರ್ಷಣೆಯಾಗಿರುವುದು ಮಾರಾಟ ಹೆಚ್ಚಳಕ್ಕೆ ಕಾರಣವಾಗಲಿದೆ.

ಇದಲ್ಲದೇ ಹೊಸ ವಾಹನದಲ್ಲಿ ನೀಡಲಾಗಿರುವ ಡ್ಯುಯಲ್ ಟೋನ್ ಇಂಟಿರಿಯರ್, ಫ್ಯಾಬ್ರಿಕ್ ಸೀಟುಗಳು, ಮ್ಯಾಚಿಂಗ್ ಡೋರ್ ಟ್ರಿಮ್ ಮತ್ತು ಹೆಡ್‌ಲ್ಯಾಂಪ್‌ಗಳ ಸುತ್ತ ನೀಡಲಾಗಿರುವ ವ್ಯಾರ್ಪ್ ವೈಶಿಷ್ಟ್ಯತೆ ಸಾಕಷ್ಟು ಆಕರ್ಷಣೆಯಾಗಲಿದೆ.

ವಾರಂಟಿ
ಮಹೀಂದ್ರಾ ಸಂಸ್ಥೆಯು ಬೊಲೆರೊ ಸಿಟಿ ಪಿಕ್-ಅಪ್ ಖರೀದಿ ಮೇಲೆ ಅತ್ಯುತ್ತಮ ವಾರಂಟಿ ಘೋಷಣೆ ಮಾಡಿದ್ದು, ಗ್ರಾಹಕರು ತಮ್ಮ ಆದ್ಯತೆ ಮೇರೆಗೆ ಮೂರು ವರ್ಷದ ಅಥವಾ 1 ಲಕ್ಷ ಕಿ.ಮಿ ಮೇಲೆ ವಾರಂಟಿ ಪಡೆದುಕೊಳ್ಳಬಹುದಾಗಿದೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್
ಇನ್ನು ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಬೊಲೆರೊ ಪಿಕ್-ಅಪ್ ಮಾದರಿಯಲ್ಲಿ ಹೊಸದಾಗಿ ಬಿಡುಗಡೆಯಾದ ಸಿಟಿ ಪಿಕ್-ಅಪ್ ಮಾತ್ರವಲ್ಲದೇ 1.7-ಟಿ ಬೊಲೆರೊ ಪಿಕ್-ಅಪ್ ಮತ್ತು ಬೊಲೆರೊ ಮಾಕ್ಸಿಟ್ರಕ್ ವಾಹನ ಮಾದರಿಯನ್ನು ಆಯ್ಕೆಗೆ ಲಭ್ಯವಿವೆ.
MOST READ: ಮಕಾಡೆ ಮಲಗಿರುವ ಆಟೋ ಉದ್ಯಮಕ್ಕೆ ಮತ್ತೆ ಚುರುಕು ನೀಡಿದ ಕೇಂದ್ರ ಸರ್ಕಾರ..!

ಈ ಕುರಿತು ಮಾತನಾಡಿದ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಸಂಸ್ಥೆಯ ಮಾರುಕಟ್ಟೆ ಮತ್ತು ವಾಹನ ಮಾರಾಟ ವಿಭಾಗದ ಉಪಾಧ್ಯಕ್ಷ ವಿಕ್ರಮ್ ಗರ್ಗಾ ಅವರು, ಗ್ರಾಹಕರ ಬೇಡಿಕೆ ಮೇರೆಗೆ ಬೊಲೆರೊ ಪಿಕ್-ಅಪ್ ಮಾದರಿಯಲ್ಲಿ ಸಿಟಿ ಪಿಕ್-ಅಪ್ ಬಿಡುಗಡೆ ಮಾಡಲಾಗಿದ್ದು, ಅತ್ಯುತ್ತಮ ವಿನ್ಯಾಸದೊಂದಿಗೆ ಬಲಿಷ್ಠ ಪಿಕ್-ಅಪ್ ವಾಹನ ಮಾದರಿ ಇದಾಗಿದೆ ಎಂದಿದ್ದಾರೆ.


Click it and Unblock the Notifications