2020ರ ಜನವರಿಯಿಂದ ದುಬಾರಿ ಬೆಲೆಯೊಂದಿಗೆ ಮಾರಾಟವಾಗಲಿವೆ ನಿಸ್ಸಾನ್-ದಟ್ಸನ್ ಕಾರುಗಳು

ಹೊಸ ವರ್ಷದ ಆರಂಭದಲ್ಲಿ ಕಾರು ಖರೀದಿ ಯೋಜನೆಯಲ್ಲಿದ್ದವರಿಗೆ ಆಟೋ ಉತ್ಪಾದನಾ ಸಂಸ್ಥೆಗಳು ದುಬಾರಿ ಬೆಲೆ ಏರಿಕೆಯ ಶಾಕ್ ನೀಡಲು ಮುಂದಾಗಿದ್ದು, ನಿಸ್ಸಾನ್ ಮತ್ತು ದಟ್ಸನ್ ಕಾರುಗಳು ಬೆಲೆಯಲ್ಲೂ ಸಹ ಭಾರೀ ಏರಿಕೆ ಮಾಡಲಾಗುತ್ತಿದೆ.

2020ರ ಜನವರಿಯಿಂದ ದುಬಾರಿ ಬೆಲೆಯೊಂದಿಗೆ ಮಾರಾಟವಾಗಲಿವೆ ನಿಸ್ಸಾನ್-ದಟ್ಸನ್ ಕಾರುಗಳು

ಬಿಡಿಭಾಗಗಳ ವೆಚ್ಚ ಹೆಚ್ಚಳ ಸೇರಿದಂತೆ ಹಲವು ಕಾರಣಗಳಿಂದ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು 2020ರ ಜನವರಿ 1ರಿಂದ ದರ ಪರಿಷ್ಕಣೆಗೆ ಮುಂದಾಗಿದ್ದು, ನಿಸ್ಸಾನ್ ಮತ್ತು ಸಹ ಸಂಸ್ಥೆಯಾದ ದಟ್ಸನ್ ಕೂಡಾ ಕಾರುಗಳ ಬೆಲೆ ಏರಿಕೆಗೆ ನಿರ್ಧರಿಸಿವೆ. ಮಾಹಿತಿಗಳ ಪ್ರಕಾರ ನಿಸ್ಸಾನ್ ಮತ್ತು ದಟ್ಸನ್ ಸಂಸ್ಥೆಗಳು ಕಾರುಗಳ ಬೆಲೆಯಲ್ಲಿ ರೂ.10 ಸಾವಿರದಿಂದ ರೂ.50 ಸಾವಿರ ಹೆಚ್ಚಳಕ್ಕೆ ಮುಂದಾಗಿದ್ದು, ಸರಾಸರಿ ಶೇ.3ರಿಂದ ಶೇ.5 ರಷ್ಟು ದುಬಾರಿಯಾಗಲಿವೆ.

2020ರ ಜನವರಿಯಿಂದ ದುಬಾರಿ ಬೆಲೆಯೊಂದಿಗೆ ಮಾರಾಟವಾಗಲಿವೆ ನಿಸ್ಸಾನ್-ದಟ್ಸನ್ ಕಾರುಗಳು

ಉತ್ಪಾದನಾ ವೆಚ್ಚ ಹೆಚ್ಚಳ ಮಧ್ಯದಲ್ಲೂ ನಿಸ್ಸಾನ್ ಮತ್ತು ದಟ್ಸನ್ ಕಾರುಗಳ ಮೇಲೆ ಭರ್ಜರಿ ನೀಡುತ್ತಿದ್ದು, ಕಿಕ್ಸ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯ ಮೇಲೆ ರೂ.40 ಸಾವಿರ ಎಕ್ಸ್‌ಚೆಂಜ್ ಬೋನಸ್ ಮತ್ತು ರೂ.10 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.

2020ರ ಜನವರಿಯಿಂದ ದುಬಾರಿ ಬೆಲೆಯೊಂದಿಗೆ ಮಾರಾಟವಾಗಲಿವೆ ನಿಸ್ಸಾನ್-ದಟ್ಸನ್ ಕಾರುಗಳು

ಕಳೆದ ವಾರದಲ್ಲಿ ನಿಸ್ಸಾನ್ ಮತ್ತು ದಟ್ಸನ್ ಕಾರು ಖರೀದಿ ಮೇಲೆ ಗ್ರಾಹಕರಿಗೆ ರೂ.1 ಕೋಟಿ ಮೌಲ್ಯದ ಗಿಫ್ಟ್ ವೋಚರ್‌ಗಳನ್ನು ವಿತರಿಸಲಾಗಿದ್ದು, ಇದೀಗ ಬೆಲೆ ಹೆಚ್ಚುತ್ತಿರುವುದು ಆಫರ್‌ಗಳಿಗೆ ಬ್ರೇಕ್ ಹಾಕಲಾಗುವ ಸಾಧ್ಯತೆಗಳಿವೆ.

2020ರ ಜನವರಿಯಿಂದ ದುಬಾರಿ ಬೆಲೆಯೊಂದಿಗೆ ಮಾರಾಟವಾಗಲಿವೆ ನಿಸ್ಸಾನ್-ದಟ್ಸನ್ ಕಾರುಗಳು

ಹೀಗಾಗಿ ಹೊಸ ವರ್ಷದ ಸಂದರ್ಭದಲ್ಲಿ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದ್ದು, ಕಾರು ಖರೀದಿ ಮಾಡುವ ಯೋಜನೆಯಲ್ಲಿದ್ದಲ್ಲಿ ಈಗಲೇ ಆಫರ್ ಬೆಲೆಗಳಲ್ಲಿ ಖರೀದಿಸುವುದು ಉತ್ತಮ ಎನ್ನಬಹುದು. ಇನ್ನು ಜಪಾನ್ ಆಟೋ ಉತ್ಪಾದನಾ ಸಂಸ್ಥೆಯಾದ ನಿಸ್ಸಾನ್ ಮತ್ತು ಅಂಗಸಂಸ್ಥೆಯಾದ ದಟ್ಸನ್ ಸಂಸ್ಥೆಯು ಭಾರತದಿಂದ ಭಾರೀ ಪ್ರಮಾಣದಲ್ಲಿ ಹೊಸ ಕಾರುಗಳನ್ನು ರಫ್ತುಗೊಳಿಸಲು ಸಿದ್ದವಾಗಿದ್ದು, ನಿಸ್ಸಾನ್ ಸನ್ನಿ ಸೆಡಾನ್ ಮತ್ತು ದಟ್ಸನ್ ಗೋ, ಗೋ ಪ್ಲಸ್ ಕಾರುಗಳಿಗೆ ವಿದೇಶಿ ಮಾರುಕಟ್ಟೆಗಳಿಂದ ಭಾರೀ ಬೇಡಿಕೆ ಹರಿದುಬಂದಿದೆ.

2020ರ ಜನವರಿಯಿಂದ ದುಬಾರಿ ಬೆಲೆಯೊಂದಿಗೆ ಮಾರಾಟವಾಗಲಿವೆ ನಿಸ್ಸಾನ್-ದಟ್ಸನ್ ಕಾರುಗಳು

ಮೇಕ್ ಇನ್ ಇಂಡಿಯಾ ಯೋಜನೆ ಅಡಿ ಸಿದ್ದವಾಗಿರುವ ಹೊಸ ಕಾರುಗಳು ಇದೀಗ ವಿದೇಶಿ ಮಾರುಕಟ್ಟೆಗಳಲ್ಲೂ ಸದ್ದು ಮಾಡುತ್ತಿದ್ದು, ನಿಸ್ಸಾನ್ ಸನ್ನಿ ಮತ್ತು ದಟ್ಸನ್ ಗೋ, ಗೋ ಪ್ಲಸ್ ಕಾರುಗಳೂ ಇದೀಗ ಬೇಡಿಕೆ ಸೃಷ್ಠಿಯಾಗುತ್ತಿದೆ.

2020ರ ಜನವರಿಯಿಂದ ದುಬಾರಿ ಬೆಲೆಯೊಂದಿಗೆ ಮಾರಾಟವಾಗಲಿವೆ ನಿಸ್ಸಾನ್-ದಟ್ಸನ್ ಕಾರುಗಳು

ಈ ಹಿನ್ನಲೆ ಮುಂದಿನ 14 ತಿಂಗಳಿಗೆ ಯೋಜನೆ ರೂಪಿಸಿರುವ ನಿಸ್ಸಾನ್ ಸಂಸ್ಥೆಯು 65 ಸಾವಿರ ಸನ್ನಿ ಸೆಡಾನ್ ಕಾರುಗಳನ್ನು ಮತ್ತು 8 ಸಾವಿರ ದಟ್ಸನ್ ಗೋ, ಗೋ ಪ್ಲಸ್ ಕಾರುಗಳನ್ನು ಅಂತರಾಷ್ಟ್ರಿಯ ಮಾರುಕಟ್ಟೆಗಳಿಗೆ ರಫ್ತು ಕೈಗೊಳ್ಳಲಿದೆ.

MOST READ: ಪಾರ್ಕಿಂಗ್ ವೇಳೆ ಸಿಬ್ಬಂದಿ ಎಡವಟ್ಟು- ಮೊದಲ ಮಹಡಿಯಿಂದ ಜಿಗಿದ ಕಿಯಾ ಸೆಲ್ಟೊಸ್

2020ರ ಜನವರಿಯಿಂದ ದುಬಾರಿ ಬೆಲೆಯೊಂದಿಗೆ ಮಾರಾಟವಾಗಲಿವೆ ನಿಸ್ಸಾನ್-ದಟ್ಸನ್ ಕಾರುಗಳು

ಇದೇ ತಿಂಗಳಾಂತ್ಯಕ್ಕೆ ಹೊಸ ಕಾರುಗಳ ರಫ್ತು ಪ್ರಕ್ರಿಯೆಗೆ ಚಾಲನೆ ಸಿಗಲಿದ್ದು, ಹೊಸ ಕಾರುಗಳು ಭಾರತದಲ್ಲಿ 2020ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರಲಿರುವ ಬಿಎಸ್-6 ವೈಶಿಷ್ಟ್ಯತೆಯೊಂದಿಗೆ ಅಭಿವೃದ್ದಿಗೊಂಡಿವೆ.

MOST READ: ಕಲ್ಯಾಣ್ ಜ್ಯುವೆಲ್ಲರ್ಸ್ ಮಾಲೀಕನ ಬಳಿಯಿರುವ ಐಷಾರಾಮಿ ಕಾರು ಕಲೆಕ್ಷನ್ ಹೇಗಿದೆ ಗೊತ್ತಾ?

2020ರ ಜನವರಿಯಿಂದ ದುಬಾರಿ ಬೆಲೆಯೊಂದಿಗೆ ಮಾರಾಟವಾಗಲಿವೆ ನಿಸ್ಸಾನ್-ದಟ್ಸನ್ ಕಾರುಗಳು

ನಿಸ್ಸಾನ್ ಸನ್ನಿ ಕಾರಿಗೆ ದಕ್ಷಿಣ ಆಫ್ರಿಕಾ, ಬ್ರೆಜಿಲ್, ಇಂಡೋನೆಷ್ಯಾ, ನೇಪಾಳ ಮತ್ತು ಮಧ್ಯಪ್ರಾಚ್ಯ ದೇಶಳಾದ ಇರಾನ್, ಈಜಿಫ್ಟ್ ಮಾರುಕಟ್ಟೆಗಳಲ್ಲಿ ಭಾರೀ ಬೇಡಿಕೆಯಿದ್ದು, ಇದರೊಂದಿಗೆ ಇದೇ ಮೊದಲ ಬಾರಿಗೆ ದಟ್ಸನ್ ನಿರ್ಮಾಣದ ಗೋ ಮತ್ತು ಗೋ ಪ್ಲಸ್ ಕಾರುಗಳಿಗೂ ಬೇಡಿಕೆ ಹೆಚ್ಚಿದೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

2020ರ ಜನವರಿಯಿಂದ ದುಬಾರಿ ಬೆಲೆಯೊಂದಿಗೆ ಮಾರಾಟವಾಗಲಿವೆ ನಿಸ್ಸಾನ್-ದಟ್ಸನ್ ಕಾರುಗಳು

ನಿಸ್ಸಾನ್ ಸಂಸ್ಥೆಯು ಈಗಾಗಲೇ ಸನ್ನಿ ಕಾರಿನ ಬಿಡಿಭಾಗಗಳು ಮತ್ತು ಎಂಜಿನ್ ರಫ್ತು ಪ್ರಕ್ರಿಯೆಯನ್ನು ಈ ಹಿಂದೆ 2015ರಲ್ಲೇ ಆರಂಭಿಸಿದ್ದು, ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಇಲ್ಲಿಯೇ ಅಭಿವೃದ್ದಿಗೊಳಿಸಿ ರಫ್ತು ಕೈಗೊಳ್ಳುತ್ತಿದೆ. ಜೊತೆಗೆ ನಿಸ್ಸಾನ್ ಸಂಸ್ಥೆಯು ಇತರೆ ರಾಷ್ಟ್ರಗಳಲ್ಲಿನ ಕಾರು ಉತ್ಪಾದನೆಗಿಂತಲೂ ಭಾರತಲ್ಲೇ ಕಾರು ಉತ್ಪಾದನೆ ಪ್ರಕ್ರಿಯೆ ಅಗ್ಗ ಎನ್ನುವುದನ್ನು ಅರಿತುಗೊಂಡಿದ್ದು, ಎಷ್ಯಾದ ಪ್ರಮುಖ ಮಾರುಕಟ್ಟೆಗಳಿಗೆ ಭಾರತದಿಂದಲೇ ಕಾರುಗಳನ್ನು ರಫ್ತು ಮಾಡಲಾಗುತ್ತಿದೆ.

2020ರ ಜನವರಿಯಿಂದ ದುಬಾರಿ ಬೆಲೆಯೊಂದಿಗೆ ಮಾರಾಟವಾಗಲಿವೆ ನಿಸ್ಸಾನ್-ದಟ್ಸನ್ ಕಾರುಗಳು

ಕಳೆದ ವರ್ಷ ಬರೋಬ್ಬರಿ 1.82 ಲಕ್ಷ ಯುನಿಟ್ ಕಾರುಗಳನ್ನು ರಫ್ತು ಮಾಡಿದ್ದ ನಿಸ್ಸಾನ್ ಸಂಸ್ಥೆಯು ಈ ಬಾರಿ 2.20 ಲಕ್ಷ ಯನಿಟ್ ಕಾರುಗಳ ಮಾರಾಟ ಗುರಿಹೊಂದಿದ್ದು, ಭಾರತೀಯ ಆಟೋಉದ್ಯಮವನ್ನು ತಲ್ಲಣಗೊಳಿಸಿರುವ ಆರ್ಥಿಕ ಹಿಂಜರಿತದಿಂದ ಯಾವುದೇ ಸಂಕಷ್ಟಕ್ಕೆ ಒಳಗಾಳಗದೇ ವಿದೇಶಿ ಮಾರುಕಟ್ಟೆಗಳಲ್ಲಿನ ಕಾರು ಬೇಡಿಕೆಯತ್ತ ಗಮನಹರಿಸಿದೆ.

2020ರ ಜನವರಿಯಿಂದ ದುಬಾರಿ ಬೆಲೆಯೊಂದಿಗೆ ಮಾರಾಟವಾಗಲಿವೆ ನಿಸ್ಸಾನ್-ದಟ್ಸನ್ ಕಾರುಗಳು

ಚೆನ್ನೈ ಬಳಿಯಿರುವ ನಿಸ್ಸಾನ್ ಕಾರು ಉತ್ಪಾದನಾ ಘಟಕದಲ್ಲಿ ವಾರ್ಷಿಕವಾಗಿ 4 ಲಕ್ಷ ಕಾರುಗಳ ಉತ್ಪಾದನಾ ಸಾಮಾರ್ಥ್ಯವನ್ನು ಹೊಂದಿದ್ದು, ಮುಂಬರುವ ದಿನಗಳಲ್ಲಿ ವಿದೇಶಿ ಮಾರುಕಟ್ಟೆಗಳಲ್ಲಿ ಉತ್ಪಾದನೆಗೊಳ್ಳುತ್ತಿರುವ ಕೆಲವು ಜನಪ್ರಿಯ ಕಾರುಗಳನ್ನು ಭಾರತದಿಂದಲೇ ಉತ್ಪಾದನೆ ಮಾಡಲು ಮುಂದಾಗಿದೆ.

Most Read Articles

Kannada
English summary
Nissan To Hike Prices Across Range By Up To 5 Percent. Read in Kannada.
Story first published: Thursday, December 12, 2019, 19:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X