ಬಿಡುಗಡೆಯಾಯ್ತು 2020ರ ಮರ್ಸಿಡಿಸ್ ಬೆಂಝ್ ಜಿ‍ಎಲ್‍ಸಿ

ಮರ್ಸಿಡಿಸ್ ಬೆಂಝ್ ಇಂಡಿಯಾ ತನ್ನ 2020ರ ಹೊಸ ಜಿ‍ಎಲ್‍‍ಸಿ ಫೇಸ್‍‍ಲಿಫ್ಟ್ ಎಸ್‍ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಮರ್ಸಿಡಿಸ್ ಬೆಂಝ್ ಜಿ‍ಎಲ್‍‍ಸಿ ಎಸ್‍‍ಯುವಿಯ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.52.75 ಲಕ್ಷಗಳಾಗಿದೆ.

ಬಿಡುಗಡೆಯಾಯ್ತು 2020ರ ಮರ್ಸಿಡಿಸ್ ಬೆಂಝ್ ಜಿ‍ಎಲ್‍ಸಿ

ಈ ಎಸ್‍‍ಯುವಿಯನ್ನು ಜಿ‍ಎಲ್‍‍ಸಿ 200 ಹಾಗೂ ಜಿ‍ಎಲ್‍‍ಸಿ 220 ಡಿ ಎಂಬ ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಟಾಪ್ ಎಂಡ್ ಮಾದರಿಯ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.57.75 ಲಕ್ಷಗಳಾಗಿದೆ.

ಬಿಡುಗಡೆಯಾಯ್ತು 2020ರ ಮರ್ಸಿಡಿಸ್ ಬೆಂಝ್ ಜಿ‍ಎಲ್‍ಸಿ

ವಿನ್ಯಾಸದ ಬಗ್ಗೆ ಹೇಳುವುದಾದರೆ, ಹೊಸ ಮರ್ಸಿಡಿಸ್ ಬೆಂಜ್ ಜಿಎಲ್‌ಸಿ ಎಸ್‍‍ಯುವಿ, ಮಾರುಕಟ್ಟೆಯಲ್ಲಿರುವ ಮಾದರಿಯನ್ನು ಹೋಲುತ್ತದೆ. ಆದರೆ ಹೊಸ ಜಿಎಲ್‌ಸಿಯ ಮುಂಭಾಗದಲ್ಲಿ ಹೊಸ ಗ್ರಿಲ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು 2020ರ ಮರ್ಸಿಡಿಸ್ ಬೆಂಝ್ ಜಿ‍ಎಲ್‍ಸಿ

ಎರಡು ಹಾರಿಜಾಂಟಲ್ ಸ್ಲ್ಯಾಟ್‌ಗಳ ಮಧ್ಯದಲ್ಲಿ ಮೂರು ಪಾಯಿಂಟ್‍‍ಗಳ ಸ್ಟಾರ್ ಅಳವಡಿಸಲಾಗಿದೆ. ಹೊಸ ಮರ್ಸಿಡಿಸ್ ಬೆಂಝ್ ಜಿಎಲ್‌ಸಿ ಎಸ್‍‍ಯುವಿಯಲ್ಲಿ ನವೀಕರಿಸಿದ ಎಲ್‌ಇಡಿ ಹೆಡ್‌ಲ್ಯಾಂಪ್‌, ಹೊಸ ಎಲ್‌ಇಡಿ ಡಿಆರ್‌ಎಲ್‌ (ಡೇಟೈಮ್ ರನ್ನಿಂಗ್ ಲೈಟ್ಸ್) ಹಾಗೂ ರಿಫ್ರೆಶ್ ಮಾಡಿದ ಎಲ್‌ಇಡಿ ಟೇಲ್‍‍ಲೈಟ್‍‍ಗಳಿವೆ.

ಬಿಡುಗಡೆಯಾಯ್ತು 2020ರ ಮರ್ಸಿಡಿಸ್ ಬೆಂಝ್ ಜಿ‍ಎಲ್‍ಸಿ

ಮುಂಭಾಗ ಹಾಗೂ ಹಿಂಭಾಗದಲ್ಲಿರುವ ಬಂಪರ್‌ಗಳನ್ನು ಸಹ ಸ್ವಲ್ಪಮಟ್ಟಿಗೆ ತಿರುಚಲಾಗಿದೆ. ಮುಂಭಾಗದಲ್ಲಿರುವ ಬಂಪರ್‍‍ನಲ್ಲಿ ಸೆಂಟ್ರಲ್ ಏರ್ ಇನ್‍‍ಟೇಕ್ ಅಳವಡಿಸಲಾಗಿದ್ದರೆ, ಹಿಂಭಾಗದ ಬಂಪರ್‍‍ನಲ್ಲಿ ನವೀಕರಿಸಲಾದ ಡಿಫ್ಯೂಸರ್ ಅಳವಡಿಸಲಾಗಿದೆ.

ಬಿಡುಗಡೆಯಾಯ್ತು 2020ರ ಮರ್ಸಿಡಿಸ್ ಬೆಂಝ್ ಜಿ‍ಎಲ್‍ಸಿ

ಹೊಸ ಎಸ್‌ಯುವಿಯಲ್ಲಿರುವ 19 ಇಂಚಿನ ವ್ಹೀಲ್‍‍ಗಳಲ್ಲಿ ಹೊಸ ವಿನ್ಯಾಸದ ಅಲಾಯ್ ವ್ಹೀಲ್‍‍ಗಳನ್ನು ಅಳವಡಿಸಲಾಗಿದೆ. ಹೊಸ ಮರ್ಸಿಡಿಸ್ ಬೆಂಝ್ ಜಿಎಲ್‍‍ಸಿ ಎಸ್‌ಯುವಿಯಲ್ಲಿ ಮಾಡಲಾಗಿರುವ ಗಮನಾರ್ಹವಾದ ನವೀಕರಣವೆಂದರೆ ಒಳಗೆ ಅಳವಡಿಸಿರುವ ಎಂಬಿಯುಎಕ್ಸ್ ಟೆಕ್ನಾಲಜಿ.

ಬಿಡುಗಡೆಯಾಯ್ತು 2020ರ ಮರ್ಸಿಡಿಸ್ ಬೆಂಝ್ ಜಿ‍ಎಲ್‍ಸಿ

2020ರ ಹೊಸ ಜಿಎಲ್‌ಸಿ, ಈ ಟೆಕ್ನಾಲಜಿಯನ್ನು ಹೊಂದಿದ ಮರ್ಸಿಡಿಸ್ ಬೆಂಝ್ ಕಂಪನಿಯ ಮೊದಲ ಎಸ್‌ಯುವಿಯಾಗಿದೆ. ಈ ಟೆಕ್ನಾಲಜಿಯನ್ನು 2020ರ ಜಿಎಲ್‌ಸಿಯಲ್ಲಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹಾಗೂ ಇನ್ಫೋಟೇನ್‌ಮೆಂಟ್ ಸಿಸ್ಟಂ ಸೇರಿದಂತೆ ಇತರ ಡಿಜಿಟಲ್ ಡಿಸ್‍‍ಪ್ಲೇಗಳೊಂದಿಗೆ ನೀಡಲಾಗುತ್ತದೆ.

ಬಿಡುಗಡೆಯಾಯ್ತು 2020ರ ಮರ್ಸಿಡಿಸ್ ಬೆಂಝ್ ಜಿ‍ಎಲ್‍ಸಿ

ಹೊಸ ಮರ್ಸಿಡಿಸ್ ಬೆಂಝ್ ಜಿಎಲ್‌ಸಿ ಸ್ಟೀಯರಿಂಗ್ ವ್ಹೀಲ್, ವಾಯ್ಸ್ ಹಾಗೂ ಗೆಸ್ಚರ್ ಕಂಟ್ರೋಲ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಪನೊರಾಮಿಕ್ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್, ಮೂಡ್ ಲೈಟಿಂಗ್ ಸೇರಿದಂತೆ ಹಲವಾರು ಫೀಚರ್‍‍ಗಳನ್ನು ಹೊಂದಿದೆ.

ಬಿಡುಗಡೆಯಾಯ್ತು 2020ರ ಮರ್ಸಿಡಿಸ್ ಬೆಂಝ್ ಜಿ‍ಎಲ್‍ಸಿ

ಸುರಕ್ಷತಾ ಫೀಚರ್‍‍ಗಳ ಬಗ್ಗೆ ಹೇಳುವುದಾದರೆ, ಹೊಸ ಮರ್ಸಿಡಿಸ್ ಬೆಂಝ್ ಜಿಎಲ್‌ಸಿ ಎಲ್ಲಾ ಎಕ್ವಿಪ್‍‍ಮೆಂಟ್‍‍ಗಳನ್ನು ಎಲ್ಲಾ ಮಾದರಿಗಳಲ್ಲೂ ಸ್ಟಾಂಡರ್ಡ್ ಆಗಿ ಹೊಂದಿರಲಿದೆ. ಇವುಗಳಲ್ಲಿ ಆರು ಏರ್‌ಬ್ಯಾಗ್‌, ಡೈನಾಮಿಕ್ ಬಾಡಿ ಕಂಟ್ರೋಲ್ ಹಾಗೂ ಅಡ್ಜಸ್ಟಬಲ್ ಡ್ಯಾಂಪರ್‌ಗಳು ಸೇರಿವೆ.

ಬಿಡುಗಡೆಯಾಯ್ತು 2020ರ ಮರ್ಸಿಡಿಸ್ ಬೆಂಝ್ ಜಿ‍ಎಲ್‍ಸಿ

ಮರ್ಸಿಡಿಸ್ ಬೆಂಝ್ ಹೊಸ ಜಿಎಲ್‌ಸಿಯನ್ನು ವಿವಿಧ ಡ್ರೈವಿಂಗ್ ಮೋಡ್‌ಗಳು ಹಾಗೂ ಡ್ರೈವರ್ ಅಸಿಸ್ಟ್ ಫೀಚರ್‍‍ಗಳೊಂದಿಗೆ ಮಾರಾಟ ಮಾಡುತ್ತದೆ. ಇದರ ಜೊತೆಗೆ ಆಫ್-ರೋಡ್ ಎಂಜಿನಿಯರಿಂಗ್ ಪ್ಯಾಕೇಜ್ ಹಾಗೂ ಡ್ರೈವರ್ ಅಸಿಸ್ಟೆನ್ಸ್ ಪ್ಯಾಕೇಜ್ ಎಂಬ ಎರಡು ಆಕ್ಸೆಸರಿ ಪ್ಯಾಕೇಜ್‌ಗಳನ್ನು ನೀಡಲಾಗುತ್ತದೆ.

ಬಿಡುಗಡೆಯಾಯ್ತು 2020ರ ಮರ್ಸಿಡಿಸ್ ಬೆಂಝ್ ಜಿ‍ಎಲ್‍ಸಿ

ಇವುಗಳು ಹೆಚ್ಚುವರಿ ಫೀಚರ್ ಹಾಗೂ ಎಕ್ವಿಪ್‍‍ಮೆಂಟ್‍‍ಗಳನ್ನು ಹೊಂದಿವೆ. 2020ರ ಮರ್ಸಿಡಿಸ್ ಬೆಂಜ್ ಜಿಎಲ್‌ಸಿ ಎಸ್‍‍ಯುವಿಯನ್ನು ಎರಡು ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುವುದು. ಈ ಎಂಜಿನ್‍‍ಗಳಲ್ಲಿ ಪೈಕಿ ಒಂದಾದ 2.0 ಲೀಟರಿನ ಹೊಸ ಟರ್ಬೊ ಪೆಟ್ರೋಲ್ ಎಂಜಿನ್ 255 ಬಿಹೆಚ್‌ಪಿ ಪವರ್ ಹಾಗೂ 370 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಿಡುಗಡೆಯಾಯ್ತು 2020ರ ಮರ್ಸಿಡಿಸ್ ಬೆಂಝ್ ಜಿ‍ಎಲ್‍ಸಿ

ಮತ್ತೊಂದು ಎಂಜಿನ್ ಆದ 2.0 ಲೀಟರಿನ ಡೀಸೆಲ್ ಯುನಿಟ್ 192 ಬಿ‍‍ಹೆಚ್‍‍ಪಿ ಪವರ್ ಹಾಗೂ 400 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎರಡೂ ಎಂಜಿನ್‍‍ಗಳಲ್ಲಿ 9 ಸ್ಪೀಡಿನ ಜಿ ಟ್ರಾನಿಕ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಯುನಿಟ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುತ್ತದೆ.

ಬಿಡುಗಡೆಯಾಯ್ತು 2020ರ ಮರ್ಸಿಡಿಸ್ ಬೆಂಝ್ ಜಿ‍ಎಲ್‍ಸಿ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹೊಸ ಜಿಎಲ್‌ಸಿ ಎಸ್‍‍ಯುವಿಯು ಜರ್ಮನಿ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್‍‍ನ ಎಂಬಿಯುಎಕ್ಸ್ ಟೆಕ್ನಾಲಜಿಯೊಂದಿಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮೊದಲ ಕಾರ್ ಆಗಿದೆ. ಹೊಸ 2020ರ ಜಿಎಲ್‌ಸಿ ಫೇಸ್‌ಲಿಫ್ಟ್ ಎಸ್‌ಯುವಿಯು ಬಿಎಂಡಬ್ಲ್ಯು ಎಕ್ಸ್ 3, ವೋಲ್ವೋ ಎಕ್ಸ್‌ಸಿ 60 ಹಾಗೂ ಆಡಿ ಕ್ಯೂ 3 ಕಾರುಗಳಿಗೆ ಪೈಪೋಟಿ ನೀಡಲಿದೆ.

More from DriveSpark

Article Published On: Tuesday, December 3, 2019, 16:01 [IST]
English summary
2020 Mercedes-Benz GLC Launched In India: Prices Start At Rs 52.75 Lakh - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+