ತಂದೆಯ ಕನಸಿನ ಕಾರನ್ನು ಉಡುಗೊರೆಯಾಗಿ ನೀಡಿದ ಮಗ
ತಾಯಿ ಮತ್ತು ಮಕ್ಕಳ ನಡುವಿನ ನಂಟನ್ನು ಯಾರಿಂದಲೂ ವಿವರಿಸಲು ಸಾಧ್ಯವಿಲ್ಲ. ಅದರಲ್ಲೂ ಕೆಲ ಗಂಡು ಮಕ್ಕಳಿಗೆ ತಮ್ಮ ತಾಯ ಮುಖದಲ್ಲಿ ನಗುವನ್ನು ಕಾಣಲು ಏನನ್ನಾದರೂ ಮಾಡಬಲ್ಲರೆಂದು ಈಗಾಗಲೇ ಅದೆಷ್ಟೊ ಉದಾಹರಣೆಗಳನ್ನು ನಾವು ಕಂಡಿದ್ದೇವೆ. ಇಲ್ಲೂ ಕೂಡಾ ಅಂತದ್ದೊಂದು ಇಂಟ್ರಸ್ಟಿಂಗ್ ಸ್ಟೋರಿ ಇದೆ ನೋಡಿ.

ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಬದುಕಿನ ನಗುವನ್ನು ಮತ್ತು ಇನ್ನಿತರೆ ಸಂತೋಷದ ಕ್ಷಣಗಳನ್ನು ತ್ಯಾಗ ಮಾಡಿತ್ತಾರೆ. ಯಾಕೆಂದ್ರೆ ಅವರಿಗೆ ತಮ್ಮ ಮಕ್ಕಳೇ ಭವಿಷ್ಯವಾಗಿತ್ತೆ. ಹಾಗೆಯೇ ಮಕ್ಕಳಿಗೂ ಸಹ ತಾವು ಜೀವನದಲ್ಲಿ ನೊಂದಿದ್ದರೆ ತಾಯಿಯ ಮಡಿಲಲ್ಲಿ ತಲೆಯಿಟ್ಟು ಸ್ವಲ್ಪ ಹೊತ್ತು ಕಣ್ಣು ಮುಚ್ಚಿಕೊಂಡರೆ ತಮಗಿರುವ ನೋವು ಮಾಯವಾಗುತ್ತದೆ ಎಂಬ ಭಾವನೆಯು ಹಲವರಿಗಿದೆ.

ಇಂತಹ ಅದೆಷ್ಟೊ ನಮ್ಮ ನೋವುಗಳನ್ನು ತನ್ನದೆಂದು ಭಾವಿಸಿ ಕಷ್ಟ ಪಡುವ ತಂದೆ-ತಾಯಿಗೆ ನಾವು ಏನು ನೀಡಿದರು ಎಷ್ಟು ನೀಡಿದರೂ ಕಡಿಮೆ ಅಂತಾನೆ ಹೇಳಬಹುದು. ಬೆಂಗಳೂರು ಮೂಲದ ಯುವಕನೊರ್ವ ಸ್ವತಃ ತಾನು ದುಡಿದ ಹಣದಿಂದ ತನ್ನ ತಂದೆಗೆ ಹೊಸ ಐಷಾರಾಮಿ ಕಾರನ್ನು ಸರ್ಫೈಸ್ ಆಗಿ ನೀಡಿ ಕೊಂಡಾಡಿದ್ದಾನೆ.

ಹೌದು, ತೆಲಂಗಾಣ ನಿವಾಸಿಯಾದ ಒಬ್ಬ ಯುವಕ ತನ್ನ ತಂದೆಯು ಜೀವನದಲ್ಲಿ ಒಂದಾದರು ಐಷಾರಾಮಿ ಸಂಸ್ಥೆಯಾದ ಮರ್ಸಿಡೀಸ್ ಬೆಂಜ್‍ನ ಕಾರಿಂದನ್ನು ಖರೀದಿ ಮಾಡಬೇಕು ಎಂದು ಕನಸನ್ನು ಕಾಣುತ್ತಿದ್ದರಂತೆ. ಆದರೆ ತನ್ನ ತಂದೆಯೆ ಕನಸಿನ ಕಾರಿನ ಬಗ್ಗೆ ತಿಳಿದಿದ್ದ ಮಗನು ಮರ್ಸಿಡೀಸ್ ಬೆಂಜ್ ಸಿ-ಕ್ಲಾಸ್ ಸೆಡಾನ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾನೆ.

ಯುವಕನು ತನ್ನ ತಂದೆಗೆಂದು ಖರೀದಿ ಮಾಡಿದ್ದ ಮರ್ಸಿಡೀಸ್ ಕಾರನ್ನು ಟಿವಿಯಲ್ಲಿ ಬರುವ ಜಾಹಿರಾತಿನ ಹಾಗೆಯೆ ಸ್ಮೋಕ್ ಬಾಂಬ್ ಮತ್ತು ಪಟಾಕಿಗಳಿಂದ ಎಂಟ್ರಿ ನೀಡಿಸಿ, ಅಚ್ಚಗೊಳಗಾಗುವ ಹಾಗೆ ತನ್ನ ತಂದೆಗೆ ಈ ಕಾರನ್ನು ನೀಡಿರುವ ವಿಡಿಯೋ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕುರಿತಾದ ವಿಡಿಯೋ ಇಲ್ಲಿದೆ ನೋಡಿ.
ಮೊದಲಿಗೆ ತನ್ನ ತಂದೆಯ ಕಣ್ಣುಗಳಿಗೆ ಬಟ್ಟೆಯನ್ನು ಮುಚ್ಚಿ ತಾಯಿಯ ಜೊತೆಗೆ ಕಾರನ್ನು ತೋರಿಸಲು ಬಂದಾಗಾ, ಅವರ ಆ ಒಂದು ಸಂತೋಷವನ್ನು ನೀವು ವಿದೀಯೋನಲ್ಲಿ ಕಾಣಬಹುದಾಗಿದೆ. ತಂದೆಗೆ ಉಡುಗೊರೆ ನೀಡಿದ ನಂತರ ಆ ಯುವಕನ ಕಣ್ಣಲ್ಲಿ ಆನಂದ ಭಾಷ್ಮ ಉಕ್ಕಿಹರಿಯಿತು ಮತ್ತು ತಂದೆಗೂ ಸಹ ಸಂತೋಷವು ಉಕ್ಕಿ ಹರಿಯುತ್ತಿತ್ತು.
Source: VNR Bhavanam

ಇನ್ನು ಮರ್ಸಿಡೀಸ್ ಬೆಂಜ್ ಸಿ-ಕ್ಲಾಸ್ ಕಾರಿನ ಬಗ್ಗೆ ಹೇಳುವುದಾದರೆ ಈ ಕಾರು ಮರ್ಸಿಡೀಸ್ ಸಂಸ್ಥೆಯಲ್ಲಿ ದೊರೆಯುವ ಅಗ್ಗದ ಬೆಲೆಯ ಟಾಪ್ ಐದು ಕಾರುಗಳಲ್ಲಿ ಇದು ಕೂಡಾ ಒಂದು. ಈ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬಿಎಂಡಬ್ಲ್ಯೂ 3 ಸಿರೀಸ್, ಆಡಿ ಅ4 ಮತ್ತು ಜಾಗ್ವಾರ್ ಎಕ್ಸ್ಇ ಕಾರುಗಳಿಗೆ ಪೈಪೋಟಿ ನೀಡುತ್ತಿದೆ.

ಸಿ-ಕ್ಲಾಸ್ ಫೇಸ್‌ಲಿಫ್ಟ್ ಕಾರುಗಳ ಆರಂಭಿಕ ವೆರಿಯೆಂಟ್‌ಗಳು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.40 ಲಕ್ಷ, ಎರಡನೇ ಮಾದರಿಯ ವೆರಿಯೆಂಟ್‌ಗಳು ರೂ.44.25 ಲಕ್ಷ ಮತ್ತು ಟಾಪ್ ಎಂಡ್ ವೆರಿಯೆಂಟ್‌ಗಳು ರೂ. 48.50 ಲಕ್ಷ ಬೆಲೆ ಪಡೆದುಕೊಂಡಿವೆ.
MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಮೇಲೆ ಹೇಳಿದ ಹಾಗೆ, ಸಿ-ಕ್ಲಾಸ್ ಫೇಸ್‌ಲಿಫ್ಟ್ ಕಾರುಗಳು ಹಳೆಯ ಆವೃತ್ತಿಗಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿದ್ದು, ಹೊಸ ಕಾರುಗಳಲ್ಲಿ ನ್ಯೂ ಡೈಮಂಡ್ ಸ್ಟಂಡ್ಡ್ ಫ್ರಂಟ್ ಗ್ರೀಲ್ ಸೇರಿದಂತೆ ಪ್ರಮುಖ ಬದಲಾವಣೆ ಮಾಡಲಾಗಿದೆ.

ಎಂಜಿನ್ ಸಾಮರ್ಥ್ಯ
ಬಿಎಸ್-6 ಮಾದರಿಯ 2.0-ಲೀಟರ್(2000ಸಿಸಿ) ಫೌರ್ ಸಿಲಿಂಡರ್, ಇನ್ ಟರ್ಬೋಚಾರ್ಜ್ಡ್ ಡಿಸೇಲ್ ಎಂಜಿನ್ ಹೊಂದಿರುವ ಸಿ-ಕ್ಲಾಸ್ ಫೇಸ್‌ಲಿಫ್ಟ್ ಕಾರುಗಳಲ್ಲಿ 9ಜಿ-ಟ್ರೋನಿಕ್ ಟ್ರಾನ್ಸ್‌ಮಿಷನ್ ಜೋಡಣೆಯಿದ್ದು, ಇವು ಸಿ ಸ್ಮೆಗ್ಮೆಂಟ್ ಕಾರು ಮಾದರಿಯಲ್ಲೇ ಹೆಚ್ಚು ಐಷಾರಾಮಿ ಅನುಭವ ನೀಡುತ್ತವೆ.

ಇದಲ್ಲದೆ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಪವರ್ ಉತ್ಪಾದನಾ ಶಕ್ತಿ ಸಹ ಬದಲಾವಣೆಗೊಳ್ಳಲಿದ್ದು, ಸಿ220ಡಿ ಪ್ರೈಮ್, ಸಿ220ಡಿ ಪ್ರೊಗ್ರೆಸಿವ್ ಕಾರುಗಳು 194-ಬಿಎಚ್‌ಪಿ ಮತ್ತು 400-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದಲ್ಲಿ ಟಾಪ್ ವೆರಿಯೆಂಟ್ ಸಿ300ಡಿ ಎಎಂಜಿ ಕಾರುಗಳು 254-ಬಿಎಚ್‌ಪಿ ಮತ್ತು 500-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿವೆ.

ಈ ಮೂಲಕ ಐಷಾರಾಮಿ ಸೆಡಾನ್ ಕಾರುಗಳಲ್ಲಿ ವಿಶೇಷ ಎನ್ನಿಸಲಿರುವ ಸಿ-ಕ್ಲಾಸ್ ಕಾರುಗಳಲ್ಲಿ ಹೊಸ ಮಾದರಿಯ ಹೆಡ್‌ಲ್ಯಾಂಡ್, ನವೀಕೃತ ಬಂಪರ್ ಡಿಸೈನ್, 17-ಇಂಚಿನ ಅಲಾಯ್ ಚಕ್ರಗಳು, ನವೀಕೃತ ಹಿಂಭಾಗದ ಬಂಪರ್, ಹೊಸ ವಿನ್ಯಾಸದ ಎಲ್ಇಡಿ ಟೈಲ್ ಲ್ಯಾಂಪ್, ಮಲ್ಟಿಬೀಮ್ ಎಲ್ಇಡಿ ಹೆಡ್‌ಲ್ಯಾಂಪ್ಸ್ 12.3-ಇಂಚಿನ ಕಲರ್ ಇಸ್‌ಸ್ಟ್ರುಮೆಂಟ್ ಕ್ಲಸ್ಟರ್ ಸೌಲಭ್ಯವಿವೆ.
MOST READ: ಗ್ರಾಹಕನಿಗೆ ಮೋಸ ಮಾಡಲು ಹೋಗಿ ಭಾರೀ ಮೊತ್ತದಲ್ಲಿ ದಂಡ ಪಾವತಿಸಿದ ಡೀಲರ್

ಹಾಗೆಯೇ ಹೊಸ ಕಾರುಗಳಲ್ಲಿ ಸುರಕ್ಷತೆಗಾಗಿ ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, ಆಕ್ಟಿವ್ ಪಾರ್ಕ್ ಅಸಿಸ್ಟ್, ಪನೊರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್‌ಚಾರ್ಜಿಂಗ್, ಆ್ಯಪಲ್ ಕಾರ್ ಪ್ಲೇ, ಅಂಡ್ರಾಯ್ಡ್ ಆಟೋ, 7 ಏರ್‌ಬ್ಯಾಗ್‌ಗಳು, ಅಟೆನ್ಷನ್ ಅಸಿಸ್ಟ್ ಮತ್ತು ಅಡಾಪ್ಟಿವ್ ಬ್ರೇಕಿಂಗ್ ಸಿಸ್ಟಂ ಇರಲಿವೆ.


Click it and Unblock the Notifications








