ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಗರಿಷ್ಠ ಮಟ್ಟದ ಅಂಕ ಪಡೆದ ನಿಸ್ಸಾನ್ ಕಿಕ್ಸ್

ಜನವರಿ 22, 2019ರಂದು ನಿಸ್ಸಾನ್ ಇಂಡಿಯಾ ಸಂಸ್ಥೆಯು ತಮ್ಮ ಹೊಸ ಕಿಕ್ಸ್ ಎಂಬ ಎಸ್‍ಯುವಿ ಕಾರನ್ನು ಬಿಡುಗಡೆ ಮಾಡಲಾಗಿದ್ದು, ಜಾಗತಿಕ ಮಾರುಕಟ್ಟೆಗಳಲ್ಲಿ 2017ರ ಅವಧಿಯ ಬೆಸ್ಟ್ ಎಸ್‌ಯುವಿ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಕಿಕ್ಸ್ ಕಾರು ಇದೀಗ ಭಾರತದಲ್ಲೂ ಬಿಡುಗಡೆಯಾಗಿ ಕಮಾಲ್ ಮಾಡುತ್ತಿದೆ.

ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಗರಿಷ್ಠ ಮಟ್ಟದ ಅಂಕ ಪಡೆದ ನಿಸ್ಸಾನ್ ಕಿಕ್ಸ್

2016ರಲ್ಲೇ ಬ್ರೆಜಿಲ್ ಸೇರಿದಂತೆ ಯುರೋಪಿನ ಪ್ರಮುಖ ಮಾರುಕಟ್ಟೆಯಲ್ಲಿ ಕಿಕ್ಸ್ ಕಾರು ಬಿಡುಗಡೆಗೊಂಡಿದ್ದು, ವಿಶ್ವದರ್ಜೆಯ ಡಿಸೈನ್ ಲಾಂಗ್ವೆಜ್ ವಿನ್ಯಾಸವಾದ ಬಿ0 ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಿ ಹೊಸ ಕಾರನ್ನು ಅಭಿವೃದ್ಧಿಗೊಳಿಸಲಾಗಿದೆ. ಸಧ್ಯ ನಿಸ್ಸಾನ್ ಸಂಸ್ಥೆಯಲ್ಲಿನ ಮಾರಾಟದ್ಸ್ ಶ್ರೇಣಿಯನ್ನು ಅಧಿಕಗೊಳಿಸುತ್ತಿರುವ ಈ ಕಾರು ಭಾರತೀಯ ಗ್ರಾಹಕರ ಸುರಕ್ಷತೆಯಲ್ಲಿಯು ಸಹ ಅಧಿಕ ಮಟ್ಟದ ಅಂಕವನ್ನು ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಪಡೆದುಕೊಂಡಿದೆ.

ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಗರಿಷ್ಠ ಮಟ್ಟದ ಅಂಕ ಪಡೆದ ನಿಸ್ಸಾನ್ ಕಿಕ್ಸ್

ಹೌದು, ವಿದೇಶಗಳಲ್ಲಿ ಮಾರಾಟವಾಗುತ್ತಿರುವ ನಿಸ್ಸಾಕ್ ಕಿಕ್ಸ್ ಕಾರು ಗ್ಲೋಬಲ್ ಎನ್‍ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ 5 ಅಂಕಕ್ಕೆ 4 ಅಂಕವನ್ನು ಪಡೆದು, ವಾಹನದ ನಿರ್ಮಾಣದ ಗುಣ್ಣಮಟ್ಟವನ್ನು ಸಾಭೀತು ಮಾಡಲಾಗಿದೆ. ಹೀಗಾಗಿ ಸಹ್ದ್ಯ ಮಾರುಕಟ್ಟೆಯಲ್ಲಿ ಗ್ರಾಹಕರು ಸೇಫ್ಟಿಯಲ್ಲಿ ಉತ್ತಮವಾದ ಕಾರುಗಳನ್ನು ಖರೀದಿ ಮಾಡುತಿದ್ದು, ನಿಸ್ಸಾನ್ ಕಿಕ್ಸ್ ಕಾರು ಕೂಡಾ ಅವುಗಳಲ್ಲಿ ಒಂದು ಎಂದೇ ಹೇಳಬಹುದಾಗಿದೆ.

ಗ್ಲೋಬಲ್ ಎನ್‍ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿಲ್ ಭಾಗವಹಿಸಿದ ನಿಸ್ಸಾನ್ ಕಿಕ್ಸ್ ಕಾರಿನಲ್ಲಿ ಕೇವಲ ಎರಡು ಏರ್‍‍ಬ್ಯಾಗ್‍‍ಗಳನ್ನು ಮಾತ್ರ ಇರಿಸಲಾಗಿದೆ. ವಯಸ್ಕರ ಸೇಫ್ಟಿಯಲ್ಲಿ 4 ಅಂಕ ಮತ್ತು ಮಕ್ಕಳ ಸೇಫ್ಟಿ ಪರವಾರಿ ಕೂಡಾ ಒಟ್ಟು 4 ಅಂಕಗಳನ್ನು ಪಡೆದುಕೊಂಡಿದೆ. ನಿಸ್ಸಾನ್ ಕಿಕ್ಸ್ ಕಾರಿನಲ್ಲಿ ಏನೆಲ್ಲಾ ಸೇಫ್ಟಿ ಫೀಚರ್ಸ್ ಇದೆ ಮತ್ತು ಬೇರೆ ಏನೆಲ್ಲಾ ಫೀಚರ್‍‍‍ಗಳಿವೆ ನೀವೇ ನೋಡಿ..

ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಗರಿಷ್ಠ ಮಟ್ಟದ ಅಂಕ ಪಡೆದ ನಿಸ್ಸಾನ್ ಕಿಕ್ಸ್

ಸುರಕ್ಷಾ ಸೌಲಭ್ಯಗಳು

ಹೊಸ ನಿಸ್ಸಾನ್ ಕಿಕ್ಸ್ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ವೆಹಿಕಲ್ ಡೈನಾಮಿಕ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ಮೂರು ಏರ್‌ಬ್ಯಾಗ್, ಎಬಿಎಸ್, ಇಕೋ ಮೂಡ್ ಮತ್ತು ಕ್ರೂಸ್ ಕಂಟ್ರೋಲ್ ಸೌಲಭ್ಯವಿದೆ.

ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಗರಿಷ್ಠ ಮಟ್ಟದ ಅಂಕ ಪಡೆದ ನಿಸ್ಸಾನ್ ಕಿಕ್ಸ್

ಕಿಕ್ಸ್ ಕಾರಿನ ಡಿಸೈನ್

GRAPHENE ಡಿಸೈನ್ ತಂತ್ರಜ್ಞಾನದೊಂದಿಗೆ ಸಿದ್ದವಾಗಿರುವ ಹೊರ ವಿನ್ಯಾಸಗಳು ಕಿಕ್ಸ್‌ಗೆ ಪ್ರೀಮಿಯಂ ವೈಶಿಷ್ಟ್ಯತೆಯು ಮೆರಗು ತಂದಿದ್ದು, ವಿ ಮೊಷನ್ ಗ್ರಿಲ್, ಎಲ್‌ಇಡಿ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಕೆಳಭಾಗದಲ್ಲಿ ಅಳವಡಿಸಲಾಗಿರುವ ಫಾಗ್ ಲ್ಯಾಂಪ್, ಸಿಲ್ವರ್ ಸ್ಕೀಡ್ ಪ್ಲೇಟ್ ಮತ್ತು ಬಲಿಷ್ಠವಾಗಿರುವ ಫ್ರಂಟ್ ಪ್ರೋಫೈಲ್ ನೀಡಲಾಗಿದೆ.

ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಗರಿಷ್ಠ ಮಟ್ಟದ ಅಂಕ ಪಡೆದ ನಿಸ್ಸಾನ್ ಕಿಕ್ಸ್

ಕಿಕ್ಸ್ ಕಾರುಗಳಿಗೆ ಮತ್ತಷ್ಟು ಮೆರಗು ತರುವ ಉದ್ದೇಶದಿಂದ ಕಾರಿನ ಎಡ್ಜ್‌ಗಳಲ್ಲಿ ಶಾರ್ಪ್ ಡಿಸೈನ್ ಬಳಕೆ ಮಾಡಲಾಗಿದ್ದು, ರೂಫ್ ರೈಲ್ಸ್ ಹಾಗೂ ಕಾರಿನ ಎರಡು ಬದಿಗಳಲ್ಲೂ ನೀಡಲಾಗಿರುವ ಕ್ರೋಮ್ ಸೌಲಭ್ಯವು ಕಾರಿನ ಸೈಡ್ ಪ್ರೋಫೈಲ್‌ಗೆ ಲುಕ್ ನೀಡಿದೆ. ಇನ್ನು ಕಾರಿನಲ್ಲಿ 17-ಇಂಚಿನ 5 ಸ್ಪೋಕ್ ಅಲಾಯ್ ಚಕ್ರಗಳ ಜೋಡಣೆ, 210 ಎಂಎಂ ನಷ್ಟು ಗ್ರೌಂಡ್ ಕ್ಲಿಯೆರೆನ್ಸ್, ಬೂಮೆರ್ಗ್ ಟೈಲ್ ಲ್ಯಾಂಪ್ಸ್, ಗಮನ ಸೆಳೆಯುವ ರಿಯರ್ ಬಂಪರ್ ಸೇರಿದಂತೆ ಹಲವು ಸುಧಾರಿತ ಸೌಲಭ್ಯಗಳು ಕಿಕ್ಸ್ ಕಾರಿನಲ್ಲಿವೆ.

ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಗರಿಷ್ಠ ಮಟ್ಟದ ಅಂಕ ಪಡೆದ ನಿಸ್ಸಾನ್ ಕಿಕ್ಸ್

ಕಾರಿನ ಒಳವಿನ್ಯಾಸ

ಗ್ಲಿಡಿಂಗ್ ವಿಂಗ್ ಡ್ಯಾಶ್‌ಬೋರ್ಡ್ ಹೊಂದಿರುವ ಕಿಕ್ಸ್ ಕಾರಿನಲ್ಲಿ ಒಳಾಂಗಣ ವಿಸ್ತಿರ್ಣವು ಚಿಕ್ಕದು ಎನಿಸಿದರೂ ಆಧುನಿಕ ಕಾರುಗಳಲ್ಲಿ ಇರಬೇಕಾದ ಬಹುತೇಕ ಸೌಲಭ್ಯವು ಇದರಲ್ಲಿವೆ. ಬ್ಲ್ಯಾಕ್ ಪ್ಲಾಸ್ಟಿಕ್ ಪ್ಯಾನೆಲ್, ಬ್ರೌನ್ ಲೆದರ್‌ನಿಂದ ಸಿದ್ದವಾದ ಡ್ಯಾಶ್‌ಬೋರ್ಡ್, ಲೆದರ್ ಹೊದಿಕೆಯುಳ್ಳ ಸ್ಟೀರಿಂಗ್ ವೀಲ್ಹ್ ಹೊಂದಿರುವುದು ಕಾರು ಚಾಲನೆಯಲ್ಲಿ ಐಷಾರಾಮಿ ಅನುಭವ ನೀಡುತ್ತೆ.

ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಗರಿಷ್ಠ ಮಟ್ಟದ ಅಂಕ ಪಡೆದ ನಿಸ್ಸಾನ್ ಕಿಕ್ಸ್

ವಿನೂತನ ಕಾರಿನಲ್ಲಿ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋ‌ಟೈನ್‌ಮೆಂಟ್ ಹಾಗೂ ಕಾರಿನ ಸುತ್ತ ನೋಡಬಹುದಾದ 360 ಡಿಗ್ರಿ ವಿವ್ಯೂ ಮಾನಿಟರ್ ವ್ಯವಸ್ಥೆಯಿದ್ದು, ಇದು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾರಾಟವಾಗುತ್ತಿರುವ ಇತರೆ ಸಬ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಲ್ಲೇ ಈ ಕಾರು ವಿಶೇಷ ಎನ್ನಿಸಲಿದೆ.

ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಗರಿಷ್ಠ ಮಟ್ಟದ ಅಂಕ ಪಡೆದ ನಿಸ್ಸಾನ್ ಕಿಕ್ಸ್

ಜೊತೆಗೆ ನಿಸ್ಸಾನ್ ಕನೆಕ್ಟ್ ಆ್ಯಪ್ ಸೌಲಭ್ಯವು ಸಹ ವಿವಿಧ ಕಾರ್ಯಗಳಿಗೆ ಬಳಕೆಯಾಗಲಿದ್ದು, ಚಾಲಕನಿಗೆ ಸರ್ವಿಸ್ ಬುಕ್ಕಿಂಗ್ ರಿಮೆಂಡರ್, ಕಾರಿನ ಆರೋಗ್ಯ(ಎಂಜಿನ್, ಬ್ಯಾಟರಿ, ಬ್ರೇಕಿಂಗ್) ಮತ್ತು ಡೋರ್ ಲಾಕ್/ಅನ್ ಲಾಕ್‌ಗೆ ಸಂಬಂಧಿಸಿದಂತೆ ಸಮಸ್ಯೆಗಳ ಕುರಿತಾಗಿ ಸಮಯಕ್ಕೆ ಸರಿಯಾಗಿ ಎಚ್ಚರಿಕೆ ನೀಡುತ್ತೆ.

ಇನ್ನುಳಿದಂತೆ ಆರಾಮದಾಯಕ ಪ್ರಯಾಣಕ್ಕೆ ಸಹಕಾರಿಯಾಗುವ ಅಂಡ್ರಾಯಿಡ್ ಆಟೋ ಪ್ಲೇ, ಆ್ಯಪಲ್ ಕಾರ್ ಪ್ಲೇ, ಯುಎಸ್‌ಬಿ ಪೋರ್ಟ್, ಚಾಲಕ ಮತ್ತು ಮುಂಭಾಗದ ಪ್ರಯಾಣಿಕರಿಗೆ ಆರ್ಮ್ ರೆಸ್ಟ್, ಹಿಂಬದಿಯಲ್ಲಿ ಎಸಿ ವೆಂಟ್ಸ್, ಸ್ಪೀಡ್ ಸೆನ್ಸಾರ್ ಡೋರ್ ಲಾಕ್/ಅನ್‌ಲಾಕ್ ಸೌಲಭ್ಯ, ರಿಯರ್ ಪಾರ್ಕಿಂಗ್ ವ್ಯವಸ್ಥೆಯಿರಲಿದೆ.

ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಗರಿಷ್ಠ ಮಟ್ಟದ ಅಂಕ ಪಡೆದ ನಿಸ್ಸಾನ್ ಕಿಕ್ಸ್

ಎಂಜಿನ್ ಸಾಮರ್ಥ್ಯ

ಹೊಸ ಕಿಕ್ಸ್ ಮಾದರಿಯು 1.5-ಲೀಟರ್ ಹೆಚ್4ಕೆ ಪೆಟ್ರೋಲ್ ಎಂಜಿನ್ ಹಾಗೂ 1.5-ಲೀಟರ್ ಕೆ9ಕೆ ಡಿಸೇಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, ಪೆಟ್ರೋಲ್ ಮಾದರಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಮತ್ತು ಡಿಸೇಲ್ ಮಾದರಿಯಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೋಡಿಸಲಾಗಿದೆ. ಈ ಪೆಟ್ರೋಲ್ ಮಾದರಿಯು 104-ಬಿಎಚ್‌ಪಿ, 142-ಎನ್ಎಂ ಟಾರ್ಕ್ ಉತ್ಪಾದಿಸಿದ್ದಲ್ಲಿ ಡೀಸೆಲ್ ಮಾದರಿಯು 108-ಬಿಎಚ್‌ಪಿ, 240-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಉತ್ತಮ ಇಂಧನ ದಕ್ಷತೆಯನ್ನು ಹೊಂದಿವೆ.

ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಗರಿಷ್ಠ ಮಟ್ಟದ ಅಂಕ ಪಡೆದ ನಿಸ್ಸಾನ್ ಕಿಕ್ಸ್

ಕಾರಿನ ಮೈಲೇಜ್

ಹೊಸ ಕಿಕ್ಸ್ ಕಾರುಗಳು ಪ್ರತಿ ಲೀಟರ್ ಪೆಟ್ರೋಲ್‌ಗೆ 13 ರಿಂದ 15ಕಿ.ಮಿ ಮತ್ತು ಡಿಸೇಲ್ ಕಾರುಗಳು 17 ರಿಂದ 19 ಕಿ.ಮಿ ಇಂಧನ ದಕ್ಷತೆಯನ್ನು ಹೊಂದಿದ್ದು, ಮಾರುತಿ ಸುಜುಕಿ ಎಸ್ ಕ್ರಾಸ್, ಹ್ಯುಂಡೈ ಕ್ರೇಟಾ, ಮಹೀಂದ್ರಾ ಎಕ್ಸ್‌ಯುವಿ 500 ಮತ್ತು ಬಿಡುಗಡೆಯಾಗಲಿರುವ ಟಾಟಾ ಹ್ಯಾರಿಯರ್ ಕಾರುಗಳಿಗೆ ತೀವ್ರ ಪೈಪೋಟಿ ನೀಡುತ್ತಿದೆ.

More from DriveSpark

Article Published On: Wednesday, May 22, 2019, 11:31 [IST]
English summary
Nissan Kicks Scores 4 Star Rating In Global NCAP Crash Test. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+