ಕಲ್ಯಾಣ್ ಜ್ಯುವೆಲ್ಲರ್ಸ್ ಮಾಲೀಕನ ಬಳಿಯಿರುವ ಐಷಾರಾಮಿ ಕಾರು ಕಲೆಕ್ಷನ್ ಹೇಗಿದೆ ಗೊತ್ತಾ?
ಈ ಹಿಂದೆ ಚಿತ್ರ ನಟರು, ನಟಿಯರು, ಅಥ್ಲೆಟ್ಗಳು ಹಾಗೂ ವಿವಿಧ ವೃತ್ತಿಯಲ್ಲಿರುವ ಸೆಲೆಬ್ರಿಟಿಗಳ ಬಳಿಯಿರುವ ಕಾರು ಹಾಗೂ ಬೈಕುಗಳ ಸಂಗ್ರಹದ ಬಗ್ಗೆ ಹೇಳಲಾಗಿತ್ತು. ಈ ಲೇಖನದಲ್ಲಿ ಭಾರತದ ಯಶಸ್ವಿ ಹಾಗೂ ಜನಪ್ರಿಯ ಉದ್ಯಮಿಯೊಬ್ಬರ ಬಗ್ಗೆ ತಿಳಿಯೋಣ.

ಈ ಉದ್ಯಮಿ ದುಬಾರಿ ಬೆಲೆಯ ಕಾರುಗಳನ್ನು ಮಾತ್ರ ಹೊಂದಿಲ್ಲ. ಕಾರುಗಳ ಜೊತೆಗೆ ಖಾಸಗಿ ವಿಮಾನ ಹಾಗೂ ಹೆಲಿಕಾಪ್ಟರ್ ಅನ್ನು ಸಹ ಹೊಂದಿದ್ದಾರೆ. ಅಂದ ಹಾಗೆ ನಾವು ಹೇಳಲು ಹೊರಟಿರುವುದು ಕಲ್ಯಾಣ್ ಜ್ಯುವೆಲ್ಲರ್ಸ್ನ ಅಧ್ಯಕ್ಷ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆದ ಡಿ ಎಸ್ ಕಲ್ಯಾಣ್ ರಾಮನ್ರವರ ಬಗ್ಗೆ.

ಕಲ್ಯಾಣ್ ಜ್ಯುವೆಲ್ಲರ್ಸ್ ಹಾಗೂ ಕಲ್ಯಾಣ್ ಡೆವಲಪರ್ಸ್ ಎರಡೂ ಜನಪ್ರಿಯ ಕಂಪನಿಗಳಾಗಿವೆ. ಕಲ್ಯಾಣ್ ಜ್ಯುವೆಲ್ಲರ್ಸ್ ದಕ್ಷಿಣ ಭಾರತದಲ್ಲಿರುವ ಜನಪ್ರಿಯ ಜ್ಯುವೆಲ್ಲರಿ ಕಂಪನಿಗಳ ಪೈಕಿ ಒಂದಾಗಿದೆ. ಕಲ್ಯಾಣ್ ರಾಮನ್ರವರು ಅತಿ ಚಿಕ್ಕ ವಯಸ್ಸಿನಲ್ಲಿ ತಮ್ಮ ಉದ್ಯಮವನ್ನು ಆರಂಭಿಸಿದರು.

ಕಲ್ಯಾಣ್ ರಾಮನ್ರವರು 12 ವರ್ಷ ವಯಸ್ಸಿನವರಾಗಿದ್ದಾಗ ಅವರ ತಂದೆ ಅವರನ್ನು ತಮ್ಮ ಟೆಕ್ಸ್ ಟೈಲ್ಸ್ ಮಳಿಗೆಗೆ ಕರೆದೊಯ್ದಿದ್ದರು. ಅಲ್ಲಿ ಅವರಿಗೆ ಉದ್ಯಮದ ಬಗ್ಗೆ ಹೇಳಿಕೊಟ್ಟರು. ಅಲ್ಲಿ ಕಲಿತ ಪಾಠಗಳಿಂದ ಕಲ್ಯಾಣ್ ರಾಮನ್ರವರು ದೊಡ್ಡ ಉದ್ಯಮವನ್ನು ಸ್ಥಾಪಿಸಿದ್ದಾರೆ.

ಬೇರೆ ಉದ್ಯಮಿಗಳಂತೆ ಕಲ್ಯಾಣ್ ರಾಮನ್ರವರೂ ಸಹ ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಒಂದು ರೋಲ್ಸ್ ರಾಯ್ಸ್ ಫ್ಯಾಟಂ ಸೀರಿಸ್ 2 ಕಾರ್ ಅನ್ನು ಖರೀದಿಸುವುದೇ ಕಷ್ಟವಾಗಿರುವಾಗ ಕಲ್ಯಾಣ್ ರಾಮನ್ರವರು ಈ ಮಾದರಿಯ ಮೂರು ಕಾರುಗಳನ್ನು ಹೊಂದಿದ್ದಾರೆ.

ಈ ಕಾರುಗಳು ಸಿಲ್ವರ್, ಬಿಳಿ ಹಾಗೂ ಕಪ್ಪು ಬಣ್ಣವನ್ನು ಹೊಂದಿವೆ. ಕಲ್ಯಾಣ್ ರಾಮನ್ರವರು ಹಲವು ಬಾರಿ ಈ ದುಬಾರಿ ಕಾರಿನೊಂದಿಗೆ ಕಾಣಿಸಿಕೊಂಡಿದ್ದಾರೆ. ಅಂದ ಹಾಗೆ ರೋಲ್ಸ್ ರಾಯ್ಸ್ ಫ್ಯಾಟಂ ಕಾರಿನ ಬೆಲೆಯು ಸುಮಾರು ರೂ.9.5 ಕೋಟಿಗಳಾಗಿದೆ.

ಇದರ ಜೊತೆಗೆ ಕಲ್ಯಾಣ್ ರಾಮನ್ರವರು ಫೋಕ್ಸ್ವ್ಯಾಗನ್ ಟೂರಾಗ್ ಕಾರ್ ಅನ್ನು ಸಹ ಹೊಂದಿದ್ದಾರೆ. ಈ ಕಾರು ಎಸ್ಯುವಿಯಾಗಿದೆ. ಇದು ಹಳೆಯ ತಲೆಮಾರಿನ ಕಾರ್ ಆಗಿದೆ. ಕಲ್ಯಾಣ್ ರಾಮನ್ರವರು ಬಿಎಂಡಬ್ಲ್ಯು 5 ಸೀರಿಸ್ ಕಾರ್ ಅನ್ನು ಸಹ ಹೊಂದಿದ್ದಾರೆ.
MOST READ: ರೂ. 1,300 ಕೋಟಿ ವೆಚ್ಚದಲ್ಲಿ ಐಷಾರಾಮಿ ಖಾಸಗಿ ಜೆಟ್ ಖರೀದಿಸಿದ ರ್ಯಾಪ್ ಸಿಂಗರ್

ಕಲ್ಯಾಣ್ ರಾಮನ್ರವರು ಕೇವಲ ದುಬಾರಿ ಬೆಲೆಯ ಕಾರುಗಳನ್ನು ಮಾತ್ರ ಹೊಂದಿಲ್ಲ. ಖಾಸಗಿ ಜೆಟ್ ಅನ್ನು ಸಹ ಹೊಂದಿದ್ದಾರೆ. ಅವರ ಬಳಿ ಲೆಗಸಿ 650 ಬಿಸಿನೆಸ್ ಜೆಟ್ಯಿದೆ. ಈ ಜೆಟ್ನ ಬೆಲೆಯು ರೂ.222 ಕೋಟಿಗಳಾಗಿದೆ.

ಕಲ್ಯಾಣ್ ರಾಮನ್ರವರ ಬಳಿ ಬೆಲ್ 427 ಹೆಲಿಕಾಪ್ಟರ್ ಸಹ ಇದೆ. ಈ ಜೆಟ್ ಹಾಗೂ ಹೆಲಿಕಾಪ್ಟರ್ ಮೇಲೆ ಕಲ್ಯಾಣ್ ಗ್ರೂಪಿನ ಲೊಗೊವನ್ನು ಅಳವಡಿಸಲಾಗಿದೆ. ಭಾರತದಲ್ಲಿರುವ ಹಲವು ಸಿನಿಮಾ ತಾರೆಯರು, ರಾಜಕಾರಣಿಗಳು ಹಾಗೂ ಉದ್ಯಮಿಗಳು ಖಾಸಗಿ ವಿಮಾನವನ್ನು ಹೊಂದಿದ್ದಾರೆ.
MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ವೈಜ್ಞಾನಿಕ ಕಾರಣವೇನು?

ಈ ಖಾಸಗಿ ಜೆಟ್ಗಳಿಂದ ಅವರು ತಲುಪಬೇಕಿರುವ ಸ್ಥಳವನ್ನು ವೇಗವಾಗಿ ತಲುಪಬಹುದು. ಇದರ ಜೊತೆಗೆ ಖಾಸಗಿ ವಿಮಾನಗಳು ಅವರ ಶ್ರೀಮಂತಿಕೆಯನ್ನು ತೋರಿಸುತ್ತವೆ.


Click it and Unblock the Notifications








