ಸ್ಪಾಟ್ ಟೆಸ್ಟ್ ನಲ್ಲಿ ಸೆರೆಯಾದ ಹೊಸ ಮರ್ಸಿಡಿಸ್ ಬೆಂಝ್ ಜಿ‍ಎಲ್‍ಇ

ಮರ್ಸಿಡಿಸ್ ಬೆಂಝ್ ಜಿ‍ಎಲ್‍ಇ ಕಾರ್ ಅನ್ನು ಮುಂದಿನ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು. ಬಿಡುಗಡೆಯ ಹಿನ್ನೆಲೆಯಲ್ಲಿ ಭಾರತದ ರಸ್ತೆಗಳಲ್ಲಿ ಈ ಹೊಸ ಕಾರ್ ಅನ್ನು ಸ್ಪಾಟ್ ಟೆಸ್ಟ್ ಮಾಡಲಾಗುತ್ತಿದೆ. ನಾಲ್ಕನೇ ತಲೆಮಾರಿನ ಜಿಎಲ್‍ಇ ಕಾರಿನ ಇಂಟಿರಿಯರ್‍‍ನಲ್ಲಿ ಹೊಸ ವಿನ್ಯಾಸವನ್ನು ಅಳವಡಿಸಲಾಗಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಸೆರೆಯಾದ ಹೊಸ ಮರ್ಸಿಡಿಸ್ ಬೆಂಝ್ ಜಿ‍ಎಲ್‍ಇ

ಮುಂದಿನ ವರ್ಷ ಬಿಡುಗಡೆಯಾಗಲಿರುವ ಈ ಕಾರು ಬಿ‍ಎಸ್6 ಎಂಜಿನ್ ಹೊಂದಿರಲಿದೆ. ಆಟೋ ಕಾರ್ ಇಂಡಿಯಾ ಬಿಡುಗಡೆಗೊಳಿಸಿರುವ ಚಿತ್ರದಲ್ಲಿ ಹೊಸ ತಲೆಮಾರಿನ ಜಿಎಲ್‍ಇ ಎಸ್‍‍ಯುವಿಯ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ. ಈ ಐಷಾರಾಮಿ ಎಸ್‍‍ಯುವಿ ಇಂಟಿಗ್ರೇಟೆಡ್ ಡಿ‍ಆರ್‍ಎಲ್‍‍ಗಳ ಜೊತೆಗೆ ಮರುವಿನ್ಯಾಸದ ಹೆಡ್‍‍ಲ್ಯಾಂಪ್‍, ಹೊಸ ಗ್ರಿಲ್, ಮರುವಿನ್ಯಾಸದ ಫ್ರಂಟ್ ಬಂಪರ್ ಹಾಗೂ ಟೇಲ್‍‍ಲ್ಯಾಂಪ್ ಕ್ಲಸ್ಟರ್‍‍ಗಳನ್ನು ಹೊಂದಿರುವ ಸಾಧ್ಯತೆಗಳಿವೆ.

ಸ್ಪಾಟ್ ಟೆಸ್ಟ್ ನಲ್ಲಿ ಸೆರೆಯಾದ ಹೊಸ ಮರ್ಸಿಡಿಸ್ ಬೆಂಝ್ ಜಿ‍ಎಲ್‍ಇ

ಮಾರುಕಟ್ಟೆಯಲ್ಲಿರುವ ಹಳೆಯ ತಲೆಮಾರಿನ ಜಿ‍‍ಎಲ್‍ಇಗೆ ಹೋಲಿಸಿದರೆ, ಹೊಸ ಜಿ‍ಎಲ್‍ಇ ಎಸ್‍‍ಯುವಿಯು ಉದ್ದವಾದ ವ್ಹೀಲ್ ಬೇಸ್‍ ಹೊಂದಿರಲಿದೆ. ಇದರಿಂದಾಗಿ ಹೊಸ ಜಿ‍ಎಲ್‍‍ಇ 69 ಎಂಎಂಗೂ ಅಧಿಕವಾಗ ಲೆಗ್‍‍ರೂಂ ಹೊಂದಿರಲಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಸೆರೆಯಾದ ಹೊಸ ಮರ್ಸಿಡಿಸ್ ಬೆಂಝ್ ಜಿ‍ಎಲ್‍ಇ

ಮಾರುಕಟ್ಟೆಯಲ್ಲಿರುವ ಮೂರನೇ ತಲೆಮಾರಿನ ಜಿ‍ಎಲ್‍ಇಗೆ ಹೋಲಿಸಿದರೆ ಹೆಚ್ಚು ಸುಧಾರಿತವಾದ ಸಸ್ಪೆಂಷನ್ ಸೆಟ್‍ಅಪ್ ಹೊಂದಿರಲಿದೆ. ಹೊಸ ಮರ್ಸಿಡಿಸ್ ಜಿ‍ಎಲ್‍ಇ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಹಾಗೂ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍‍ಗಳಿಗಾಗಿ ಪ್ರತ್ಯೇಕವಾದ 12.3 ಇಂಚಿನ ಸ್ಕ್ರೀನ್‍‍ಗಳನ್ನು ಹೊಂದಿರಲಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಸೆರೆಯಾದ ಹೊಸ ಮರ್ಸಿಡಿಸ್ ಬೆಂಝ್ ಜಿ‍ಎಲ್‍ಇ

ಸೆಂಟರ್ ಕಂಸೋಲ್‍‍ನಲ್ಲಿ ಟಚ್‍‍ಪ್ಯಾಡ್ ಹಾಗೂ ಇಂಟಿಗ್ರೇಟೆಡ್ ಗ್ರಾಬ್ ಹ್ಯಾಂಡಲ್‍‍ಗಳಿರಲಿವೆ. ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹಾಗೂ ಇತರ ಸೆಟ್ಟಿಂಗ್‍‍ಗಳಿಗಾಗಿ ಸ್ಟಿಯರಿಂಗ್ ವ್ಹೀಲ್‍ ಮೇಲೆ ಟಚ್‍‍ಪ್ಯಾಡ್‍‍ಗಳನ್ನು ಅಳವಡಿಸಲಾಗಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಸೆರೆಯಾದ ಹೊಸ ಮರ್ಸಿಡಿಸ್ ಬೆಂಝ್ ಜಿ‍ಎಲ್‍ಇ

ಹೊಸ ಎಸ್‍ಯುವಿಯ ಕ್ಯಾಬಿನ್‍‍‍ಗೆ ಪ್ರೀಮಿಯಂ ಅನುಭವವನ್ನು ನೀಡುವುದಕ್ಕಾಗಿ ಇಂಟಿರಿಯರ್‍‍ನಲ್ಲಿ ಕ್ಲೈಮೆಟ್ ಕಂಟ್ರೋಲ್ ಯುನಿಟ್, ಮರುವಿನ್ಯಾಸಗೊಳಿಸಲಾದ ಏರ್ ಕಂಡೀಷನಿಂಗ್ ವೆಂಟ್‍‍ಗಳಿವೆ. ಮರ್ಸಿಡಿಸ್ ಕಂಪನಿಯು ಹೊಸ ತಲೆಮಾರಿನ ಜಿ‍ಎಲ್‍ಇಯನ್ನು ಬಿಎಸ್ 6 ಎಂಜಿನ್‍‍‍ನೊಂದಿಗೆ ಬಿಡುಗಡೆಗೊಳಿಸಲಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಸೆರೆಯಾದ ಹೊಸ ಮರ್ಸಿಡಿಸ್ ಬೆಂಝ್ ಜಿ‍ಎಲ್‍ಇ

ಮೊದಲು ಈ ಎಸ್‍‍ಯುವಿಯನ್ನು ಡೀಸೆಲ್ ಎಂಜಿನ್‍‍‍ನಲ್ಲಿ ಬಿಡುಗಡೆಗೊಳಿಸಿ, ನಂತರದ ದಿನಗಳಲ್ಲಿ ಪೆಟ್ರೋಲ್ ಎಂಜಿನ್‍‍ನಲ್ಲಿ ಬಿಡುಗಡೆಗೊಳಿಸಲಿದೆ. ಮಾದರಿಗಳ ಆಧಾರದ ಮೇಲೆ ಈ ಎಸ್‍‍ಯುವಿಯನ್ನು ಮೂರು ವಿವಿಧ ಎಂಜಿನ್‍‍ಗಳಲ್ಲಿ ಮಾರಾಟ ಮಾಡಲಾಗುವುದು.

MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಸ್ಪಾಟ್ ಟೆಸ್ಟ್ ನಲ್ಲಿ ಸೆರೆಯಾದ ಹೊಸ ಮರ್ಸಿಡಿಸ್ ಬೆಂಝ್ ಜಿ‍ಎಲ್‍ಇ

ಟಾಪ್ ಮಾದರಿಯಾದ ಜಿ‍ಎಲ್‍ಇ 400ಡಿ ಮಾದರಿಯಲ್ಲಿ 3.0 ಲೀಟರಿನ 6 ಸಿಲಿಂಡರ್ ಡೀಸೆಲ್ ಎಂಜಿನ್ ಅಳವಡಿಸಲಾಗುವುದು. ಈ ಎಂಜಿನ್ 352 ಬಿ‍‍ಹೆಚ್‍‍ಪಿ ಪವರ್ ಹಾಗೂ 700 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಸ್ಪಾಟ್ ಟೆಸ್ಟ್ ನಲ್ಲಿ ಸೆರೆಯಾದ ಹೊಸ ಮರ್ಸಿಡಿಸ್ ಬೆಂಝ್ ಜಿ‍ಎಲ್‍ಇ

ಜಿ‍ಎಲ್‍ಇ 300ಡಿ ಮಾದರಿಯಲ್ಲಿ 2.0 ಲೀಟರಿನ ಇನ್‍ ಲೈನ್ 4 ಸಿಲಿಂಡರ್ ಡೀಸೆಲ್ ಎಂಜಿನ್ ಇರಲಿದ್ದು, ಈ ಎಂಜಿನ್ 241 ಬಿ‍‍ಹೆಚ್‍‍ಪಿ ಪವರ್ ಹಾಗೂ 500 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು ಜಿ‍ಎಲ್‍ಇಯ ಪೆಟ್ರೋಲ್ ಮಾದರಿಯಲ್ಲಿ 3.0 ಲೀಟರಿನ ಇನ್ ಲೈನ್ 6 ಸಿಲಿಂಡರ್ ಎಂಜಿನ್ ಇರಲಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಸ್ಪಾಟ್ ಟೆಸ್ಟ್ ನಲ್ಲಿ ಸೆರೆಯಾದ ಹೊಸ ಮರ್ಸಿಡಿಸ್ ಬೆಂಝ್ ಜಿ‍ಎಲ್‍ಇ

ಈ ಎಂಜಿನ್ 362 ಬಿ‍‍ಹೆಚ್‍‍ಪಿ ಪವರ್ ಹಾಗೂ 500 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಎಲ್ಲಾ ಎಂಜಿನ್‍‍‍ಗಳಲ್ಲೂ 9 ಸ್ಪೀಡ್‍‍ನ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇರಲಿದ್ದು, ಇದರ ಜೊತೆಗೆ ಮರ್ಸಿಡಿಸ್ ಕಂಪನಿಯ 4ಮ್ಯಾಟಿಕ್ ಪರ್ಮನೆಂಟ್ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಇರಲಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಸೆರೆಯಾದ ಹೊಸ ಮರ್ಸಿಡಿಸ್ ಬೆಂಝ್ ಜಿ‍ಎಲ್‍ಇ

ಭಾರತದಲ್ಲಿ ಬಿಡುಗಡೆಯಾದ ನಂತರ ಜಿ‍ಎಲ್‍ಇ 300ಡಿ ಬಿ‍ಎಂ‍‍ಡಬ್ಲ್ಯು ಎಕ್ಸ್5, ಲ್ಯಾಂಡ್ ರೋವರ್ ಡಿಸ್ಕವರಿ, ಆಡಿ ಕ್ಯೂ5 ಕಾರುಗಳಿಗೆ ಪೈಪೋಟಿ ನೀಡಲಿದೆ. ಹೊಸ ತಲೆಮಾರಿನ ಜಿಎಲ್‍ಇಯ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.80 ಲಕ್ಷದಿಂದ ರೂ.90 ಲಕ್ಷಗಳಾಗುವ ಸಾಧ್ಯತೆಗಳಿವೆ.

ಸ್ಪಾಟ್ ಟೆಸ್ಟ್ ನಲ್ಲಿ ಸೆರೆಯಾದ ಹೊಸ ಮರ್ಸಿಡಿಸ್ ಬೆಂಝ್ ಜಿ‍ಎಲ್‍ಇ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಜಿ‍ಎಲ್‍ಇ ಎಸ್‍‍ಯುವಿ ಈ ಮೊದಲು ಮರ್ಸಿಡಿಸ್ ಕಂಪನಿಯ ಎಂ‍ಎಲ್ ಕ್ಲಾಸ್ ಸರಣಿಯ ಭಾಗವಾಗಿತ್ತು. ಈ ಎಸ್‍‍ಯುವಿಯಲ್ಲಿ ಅಳವಡಿಸಿರುವ ಹಲವಾರು ಫೀಚರ್‍‍ಗಳಿಂದಾಗಿ, ಚಾಲಕ ಹಾಗೂ ಇದರಲ್ಲಿ ಪ್ರಯಾಣಿಸುವವರು ಆರಾಮದಾಯಕ ಅನುಭವವನ್ನು ಪಡೆಯಲಿದ್ದಾರೆ.

ಸ್ಪಾಟ್ ಟೆಸ್ಟ್ ನಲ್ಲಿ ಸೆರೆಯಾದ ಹೊಸ ಮರ್ಸಿಡಿಸ್ ಬೆಂಝ್ ಜಿ‍ಎಲ್‍ಇ

ಈ ಹೊಸ ಎಸ್‍‍‍ಯುವಿಯಲ್ಲಿರುವ ಸ್ಪೋರ್ಟಿ ಡಿಸೈನ್, ಸುಧಾರಿತ ಸುರಕ್ಷತಾ ಫೀಚರ್ಸ್, ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂಗಳು ಈ ಎಸ್‍‍ಯುವಿಯನ್ನು ಮಧ್ಯಮ ಗಾತ್ರದ ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿ ಪರಿಪೂರ್ಣವಾಗಿಸಿವೆ.

Source: Autocarindia

Article Published On: Monday, September 23, 2019, 18:50 [IST]
English summary
New Mercedes-Benz GLE Spotted Testing In India Ahead Of Launch: Spy Pics & Details - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+