ಝೂಮ್ ಕಾರಿಗೆ ಟಕ್ಕರ್- ಓಲಾದಿಂದಲೂ ಸೆಲ್ಫ್ ಡ್ರೈವ್ ಕಾರ್ ಸರ್ವೀಸ್

ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳನ್ನು ನೀಡುವಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರು ಮೂಲದ ಓಲಾ ಸಂಸ್ಥೆಯು ಸದ್ಯದಲ್ಲೇ ಮತ್ತಷ್ಟು ಮಾರುಕಟ್ಟೆ ವಿಸ್ತರಣೆ ಮಾಡುತ್ತಿದೆ. ಇದರ ಭಾಗವಾಗಿ ಗ್ರಾಹಕರ ಬೇಡಿಕೆಯ ಆಧಾರದ ಮೇಲೆ ಕೆಲವು ವಿನೂತನ ಸೇವೆಗಳನ್ನು ಪ್ರಾರಂಭಿಸುವ ಬಗ್ಗೆ ಸುಳಿವು ನೀಡಿದ್ದು, ಇದರಲ್ಲಿ ಸೆಲ್ಫ್ ಡ್ರೈವ್ ಕಾರು ಸೇವೆ ಕೂಡಾ ಒಂದಾಗಿದೆ.

ಝೂಮ್ ಕಾರಿಗೆ ಟಕ್ಕರ್- ಓಲಾದಿಂದಲೂ ಸೆಲ್ಫ್ ಡ್ರೈವ್ ಕಾರ್ ಸರ್ವೀಸ್

ಹೌದು, ಸದ್ಯ ಆಪ್ಯ ಆಧಾರಿತ ಕ್ಯಾಬ್ ಸೇವೆಗಳಲ್ಲಿ ಉಬರ್ ಸಂಸ್ಥೆಗೆ ಭಾರೀ ಪೈಪೋಟಿ ನೀಡುತ್ತಿರುವ ಓಲಾ ಸಂಸ್ಥೆಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಹೊಸ ಯೋಜನೆಗಳನ್ನು ಪರಿಚಯಿಸಲು ಮುಂದಾಗಿದೆ. ಹೀಗಾಗಿಯೇ ಹೊಸ ಹೂಡಿಕೆದಾರರನ್ನು ಸೆಳೆಯುತ್ತಿರುವ ಓಲಾ ಸಂಸ್ಥೆಯು ಮೊನ್ನೆಯಷ್ಟೇ ಕಿಯಾ ಮೋಟಾರ್ಸ್ ಮತ್ತು ಹ್ಯುಂಡೈ ಸಂಸ್ಥೆಗಳೊಂದಿಗೆ ಹೊಸ ಒಪ್ಪಂದ ಮಾಡಿಕೊಂಡಿದ್ದು, ಇದೇ ಮೊದಲ ಬಾರಿಗೆ ಸೆಲ್ಪ್ ಡ್ರೈವಿಂಗ್ ಕಾರ್ ಸರ್ವೀಸ್ ಆರಂಭಿಸಲು ಅಂತಿಮ ಹಂತದ ಸಿದ್ದತೆ ನಡೆಸಿದೆ.

ಝೂಮ್ ಕಾರಿಗೆ ಟಕ್ಕರ್- ಓಲಾದಿಂದಲೂ ಸೆಲ್ಫ್ ಡ್ರೈವ್ ಕಾರ್ ಸರ್ವೀಸ್

ಮುಂದಿನ 2 ತಿಂಗಳ ಅವಧಿಯಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಸೆಲ್ಪ್ ಡ್ರೈವಿಂಗ್ ಕಾರು ಸೇವೆಗಳು ಲಭ್ಯವಾಗಲಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎಂಟ್ರಿ ಲೆವಲ್ ಹ್ಯಾಚ್‌ಬ್ಯಾಕ್, ಸೆಡಾನ್ ಮತ್ತು ಎಸ್‌ಯುವಿ ಕಾರುಗಳಿಂದ ಐಷಾರಾಮಿ ಕಾರುಗಳನ್ನು ದಿನದ ಬಾಡಿಗೆ ರೂಪದಲ್ಲಿ ಗ್ರಾಹಕರಿಗೆ ಸೇವೆ ಒದಗಿಸಲಿದೆ.

ಝೂಮ್ ಕಾರಿಗೆ ಟಕ್ಕರ್- ಓಲಾದಿಂದಲೂ ಸೆಲ್ಫ್ ಡ್ರೈವ್ ಕಾರ್ ಸರ್ವೀಸ್

ಓಲಾ ಸೆಲ್ಪ್ ಡ್ರೈವಿಂಗ್ ಕಾರು ಸೇವೆಗಳಲ್ಲಿ ವಿವಿಧ ಮಾದರಿಯ ಐಷಾರಾಮಿ ಕಾರುಗಳು ಲಭ್ಯವಾಗಲಿದ್ದು, ಸೆಲ್ಪ್ ಡ್ರೈವಿಂಗ್ ಕಾರುಗಳನ್ನು ಒದಗಿಸಲು ಹ್ಯುಂಡೈ ಮತ್ತು ಕಿಯಾ ಸಂಸ್ಥೆಗಳು ಮುಂದೆ ಬಂದಿವೆ. ಹೀಗಾಗಿ ಹೊಸ ಯೋಜನೆಗೆ ಬರೋಬ್ಬರಿ ರೂ.2,100 ಕೋಟಿ ಬಂಡವಾಳ ಹೂಡಿಕೆ ಮಾಡಿರುವ ಕಿಯಾ ಮತ್ತು ಹ್ಯುಂಡೈ ಸಂಸ್ಥೆಗಳು ಓಲಾದಲ್ಲಿ ಶೇ.4ರಷ್ಟು ಪಾಲನ್ನು ತಮ್ಮದಾಗಿಸಿಕೊಂಡಿವೆ.

ಝೂಮ್ ಕಾರಿಗೆ ಟಕ್ಕರ್- ಓಲಾದಿಂದಲೂ ಸೆಲ್ಫ್ ಡ್ರೈವ್ ಕಾರ್ ಸರ್ವೀಸ್

ಇದರ ಜೊತೆಗೆ ವ್ಯಯಕ್ತಿಕ ಕಾರು ಖರೀದಿಗೆ ಬಯಸುವ ಗ್ರಾಹಕರಿಗೂ ಬಾಡಿಗೆ ರೂಪದಲ್ಲಿ ಕಾರುಗಳನ್ನು ನೀಡಲು ಯೋಜಿಸಲಾಗಿದ್ದು, ಈ ಮೂಲಕ ಸೆಲ್ಪ್ ಡ್ರೈವಿಂಗ್ ಕಾರು ಸೇವೆಗಳನ್ನು ಒದಗಿಸುತ್ತಿರುವ ಭಾರತದ ಅತಿ ದೊಡ್ಡ ಸಂಸ್ಥೆಯಾಗಿ ಹೊರಹೊಮ್ಮುವ ತವಕದಲ್ಲಿದೆ.

ಝೂಮ್ ಕಾರಿಗೆ ಟಕ್ಕರ್- ಓಲಾದಿಂದಲೂ ಸೆಲ್ಫ್ ಡ್ರೈವ್ ಕಾರ್ ಸರ್ವೀಸ್

ಸದ್ಯ ಮಾರುಕಟ್ಟೆಯಲ್ಲಿ ಝೂಮ್‌ಕಾರ್, ಮೈಲೆಸ್ ಮತ್ತು ಡ್ರೈವ್‌ಜಿ ಎನ್ನುವ ಪ್ರಮುಖ ಸಂಸ್ಥೆಗಳು ಸೆಲ್ಪ್ ಡ್ರೈವಿಂಗ್ ಕಾರ್ ಸೇವೆಗಳಲ್ಲಿ ಜನಪ್ರಿಯತೆ ಹೊಂದುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎಂಟ್ರಿ ಲೆವೆಲ್ ಕಾರುಗಳಿಂದ ಹಿಡಿದು ಎಲೆಕ್ಟ್ರಿಕ್ ಕಾರುಗಳು ಮತ್ತು ಹೈ ಎಂಡ್ ಮಾದರಿಯ ಐಷಾರಾಮಿ ಕಾರುಗಳನ್ನು ಸಹ ದಿನದ ಬಾಡಿಗೆ ಲೆಕ್ಕದಲ್ಲಿ ಕಾರುಗಳನ್ನು ಒದಗಿಸುತ್ತಿವೆ.

ಝೂಮ್ ಕಾರಿಗೆ ಟಕ್ಕರ್- ಓಲಾದಿಂದಲೂ ಸೆಲ್ಫ್ ಡ್ರೈವ್ ಕಾರ್ ಸರ್ವೀಸ್

ಹೀಗಾಗಿ ಓಲಾ ಸಂಸ್ಥೆಯು ಸಹ ಆ್ಯಪ್ ಆಧಾರಿತ ಕ್ಯಾಬ್ ಸೇವೆಗಳೊಂದಿಗೆ ಸೆಲ್ಪ್ ಡ್ರೈವಿಂಗ್ ಕಾರುಗಳನ್ನು ಸಹ ಒದಗಿಸಲು ಮುಂದಾಗಿದ್ದು, ಝೂಮ್‌ಕಾರ್, ಮೈಲೆಸ್ ಮತ್ತು ಡ್ರೈವ್‌ಜಿ ಸಂಸ್ಥೆಗಳಿಗೆ ಭರ್ಜರಿಯಾಗಿಯೇ ಪೈಪೋಟಿ ನೀಡಲು ಸಜ್ಜುಗೊಳ್ಳುತ್ತಿದೆ.

MOST READ: ಎಲೆಕ್ಟ್ರಿಕ್ ಕಾರು ಖರೀದಿದಾರರಿಗೆ ಎಸ್‌ಬಿಐನಿಂದ ಬಂಪರ್ ಆಫರ್

ಝೂಮ್ ಕಾರಿಗೆ ಟಕ್ಕರ್- ಓಲಾದಿಂದಲೂ ಸೆಲ್ಫ್ ಡ್ರೈವ್ ಕಾರ್ ಸರ್ವೀಸ್

ಇನ್ನು ಓಲಾ ಸಂಸ್ಥೆಯು ಕಳೆದ ತಿಂಗಳ ಹಿಂದಷ್ಟೇ ಸಾರಿಗೆ ನಿಯಮಗಳನ್ನು ಉಲ್ಲಂಘಿಸಿದೆ ಎನ್ನುವ ಆರೋಪದಡಿ ಬೆಂಗಳೂರಿನಲ್ಲಿ 6 ತಿಂಗಳ ಕಾಲ ಕ್ಯಾಬ್ ಸೇವೆಗಳ ಪರವಾನಿಗೆಯನ್ನು ಕಳೆದುಕೊಂಡಿತ್ತು. ಆದ್ರೆ ಅದನ್ನೇ ಜೀವನಾಧಾರವಾಗಿಟ್ಟುಕೊಂಡಿರುವ ಸಾವಿರಾರು ಚಾಲಕರಿಗೆ ಸಮಸ್ಯೆಯಾಗುವ ದೃಷ್ಠಿಯಿಂದ ಮಧ್ಯಪ್ರವೇಶ ಮಾಡಿದ್ದ ರಾಜ್ಯ ಸರ್ಕಾರವು ಓಲಾ ಸಂಸ್ಥೆಯಿಂದ ಭರ್ಜರಿ ಮೊತ್ತದ ದಂಡವಸೂಲಿ ಮಾಡಿ ಕ್ಯಾಬ್ ಸೇವೆಯ ಮೇಲಿನ ನಿಷೇಧವನ್ನು ತೆಗೆದುಹಾಕಿತ್ತು.

ಝೂಮ್ ಕಾರಿಗೆ ಟಕ್ಕರ್- ಓಲಾದಿಂದಲೂ ಸೆಲ್ಫ್ ಡ್ರೈವ್ ಕಾರ್ ಸರ್ವೀಸ್

2016ರಲ್ಲಿ ಪಡೆಯಲಾಗಿರುವ ಕ್ಯಾಬ್ ಸೇವೆಗಳ ಪರವಾನಿಯ ನೀತಿಯನ್ನು ಉಲ್ಲಂಘಿಸಿದ್ದ ಓಲಾ ಸಂಸ್ಥೆಯು ಅಕ್ರಮವಾಗಿ ಬೈಕ್ ಟ್ಯಾಕ್ಸಿ‌ಗಳನ್ನು ಆರಂಭಿಸಿದ್ದು ಸಾಕಷ್ಟು ಗೊಂದಕ್ಕೆ ಕಾರಣವಾಗಿತ್ತು. ಹೀಗಾಗಿ ಈ ಅಕ್ರಮವನ್ನು ಪತ್ತೆ ಹಚ್ಚಿದ್ದ ಸಾರಿಗೆ ಇಲಾಖೆಯು ಇದಕ್ಕಾಗಿ ಹೊಸ ಪರವಾನಿಗೆ ಪಡೆಯುವ ಅವಶ್ಯಕತೆಯಿದೆ ಎಂದಿತ್ತು.

MOST READ: ಪಾರ್ಕಿಂಗ್ ವೇಳೆ ಮಹಿಳೆಯ ಎಡವಟ್ಟು- ಮೊದಲ ಮಹಡಿಯಿಂದ ಲೆಕ್ಸಸ್ ಕಾರು ಜಂಪ್..!

ಝೂಮ್ ಕಾರಿಗೆ ಟಕ್ಕರ್- ಓಲಾದಿಂದಲೂ ಸೆಲ್ಫ್ ಡ್ರೈವ್ ಕಾರ್ ಸರ್ವೀಸ್

ಹೀಗಾಗಿ ಬೈಕ್ ಟ್ಯಾಕ್ಸಿ ಸೇವೆಗಳ ಬಗೆಗೆ ಇದ್ದ ಗೊಂದಲದಿಂದ ಹೊರಬಂದಿರುವ ಓಲಾ ಸಂಸ್ಥೆಯು ಮುಂದಿನ ತನ್ನ ಯೋಜನೆಗಳಿಗಾಗಿ ಹೊಸ ಪರವಾನಿಗೆ ಪತ್ರವನ್ನು ಪಡೆದುಕೊಂಡಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಬೈಕ್ ಟ್ಯಾಕ್ಸಿ, ಸೆಲ್ಪ್ ಡ್ರೈವಿಂಗ್ ಕಾರ್ ಸರ್ವೀಸ್ ಮತ್ತು ವ್ಯಯಕ್ತಿಯ ಬಳಕೆಯ ಕಾರುಗಳ ಸೇವೆಗಳನ್ನು ಆರಂಭಿಸಲಿದೆ.

More from DriveSpark

Article Published On: Tuesday, April 23, 2019, 19:12 [IST]
English summary
Ola to offer luxury self-drive subscription services. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+