ದೀಪಾವಳಿ ಹಬ್ಬಕ್ಕಾಗಿ ದಟ್ಸನ್ ಕಾರುಗಳ ಮೇಲೆ ಭರ್ಜರಿ ಆಫರ್
ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ದಟ್ಸನ್ ತನ್ನ ಸರಣಿಯಲ್ಲಿರುವ ಕಾರು ಮಾದರಿಗಳ ಆಧಾರದ ಮೇಲೆ ರೂ.62,000ಗಳವರೆಗೆ ದೀಪಾವಳಿ ಹಬ್ಬದ ಪ್ರಯುಕ್ತ ತಮ್ಮ ಶ್ರೇಣಿಗಳಿಗೆ ಆಕರ್ಷಕ ರಿಯಾಯಿತಿಗಳನ್ನು ಘೋಷಿಸಿದೆ.

ದಟ್ಸನ್ ಕಂಪನಿಯ ಈ ದೀಪಾವಳಿ ಆಫರ್‍ನಲ್ಲಿ ನಗದು ರಿಯಾಯಿತಿ, ಎಕ್ಸ್ ಚೆಂಜ್ ಬೋನಸ್ ಮತ್ತು ಹಬ್ಬದ ವೇಳೆಯಲ್ಲಿ ಲಭ್ಯವಿರುವ ಕಾರ್ಪೋರೇಟ್ ರಿಯಾಯಿತಿಗಳು ಸೇರಿವೆ. ದಟ್ಸನ್ ಕಾರುಗಳ ಮೇಲೆ ದೀಪಾವಳಿಯ ಪ್ರಯುಕ್ತ ಮಾದರಿವಾರು ಭರ್ಜರಿ ರಿಯಾಯಿತಿ ಮತ್ತು ಕೊಡುಗೆಗಳ ಬಗ್ಗೆ ಮಾಹಿತಿ ಇಲ್ಲಿದೆ.

ರೆಡಿ-ಗೋ
ದಟ್ಸನ್ ರೆಡಿ-ಗೋ ಎಂಟ್ರಿ ಲೆವೆಲ್ ಹ್ಯಾಚ್‍ಬ್ಯಾಕ್ ಆಗಿದೆ. ಈ ಹ್ಯಾಚ್‍ಬ್ಯಾಕ್ ಮಾದರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ರೂ.62,000ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಇದರಲ್ಲಿ ರೂ.27,000 ನಗದು ರಿಯಾಯಿತಿ, ರೂಪಾಂತರವನ್ನು ಅವಲಂಬಿಸಿ ರೂ.30,000ಗಳ ಎಕ್ಸ್ ಚೇಂಜ್ ಬೋನಸ್ ಮತ್ತು ರೂ.5,000 ಕಾರ್ಪೋರೇಟ್ ರಿಯಾಯಿತಿಯನ್ನು ನೀಡಿದೆ.

ರೆಡಿ ಗೋ ಹ್ಯಾಚ್‍ಬ್ಯಾಕ್ ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ 800 ಸಿಸಿ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ 53.2 ಬಿಎಚ್‍ಪಿ ಪವರ್ ಮತ್ತು 72 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನೂ 1.0 ಲೀಟರ್ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ 67 ಬಿಎಚ್‍ಪಿ ಪವರ್ ಮತ್ತು 91 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎರಡೂ ಎಂಜಿನ್‍ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ಅನ್ನು ಅಳವಡಿಸಿದ್ದಾರೆ. ಆಯ್ಕೆಯಾಗಿ 5 ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ದಟ್ಸನ್ ಗೋ
ದಟ್ಸನ್ ಗೋ ಕಾರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ರೂ.32,000ಗಳವರೆಗೆ ಆಕರ್ಷಕ ರಿಯಾಯಿತಿಯನ್ನು ಘೋಷಿಸಿದೆ. ಇದರಲ್ಲಿ ರೂ.10,000ಗಳವರೆಗೆ ನಗದು ರಿಯಾಯಿತಿ, ರೂಪಾಂತರವನ್ನು ಅವಲಂಬಿಸಿ ರೂ.20,000 ಎಕ್ಸ್ ಚೇಂಜ್ ಬೋನಸ್ ಮತ್ತು ರೂ.2,000 ಕಾರ್ಪೊರೇಟ್ ರಿಯಾಯಿತಿಯನ್ನು ಘೋಷಿಸಿದೆ.

ದಟ್ಸನ್ ಗೋ ಹ್ಯಾಚ್‍ಬ್ಯಾಕ್ 1.2 ಲೀಟರ್ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 67 ಬಿಎಚ್‍ಪಿ ಪವರ್ ಮತ್ತು 104 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ಅಥವಾ ಸಿವಿಟಿ ಗೇರ್‍ಬಾಕ್ಸ್ ನಲ್ಲಿ ಪವರ್ ಉತ್ಪಾದನೆಯನ್ನು 75.9 ಬಿಹೆಚ್‍ಪಿಗೆ ಹೆಚ್ಚಿಸಲಾಗಿದೆ.

ದಟ್ಸನ್ ಗೋ ಪ್ಲಸ್
ದಟ್ಸನ್ ಗೋ ಪ್ಲಸ್ ಕಾಂಪ್ಯಾಕ್ಟ್ ಎಂಪಿವಿಗೆ ದೀಪಾವಳಿಯ ಪ್ರಯುಕ್ತ ರೂ.29,000ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಇದರಲ್ಲಿ ರೂ.7,000ಗಳವರೆಗೆ ನಗದು ರಿಯಾಯಿತಿ, ರೂಪಾಂತರವನ್ನು ಅವಲಂಬಿಸಿ ರೂ.20,000ಗಳವರೆಗೆ ಎಕ್ಸ್ ಚೇಂಜ್ ಬೋನಸ್ ಮತ್ತು ರೂ.2,000 ಕಾರ್ಪೊರೇಟ್ ರಿಯಾಯಿತಿಯನ್ನು ಘೋಷಿಸಿದೆ.

ಈ ಕಾಂಪ್ಯಾಕ್ಟ್ ಎಂಪಿವಿ 1.2 ಲೀಟರ್ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 67 ಬಿಎಚ್‍ಪಿ ಪವರ್ ಮತ್ತು 104 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಅಳವಡಿಸಿದ್ದಾರೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಆಟೋಮೊಬೈಲ್ ಕ್ಷೇತ್ರದಲ್ಲಿ ಕುಸಿತ ಕಂಡಿರುವುದರಿಂದ ಹಲವು ತಿಂಗಳುಗಳಿಂದ ವಾಹನ ಮಾರಾಟವು ಮಂದಗತಿಯಲ್ಲಿ ಸಾಗುತ್ತಿದೆ. ಇದೇ ಕಾರಣದಿಂದ ಎಲ್ಲಾ ಕಂಪನಿಗಳು ವಾಹನಗಳ ಮಾರಾಟವನ್ನು ಹೆಚ್ಚಿಸಲು ದೀಪಾವಳಿ ಹಬ್ಬದ ಪ್ರಯುಕ್ತ ಭರ್ಜರಿ ರಿಯಾಯಿತಿಗಳನ್ನು ಘೋಷಿಸುತ್ತಿವೆ. ದಟ್ಸನ್ ಕಂಪನಿಯು ಕೂಡ ಮತ್ತಷ್ಟು ಗ್ರಾಹಕರನ್ನು ಸೆಳೆಯಲು ದೀಪಾವಳಿ ಹಬ್ಬಕ್ಕೆ ಭರ್ಜರಿ ಆಫರ್ ಅನ್ನು ಘೋಷಿಸಿದೆ.


Click it and Unblock the Notifications








