ವಿನೂತನ ಸೌಲಭ್ಯಗಳೊಂದಿಗೆ ಬಿಡುಗಡೆಯಾದ ಮಹೀಂದ್ರಾ ಟಿಯುವಿ300 ಫೇಸ್‌ಲಿಫ್ಟ್

ಮಹೀಂದ್ರಾ ಸಂಸ್ಥೆಯು ತನ್ನ ಜನಪ್ರಿಯ ಎಸ್‌ಯುವಿ ಆವೃತ್ತಿಯಾಗಿರುವ ಟಿಯುವಿ300 ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆಗೊಳಿಸಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹಲವಾರು ಹೊಸ ವೈಶಿಷ್ಟ್ಯತೆಗಳನ್ನು ಹೊತ್ತು ಬಂದಿರುವ ಫೇಸ್‌ಲಿಫ್ಟ್ ಆವೃತ್ತಿಯ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.38 ಲಕ್ಷಕ್ಕೆ ನಿಗದಿಪಡಿಸಿದೆ.

ವಿನೂತನ ಸೌಲಭ್ಯಗಳೊಂದಿಗೆ ಬಿಡುಗಡೆಯಾದ ಮಹೀಂದ್ರಾ ಟಿಯುವಿ300 ಫೇಸ್‌ಲಿಫ್ಟ್

ಟಿಯುವಿ300 ಫೇಸ್‌ಲಿಫ್ಟ್ ಮಾದರಿಯು ನೋಡಲು ಈ ಹಿಂದಿನಂತೆಯೇ ಕಂಡರೂ ಸಹ ಹೊರ ವಿನ್ಯಾಸದಲ್ಲಿ ಕೆಲವು ಗುರುತರ ಬದಲಾವಣೆಗಳನ್ನು ತರಲಾಗಿದ್ದು, ಮುಂಭಾಗದ ಗ್ರೀಲ್‌ನಲ್ಲಿ ಬ್ಲ್ಯಾಕ್ ಕ್ರೋಮ್, ಎಕ್ಸ್ ಸೇಪ್ಡ್ ಮೆಟಾಲಿಕ್ ಗ್ರೇ ಸ್ಪೆರ್ ವೀಲ್ಹ್‌ಗಳು ಮತ್ತು ಮರು ಜೋಡಣೆ ಮಾಡಲಾಗಿರುವ ವಿಶೇಷ ವಿನ್ಯಾಸದ ಹೆಡ್‌ಲ್ಯಾಂಪ್, ಡೇ ಟೈಮ್ ರನ್ನಿಂಗ್ ಲೈಟ್ ಸೌಲಭ್ಯವು ಗ್ರಾಹಕರ ಆಕರ್ಷಣೆಗೆ ಕಾರಣವಾಗಲಿವೆ.

ವಿನೂತನ ಸೌಲಭ್ಯಗಳೊಂದಿಗೆ ಬಿಡುಗಡೆಯಾದ ಮಹೀಂದ್ರಾ ಟಿಯುವಿ300 ಫೇಸ್‌ಲಿಫ್ಟ್

ಹಾಗೆಯೇ ಒಳಭಾಗದ ವಿನ್ಯಾಸದಲ್ಲೂ ಈ ಬಾರಿ ಕೆಲವು ಬದಲಾವಣೆಗಳನ್ನು ತರಲಾಗಿದ್ದು, ಇಟಾಲಿಯಲ್ಲಿರುವ ಮಹೀಂದ್ರಾ ಡಿಸೈನ್ ಸೆಂಟರ್ ಪಿನಿನ್ ಫರಿನಾ ಪ್ರೇರಣೆಯೊಂದಿಗೆ ಟಿಯುವಿ300 ಫೇಸ್‌ಲಿಫ್ಟ್ ಆವೃತ್ತಿಯ ಒಳಾಂಗಣವನ್ನು ಪ್ರಸ್ತುತ ಮಾರುಕಟ್ಟೆಯ ಬೇಡಿಕೆಯೆಂತೆ ಸಿದ್ದಗೊಳಿಸಲಾಗಿದೆ.

ವಿನೂತನ ಸೌಲಭ್ಯಗಳೊಂದಿಗೆ ಬಿಡುಗಡೆಯಾದ ಮಹೀಂದ್ರಾ ಟಿಯುವಿ300 ಫೇಸ್‌ಲಿಫ್ಟ್

ಹೊಸ ಕಾರಿಗೆ ಈ ಬಾರಿ ಪ್ರೀಮಿಯಂ ಲುಕ್ ನೀಡುವ ಸಂಬಂಧ ಸಿಲ್ವರ್ ಎಕ್ಸ್‌ಸೆಂಟ್‌ಗಳನ್ನು ಬಳಕೆ ಮಾಡಲಾಗಿದ್ದು, ಈ ಹಿಂದಿನ ಸೌಲಭ್ಯಗಳ ಜೊತೆಗೆ ಹೊಸದಾಗಿ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಜಿಪಿಎಸ್ ಆಧಾರಿತ 17.8-ಸೆಂ.ಮಿ ಇನ್ಪೋಟೈನ್‌ಮೆಂಟ್ ಸಿಸ್ಟಂ ಮತ್ತು ಮೈಕ್ರೋ ಹೈಬ್ರಿಡ್ ತಂತ್ರಜ್ಞಾನಗಳನ್ನು ಜೋಡಿಸಲಾಗಿದೆ.

ವಿನೂತನ ಸೌಲಭ್ಯಗಳೊಂದಿಗೆ ಬಿಡುಗಡೆಯಾದ ಮಹೀಂದ್ರಾ ಟಿಯುವಿ300 ಫೇಸ್‌ಲಿಫ್ಟ್

ಎಂಜಿನ್ ಸಾಮರ್ಥ್ಯ

ಟಿಯುವಿ300 ಫೇಸ್‌ಲಿಫ್ಟ್ ಮಾದರಿಯಲ್ಲಿ ಈ ಹಿಂದಿನ ಎಂಜಿನ್ ಸೌಲಭ್ಯವನ್ನೇ ಮುಂದುವರಿಸಿಕೊಂಡು ಬರಲಾಗಿದ್ದು, ಎಂಹ್ವಾಕ್100 1.5-ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದೆ. ಈ ಮೂಲಕ 100-ಬಿಎಚ್‌ಪಿ ಮತ್ತು 240-ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೀಡಲಾಗಿದೆ.

ವಿನೂತನ ಸೌಲಭ್ಯಗಳೊಂದಿಗೆ ಬಿಡುಗಡೆಯಾದ ಮಹೀಂದ್ರಾ ಟಿಯುವಿ300 ಫೇಸ್‌ಲಿಫ್ಟ್

ಜೊತೆಗೆ ಹೊಸ ಕಾರಿನಲ್ಲಿ ಈ ಬಾರಿ ಚಾಲಕ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ವಿವಿಧ ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಆಸನಗಳು ಮತ್ತು ಹೆಚ್ಚುವರಿ ಬಣ್ಣಗಳ ಆಯ್ಕೆಯೊಂದಿಗೆ ಗ್ರಾಹಕರ ಬೇಡಿಕೆ ಹೆಚ್ಚಿಸಲು ಪ್ರಮುಖ ಬದಲಾವಣೆಗಳನ್ನು ತರಲಾಗಿದೆ.

ವಿನೂತನ ಸೌಲಭ್ಯಗಳೊಂದಿಗೆ ಬಿಡುಗಡೆಯಾದ ಮಹೀಂದ್ರಾ ಟಿಯುವಿ300 ಫೇಸ್‌ಲಿಫ್ಟ್

ಈ ಬಗ್ಗೆ ಮಾತನಾಡಿರುವ ಮಹೀಂದ್ರಾ ಕಾರು ಮಾರಾಟ ವಿಭಾಗದ ಹೆಡ್ ವಿಜಯ್ ರಾಮ್ ನಕ್ರಾ ಅವರು, ಇದುವರೆಗೂ 1 ಲಕ್ಷಕ್ಕೂ ಹೆಚ್ಚು ಟಿಯುವಿ300 ಮಾರಾಟ ಮಾಡಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ಮಹೀಂದ್ರಾ ಸಂಸ್ಥೆಯು ಇದೀಗ ಮತ್ತಷ್ಟು ಹೊಸತನದೊಂದಿಗೆ ಫೇಸ್‌ಲಿಫ್ಟ್ ಆವೃತ್ತಿಯನ್ನು ಪರಿಚಯಿಸುತ್ತಿದೆ. ಇದರಲ್ಲಿ ಹೊಸ ಕಾರಿನ ವಿನ್ಯಾಗಳು ಮತ್ತು ಹೊಸ ತಾಂತ್ರಿಕ ಸೌಲಭ್ಯಗಳು ಫೇಸ್‌ಲಿಫ್ಟ್ ಆವೃತ್ತಿಯ ಪ್ರಮುಖ ಅಂಶಗಳಾಗಿರುವುದು ಖರೀದಿಯ ಮೌಲ್ಯವನ್ನು ಹೆಚ್ಚಿಸಿವೆ ಎಂದಿದ್ದಾರೆ.

ವಿನೂತನ ಸೌಲಭ್ಯಗಳೊಂದಿಗೆ ಬಿಡುಗಡೆಯಾದ ಮಹೀಂದ್ರಾ ಟಿಯುವಿ300 ಫೇಸ್‌ಲಿಫ್ಟ್

ಇನ್ನು ಟಿಯುವಿ300 ಫೇಸ್‌ಲಿಫ್ಟ್ ಆವೃತ್ತಿಯ 7 ಸೀಟರ್ ಸೌಲಭ್ಯದೊಂದಿಗೆ ಎಸ್‌ಯುವಿ ಮಾದರಿಯಲ್ಲೇ ವಿಶೇಷ ಎನ್ನಿಸಲಿದ್ದು, ಸ್ಕಾರ್ಪಿಯೋ ಪ್ಲ್ಯಾಟ್ ಅಡಿಯಲ್ಲಿ ಅಭಿವೃದ್ದಿ ಹೊಂದಿರುವ ಹೊಸ ಕಾರಿಗೆ ಈ ಬಾರಿ ಮತ್ತಷ್ಟು ಬಲಾಡ್ಯತೆ ತುಂಬಲು ಮತ್ತಷ್ಟು ಗುಣಮಟ್ಟದ ಸ್ಟಿಲ್ ಬಳಕೆ ಮಾಡಲಾಗಿದೆ.

Most Read Articles

Kannada
English summary
New 2019 Mahindra TUV300 Facelift Launched In India At Rs 8.38 Lakh. Read in Kannada.
Story first published: Friday, May 3, 2019, 15:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X