ನಾನು ಇರುವವರೆಗೂ ಡ್ರೈವರ್‍‍ಲೆಸ್ ಕಾರ್ ಬಿಡಲ್ಲವೆಂದ ಸಾರಿಗೆ ಸಚಿವ..!

ಟೆಕ್ನಾಲಜಿ ಮುಂದುವರೆದಂತೆಲ್ಲಾ ಕಾರುಗಳಲ್ಲಿಯೂ ಆ ಟೆಕ್ನಾಲಜಿಗಳನ್ನು ಅಳವಡಿಸಿಕೊಳ್ಳುವುದು ಸಹಜ. ಬ್ಲೂ ಟೂಥ್‍‍ನಿಂದ ಹಿಡಿದು, ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂಗಳವರೆಗೆ ಕಾರುಗಳಲ್ಲಿ ಹಲವು ಟೆಕ್ನಾಲಜಿಗಳನ್ನು ಅಳವಡಿಸಲಾಗಿದೆ.

ನಾನು ಇರುವವರೆಗೂ ಡ್ರೈವರ್‍‍ಲೆಸ್ ಕಾರ್ ಬಿಡಲ್ಲವೆಂದ ಸಾರಿಗೆ ಸಚಿವ..!

ಅಮೇರಿಕಾದಲ್ಲಿ ಡ್ರೈವರ್‍‍ಲೆಸ್ ಕಾರುಗಳನ್ನು ರಸ್ತೆಗಿಳಿಸಲಾಗಿದೆ. ಟೆಸ್ಲಾ ಸೇರಿದಂತೆ ಹಲವು ಕಂಪನಿಗಳು ಡ್ರೈವರ್‍‍ಲೆಸ್ ಕಾರುಗಳನ್ನು ಬಿಡುಗಡೆಗೊಳಿಸಿವೆ. ಭಾರತದಲ್ಲಿಯೂ ಸಹ ಡ್ರೈವರ್‍‍ಲೆಸ್ ಕಾರುಗಳನ್ನು ಬಿಡುಗಡೆಗೊಳಿಸಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.

ನಾನು ಇರುವವರೆಗೂ ಡ್ರೈವರ್‍‍ಲೆಸ್ ಕಾರ್ ಬಿಡಲ್ಲವೆಂದ ಸಾರಿಗೆ ಸಚಿವ..!

ಅಸೋಚಾಮ್ ಸಭೆಯಲ್ಲಿ ಈ ಕುರಿತು ಮಾತನಾಡಿದ ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿರವರು, ನನಗೆ ಹಲವಾರು ಬಾರಿ ಭಾರತದಲ್ಲಿ ಡ್ರೈವರ್‍‍ಲೆಸ್ ಕಾರುಗಳನ್ನು ಬಿಡುಗಡೆಗೊಳಿಸುವ ಕುರಿತು ಪ್ರಶ್ನಿಸಲಾಗಿದೆ.

ನಾನು ಇರುವವರೆಗೂ ಡ್ರೈವರ್‍‍ಲೆಸ್ ಕಾರ್ ಬಿಡಲ್ಲವೆಂದ ಸಾರಿಗೆ ಸಚಿವ..!

ಪ್ರತಿ ಬಾರಿಯೂ ನಾನು ಸಚಿವನಾಗಿರುವವರೆಗೂ ಡ್ರೈವರ್‍‍ಲೆಸ್ ಕಾರುಗಳನ್ನು ಭಾರತಕ್ಕೆ ಕಾಲಿಡಲು ಬಿಡುವುದಿಲ್ಲವೆಂದು ಹೇಳುತ್ತಲೇ ಇದ್ದೇನೆ. ಭಾರತದಲ್ಲಿ 22 ಲಕ್ಷದಷ್ಟು ಡ್ರೈವರ್‍‍ಗಳ ಕೊರತೆಯಿದ್ದರೂ, ಡ್ರೈವರ್‍‍ಲೆಸ್ ಕಾರುಗಳನ್ನು ಬಿಡುಗಡೆಗೊಳಿಸುವ ಚಿಂತನೆ ಸರಿಯಲ್ಲ.

ನಾನು ಇರುವವರೆಗೂ ಡ್ರೈವರ್‍‍ಲೆಸ್ ಕಾರ್ ಬಿಡಲ್ಲವೆಂದ ಸಾರಿಗೆ ಸಚಿವ..!

ಉದ್ಯೋಗ ಸೃಷ್ಟಿಯ ಜೊತೆಗೆ ಉದ್ಯಮವನ್ನೂ ಸಹ ಬೆಳೆಸಬೇಕಿದೆ. ವಾಹನಗಳ ಸ್ಕ್ರಾಪೇಜ್ ನೀತಿಯು ಅಂತಿಮ ಹಂತದಲ್ಲಿದೆ. ಈ ನೀತಿಯನ್ನು ಪೂರ್ಣವಾಗಿ ಜಾರಿಗೆ ತಂದ ನಂತರ ವಾಹನಗಳ ಕಚ್ಚಾ ಸಾಮಗ್ರಿಗಳಿಗೆ ತಗುಲುವ ವೆಚ್ಚವು ಕಡಿಮೆಯಾಗಲಿದೆ.

ನಾನು ಇರುವವರೆಗೂ ಡ್ರೈವರ್‍‍ಲೆಸ್ ಕಾರ್ ಬಿಡಲ್ಲವೆಂದ ಸಾರಿಗೆ ಸಚಿವ..!

ಇದರಿಂದಾಗಿ ಭಾರತವು ಪ್ರಪಂಚದ ನಂಬರ್ 1 ವಾಹನ ತಯಾರಕ ದೇಶವಾಗಲಿದೆ. ಇದರಿಂದಾಗಿ ಆಟೋ ಮೊಬೈಲ್ ಉದ್ಯಮವು ಸಹ ದೇಶದ 5 ಟ್ರಿಲಿಯನ್ ಅರ್ಥ ವ್ಯವಸ್ಥೆಗೆ ಕೊಡುಗೆ ನೀಡಲಿದೆ. ಭಾರತದ ಆಟೋಮೊಬೈಲ್ ಉದ್ಯಮದ ಮೌಲ್ಯವು ಸದ್ಯಕ್ಕೆ ರೂ.4.5 ಲಕ್ಷ ಕೋಟಿಗಳಾಗಿದೆ ಎಂದು ಹೇಳಿದರು.

ನಾನು ಇರುವವರೆಗೂ ಡ್ರೈವರ್‍‍ಲೆಸ್ ಕಾರ್ ಬಿಡಲ್ಲವೆಂದ ಸಾರಿಗೆ ಸಚಿವ..!

2016ರ ಮೇ ತಿಂಗಳಿನಲ್ಲಿ ಸರ್ಕಾರವು ವಾಲಂಟರಿ ವೆಹಿಕಲ್ ಫ್ಲೀಟ್ ಮಾಡರ್ನೈಜೇಷನ್ ಪ್ರೋಗ್ರೋ ಎಂಬ ನೀತಿಯ ಕರಡನ್ನು ರಚಿಸಿತ್ತು. ಈ ನೀತಿಯನ್ವಯ ದಶಕಗಳಷ್ಟು ಹಳೆಯದಾದ 28 ಮಿಲಿಯನ್‍‍ಗೂ ಹೆಚ್ಚಿನ ವಾಹನಗಳನ್ನು ರಸ್ತೆಗಿಳಿಯದಂತೆ ಮಾಡಲಾಗುವುದು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ನಾನು ಇರುವವರೆಗೂ ಡ್ರೈವರ್‍‍ಲೆಸ್ ಕಾರ್ ಬಿಡಲ್ಲವೆಂದ ಸಾರಿಗೆ ಸಚಿವ..!

ಕಾರ್ಯದರ್ಶಿಗಳ ಸಮಿತಿಯು, ಕೇಂದ್ರ ಸರ್ಕಾರಕ್ಕೆ ಬೆಂಬಲವಾಗಿ ರಾಜ್ಯ ಸರ್ಕಾರಗಳು ಪೂರ್ಣ ಬೆಂಬಲ ನೀಡುವಂತೆ ಮರು ರಚಿಸುವಂತೆ ಸಚಿವಾಲಯಕ್ಕೆ ಸಲಹೆ ನೀಡಿತ್ತು. ಮಾಲಿನ್ಯ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದರ ಜೊತೆಗೆ ವಾಹನಗಳ ಬಾಳಿಕೆಯನ್ನು ನಿರ್ಧರಿಸಲಿದೆ.

MOST READ: ವಾಹನ ಡೀಲರ್‍‍ಗಳ ಟ್ರೇಡ್ ಸರ್ಟಿಫಿಕೇಟ್ ಅಮಾನತುಗೊಳಿಸಿದ ಸಾರಿಗೆ ಇಲಾಖೆ

ನಾನು ಇರುವವರೆಗೂ ಡ್ರೈವರ್‍‍ಲೆಸ್ ಕಾರ್ ಬಿಡಲ್ಲವೆಂದ ಸಾರಿಗೆ ಸಚಿವ..!

ಹಂತಹಂತವಾಗಿ ಈ ಯೋಜನೆಯನ್ನು ಅನುಷ್ಟಾನಗೊಳಿಸಬಹುದೆಂದು ಸಮಿತಿಯು ಸೂಚಿಸಿತ್ತು. ಈ ಸೂಚನೆಯ ಪ್ರಕಾರ ಮರುರಚಿಸಿದ ನಿಯಮಕ್ಕೆ ಪ್ರಧಾನ ಮಂತ್ರಿಗಳ ಕಚೇರಿಯಿಂದ ಅನುಮೋದನೆಯನ್ನು ಪಡೆಯಲಾಯಿತು.

MOST READ: 500 ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿದೆ ಒಲಾ..!

ನಾನು ಇರುವವರೆಗೂ ಡ್ರೈವರ್‍‍ಲೆಸ್ ಕಾರ್ ಬಿಡಲ್ಲವೆಂದ ಸಾರಿಗೆ ಸಚಿವ..!

ಭಾರತದಂತಹ ಅಧಿಕ ವಾಹನ ದಟ್ಟಣೆಯಿರುವ ದೇಶಗಳಲ್ಲಿ ಡ್ರೈವರ್‍‍ಲೆಸ್ ಕಾರುಗಳನ್ನು ರಸ್ತೆಗಿಳಿಸುವುದು ಅಸಾಧ್ಯದ ಮಾತು. ಪ್ರತಿ ದಿನ ಲಕ್ಷಾಂತರ ಹೊಸ ವಾಹನಗಳು ದೇಶಾದ್ಯಂತ ನೊಂದಣಿಯಾಗುತ್ತಿರುತ್ತವೆ.

ನಾನು ಇರುವವರೆಗೂ ಡ್ರೈವರ್‍‍ಲೆಸ್ ಕಾರ್ ಬಿಡಲ್ಲವೆಂದ ಸಾರಿಗೆ ಸಚಿವ..!

ಚಾಲಕರಿರುವ ವಾಹನಗಳೇ ನಿಯಮಗಳನ್ನು ಉಲ್ಲಂಘಿಸಿ ರಸ್ತೆ ಅಪಘಾತಗಳಲ್ಲಿ ಭಾಗಿಯಾಗುತ್ತಿರುವಾಗ ಇನ್ನು ಚಾಲಕರಿಲ್ಲದ ವಾಹನಗಳನ್ನು ರಸ್ತೆಗಿಳಿಸಿದರೆ ಹೆಚ್ಚಿನ ಅಪಘಾತಗಳಾಗುವುದು ಖಚಿತ. ಆದ್ದರಿಂದ ಕೇಂದ್ರದ ಸಾರಿಗೆ ಸಚಿವರು ಸರಿಯಾದ ತೀರ್ಮಾನವನ್ನು ಕೈಗೊಂಡಿದ್ದಾರೆ ಎಂದು ಹೇಳಬಹುದು.

Most Read Articles

Kannada
English summary
Nitin Gadkari says no driver less cars in India till he is transport minister - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X