ಪ್ರವಾಹದಿಂದಾಗಿ ನೀರಿನಲ್ಲಿ ಮುಳುಗಿದ ಹೊಸ ಟಾಟಾ ಹ್ಯಾರಿಯರ್

ಇತ್ತೀಚಿಗೆ ಸುರಿದ ಭಾರೀ ಮಳೆಯಿಂದಾಗಿ ಮಹಾರಾಷ್ಟ್ರದಲ್ಲಿರುವ ಕೊಲ್ಲಾಪುರ ಹಾಗೂ ಸಾಂಗ್ಲಿ ಜಿಲ್ಲೆಗಳು ಸಂಪೂರ್ಣವಾಗಿ ಜಲಾವೃತ್ತವಾಗಿದ್ದವು. ಇದು ಈವರೆಗೆ ಈ ಭಾಗದಲ್ಲಿ ಸುರಿದ ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ಇದರಿಂದಾಗಿ ಪರಿಸ್ಥಿತಿಯು ಬಹಳಷ್ಟು ಹದಗೆಟ್ಟಿತ್ತು.

ಪ್ರವಾಹದಿಂದಾಗಿ ನೀರಿನಲ್ಲಿ ಮುಳುಗಿದ ಹೊಸ ಟಾಟಾ ಹ್ಯಾರಿಯರ್

ಕರ್ನಾಟಕದಲ್ಲಿರುವ ಆಲಮಟ್ಟಿ ಜಲಾಶಯದಿಂದ ಪಂಚಗಂಗಾ ನದಿಗೆ ನೀರನ್ನು ಬಿಟ್ಟ ಕಾರಣದಿಂದಾಗಿ ಸಾಂಗ್ಲಿ ಹಾಗೂ ಕೊಲ್ಲಾಪುರ ಜಿಲ್ಲೆಗಳು ಪ್ರವಾಹ ಪರಿಸ್ಥಿತಿಯನ್ನು ಎದುರಿಸಿದವು. ಕೊಲ್ಲಾಪುರದ ಮೂಲಕ ಹಾದುಹೋಗುವ ಬೆಂಗಳೂರು ಹಾಗೂ ಮುಂಬೈಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 4ರ ಕೆಲವು ಭಾಗಗಳು ಪ್ರವಾಹದ ನೀರಿನಲ್ಲಿ ಮುಳುಗಿ ಹೋಗಿದ್ದವು. ಇದರಿಂದಾಗಿ ಲಕ್ಷಾಂತರ ಜನರು ರಸ್ತೆಯಲ್ಲಿ ಸಿಲುಕಿಕೊಳ್ಳುವಂತಾಯಿತು.

ಪ್ರವಾಹದಿಂದಾಗಿ ನೀರಿನಲ್ಲಿ ಮುಳುಗಿದ ಹೊಸ ಟಾಟಾ ಹ್ಯಾರಿಯರ್

ಪ್ರವಾಹವು ಕಡಿಮೆಯಾದ ನಂತರ, ಕೊಲ್ಲಾಪುರ ಹಾಗೂ ಸುತ್ತಮುತ್ತಲಿನ ನಿವಾಸಿಗಳು ನಿಟ್ಟುಸಿರು ಬಿಡುವಂತಾಗಿದೆ. ಪ್ರವಾಹದ ಕಾರಣದಿಂದಾಗಿ ಮನೆಗಳಿಂದ ದೂರ ಉಳಿದಿದ್ದ ಜನರು ತಮ್ಮ ಮನೆಗಳಿಗೆ ಹಾಗೂ ಕೆಲಸ ಮಾಡುವ ಸ್ಥಳಗಳಿಗೆ ವಾಪಸ್ ಆಗುತ್ತಿದ್ದಾರೆ.

ಪ್ರವಾಹದಿಂದಾಗಿ ನೀರಿನಲ್ಲಿ ಮುಳುಗಿದ ಹೊಸ ಟಾಟಾ ಹ್ಯಾರಿಯರ್

ಕಾರು ಹಾಗೂ ಬೈಕ್ ಡೀಲರ್‍‍ಗಳು ಪ್ರವಾಹದಿಂದಾಗಿ ನೀರಿನಲ್ಲಿ ಮುಳುಗಿದ್ದ ವಾಹನಗಳನ್ನು ಸರಿಪಡಿಸುತ್ತಿದ್ದಾರೆ. ಪ್ರವಾಹದಿಂದಾಗಿ ಅನೇಕ ವಾಹನಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ್ದವು. ಪ್ರವಾಹ ಪರಿಸ್ಥಿತಿಯಿಂದಾಗಿ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ್ದ ಟಾಟಾ ಹ್ಯಾರಿಯರ್‌ನ ಫೋಟೋಗಳನ್ನು ರಶ್ಲೇನ್ ಕ್ರಾಶ್‌ಲೇನ್ ಸದಸ್ಯರಾದ ಪ್ರವೀಣ್ ಕೆ ಪಾಟೀಲ್‍‍ರವರು ಹಂಚಿಕೊಂಡಿದ್ದಾರೆ.

ಪ್ರವಾಹದಿಂದಾಗಿ ನೀರಿನಲ್ಲಿ ಮುಳುಗಿದ ಹೊಸ ಟಾಟಾ ಹ್ಯಾರಿಯರ್

ಈ ಕಾರನ್ನು ಕೊಲ್ಲಾಪುರದ ಅಧಿಕೃತ ಟಾಟಾ ಮೋಟಾರ್ಸ್ ಡೀಲರ್‍‍ಶಿಪ್‍‍ನಲ್ಲಿ ಪಾರ್ಕಿಂಗ್ ಮಾಡಲಾಗಿತ್ತು. ಪ್ರವೀಣ್‍‍ರವರು ಮಾತನಾಡಿ, ಭಾರಿ ಮಳೆಯಿಂದಾಗಿ 2 ತಿಂಗಳ ಹಿಂದೆ ಖರೀದಿಸಲಾಗಿದ್ದ ಹೊಸ ಟಾಟಾ ಹ್ಯಾರಿಯರ್ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದೆ.

ಪ್ರವಾಹದಿಂದಾಗಿ ನೀರಿನಲ್ಲಿ ಮುಳುಗಿದ ಹೊಸ ಟಾಟಾ ಹ್ಯಾರಿಯರ್

ಕಾರಿನ ಇಂಟಿರಿಯರ್ ಸಂಪೂರ್ಣ ಹಾಳಾಗಿದೆ ಎಂದು ಹೇಳಿದರು. ಇದರ ಜೊತೆಗೆ ಈ ಡೀಲರ್‍‍ರವರ ಬಳಿಯಿದ್ದ ಇನ್ನೂ ಅನೇಕ ಹೊಸ ಕಾರುಗಳೂ ಸಹ ಇದೇ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಕೊಲ್ಲಾಪುರದಲ್ಲಿರುವ ಬೇರೆ ಕಾರು ಹಾಗೂ ಬೈಕುಗಳ ಡೀಲರ್‍‍ಗಳೂ ಸಹ ಇದೇ ಸಮಸ್ಯೆ ಎದುರಿಸುತ್ತಿದ್ದಾರೆ.

ಪ್ರವಾಹದಿಂದಾಗಿ ನೀರಿನಲ್ಲಿ ಮುಳುಗಿದ ಹೊಸ ಟಾಟಾ ಹ್ಯಾರಿಯರ್

ಕೊಲ್ಲಾಪುರದಲ್ಲಿ ಮಾತ್ರವಲ್ಲದೇ, ಭಾರತದ ಅನೇಕ ಸ್ಥಳಗಳು ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಇದರಿಂದಾಗಿ ಬಹುತೇಕ ಕಾರು ಕಂಪನಿಗಳು ಉಚಿತ ಚೆಕ್ ಅಪ್ ಕ್ಯಾಂಪ್‍‍ಗಳನ್ನು ಆಯೋಜಿಸಿವೆ. ಆಟೋಮೊಬೈಲ್ ಕಂಪನಿಗಳು ಸದ್ಯಕ್ಕೆ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿವೆ.

MOST READ: ಡೀಸೆಲ್ ಕಾರುಗಳನ್ನು ಖರೀದಿಸುವುದಾದರೆ ಈಗಲೇ ಖರೀದಿಸಿ..!

ಪ್ರವಾಹದಿಂದಾಗಿ ನೀರಿನಲ್ಲಿ ಮುಳುಗಿದ ಹೊಸ ಟಾಟಾ ಹ್ಯಾರಿಯರ್

ಮಾರಾಟ ಪ್ರಮಾಣವು 19 ವರ್ಷಗಳ ನಂತರ ಭಾರೀ ಪ್ರಮಾಣದಲ್ಲಿ ಕುಸಿದಿದೆ. ವಾಹನ ಉದ್ಯಮದಲ್ಲಿನ ಮಂದಗತಿಯ ಕಾರಣ ಮಾರಾಟ, ಉತ್ಪಾದನೆ, ಪೂರಕಗಳು ಮತ್ತು ಲಾಜಿಸ್ಟಿಕ್ಸ್ ಗಳೂ ಸಹ ಭಾರೀ ಪ್ರಮಾಣದಲ್ಲಿ ಕುಸಿದಿವೆ.

MOST READ: ಫಾರ್ಚುನರ್ ಹೊಂದಿರುವ ಭಾರತದ ಸೆಲೆಬ್ರಿಟಿಗಳಿವರು..!

ಪ್ರವಾಹದಿಂದಾಗಿ ನೀರಿನಲ್ಲಿ ಮುಳುಗಿದ ಹೊಸ ಟಾಟಾ ಹ್ಯಾರಿಯರ್

ಇದರ ಜೊತೆಗೆ ಆಟೋಮೊಬೈಲ್ ಉದ್ಯಮವು ಇನ್ನಿತರ ಸಮಸ್ಯೆಗಳನ್ನು ಎದುರಿಸುತ್ತಿದೆ. ವಾಹನಗಳ ಉತ್ಪಾದನೆಯನ್ನು ಕಡಿಮೆಗೊಳಿಸಲು ಬಹುತೇಕ ಕಂಪನಿಗಳು ಉತ್ಪಾದನಾ ಘಟಕಗಳನ್ನು ಮುಚ್ಚುತ್ತಿವೆ.

MOST READ: ಆರ್ಟಿಕಲ್ 370 ರದ್ದಾದ ಬೆನ್ನಲ್ಲೆ ಜಮ್ಮು ಕಾಶ್ಮೀರದಲ್ಲಿ ಶುರುವಾಗಿದೆ ಹೊಸ ಕೈಗಾರಿಕಾ ಕ್ರಾಂತಿ

ಪ್ರವಾಹದಿಂದಾಗಿ ನೀರಿನಲ್ಲಿ ಮುಳುಗಿದ ಹೊಸ ಟಾಟಾ ಹ್ಯಾರಿಯರ್

ಟಾಟಾ ಮೋಟಾರ್ಸ್‌ನ ಜಮ್‌ಶೆಡ್‌ಪುರ ಘಟಕವನ್ನು ಆಗಸ್ಟ್ 16ರಿಂದ ಮೂರನೇ ಬಾರಿಗೆ 4 ದಿನಗಳವರೆಗೆ ಮುಚ್ಚಲಾಗುತ್ತಿದೆ. ಎರಡು ದಿನಗಳ ಕಾಲ ಸ್ಥಗಿತಗೊಳಿಸುವುದಾಗಿ ಹೇಳಲಾಗಿದ್ದರೂ ವಾಸ್ತವವಾಗಿ ಸಾರ್ವಜನಿಕ ರಜೆ ಹಾಗೂ ಭಾನುವಾರವನ್ನು ಸೇರಿಸಿ ನಾಲ್ಕು ದಿನಗಳ ಕಾಲ ಮುಚ್ಚಲಾಗುತ್ತಿದೆ.

ಪ್ರವಾಹದಿಂದಾಗಿ ನೀರಿನಲ್ಲಿ ಮುಳುಗಿದ ಹೊಸ ಟಾಟಾ ಹ್ಯಾರಿಯರ್

ಈ ಘಟಕದಲ್ಲಿ ನಾಗರಿಕ ಹಾಗೂ ರಕ್ಷಣಾ ಕ್ಷೇತ್ರಗಳಿಗೆ ಸಂಬಂಧಿಸಿದ ಮಧ್ಯಮ ಹಾಗೂ ಭಾರೀ ಪ್ರಮಾಣದ ವಾಣಿಜ್ಯ ವಾಹನಗಳನ್ನು ಉತ್ಪಾದಿಸಲಾಗುತ್ತದೆ. ಇದರಲ್ಲಿ ಮಲ್ಟಿ ಆಕ್ಸಲ್ ಟ್ರಕ್, ಟ್ರಾಕ್ಟರ್ ಟ್ರೇಲರ್, ಟಿಪ್ಪರ್ ಹಾಗೂ ವಿಶೇಷ ಅಪ್ಲಿಕೇಶನ್ ವಾಹನಗಳು ಸೇರಿವೆ.

Image Courtesy: Pravin K Patil/Facebook

Article Published On: Friday, August 16, 2019, 10:47 [IST]
English summary
Tata Harrier completely submerged in flood water - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+