ಡೀಲರ್ ಯಾರ್ಡ್ ತಲುಪುತ್ತಿರುವ ಅಪ್ಗ್ರೇಡೆಡ್ ಮಾರುತಿ ಸುಜುಕಿ ಆಲ್ಟೋ 800
ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ತಮ್ಮ ನವೀಕರಿಸಲಾದ ಹೊಸ ಆಲ್ಟೋ 800 ಕಾರನ್ನು ದೇಶದೆಲ್ಲೆಡೆ ಇರುವ ಡೀಲರ್‍ಗಳಿಗೆ ವಿತರಣೆಯನ್ನು ಶುರು ಮಾಡಲಾಗಿದ್ದು, ಬಿಡುಗಡೆಗಾಗಿ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಭಾರತ್ ನ್ಯೂ ವೆಹಿಕಲ್ ಸೇಫ್ಟಿ ಅಸೆಸ್ಮೆಂಟ್ ಪ್ರೋಗ್ರಾಂ ಯೋಜನೆಯ ಅಡಿಯಲ್ಲಿ ಹೊಸ ಮಾರುತಿ ಸುಜುಕಿ ಆಲ್ಟೋ 800 ಕಾರಿಗೆ ಈ ಬಾರಿ ಹಲವಾರು ಸುರಕ್ಷಾ ಸಾಧನಗಳನ್ನು ಒದಗಿಸಲಾಗಿದೆ.

ಹೊಸ ಸೇಫ್ಟಿ ಫೀಚರ್ಸ್ ಅನ್ನು ಹೊತ್ತು ಬರಲಿರುವ ಮಾರುತಿ ಸುಜುಕಿ ಆಲ್ಟೋ 800 ಹ್ಯಾಚ್‍ಬ್ಯಾಕ್ ಕಾರುಗಳು, ಮಾಮೂಲಿ ಕಾರಿನ ಬೆಲೆಗಿಂತಲೂ, ಸುಮಾರು 10,000 - 15,000 ಅಧಿಕವಿರಬಹುದೆಂದು ಅಂದಾಜಿಸಲಾಗಿದೆ. ಈ ಬಾರಿ ಹೊಸ ಮಾರುತಿ ಸುಜುಕಿ ಆಲ್ಟೋ 800 ಕಾರಿನಲ್ಲಿ ಡ್ರೈವರ್ ಏರ್‍ಬ್ಯಾಗ್, ಎಬಿಎಸ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ಸ್, ಸೀಟ್ ಬೆಲ್ಟ್ ರಿಮೈಂಡರ್ ಮತ್ತು ಸ್ಪೀಡ್ ಲಿಮಿಟ್ ಅಲರ್ಟ್ ಎಂಬ ವೈಶಿಷ್ಟ್ಯತೆಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಇನ್ನು ಕಾರಿನ ಟಾಪ್ ಎಂಡ್ ವೇರಿಯಂಟ್‍ಗಳಲ್ಲಿ ಪ್ಯಾಸೆಂಜರ್ ಏರ್‍ಬ್ಯಾಗ್ ಅನ್ನು ಸಹ ನೀಡಲಾಗುತ್ತಿದ್ದೆ.

ಹೊಸ ಮಾರುತಿ ಸುಜುಕಿ ಆಲ್ಟೋ 800 ವಿನ್ಯಾಸ
ಮಾರುತಿ ಸುಜುಕಿ ಆಲ್ಟೋ 800 ಕಾರಿನ ಹೊರಭಾಗದಲ್ಲಿ ಈ ಬಾರಿ ಹೊಸ ಫ್ರಂಟ್ ಗ್ರಿಲ್ ಮತ್ತು ಬಂಪರ್ ಅನ್ನು ಒದಗಿಸಲಾಗಿದ್ದು, ಹಿಂಭಾಗದಲ್ಲಿ ಔಟ್‍ಗೋಯಿಂಗ್ ಮಾಡಲ್‍ನಂತೆಯೆ ವಿನ್ಯಾಸವನ್ನು ನೀಡಲಾಗಿದೆ. ಹಾಗೆಯೆ ಕಾರಿನ ಒಳಾಭಾಗದಲ್ಲಿ ಆಲ್ಟೋ ಕೆ10 ಕಾರಿನಿಂದ ಪಡೆದ ಡ್ಯಾಶ್‍ಬೋರ್ಡ್ ಅನ್ನು ನೀಡಲಾಗಿದ್ದು, ಇದು ಡ್ಯುಯಲ್ ಟೋನ್ ಬಣ್ಣವನ್ನು ಹೊಂದಿರಲಿದೆ.

ಇವುಗಳನ್ನು ಹೊರತು ಪಡಿಸೆ ಮಾರುತಿ ಸುಜುಕಿ ಆಲ್ಟೋ 800 ಕಾರುಗಳು ಬೇರಾವ ಬದಲಾವಣೆಗಳನ್ನು ಪಡೆದಿರುವುದಿಲ್ಲ. ತಾಂತ್ರಿಕವಾಗಿ ಈ ಕಾರು 796ಸಿಸಿ, ಎಫ್&ಡಿ 3 ಸಿಲೆಂಡರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 48 ಬಿಹೆಚ್‍ಪಿ ಮತ್ತು 69 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದ್ದು, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಇನ್ನು ಕೇವಲ 5 ತಿಂಗಳು ಮಾತ್ರ ಖರೀದಿಗೆ ಲಭ್ಯ
ಹೌದು, ಹೊಸ ಮಾರುತಿ ಸುಜುಕಿ ಆಲ್ಟೋ 800 ಕಾರುಗಳು ಕೇವಲ ಸೆಪ್ಟೆಂಬರ್ 2019ರ ವರೆಗು ಮಾತ್ರ ಖರೀದಿಗೆ ಲಭ್ಯವಿರಲಿದ್ದು, ಅದರ ನಂತರ ಮಾರುಕಟ್ಟೆಗೆ ಹೊಸ ಮಾರುತಿ ಸುಜುಕಿ ಆಲ್ಟೋ ಕಾರು ಬಿಡುಗಡೆಯಾಗಲಿದೆ. ಸೆಪ್ಟೆಂಬರ್‍ನಲ್ಲಿ ಬಿಡುಗಡೆಯಾಗಲಿರುವ ಈ ಕಾರು 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಕಾಣಿಸಿಕೊಂಡ ಫ್ಯುಚುರ್ ಎಸ್ ಮಾದರಿಯಿಂದ ಆಧಾರಿತವಾಗಿದೆ.

ಈಗಾಗಲೇ ಹೊಸ ಕಾರಿನ ಸ್ಪಾಟ್ ಟೆಸ್ಟಿಂಗ್ ನಡೆಸಿರುವ ಮಾರುತಿ ಸುಜುಕಿ ಸಂಸ್ಥೆಯು ಎಂಜಿನ್ ಕಾರ್ಯಕ್ಷಮತೆ ಕುರಿತು ಹಲವು ಸುತ್ತಿನ ಪರೀಕ್ಷೆಗಳನ್ನು ನಡೆಸಿದ್ದು, 2019ರ ಮಧ್ಯಂತರ ಅವಧಿಯಲ್ಲಿ ಹೊಸ ಆಲ್ಟೋ ಕಾರು ಮಾರಾಟಕ್ಕೆ ಲಭ್ಯವಾಗುವ ಸಾಧ್ಯತೆಗಳಿವೆ.

ಕೇಂದ್ರ ಸರ್ಕಾರವು ಕೂಡಾ ಪ್ರಯಾಣಿಕ ಸುರಕ್ಷತೆಗಾಗಿ ಅಗ್ಗದ ಬೆಲೆಯ ಕಳಪೆ ಕಾರುಗಳ ಉತ್ಪಾದನೆ ಮತ್ತು ಮಾರಾಟವನ್ನು ಭಾರತದಲ್ಲಿ ನಿಷೇಧಗೊಳಿಸಲು ಬಿಎಸ್ 4 ನಿಂದ ಬಿಎಸ್ 6 ನಿಯಮವನ್ನು 2020ರ ಏಪ್ರಿಲ್ 1 ಜಾರಿ ಮಾಡುತ್ತಿದ್ದು, ಈ ವೇಳೆಗೆ ಪ್ರತಿಯೊಂದು ಕಾರು ಉತ್ಪಾದನಾ ಸಂಸ್ಥೆಗಳು ಸಹ ಗುಣಮಟ್ಟದ ಉತ್ಪನ್ನದೊಂದಿಗೆ ಗರಿಷ್ಠ ಮಟ್ಟದ ಪ್ರಯಾಣಿಕರ ಸುರಕ್ಷಾ ಸೌಲಭ್ಯಗಳನ್ನು ಒದಗಿಸಬೇಕಿದೆ.
MOST READ: ತಂದೆಯ ಕನಸಿನ ಕಾರನ್ನು ಉಡುಗೊರೆಯಾಗಿ ನೀಡಿದ ಮಗ

ಹೀಗಾಗಿ ಹೊಸ ನಿಯಮವನ್ನು ಅನುಸರಿಸಲು ಸಾಧ್ಯವಾಗದ ಜಿಪ್ಸಿ ಮತ್ತು ಓಮ್ನಿ ವ್ಯಾನ್‌ಗೆ ಗುಡ್ ಬೈ ಹೇಳುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ತನ್ನ ಜನಪ್ರಿಯ ಆಲ್ಟೋ ಕಾರುನ್ನು ಉಳಿಸಿಕೊಳ್ಳುವ ಭರವಸೆ ನೀಡಿದ್ದು, ಹೊಸ ಕಾರು ಮತ್ತಷ್ಟು ಬೇಡಿಕೆ ಪಡೆಯುವ ವಿಶ್ವಾಸದಲ್ಲಿದೆ.
Source: TeamBHP


Click it and Unblock the Notifications