Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ಟೆಪ್ನಿ ಹೊಂದಿರುವ ಎಸ್‍ಯುವಿಗೆ ದಂಡ ವಿಧಿಸಲು ಮುಂದಾದ ಪೊಲೀಸರು..!
ಫೋರ್ಡ್ ಇಕೊಸ್ಪೋರ್ಟ್ ದೇಶಿಯ ಮಾರುಕಟ್ಟೆಯಲ್ಲಿನ ಸಬ್ 4 ಮೀಟರ್ ಎಸ್‍ಯುವಿಗಳ ಪೈಕಿ ಹೆಚ್ಚು ಜನಪ್ರಿಯವಾಗಿದೆ. ಈ ಎಸ್‍ಯುವಿ ಮಾರುತಿ ಸುಜುಕಿಯ ವಿಟಾರಾ ಬ್ರಿಝಾ, ಹ್ಯುಂಡೈನ ವೆನ್ಯೂ, ಮಹೀಂದ್ರಾ ಎಕ್ಸ್ ಯುವಿ 300ಗಳಿವೆ ಪೈಪೋಟಿ ನೀಡುತ್ತದೆ.

ಸಬ್ 4 ಮೀಟರ್ ಎಸ್‍ಯುವಿ ಸೆಗ್‍ಮೆಂಟ್ ಅನ್ನು ಜನಪ್ರಿಯಗೊಳಿಸಿದ ಕೀರ್ತಿ ಇಕೊಸ್ಪೋರ್ಟ್‍ಗೆ ಸಲ್ಲುತ್ತದೆ. ಮೊದಲ ಬಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದ ಎಸ್‍ಯುವಿ ಎಂಬ ಹೆಗ್ಗಳಿಕೆಯನ್ನು ಸಹ ಹೊಂದಿದೆ. ಬೇರೆ ಎಸ್‍ಯುವಿಗಳಿಗೆ ಹೋಲಿಸಿದರೆ ಕಡಿಮೆ ಬೆಲೆಯನ್ನು ಹೊಂದಿರುವುದು ಹಾಗೂ ಒರಟಾದ ಬಾಡಿಯನ್ನು ಹೊಂದಿರುವುದು ಈ ಎಸ್‍ಯುವಿಯ ಯಶಸ್ಸಿಗೆ ಕಾರಣವಾಗಿದೆ.

ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್, ಒರಟಾದ ಬಾಡಿ ವಿನ್ಯಾಸ, ಕಪ್ಪು ಬಣ್ಣದ ಪ್ಲಾಸ್ಟಿಕ್ ಕ್ಲಾಡಿಂಗ್ ಹಾಗೂ ಹಿಂಭಾಗದಲ್ಲಿರುವ ಸ್ಟೆಪ್ನಿ ಈ ಎಸ್‍ಯುವಿಯನ್ನು ಆಕರ್ಷಕವಾಗಿ ಕಾಣುವಂತೆ ಮಾಡಿವೆ. ಆದರೆ ಇತ್ತೀಚಿಗೆ ಪೊಲೀಸರು ಈ ಎಸ್‍ಯುವಿಯಲ್ಲಿರುವ ಸ್ಟೆಪ್ನಿಯನ್ನು ಅಕ್ರಮವೆಂದು ತಿಳಿಸಿ ಮಾಲೀಕನನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು.
ಸ್ಟೆಪ್ನಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಪೊಲೀಸರು ಮಾಲೀಕನನ್ನು ಎಸ್‍ಯುವಿಯನ್ನು ಅಕ್ರಮವಾಗಿ ಮಾಡಿಫೈಗೊಳಿಸಲಾಗಿದೆ ಎಂದು ತಡೆದು ನಿಲ್ಲಿಸಿದ್ದರು. ಈ ಘಟನೆಯ ವೀಡಿಯೊವನ್ನು ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಲಾಗಿದೆ.

ಈ ವೀಡಿಯೊದಲ್ಲಿ ಕಾಣುವಂತೆ ಇಕೊಸ್ಪೋರ್ಟ್ ಮಾಲೀಕನು ಸಂಚಾರಿ ಪೊಲೀಸರೊಂದಿಗೆ ಹಿಂಭಾಗದಲ್ಲಿರುವ ಹೆಚ್ಚುವರಿ ಟಯರ್ ಅಥವಾ ಸ್ಟೆಪ್ನಿಯ ಬಗ್ಗೆ ವಾಗ್ವಾದ ನಡೆಸುತ್ತಿರುವುದನ್ನು ಕಾಣಬಹುದು. ಅಪ್‍ಲೋಡ್ ಮಾಡಲಾಗಿರುವ ವೀಡಿಯೊ ಚಿಕ್ಕದಾಗಿದೆ.

ಇದರಲ್ಲಿರುವ ಪೊಲೀಸರು ವೀಡಿಯೊ ರೆಕಾರ್ಡ್ ಮಾಡುತ್ತಿರುವುದನ್ನು ನಿಲ್ಲಿಸುವಂತೆ ಹೇಳುತ್ತಿರುವುದನ್ನು ಕಾಣಬಹುದು. ಪೊಲೀಸರ ಪ್ರಕಾರ ಈ ಎಸ್‍ಯುವಿಯ ಹಿಂಭಾಗದಲ್ಲಿ ಸ್ಟೆಪ್ನಿಯನ್ನು ಹೊಂದಿರುವುದು ಕಾನೂನುಬಾಹಿರವಾಗಿದೆ. ಅವರ ಪ್ರಕಾರ ಈ ರೀತಿಯಾಗಿ ಸ್ಟೆಪ್ನಿಯನ್ನು ಮಾಲೀಕನೇ ಅಳವಡಿಸಿಕೊಂಡಿದ್ದು, ಇದಕ್ಕಾಗಿ ಮಾಲೀಕನಿಗೆ ದಂಡ ವಿಧಿಸುವುದಾಗಿ ತಿಳಿಸಿದ್ದಾರೆ.

ಇದರಿಂದಾಗಿ ಕುಪಿತಗೊಳ್ಳುವ ಮಾಲೀಕನು ಪೊಲೀಸರೊಂದಿಗೆ ವಾಗ್ವಾದಕ್ಕಿಳಿಯುತ್ತಾನೆ. ಈ ವೀಡಿಯೊದಲ್ಲಿ ಮಾಲೀಕನು ಸ್ಟೆಪ್ನಿಯನ್ನು ಟಾಪ್ ಮೇಲೆ ಅಳವಡಿಸಿಕೊಳ್ಳುವಂತೆ ಏಕೆ ಹೇಳುತ್ತಿದ್ದಾರೆ ಎಂದು ಪದೇ ಪದೇ ಕೇಳುತ್ತಿದ್ದಾನೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಹಿಂಬದಿಯಲ್ಲಿ ಸ್ಟೆಪ್ನಿಯನ್ನು ಏಕೆ ಹಾಕಿಕೊಳ್ಳಬಾರದು ಎಂಬುದರ ಹಿಂದಿನ ಕಾರಣ ಕೇಳುವ ಮಾಲೀಕನು, ಈ ಎಸ್‍ಯುವಿಯನ್ನು ಖರೀದಿಸಿದಾಗಲೇ ಹಿಂಭಾಗದಲ್ಲಿ ಸ್ಟೆಪ್ನಿಯನ್ನು ಅಳವಡಿಸಲಾಗಿದೆ ಎಂದು ಹೇಳುತ್ತಾನೆ.
MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ತಾನು ಯಾವುದೇ ರೀತಿಯಾಗಿ ಮಾಡಿಫೈ ಮಾಡಿಲ್ಲ, ದೇಶದಲ್ಲಿರುವ ಪ್ರತಿಯೊಂದು ಇಕೊಸ್ಪೋರ್ಟ್ ಎಸ್‍ಯುವಿಯನ್ನು ಇದೇ ರೀತಿಯಲ್ಲಿ ಮಾರಾಟ ಮಾಡಲಾಗುತ್ತಿದೆಯೆಂದು ಹೇಳುತ್ತಾನೆ. ಈ ವೀಡಿಯೊ ಅಲ್ಲಿಗೆ ಕೊನೆಯಾಗುತ್ತದೆ. ಮುಂದೆ ಏನಾಯಿತು ಎಂಬುದು ತಿಳಿದು ಬರಬೇಕಿದೆ. ಮಾಲೀಕನು ದಂಡವನ್ನು ಪಾವತಿಸದೇ ಅಲ್ಲಿಂದ ತೆರಳಿರುವ ಸಾಧ್ಯತೆಗಳಿವೆ.
MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಯಾವುದೇ ಪೊಲೀಸರು ಸುಮ್ಮನೆ ದಂಡವನ್ನು ವಿಧಿಸಿದರೆ ನೀವು ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ದಂಡ ವಿಧಿಸಿರುವುದು ತಪ್ಪು ಎಂದು ಕಂಡು ಬಂದಲ್ಲಿ ನ್ಯಾಯಾಲಯವು ಪರಿಹಾರ ನೀಡುವಂತೆ ಸಂಬಂಧಪಟ್ಟವರಿಗೆ ಆದೇಶಿಸುತ್ತದೆ.

ಇಕೊಸ್ಪೋರ್ಟ್, ಈ ಸೆಗ್‍ಮೆಂಟಿನಲ್ಲಿ ಹಿಂಭಾಗದಲ್ಲಿ ಸ್ಟೆಪ್ನಿಯನ್ನು ಹೊಂದಿ ಮಾರಾಟವಾಗುತ್ತಿರುವ ಏಕೈಕ ಎಸ್‍ಯುವಿಯಾಗಿದೆ. ಇದರಿಂದಾಗಿ ಈ ಎಸ್‍ಯುವಿಯ ಆಕರ್ಷಣೆಯು ಹೆಚ್ಚಾಗಿದೆ. ಯಾವುದೇ ವಾಹನವನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿ ಮಾರಾಟ ಮಾಡುವ ಮುನ್ನ ಕೆಲವು ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಪ್ರಮಾಣಪತ್ರಗಳನ್ನು ಪಡೆಯಬೇಕಾಗುತ್ತದೆ.

ಎಆರ್‍ಎಐ ಅನುಮೋದನೆ ನೀಡಿ ಪ್ರಮಾಣಪತ್ರವನ್ನು ವಿತರಿಸಿದ ನಂತರ ಪೊಲೀಸರು ಈ ರೀತಿಯಾಗಿ ದಂಡವನ್ನು ವಿಧಿಸಲು ಬರುವುದಿಲ್ಲ. ಮಾರಾಟವಾಗುವಾಗ ಹಿಂಬದಿಯಲ್ಲಿ ಸ್ಟೆಪ್ನಿಯೊಂದಿಗೆ ಮಾರಾಟವಾದರೆ ಅದು ಮಾಡಿಫೈ ಎಂದು ಪರಿಗಣಿತವಾಗುವುದಿಲ್ಲ.

ಈ ಸ್ಟೆಪ್ನಿಯನ್ನು ಹೊರತುಪಡಿಸಿ ಬೇರೆ ಮಾಡಿಫೈಗಳನ್ನು ಮಾಡಿದರೆ ಅವುಗಳನ್ನು ಅಕ್ರಮವೆಂದು ಪರಿಗಣಿಸಿ ದಂಡ ವಿಧಿಸಲಾಗುತ್ತದೆ. ಈ ಘಟನೆಯಲ್ಲಿರುವ ಇಕೊಸ್ಪೋರ್ಟ್ ಎಸ್‍ಯುವಿ ಮಾರಾಟವಾಗುವ ಸಮಯದಲ್ಲಿಯೇ ಹಿಂಬದಿಯಲ್ಲಿ ಸ್ಟೆಪ್ನಿಯನ್ನು ಹೊಂದಿದ್ದ ಕಾರಣ ಯಾವುದೇ ದಂಡವನ್ನು ವಿಧಿಸುವಂತಿಲ್ಲ.