ಜಾರಿಯಾಗಲಿದೆ ಒಲಾ ಹಾಗೂ ಊಬರ್ ಕಂಪನಿಗಳಿಗೆ ಹೊಸ ನಿಯಮ

ಭಾರತ ಸರ್ಕಾರವು ಎಲೆಕ್ಟ್ರಿಕ್ ವಾಹನದ ಉದ್ಯಮದ ಉತ್ತೇಜನಕ್ಕಾಗಿ ಸಾಕಷ್ಟು ಕ್ರಮಗಳನ್ನು ಕೈಗೊಂಡು, ಪರಿಸರ ಸ್ನೇಹಿ ವಾಹನಗಳನ್ನು ಹೊಂದಲು ಯೋಜನೆ ರೂಪಿಸುತ್ತಿದೆ. ಈ ಯೋಜನೆಯ ಅಂಗವಾಗಿ ಕ್ಯಾಬ್ ಸೇವೆಗಳನ್ನು ಒದಗಿಸುತ್ತಿರುವ ಒಲಾ ಹಾಗೂ ಊಬರ್ ಸಂಸ್ಥೆಗಳಿಗೆ ತಮ್ಮ ಬಳಿಯಿರುವ 40% ಕಾರುಗಳನ್ನು ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಯಿಸಿಕೊಳ್ಳಲು ಸೂಚಿಸಲಿದೆ.

ಜಾರಿಯಾಗಲಿದೆ ಒಲಾ ಹಾಗೂ ಊಬರ್ ಕಂಪನಿಗಳಿಗೆ ಹೊಸ ನಿಯಮ

ಇತ್ತೀಚಿಗೆ ನವದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಯಿಟರ್ಸ್ ವರದಿಗಳ ಪ್ರಕಾರ, ಈ ಉನ್ನತ ಮಟ್ಟದ ಸಭೆಯಲ್ಲಿ ನೀತಿ ಆಯೋಗದ ಅಧಿಕಾರಿಗಳ ಜೊತೆಯಲ್ಲಿ, ರಸ್ತೆ ಸಾರಿಗೆ, ಇಂಧನ, ಮರುಬಳಕೆಯ ಇಂಧನ, ಕಬ್ಬಿಣ, ಭಾರಿ ಕೈಗಾರಿಕೆ ಹಾಗೂ ವಾಣಿಜ್ಯ ಸಚಿವಾಲಯದ ಅಧಿಕಾರಿಗಳು ಭಾಗಿಯಾಗಿದ್ದರು. ಈ ಸಭೆಯಲ್ಲಿ ಪ್ರಮುಖವಾಗಿ ಎಲೆಕ್ಟ್ರಿಕ್ ವಾಹನಗಳು ಹಾಗೂ ಅದರ ಬೆಳವಣಿಗೆಗಳ ಬಗ್ಗೆ ಚರ್ಚಿಸಲಾಯಿತು.

ಜಾರಿಯಾಗಲಿದೆ ಒಲಾ ಹಾಗೂ ಊಬರ್ ಕಂಪನಿಗಳಿಗೆ ಹೊಸ ನಿಯಮ

ಭಾರತ ಸರ್ಕಾರವು ಎಲೆಕ್ಟ್ರಿಕ್ ವಾಹನಗಳನ್ನು ಹೊಂದಲು ಕಾಲಮಿತಿಯನ್ನು ಹಾಕಿಕೊಂಡಿದೆ. ಕೆಲವು ದಿನಗಳ ಹಿಂದಷ್ಟೆ ಸರ್ಕಾರವು ಇಂಧನಗಳಿಂದ ಚಲಿಸುವ ತ್ರಿ ಚಕ್ರವಾಹನಗಳನ್ನು ಏಪ್ರಿಲ್ 2023ರಿಂದ ನಿಷೇಧಿಸಲಿದೆ ಎಂಬ ಮಾಹಿತಿ ದೊರೆತಿತ್ತು.

ಜಾರಿಯಾಗಲಿದೆ ಒಲಾ ಹಾಗೂ ಊಬರ್ ಕಂಪನಿಗಳಿಗೆ ಹೊಸ ನಿಯಮ

ಹಾಗೆಯೇ 150 ಸಿಸಿಗಿಂತ ಕಡಿಮೆ ಎಂಜಿನ್ ಹೊಂದಿರುವ ದ್ವಿ ಚಕ್ರ ವಾಹನಗಳನ್ನು ಸಹ ಏಪ್ರಿಲ್ 2025ರಿಂದ ನಿಷೇಧಿಸಲಾಗುವುದು. ಈ ಸಭೆಯಲ್ಲಿ ತೆಗೆದುಕೊಂಡಿರುವ ತೀರ್ಮಾನವು ಒಲಾ ಹಾಗೂ ಉಬರ್ ಕಂಪನಿಗಳ ಮೇಲೆ ಪರಿಣಾಮ ಬೀರಲಿದೆ.

ಜಾರಿಯಾಗಲಿದೆ ಒಲಾ ಹಾಗೂ ಊಬರ್ ಕಂಪನಿಗಳಿಗೆ ಹೊಸ ನಿಯಮ

ಬಹಳ ಹಿಂದೆಯೇ ಒಲಾ ಹಾಗೂ ಉಬರ್ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಹೊಂದಲು ಪ್ರಯತ್ನಿಸಿದ್ದವು. ಆದರೆ ಎಲೆಕ್ಟ್ರಿಕ್ ಕಾರುಗಳ ಅಲಭ್ಯತೆ ಹಾಗೂ ಎಲೆಕ್ಟ್ರಿಕ್ ಕಾರುಗಳಿಗೆ ಬೇಕಾಗಿರುವ ಸೌಲಭ್ಯಗಳು ಭಾರತದಲ್ಲಿ ಲಭ್ಯವಿಲ್ಲದ ಕಾರಣಕ್ಕೆ ಯಶಸ್ವಿಯಾಗಿರಲಿಲ್ಲ. ಒಲಾ ಹಾಗೂ ಉಬರ್ ಕಂಪನಿಗಳ ಕಾರುಗಳು ಪ್ರತಿದಿನ ನೂರಾರು ಕಿ.ಮೀ ದೂರವನ್ನು ಕ್ರಮಿಸುತ್ತವೆ. ಆದರೆ ಎಲೆಕ್ಟ್ರಿಕ್ ಕಾರುಗಳ ಮೈಲೇಜ್ ವ್ಯಾಪ್ತಿಯು ಕಡಿಮೆ ಇದೆ.

ಜಾರಿಯಾಗಲಿದೆ ಒಲಾ ಹಾಗೂ ಊಬರ್ ಕಂಪನಿಗಳಿಗೆ ಹೊಸ ನಿಯಮ

ಕ್ಯಾಬ್ ಚಾಲಕನು ಸದ್ಯಕ್ಕೆ ಕೆಲವೇ ಸಂಖ್ಯೆಯಲ್ಲಿರುವ ಚಾರ್ಜಿಂಗ್ ಸ್ಟೇಷನ್‍‍ಗಳಿಗಾಗಿ ಹುಡುಕಾಡ ಬೇಕಾಗುತ್ತದೆ. ನಂತರ ಕಾರುಗಳನ್ನು ಚಾರ್ಜ್ ಮಾಡಲು ಹಲವು ಗಂಟೆಗಳ ಕಾಲ ಕಾಯಬೇಕಾಗುತ್ತದೆ. ಇದರಿಂದ ಹಲವು ಗಂಟೆಗಳ ಸಮಯ ವ್ಯರ್ಥವಾಗಲಿದೆ.

MOST READ: ಟ್ಯೂಬ್‍‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍‍ಲೆಸ್ ಟಯರ್ ಸದ್ದು ಶುರು

ಜಾರಿಯಾಗಲಿದೆ ಒಲಾ ಹಾಗೂ ಊಬರ್ ಕಂಪನಿಗಳಿಗೆ ಹೊಸ ನಿಯಮ

ಎಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಪಟ್ಟ ನಿಯಮವನ್ನು ಜಾರಿಗೆ ತರುವ ಮುನ್ನ ಹಲವಾರು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. 2026ರೊಳಗೆ ಒಲಾ ಹಾಗೂ ಉಬರ್ ಕಂಪನಿಗಳು ಈ ನಿಯಮವನ್ನು ಅಳವಡಿಸಿಕೊಳ್ಳಬೇಕಾದರೆ ತಕ್ಷಣವೇ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿದೆ.

MOST READ: ಮ್ಯಾನುವಲ್ ಕಾರ್ ಡ್ರೈವಿಂಗ್ ಮಾಡದಿದ್ರೆ ಲೈಸೆನ್ಸ್ ಸಿಗೋದಿಲ್ಲ

ಜಾರಿಯಾಗಲಿದೆ ಒಲಾ ಹಾಗೂ ಊಬರ್ ಕಂಪನಿಗಳಿಗೆ ಹೊಸ ನಿಯಮ

ಈ ನಿಯಮವು ಕಮರ್ಷಿಯಲ್ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿರುವ ದ್ವಿಚಕ್ರ ವಾಹನಗಳಿಗೂ ಅನ್ವಯಿಸಲಿದೆ. ಈ ವಾಹನಗಳನ್ನು ಅಮೇಜಾನ್, ಫ್ಲಿಪ್‍‍ಕಾರ್ಟ್, ಸ್ವಿಗ್ಗಿ, ಝೋಮಾಟೊ ಕಂಪನಿಗಳು ತಮ್ಮ ಸೇವೆಯನ್ನು ನೀಡಲು ಬಳಸಿಕೊಳ್ಳುತ್ತಿವೆ.

MOST READ: ಈ ಹುಚ್ಚು ಸಾಹಸಕ್ಕೆ ಬಹುದೊಡ್ಡ ಸಲಾಂ..!

ಜಾರಿಯಾಗಲಿದೆ ಒಲಾ ಹಾಗೂ ಊಬರ್ ಕಂಪನಿಗಳಿಗೆ ಹೊಸ ನಿಯಮ

ಡ್ರೈವ್‍‍‍ಸ್ಪಾರ್ಕ್ ಅಭಿಪ್ರಾಯ

ಸರ್ಕಾರವು ತೆಗೆದುಕೊಳ್ಳುತ್ತಿರುವ ಈ ನಿರ್ಧಾರದಿಂದಾಗಿ ಎಲೆಕ್ಟ್ರಿಕ್ ವಾಹನ ಉದ್ಯಮಕ್ಕೆ ನೆರವಾಗಲಿದೆ. ಆದರೆ ಈ ನಿಯಮಗಳಿಂದ ಟ್ಯಾಕ್ಸಿ ಸೇವೆಯನ್ನು ನೀಡುತ್ತಿರುವ ಕಂಪನಿಗಳಿಗೆ ಎಷ್ಟು ಪ್ರಯೋಜನವಾಗಲಿದೆ ಎಂಬುದನ್ನು ಕಾದು ನೋಡಬೇಕು. ಟ್ಯಾಕ್ಸಿ ಸೇವೆ ನೀಡುವವರು ಬ್ಯಾಟರಿ ಚಾರ್ಜ್ ಮಾಡುತ್ತಲೇ ಸಮಯ ಕಳೆದುಹೋಗುತ್ತದೆ.

ಜಾರಿಯಾಗಲಿದೆ ಒಲಾ ಹಾಗೂ ಊಬರ್ ಕಂಪನಿಗಳಿಗೆ ಹೊಸ ನಿಯಮ

ಸರಿಯಾದ ಸೌಲಭ್ಯಗಳನ್ನು ಒದಗಿಸಿದ ನಂತರ ಈ ನಿಯಮಗಳನ್ನು ಜಾರಿಗೆ ತಂದರೆ, ಟ್ಯಾಕ್ಸಿ ಚಾಲಕರಿಗೆ, ಕ್ಯಾಬ್ ಸಂಸ್ಥೆಗಳಿಗೆ, ಸರ್ಕಾರಕ್ಕೆ ಎಲ್ಲಕ್ಕಿಂತ ಹೆಚ್ಚಾಗಿ ಪರಿಸರಕ್ಕೆ ಇದರಿಂದಾಗಿ ಹೆಚ್ಚಿನ ಪ್ರಯೋಜನವಾಗಲಿದೆ.

Most Read Articles

Kannada
English summary
Ola & Uber Might Be Forced To Convert 40 Percent Of Its Fleet Into Electric Vehicles By 2026 - Read in kannada
Story first published: Saturday, June 8, 2019, 12:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X