ಮಾರುತಿ ಸುಜುಕಿ ಹೊಸ ವ್ಯಾಗನ್ ಆರ್ ಕಾರಿನ ಟೀಸರ್ ಬಿಡುಗಡೆ

ಪ್ಯಾಸೆಂಜರ್ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನದಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಇದೇ ತಿಂಗಳು 23ರಂದು ನ್ಯೂ ಜನರೇಷನ್ ವ್ಯಾಗನ್ ಆರ್ ಕಾರನ್ನು ಬಿಡಗಡೆಗೊಳಿಸುತ್ತಿದ್ದು, ಹೊಸ ವಿನ್ಯಾಸ ಮತ್ತು ಹೊಸ ಎಂಜಿನ್ ಆಯ್ಕೆಗಳನ್ನು ಒಳಗೊಂಡ ಹೊಸ ಕಾರಿನ ಟೀಸರ್ ಇದೀಗ ಬಹಿರಂಗವಾಗಿದೆ.

ಮಾರುತಿ ಸುಜುಕಿ ಹೊಸ ವ್ಯಾಗನ್ ಆರ್ ಕಾರಿನ ಟೀಸರ್ ಬಿಡುಗಡೆ

ಪೆಟ್ರೋಲ್, ಸಿಎನ್‍ಜಿ ಮತ್ತು ಎಲ್‍ಪಿಜಿ ಮಾದರಿಯಲ್ಲಿ ಬಿಡುಗಡೆಯಾಗಲಿರುವ ಹೊಸ ವ್ಯಾಗನ್ ಆರ್ ಕಾರು ಈಗಾಗಲೇ ಹಲವಾರು ಬಾರಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದ್ದು, ಹೊಸ ತಲೆಮಾರಿನ ಹ್ಯುಂಡೈ ಸ್ಯಾಂಟ್ರೋ ಕಾರಿಗೆ ಟಕ್ಕರ್ ನೀಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.

ಮಾರುತಿ ಸುಜುಕಿ ಹೊಸ ವ್ಯಾಗನ್ ಆರ್ ಕಾರಿನ ಟೀಸರ್ ಬಿಡುಗಡೆ

ಹೊಸ ಕಾರಿನ ವಿನ್ಯಾಸ

ಈಗಾಗಲೇ ಹೊಸ ವ್ಯಾಗನ್ ಆರ್ ಕಾರು ಜಪಾನ್ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಕಾರು ಈ ಬಾರಿ ಉದ್ದನೆಯ ಆಕಾರವನ್ನು ಪಡೆದುಕೊಂಡಿದೆ. ಜೊತೆಗೆ ಅಗಲವಾದ ಹೆಡ್‍ಲ್ಯಾಂಪ್, ಹೊಸ ಬಂಪರ್, ಫಾಗ್‍ಲೈಟ್, ಮುಂಭಾಗದಲ್ಲಿ ರೆಕ್ಟಾಂಗ್ಯುಲರ್ ಗ್ರಿಲ್, ಆಕರ್ಷಕವಾಗಿ ಕಾಣಲು ಕ್ರೋಮ್ ಸ್ಟ್ರಿಪ್ ಅನ್ನು ಒದಗಿಸಲಾಗಿದೆ.

ಮಾರುತಿ ಸುಜುಕಿ ಹೊಸ ವ್ಯಾಗನ್ ಆರ್ ಕಾರಿನ ಟೀಸರ್ ಬಿಡುಗಡೆ

ಕಾರಿನ ಹಿಂಭಾಗದಲ್ಲಿ ಸಾಧಾರಣವಾದ ಬಂಪರ್, ಎಕ್ಸ್-ಮಾಸ್ ಟ್ರೀ ಆಕಾರದಲ್ಲಿರುವ ಟೈಲ್‍ಲೈಟ್ಸ್, ನಂಬರ್ ಪ್ಲೇಟ್ ನೀಡುವ ಜಾಗದಲ್ಲಿ ಕೂಡಾ ಕ್ರೋಮ್ ಅನ್ನು ಬಳಸಲಾಗಿದ್ದು, ಒಳಭಾಗದಲ್ಲಿ ಡ್ರೈವರ್‍‍ಗೆ ಸೈಡ್ ಏರ್‍‍ಬ್ಯಾಗ್ಸ್ ಮತ್ತು ರಿಯರ್ ಪಾರ್ಕಿಂಗ್ ವಿಂಡೋಗಳನ್ನು ನೀಡಲಾಗಿದೆ.

ಮಾರುತಿ ಸುಜುಕಿ ಹೊಸ ವ್ಯಾಗನ್ ಆರ್ ಕಾರಿನ ಟೀಸರ್ ಬಿಡುಗಡೆ

ಸ್ಪೈ ಚಿತ್ರಗಳಲ್ಲಿ ಗಮನಿಸುವುದಾದರೇ, ಕಾರಿನ ಒಳಭಾಗವನ್ನು ಡ್ಯುಯಲ್ ಟೊನ್ ಬಣ್ಣದಿಂದ ಸಜ್ಜುಗೊಳಿಸಲಾಗಿದ್ದು, ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಕೂಡ ಹೊಸದಾಗಿ ನೀಡಲಾಗಿದೆ. ಕಾರಿನ ಟಾಪ್ ಎಂಡ್ ವೆರಿಯೆಂಟ್ ಸ್ಮಾರ್ಟ್‍ ‍ಪ್ಲೇ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, 12 ವೋಲ್ಟ್ಸ್ ಫೋನ್ ಚಾರ್ಜಿಂಗ್ ಸಾಕೆಟ್, ಎಲೆಕ್ಟ್ರಿಕ್ ಒಆರ್‍‍‍ವಿಎಂ, ಪವರ್ ವಿಂಡೋಸ್ ಮತ್ತು ಹಲವಾರು ಕಂಟ್ರೋಲ್ ಬಟನ್‍‍ಗಳನ್ನು ಪಡೆದ ಸ್ಟೀರಿಂಗ್ ವ್ಹೀಲ್ ಅನ್ನು ನೀಡಲಾಗಿದೆ.

ಮಾರುತಿ ಸುಜುಕಿ ಹೊಸ ವ್ಯಾಗನ್ ಆರ್ ಕಾರಿನ ಟೀಸರ್ ಬಿಡುಗಡೆ

ಕಾರಿನ ಸುತ್ತಳತೆ

ಬಿಡುಗಡೆಯಾಗಲಿರುವ ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು 3655ಎಂಎಂ ಉದ್ದ, 1620ಎಂಎಂ ಅಗಲ, 1675ಎಂಎಂ ಎತ್ತರ, 2435ಎಂಎಂ ವ್ಹೀಲ್‍‍ಬೇಸ್ ಮತ್ತು 4.7 ಮೀಟರ್‍‍ನ ಟರ್ನ್ ರೇಡಿಯಸ್ ಅನ್ನು ಪಡೆದುಕೊಂಡಿದೆ.

ಮಾರುತಿ ಸುಜುಕಿ ಹೊಸ ವ್ಯಾಗನ್ ಆರ್ ಕಾರಿನ ಟೀಸರ್ ಬಿಡುಗಡೆ

ವೆರಿಯೆಂಟ್‍‍ಗಳು

ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಹ್ಯಾಚ್‍‍ಬ್ಯಾಕ್ ಕಾರು ಎಲ್ಎಕ್ಸ್ಐ, ವಿಎಕ್ಸ್ಐ ಮತ್ತು ಜೆಡ್ಎಕ್ಸ್ಐ ಎಂಬ ಮೂರು ಸಾಧಾರಣ ವೆರಿಯೆಂಟ್ ಮತ್ತು ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಯಲ್ಲಿ ವಿಎಕ್ಸ್ಐ ಹಾಗು ಜೆಡ್ಎಕ್ಸ್ಐ ಎಂಬ ಎರಡು ವೆರಿಯೆಂಟ್‍‍ಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಮಾರುತಿ ಸುಜುಕಿ ಹೊಸ ವ್ಯಾಗನ್ ಆರ್ ಕಾರಿನ ಟೀಸರ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

ಹೊಸ ವ್ಯಾಗನ್ ಆರ್ ಕಾರು ಈ ಬಾರಿ 1.0 ಲೀಟರ್ ಮತ್ತು 1.2 ಲೀಟರ್ ಪೆಟ್ರೋಲ್ ಎರಡು ಎಂಜಿನ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಎಂಜಿನ್ ಅನ್ನು ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್‍‍‍ಬಾಕ್ಸ್ ಆಯ್ಕೆಗಳಲ್ಲಿ ದೊರೆಯಲಿದೆ. ಇದಲ್ಲದೇ ಸಿಎನ್‍ಜಿ ಮತ್ತು ಎಲ್‍ಪಿಜಿ ಆಯ್ಕೆಯಲ್ಲಿ ಕೂಡಾ ಬಿಡುಗಡೆಯಾಗಲಿದೆ.

ಮಾರುತಿ ಸುಜುಕಿ ಹೊಸ ವ್ಯಾಗನ್ ಆರ್ ಕಾರಿನ ಟೀಸರ್ ಬಿಡುಗಡೆ

ಮಾರುತಿ ಸುಜುಕಿ ವ್ಯಾಗನ್ ಆರ್ ಕಾರಿನ ಮಿಡ್ ಮತ್ತು ಟಾಪ್ ಎಂಡ್ ವೇರಿಯಂಟ್‍‍ಗಳು 1.2-ಲೀಟರ್ ಎಂಜಿನ್‍ ಅನ್ನು ಪಡೆಯಲಿದ್ದು, ಇದನ್ನು ಸ್ವಿಫ್ಟ್ ಕಾರಿನಿಂದ ಪಡೆಯಲಾಗಿದೆ. 1.0-ಲೀಟರ್ ಪೆಟ್ರೋಲ್ ಎಂಜಿನ್ 63-ಬಿಹೆಚ್‍ಪಿ ಮತ್ತು 90-ಎನ್ಎಂ ಟಾರ್ಕ್ ಉತ್ಪಾದಿಸಿದ್ದಲ್ಲಿ ಇನ್ನು 1.2-ಲೀಟರ್ ಪೆಟ್ರೋಲ್ ಎಂಜಿನ್ 83-ಬಿಹೆಚ್‍ಪಿ ಮತ್ತು 113-ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿರಲಿದೆ.

ಮಾರುತಿ ಸುಜುಕಿ ಹೊಸ ವ್ಯಾಗನ್ ಆರ್ ಕಾರಿನ ಟೀಸರ್ ಬಿಡುಗಡೆ

ಸುರಕ್ಷಾ ವೈಶಿಷ್ಟ್ಯತೆಗಳು

ಕೀ ಲೆಸ್ ಎಂಟ್ರಿ, ಟಿಲ್ಟ್ ಟೆಲಿಸ್ಕೋಪಿಕ್ ಅಡೆಸ್ಟೆಬಲ್ ಸ್ಟೀರಿಂಗ್ ವ್ಹೀಲ್, ಆಟೋಮ್ಯಾಟಿಕ್ ಕಂಟ್ರೋಲ್ ಮತ್ತು ಕ್ಯಾಮೆರಾದೊಂದಿಗೆ ಪಾರ್ಕಿಂಗ್ ಸೆನ್ಸಾರ್‍‍ಗಳನ್ನು ಪಡೆದುಕೊಳ್ಳಲಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ಡ್ಯುಯಲ್ ಏರ್‍‍ಬ್ಯಾಗ್ಸ್, ಎಬಿಎಸ್, ಇಬಿಡಿ ಮತ್ತು ಐಎಸ್ಒಫಿಕ್ಸ್ ಚೈಲ್ಡ್ ಸೀಟ್ ಮೌಂಟ್‍‍ಗಳನ್ನು ನೀಡಲಾಗಿದೆ.

MOST READ: ಭಾರತದಲ್ಲಿ ಬಿಡುಗಡೆಯಾಗಲಿರುವ ಲೌರೆಟಿ ಡೈನ್ಎಕ್ಸ್ ಇವಿ ಕಾರಿನ ಮೈಲೇಜ್ ಎಷ್ಟು ಗೊತ್ತಾ?

ಮಾರುತಿ ಸುಜುಕಿ ಹೊಸ ವ್ಯಾಗನ್ ಆರ್ ಕಾರಿನ ಟೀಸರ್ ಬಿಡುಗಡೆ

ಲಭ್ಯವಿರುವ ಬಣ್ಣಗಳು

ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರುಗಳನ್ನು ಗ್ರಾಹಕರು ಈ ಬಾರಿ ವೈಟ್, ಸಿಲ್ವರ್, ಆರೆಂಜ್, ಬ್ರೌನ್, ಗ್ರೇ ಮತ್ತು ನೀಲಿ ಎಂಬ ಆರು ಬಣ್ಣಗಳ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.

ಮಾರುತಿ ಸುಜುಕಿ ಹೊಸ ವ್ಯಾಗನ್ ಆರ್ ಕಾರಿನ ಟೀಸರ್ ಬಿಡುಗಡೆ

ಮೈಲೇಜ್

ಹೊಸ ವ್ಯಾಗನ್ ಆರ್ ಕಾರು ಪ್ರತಿ ಲೀಟರ್‍ ಪೆಟ್ರೋಲ್‌ಗೆ ನಗರ ಪ್ರದೇಶದಲ್ಲಿ 16 ರಿಂದ 18 ಕಿಲೋಮೀಟರ್ ಮತ್ತು ಹೆದ್ದಾರಿಗಳಲ್ಲಿ 22 ಕಿಲೋಮೀಟರ್ ಮೈಲೇಜ್ ಅನ್ನು ನೀಡಲಿದೆ ಎಂದು ಹೇಳಲಾಗಿದೆ. ಹಾಗೆಯೇ ಸಿಎನ್‌ಜಿ ಆಯ್ಕೆಯುಳ್ಳ ಕಾರು ಪ್ರತಿ ಕೆಜಿ ಸಿಎನ್‌ಜಿಗೆ ಗರಿಷ್ಠ 24 ಕಿ.ಮಿ ಮೈಲೇಜ್ ನೀಡಬಲ್ಲದು.

MOST READ: ಒನ್ ವೇ ನಲ್ಲಿ ನುಗ್ಗುವ ಮುನ್ನ ಇನ್ಮುಂದೆ ಹತ್ತು ಬಾರಿ ಯೋಚಿಸಿ..

ಮಾರುತಿ ಸುಜುಕಿ ಹೊಸ ವ್ಯಾಗನ್ ಆರ್ ಕಾರಿನ ಟೀಸರ್ ಬಿಡುಗಡೆ

ಕಾರಿನ ಬೆಲೆ ಮತ್ತು ಬಿಡುಗಡೆ

ನೆಕ್ಸ್ಟ್ ಜನರೇಷನ್ ವ್ಯಾಗನ್ ಆರ್ ಕಾರು ಇದೇ ತಿಂಗಳು 23ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗಿದ್ದು, ಹಳೆಯ ವರ್ಷನ್ ಕಾರಿಗಳಿಂತ ಹೊಸ ಕಾರಿನ ಬೆಲೆಯು ರೂ.1.50 ಲಕ್ಷದಿಂದ ರೂ.2 ಲಕ್ಷ ಹೆಚ್ಚುವರಿ ಬೆಲೆ ಪಡೆದುಕೊಳ್ಳುವುದು ಖಚಿತವಾಗಿದೆ. ಒಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ವಿಶೇಷ ವಿನ್ಯಾಸದೊಂದಿಗೆ ಸುಧಾರಿತ ಮಾದರಿಯ ಸೌಲಭ್ಯಗಳನ್ನು ಹೊತ್ತುಬಂದಿರುವ ವ್ಯಾಗನ್ ಆರ್ ಕಾರು ಹ್ಯುಂಡೈ ನ್ಯೂ ಸ್ಯಾಂಟ್ರೋ ಕಾರಿಗೆ ತೀವ್ರ ಪೈಪೋಟಿ ನೀಡಲಿದೆ.

Article Published On: Wednesday, January 9, 2019, 19:34 [IST]
English summary
All-New Maruti WagonR Official Teaser Revealed Ahead Of Launch. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+