ನಿಸ್ಸಾನ್ ಕಾರುಗಳ ಮೇಲೆ ಭರ್ಜರಿ ಆಫರ್

ಜಪಾನ್ ಮೂಲದ ವಾಹನ ಉತ್ಪಾದನಾ ಸಂಸ್ಥೆ ನಿಸ್ಸಾನ್, ಆಯ್ದ ಕಾರುಗಳಿಗೆ ದೀಪಾವಳಿ ಪ್ರಯುಕ್ತ ರೂ.94,000ಗಳವರೆಗೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಈ ರಿಯಾಯಿತಿಗಳು ಮಾದರಿ ಮತ್ತು ರೂಪಾಂತರವನ್ನು ಅವಲಂಬಿಸಿದೆ. ಕಿಕ್ಸ್, ಮೈಕ್ರಾ, ಮತ್ತು ಸನ್ನಿ ನಿಸ್ಸಾನ್ ಕಾರುಗಳು ಹಬ್ಬದ ವಿಶೇಷ ಆಫರ್‍‍ಗಳ ಅಡಿಯಲ್ಲಿ ಬರುವ ಮಾದರಿಗಳಾಗಿವೆ.

ನಿಸ್ಸಾನ್ ಕಾರುಗಳ ಮೇಲೆ ಭರ್ಜರಿ ಆಫರ್

ಕಂಪನಿಯ ದೀಪಾವಳಿ ಕೊಡುಗೆಗಳಲ್ಲಿ ನಗದು ರಿಯಾಯಿತಿ, ವಿನಿಮಯ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿಗಳು ಕೂಡ ಸೇರಿದೆ. ದೀಪಾವಳಿ ಪ್ರಯುಕ್ತ ಯಾವುದೆಲ್ಲಾ ಕಾರುಗಳಿಗೆ ಎಷ್ಟು ರಿಯಾಯಿತಿಗಳು ಇವೆ ಎಂಬ ಮಾಹಿತಿ ಇಲ್ಲಿವೆ.

ನಿಸ್ಸಾನ್ ಕಾರುಗಳ ಮೇಲೆ ಭರ್ಜರಿ ಆಫರ್

ಮೈಕ್ರಾ ಆಕ್ಟಿವ್

ನಿಸ್ಸಾನ್‍‍ನ ಇಂಡಿಯಾದ ಶ್ರೇಣಿಯ ಎಂಟ್ರಿ ಲೆವೆಲ್ ಮಾದರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ರೂ.41,000ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಇದರಲ್ಲಿ ರೂ.15,000ಗಳವರೆಗೆ ನಗದು ರಿಯಾಯಿತಿ ಮತ್ತು ರೂ.20,000 ವಿನಿಮಯ ಬೋನಸ್ ಮತ್ತು ರೂ.6,000 ಕಾರ್ಪೋರೇಟ್ ರಿಯಾಯಿತಿಯನ್ನು ಘೋಷಿಸಿದೆ.

ನಿಸ್ಸಾನ್ ಕಾರುಗಳ ಮೇಲೆ ಭರ್ಜರಿ ಆಫರ್

ಮೈಕ್ರಾ ಆಕ್ಟಿವ್ ಹ್ಯಾಚ್‍ಬ್ಯಾಕ್‍ ಸೆಗ್‍‍ಮೆಂಟ್‍‍ನ ಮ್ಯಾನುವಲ್ ರೂಪಾಂತರವಾಗಿದ್ದು, ಬೀಪ್ಡ್ ಬಾಡಿ ಪ್ಯಾನೆಲ್‍‍ಗಳನ್ನು ಹೊಂದಿದೆ. ಮೈಕ್ರಾ ಆಕ್ಟಿವ್ ಮಾದರಿಯು 1.2 ಲೀಟರ್ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿ‍‍ನ್‍ 67 ಬಿ‍ಎಚ್‍ಪಿ ಪವರ್ ಮತ್ತು 104 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍‍ನೊಂದಿಗೆ ಸ್ಟ್ಯಾಂಡರ್ಡ್ 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ನಿಸ್ಸಾನ್ ಕಾರುಗಳ ಮೇಲೆ ಭರ್ಜರಿ ಆಫರ್

ಮೈಕ್ರಾ

ಮೈಕ್ರಾ ಹ್ಯಾಚ್‍‍ಬ್ಯಾಕ್‍‍ಗೆ ದೀಪಾವಳಿ ಹಬ್ಬದ ಪ್ರಯುಕ್ತ ರೂ.51,000ಗಳವರೆಗೆ ರಿಯಾಯಿತಿಯನ್ನು ನೀಡಲಾಗುತ್ತಿದೆ. ಈ ಹ್ಯಾಚ್‍ಬ್ಯಾಕ್‍‍ಗೆ ಹಬ್ಬದ ಪ್ರಯುಕ್ತ ರೂ.25,000 ಮೌಲ್ಯದ ನಗದು ರಿಯಾಯಿತಿ, ರೂ.20,000 ಗಳವರೆಗೆ ವಿನಿಮಯ ಬೋನಸ್ ಮತ್ತು ರೂ.6,000 ಗಳವರೆಗೆ ಕಾರ್ಪೋರೇಟ್ ರಿಯಾಯಿತಿಯನ್ನು ಘೋಷಿಸಿದೆ. ಮೈಕ್ರಾ ಹ್ಯಾಚ್‍‍ಬ್ಯಾಕ್‍ ನಲ್ಲಿ ಎರಡು ರೀತಿಯ ಎಂಜಿನ್ ಆಯ್ಕೆಗಳನ್ನು ಹೊಂದಿದೆ. 1.2 ಲೀಟರ್ ಮೂರು ಸಿಲಿಂಡರ್ ಎಂಜಿನ್ 75 ಬಿಎಚ್‍ಪಿ ಪವರ್ ಮತ್ತು 104 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 1.5 ಲೀಟರ್ ನಾಲ್ಕು ಸಿಲಿಂಡರ್ ಎಂಜಿನ್‍ನಲ್ಲಿ 65 ಬಿಎಚ್‍ಪಿ ಪವರ್ ಮತ್ತು 160 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪೆಟ್ರೋಲ್ ಎಂಜಿನ್ ಅನ್ನು ಸಿವಿ‍ಟಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಡೀಸೆಲ್ ಎಂಜಿನ್ 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ನಿಸ್ಸಾನ್ ಕಾರುಗಳ ಮೇಲೆ ಭರ್ಜರಿ ಆಫರ್

ನಿಸ್ಸಾನ್ ಸನ್ನಿ

ದೀಪಾವಳಿ ಹಬ್ಬದ ಪ್ರಯುಕ್ತ ನಿಸ್ಸಾನ್ ಸನ್ನಿ ಸೆಡಾನ್‍‍ಗೆ ರೂ.94,000ಗಳವರೆಗೆ ರಿಯಾಯಿತಿ ಘೋಷಿಸಲಾಗಿದೆ. ಈ ವಿಶೇಷ ಆಫರ್‍‍ನಲ್ಲಿ ರೂ.50,000 ನಗದು ರಿಯಾಯಿತಿ, 30,000 ವಿನಿಮಯ ಬೋನಸ್ ಮತ್ತು 14,000 ಕಾರ್ಪೋರೇಟ್ ರಿಯಾಯಿತಿಯನ್ನು ಘೋಷಿಸಿದೆ.

ನಿಸ್ಸಾನ್ ಕಾರುಗಳ ಮೇಲೆ ಭರ್ಜರಿ ಆಫರ್

ನಿಸ್ಸಾನ್ ಸನ್ನಿ ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಅದರಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ 97.6 ಬಿಎಚ್‍‍ಪಿ ಪವರ್ ಮತ್ತು 134 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 1.5 ಲೀಟರ್ ಡೀಸೆಲ್ ಎಂಜಿನ್ 84.8 ಬಿಎಚ್‍‍ಪಿ ಪವರ್ ಮತ್ತು 200 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎರಡು ಎಂಜಿನ್‍‍ನೊಂದಿಗೆ ಸ್ಟ್ಯಾಂಡರ್ಡ್ 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ನಿಸ್ಸಾನ್ ಕಾರುಗಳ ಮೇಲೆ ಭರ್ಜರಿ ಆಫರ್

ಕಿಕ್ಸ್

ಈ ಎಸ್‍‍ಯವಿಯು ಹೊಸ ತಂತ್ರಜ್ಞಾನದ ವೈಶಿಷ್ಟ್ಯಗಳೊಂದಿಗೆ ನಿಸ್ಸಾನ್ ಕಿಕ್ಸ್ ಅನ್ನು ಈ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಿದ್ದರು. ಈ ಎಸ್‍ಯು‍ವಿ ಮಾರಾಟದಲ್ಲಿ ಕುಸಿತ ಕಂಡಿರುವುದರಿಂದ ದೀಪಾವಳಿ ಹಬ್ಬಕ್ಕೆ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಭರ್ಜರಿ ಆಫರ್ ಅನ್ನು ಘೋಷಿಸಿದ್ದಾರೆ. ಈ ಎಸ್‍‍ಯು‍ವಿಗೆ ಐದು ವರ್ಷ ವಾರಂಟಿಯನ್ನು ಘೋಷಿಸಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ನಿಸ್ಸಾನ್ ಕಾರುಗಳ ಮೇಲೆ ಭರ್ಜರಿ ಆಫರ್

ಕಿಕ್ಸ್ ಎಸ್‍‍ಯು‍ವಿ ಎರಡು ಎಂಜಿನ್‍ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ 1.5 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ 103.5 ಬಿ‍ಎಚ್‍ಪಿ ಪವರ್ ಮತ್ತು 142 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 1.5 ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ 108.4 ಬಿಎಚ್‍ಪಿ ಪವರ್ ಮತ್ತು 240 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪೆಟ್ರೋಲ್ ಎಂಜಿನ್‍ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅಳವಡಿಸಿದ್ದರೆ, ಡೀಸೆಲ್ ಎಂಜಿನ್‍ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಿದ್ದಾರೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ನಿಸ್ಸಾನ್ ಕಾರುಗಳ ಮೇಲೆ ಭರ್ಜರಿ ಆಫರ್

ನಿಸ್ಸಾನ್ ಕಂಪನಿಯ ದೀಪಾವಳಿ ಹಬ್ಬದ ಪ್ರಯುಕ್ತ ಭರ್ಜರಿ ಆಫರ್ ನೀಡದ ಪಟ್ಟಿಯಲ್ಲಿ ಟೆರಾನೊ ಕಾರು ಹೊಂದಿಲ್ಲ. ಆದರೆ ಡೀಲರ್ ಮಟ್ಟದಲ್ಲಿ ಕೆಲವು ಆಫರ್‍‍ಗಳು ಇರಬಹುದು ಎಂದು ನಿರೀಕ್ಷಿಸಬಹುದು. ಕಳೆದ ತಿಂಗಳು ಮಾರಾಟದಲ್ಲಿ ಕುಸಿತ ಕಂಡ ಹಿನ್ನಲೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಭರ್ಜರಿ ಆಫರ್ ಅನ್ನು ನೀಡಿ ಮಾರಾಟವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ.

Article Published On: Monday, October 21, 2019, 15:57 [IST]
English summary
Nissan Diwali Discount Offers: Festive Benefits Available On Select Models - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+