ಬಿಡುಗಡೆಯ ಮುನ್ನವೇ ನಿಸ್ಸಾನ್ ಕಿಕ್ಸ್ ಕಾರಿನ ಮಾಹಿತಿ ಸೋರಿಕೆ..

ನಿಸ್ಸಾನ್ ಇಂಡಿಯಾ ಸಂಸ್ಥೆಯು ಇದೇ ತಿಂಗಳು ತನ್ನ ಕಿಕ್ಸ್ ಹೊಚ್ಚ ಹೊಸ ಎಸ್‌ಯುವಿ ಮಾದರಿಯೊಂದನ್ನು ಬಿಡುಗಡೆಗೊಳಿಸುತ್ತಿದೆ. ಈಗಾಗಲೇ ಹೊಸ ಕಾರಿನ ಖರೀದಿಗಾಗಿ ಡೀಲರ್‍‍ಗಳು ಗ್ರಾಹಕರಿಂದ ಅಧಿಕೃತವಾಗಿ ರೂ. 25 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಸ್ವೀಕರಿಸುತ್ತಿದ್ದು, ಈ ಮಧ್ಯೆ ಹೊಸ ಕಾರಿನ ಮಾಹಿತಿ ಕೈಪಿಡಿಯು ಸೋರಿಕೆಯಾಗಿದೆ.

ಬಿಡುಗಡೆಯ ಮುನ್ನವೇ ನಿಸ್ಸಾನ್ ಕಿಕ್ಸ್ ಕಾರಿನ ಮಾಹಿತಿ ಸೋರಿಕೆ..

ನಿಸ್ಸಾನ್ ಕಿಕ್ಸ್ ಕಾರು ರೆನಾಲ್ಟ್ ಡಸ್ಟರ್ ಬಿ0 ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಿ ಅಭಿವೃದ್ಧಿಗೊಂಡಿದ್ದು, ನಿನ್ಸಾಸ್ ಸಂಸ್ಥೆಯು ಈ ಮೊದಲು ಹೇಳಿಕೊಂಡಂತೆ ಹೊಸ ಕಾರಿನ ವಿನ್ಯಾಸಗಳು, ತಾಂತ್ರಿಕ ಅಂಶಗಳು, ಎಂಜಿನ್ ಪರ್ಫಾಮೆನ್ಸ್ ಮತ್ತು ಬೆಲೆ ಮಾಹಿತಿಯುಳ್ಳ ಕೈಪಿಡಿಯು ಗ್ರಾಹಕರ ಆಕರ್ಷಣೆಗೆ ಕಾರಣವಾಗಿವೆ.

ಬಿಡುಗಡೆಯ ಮುನ್ನವೇ ನಿಸ್ಸಾನ್ ಕಿಕ್ಸ್ ಕಾರಿನ ಮಾಹಿತಿ ಸೋರಿಕೆ..

ರೆನಾಲ್ಟ್ ಕ್ಯಾಪ್ಚರ್‌ಗಿಂತಲೂ ಹೆಚ್ಚಿನ ಗುಣಮಟ್ಟದ ವಿನ್ಯಾಸಗಳನ್ನು ಪಡೆದುಕೊಂಡಿದ್ದು, ಹಾಗೆಯೇ ಡಸ್ಟರ್ ಮತ್ತು ಟೆರಾನೋ ಮಾದರಿಗಳಿಂತ ಹೆಚ್ಚು ಆಕರ್ಷಣೆ ಪಡೆದಿದೆ. ಹೀಗಾಗಿ ಹೊಸ ಕಾರು ಭಾರೀ ಪ್ರಮಾಣದ ಮಾರಾಟ ನೀರಿಕ್ಷೆಯಿದ್ದು, ಎಸ್‌ಯುವಿ ಪ್ರಿಯರಿಗೆ ಇಷ್ಟವಾಗುವ ಬಹುತೇಕ ಅಂಶಗಳು ಇದರಲ್ಲಿವೆ.

ಬಿಡುಗಡೆಯ ಮುನ್ನವೇ ನಿಸ್ಸಾನ್ ಕಿಕ್ಸ್ ಕಾರಿನ ಮಾಹಿತಿ ಸೋರಿಕೆ..

GRAPHENE ಡಿಸೈನ್ ತಂತ್ರಜ್ಞಾನದೊಂದಿಗೆ ಸಿದ್ದವಾಗಿರುವ ಹೊರ ವಿನ್ಯಾಸಗಳು ಕಿಕ್ಸ್‌ಗೆ ಪ್ರೀಮಿಯಂ ಮೆರಗು ತಂದಿದ್ದು, ಮಲ್ಟಿ ಲೇಯರ್ ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್ ವ್ಯವಸ್ಥೆ ಹೊಂದಿದ್ದು, ಲೆದರ್ ಕೊಟಿಂಗ್ ಸೀಟುಗಳು ಮತ್ತು ಪುಶ್ ಡೋರ್ ಟ್ರಿಮ್ ಅನುಕೂಲತೆಯಿದೆ.

ಬಿಡುಗಡೆಯ ಮುನ್ನವೇ ನಿಸ್ಸಾನ್ ಕಿಕ್ಸ್ ಕಾರಿನ ಮಾಹಿತಿ ಸೋರಿಕೆ..

ಇನ್ನು ವಿನೂತನ ಕಾರಿನಲ್ಲಿ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋ‌ಟೈನ್‌ಮೆಂಟ್ ಹಾಗೂ ಕಾರಿನ ಸುತ್ತ ನೋಡಬಹುದಾದ 360 ವಿವ್ಯೂ ಮಾನಿಟರ್ ವ್ಯವಸ್ಥೆಯಿದ್ದು, ಇದು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾರಾಟವಾಗುತ್ತಿರುವ ಇತರೆ ಸಬ್ ಕಂಪ್ಯಾಕ್ಟ್ ಮಾದರಿಗಳಲ್ಲೇ ವಿಶೇಷ ಕಾರು ಎನ್ನಬಹುದು.

ಬಿಡುಗಡೆಯ ಮುನ್ನವೇ ನಿಸ್ಸಾನ್ ಕಿಕ್ಸ್ ಕಾರಿನ ಮಾಹಿತಿ ಸೋರಿಕೆ..

ಹಾಗೆಯೇ ಪ್ರೀಮಿಯಂ ಕಾರುಗಳಲ್ಲಿ ಕಂಡುಬರುವ ವಿ ಮೊಷನ್ ಗ್ರೀಲ್, ಫಾಲೋ ಮಿ ಹೆಡ್‌ಲ್ಯಾಂಪ್, ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್, ಎಲ್ಇಡಿ ಫಾಗ್ ಲ್ಯಾಂಪ್, ಸ್ಪೋರ್ಟಿ ಲುಕ್ ನೀಡುವ 17-ಇಂಚಿನ ಫೈವ್ ಸ್ಪೋಕ್ ಅಲಾಯ್ ಚಕ್ರಗಳು ಮತ್ತು ಪ್ಲಾಸ್ಟಿಕ್ ಬಾಡಿ ಕ್ಲ್ಯಾಡಿಂಗ್ ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿದೆ.

ಬಿಡುಗಡೆಯ ಮುನ್ನವೇ ನಿಸ್ಸಾನ್ ಕಿಕ್ಸ್ ಕಾರಿನ ಮಾಹಿತಿ ಸೋರಿಕೆ..

ಸಬ್ ಕಂಪ್ಯಾಕ್ಟ್ ಎಸ್‌ಯುವಿ ವೈಶಿಷ್ಟ್ಯತೆಯ ಕಿಕ್ಸ್ ಕಾರು ಉತ್ತಮ ಉದ್ದಳತೆ ಹೊಂದಿದ್ದು, 4,384ಎಂಎಂ ಉದ್ದ, 1,813ಎಂಎಂ ಅಗಲವಾಗಿದೆ. ಜೊತೆಗೆ 2,673 ಎಂಎಂ ಎತ್ತರವಾಗಿದ್ದು, ಐದು ಜನ ಆರಾಮದಾಯಕವಾಗಿ ಪ್ರಯಾಣ ಮಾಡಬಹುದಾಗಿದೆ.

ಬಿಡುಗಡೆಯ ಮುನ್ನವೇ ನಿಸ್ಸಾನ್ ಕಿಕ್ಸ್ ಕಾರಿನ ಮಾಹಿತಿ ಸೋರಿಕೆ..

ಇನ್ನುಳಿದಂತೆ ಆರಾಮದಾಯಕ ಪ್ರಯಾಣಕ್ಕೆ ಸಹಕಾರಿಯಾಗುವ ಅಂಡ್ರಾಯಿಡ್ ಆಟೋ ಪ್ಲೇ, ಆ್ಯಪಲ್ ಕಾರ್ ಪ್ಲೇ, ಯುಎಸ್‌ಬಿ ಪೋರ್ಟ್, ಚಾಲಕ ಮತ್ತು ಮುಂಭಾಗದ ಪ್ರಯಾಣಿಕರಿಗೆ ಆರ್ಮ್ ರೆಸ್ಟ್, ಹಿಂಬದಿಯಲ್ಲಿ ಎಸಿ ವೆಂಟ್ಸ್, ಸ್ಪೀಡ್ ಸೆನ್ಸಾರ್ ಡೋರ್ ಲಾಕ್/ಅನ್‌ಲಾಕ್ ಸೌಲಭ್ಯ, ರಿಯರ್ ಪಾರ್ಕಿಂಗ್ ವ್ಯವಸ್ಥೆಯಿರಲಿದೆ.

ಬಿಡುಗಡೆಯ ಮುನ್ನವೇ ನಿಸ್ಸಾನ್ ಕಿಕ್ಸ್ ಕಾರಿನ ಮಾಹಿತಿ ಸೋರಿಕೆ..

ಎಂಜಿನ್ ಸಾಮರ್ಥ್ಯ

ಹೊಸ ಕಿಕ್ಸ್ ಮಾದರಿಯು 1.5-ಲೀಟರ್(1498ಸಿಸಿ) ಪೆಟ್ರೋಲ್ ಹಾಗೂ 1.5-ಲೀಟರ್(1461ಸಿಸಿ) ಡಿಸೇಲ್ ಎಂಜಿನ್ ಆಯ್ಕೆ ಹೊಂದಿದ್ದು, ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 106-ಬಿಎಚ್‌ಪಿ ಉತ್ಪಾದಿಸಿದ್ದಲ್ಲಿ ಡೀಸೆಲ್ ಕಾರು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 110-ಬಿಎಚ್‌ಪಿ ಉತ್ಪಾದಿಸುತ್ತೆ.

MOST READ: ಅಚ್ಚರಿಯಾದ್ರು ಸತ್ಯ - ಈ ಕಾರು ಚಲಿಸಲ್ಲ, ನಡ್ಕೊಂಡೆ ಹೋಗುತ್ತಂತೆ..!

ಬಿಡುಗಡೆಯ ಮುನ್ನವೇ ನಿಸ್ಸಾನ್ ಕಿಕ್ಸ್ ಕಾರಿನ ಮಾಹಿತಿ ಸೋರಿಕೆ..

ಇನ್ನು ಹೊಸ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ವೆಹಿಕಲ್ ಡೈನಾಮಿಕ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ಮೂರು ಏರ್‌ಬ್ಯಾಗ್, ಎಬಿಎಸ್, ಇಕೋ ಮೂಡ್ ಮತ್ತು ಕ್ರೂಸ್ ಕಂಟ್ರೋಲ್ ಸೌಲಭ್ಯವಿದೆ.

ಬಿಡುಗಡೆಯ ಮುನ್ನವೇ ನಿಸ್ಸಾನ್ ಕಿಕ್ಸ್ ಕಾರಿನ ಮಾಹಿತಿ ಸೋರಿಕೆ..

ಕಾರಿನ ಬೆಲೆ(ಅಂದಾಜು)

ಹೊಸ ನಿಸ್ಸಾನ್ ಕಿಕ್ಸ್ ಕಾರಿನ ಕಾರಿನ ಬೆಲೆಗಳು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.11 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ.15 ಲಕ್ಷ ಬೆಲೆ ಇರಬಹುದೆಂದು ಅಂದಾಜಿಸಲಾಗಿದೆ.

MOST READ: ಹತ್ತು ಮಂದಿ ಸಾವು - ಇದಕ್ಕೆ ಕಾರಣ ಗೊತ್ತಾದ್ರೆ ಇನ್ಮುಂದೆ ನೀವು ವಾಹನದಲ್ಲಿ ಪ್ರಯಾಣಿಸುವುದಿಲ್ಲ

ಬಿಡುಗಡೆಯ ಮುನ್ನವೇ ನಿಸ್ಸಾನ್ ಕಿಕ್ಸ್ ಕಾರಿನ ಮಾಹಿತಿ ಸೋರಿಕೆ..

autotechnicalಹೀಗಾಗಿ ಹೊಸ ಕಿಕ್ಸ್ ಕಾರು ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಬ್ರೆಝಾ, ಹ್ಯುಂಡೈ ಕ್ರೇಟಾ, ಮಹೀಂದ್ರಾ ಎಕ್ಸ್‌ಯುವಿ 500 ಮತ್ತು ಬಿಡುಗಡೆಯಾಗಲಿರುವ ಟಾಟಾ ಹ್ಯಾರಿಯರ್ ಕಾರುಗಳಿಗೆ ತೀವ್ರ ಪೈಪೋಟಿ ನೀಡುವ ಗುಣಲಕ್ಷಣಗಳನ್ನು ಹೊಂದಿದ್ದು, ಗುಣಮಟ್ಟದಲ್ಲಿ ಇತರೆ ಸಬ್ ಕಂಪ್ಯಾಕ್ಟ್ ಎಸ್‌ಯುವಿಗಳಿಂತಲೂ ವಿಶೇಷ ಎನ್ನಿಸಲಿವೆ.

Source:autotechnical

Most Read Articles

Kannada
English summary
Nissan India is all set to launch its new Kicks SUV in the market on the 22nd of January. Ahead of its launch in India, images of the Kicks brochure has been leaked online by Auto Tech India.
Story first published: Tuesday, January 8, 2019, 20:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X