ಬಿಎಸ್-6 ಎಫೆಕ್ಟ್- ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿ ಟರ್ಬೋ ಪೆಟ್ರೋಲ್ ಎಂಜಿನ್ ಪರಿಚಯಿಸಲಿದೆ ರೆನಾಲ್ಟ್
ಬಿಎಸ್-6 ನಿಯಮವು 2020ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರಲಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಹಲವು ಡೀಸೆಲ್ ಎಂಜಿನ್ ಕಾರು ಮಾದರಿಗಳು ಮಾರಾಟದಿಂದ ಸ್ಥಗಿತಗೊಳ್ಳಲಿವೆ. ಇದರಲ್ಲಿ ರನಾಲ್ಟ್ ನಿರ್ಮಾಣ ಕಾರು ಮಾದರಿಗಳು ಸಹ ಇದ್ದು, ಡೀಸೆಲ್ ಎಂಜಿನ್ ಆಯ್ಕೆಯನ್ನು ಕೈಬಿಡಲಿದೆ.

ಮಾಲಿನ್ಯ ಪ್ರಮಾಣವನ್ನು ಪರಿಣಾಮಕಾರಿಗೆ ತಗ್ಗಿಸುವ ಉದ್ದೇಶದಿಂದ ಆಟೋ ಉದ್ಯಮದಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ತರಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ರೆನಾಲ್ಟ್ ಸೇರಿದಂತೆ ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು 2020ರಿಂದಲೇ ಡೀಸೆಲ್ ಎಂಜಿನ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸುವ ಸುಳಿವು ನೀಡಿವೆ. ಡೀಸೆಲ್ ಎಂಜಿನ್ ವಾಹನಗಳು ಮಾಲಿನ್ಯ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿದ್ದು, ಮುಂದಿನ ದಿನಗಳಲ್ಲಿ ಜಾರಿಗೆ ಬರಲಿರುವ ಬಿಎಸ್-6 (ಭಾರತ್ ಸ್ಟೇಜ್) ನಿಯಮವು ಕಡಿಮೆ ಸಾಮಾರ್ಥ್ಯದ ಡೀಸೆಲ್ ಎಂಜಿನ್ ಉತ್ಪಾದನೆಗೆ ಬ್ರೇಕ್ ಹಾಕಲಿದೆ.

ರೆನಾಲ್ಟ್, ಮಾರುತಿ ಸುಜುಕಿ ಸೇರಿದಂತೆ ಹಲವು ಕಾರು ಉತ್ಪಾದನಾ ಸಂಸ್ಥೆಗಳು ತಮ್ಮ ಜನಪ್ರಿಯ ಡೀಸೆಲ್ ಎಂಜಿನ್ ಕಾರುಗಳ ಮಾರಾಟವನ್ನು ಕೈಬಿಟ್ಟು ಪೆಟ್ರೋಲ್, ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ಆವೃತ್ತಿಗಳ ಉತ್ಪಾದನೆಯತ್ತ ಹೆಚ್ಚಿನ ಗಮನಹರಿಸಲು ಮುಂದಾಗಿವೆ.

ಈಗಾಗಲೇ ಮಾರುತಿ ಸುಜುಕಿ ಸಂಸ್ಥೆಯು ಅಧಿಕೃತವಾಗಿಯೇ ಕಡಿಮೆ ಸಾಮಾರ್ಥ್ಯದ ಡೀಸೆಲ್ ಎಂಜಿನ್ ಕಾರುಗಳ ಮಾರಾಟವನ್ನು 2020ರ ಏಪ್ರಿಲ್‌ನಿಂದ ಬಂದ್ ಮಾಡುವುದಾಗಿ ಹೇಳಿಕೊಂಡಿದ್ದು, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಕಾರುಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದೆ.

ಇದೀಗ ರೆನಾಲ್ಟ್ ಕೂಡಾ ಡೀಸೆಲ್ ಎಂಜಿನ್ ಕಾರುಗಳ ಮಾರಾಟಕ್ಕೆ ಗುಡ್‌ಬೈ ಹೇಳುವ ಮುನ್ಸೂಚನೆ ನೀಡಿದ್ದು, ಕಳೆದ ವಾರವಷ್ಟೇ ಬಿಡುಗಡೆಗೊಳಿಸಲಾದ ಟ್ರೈಬರ್ ಎಂಪಿವಿ ಕಾರಿನಲ್ಲೂ ಸಹ ಪೆಟ್ರೋಲ್ ಹೊರತುಪಡಿಸಿ ಡೀಸೆಲ್ ಎಂಜಿನ್ ಆಯ್ಕೆಯನ್ನು ಕೈಬಿಟ್ಟಿರುವುದು ಇದೇ ಕಾರಣಕ್ಕೆ. ಹಾಗೆಯೇ ಮುಂಬರುವ ದಿನಗಳಲ್ಲಿ ಬಿಡುಗಡೆಗೆ ಸಜ್ಜಾಗುತ್ತಿರುವ ನೆಕ್ಸ್ಟ್ ಜನರೇಷನ್ ಡಸ್ಟರ್ ಆವೃತ್ತಿಗಳಲ್ಲೂ ಡೀಸೆಲ್ ಎಂಜಿನ್ ಆಯ್ಕೆಗಳನ್ನು ತಗ್ಗಿಸಿ ಪೆಟ್ರೋಲ್ ಮತ್ತು ಹೈಬ್ರಿಡ್ ಆವೃತ್ತಿಗಳ ಮಾರಾಟಕ್ಕೆ ಹೆಚ್ಚಿನ ಒತ್ತು ನೀಡಲಿದೆ.

ಒಂದು ವೇಳೆ ಸದ್ಯ ಮಾರುಕಟ್ಟೆಯಲ್ಲಿರುವ ಬಿಎಸ್-4 ಡೀಸೆಲ್ ಎಂಜಿನ್‌ಗಳನ್ನು ಬಿಎಸ್-6 ನಿಯಮಕ್ಕೆ ಉನ್ನತಿಕರಿಸಿದರೂ ಸಹ ಕಾರಿನ ಬೆಲೆಗಳು ಕನಿಷ್ಠ ರೂ. 1.50 ರಿಂದ ರೂ.2 ಲಕ್ಷ ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿವೆ.

ಇದರಿಂದಾಗಿ ಅಗ್ಗದ ಕಾರು ಉನ್ಪತ್ನಗಳನ್ನು ಮಾರಾಟಮಾಡುವ ಕಾರು ಸಂಸ್ಥೆಗಳಿಗೆ ಇದು ಬಿಸಿತುಪ್ಪವಾಗಿ ಪರಿಣಮಿಸಲಿದ್ದು, ಕಾರುಗಳ ಬೆಲೆಗಳನ್ನು ಒಂದೇ ಬಾರಿಗೆ ರೂ.1.50 ಲಕ್ಷ ರೂ. 2 ಲಕ್ಷ ಹೆಚ್ಚಳ ಮಾಡಿದ್ದಲ್ಲಿ ಗ್ರಾಹಕರನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ.
MOST READ:ದುಬಾರಿ ದಂಡಕ್ಕೆ ಜನಾಕ್ರೋಶ: ವಾಹನ ಸವಾರರಿಗೆ ಸಿಹಿಸುದ್ದಿ ನೀಡಿದ ಕರ್ನಾಟಕ ಸರ್ಕಾರ..!

ಇದರಿಂದ ರೆನಾಲ್ಟ್ ಸಂಸ್ಥೆಯು 1.5-ಲೀಟರ್ ಸಾಮರ್ಥದ ಡೀಸೆಲ್ ಎಂಜಿನ್ ಆಯ್ಕೆಯನ್ನು ಕೈ ಕೈಬಿಟ್ಟು, ಹೊಸದಾಗಿ 1.0-ಲೀಟರ್ ಟರ್ಬೋ ಪೆಟ್ರೋಲ್ ಮತ್ತು 1.3-ಲೀಟರ್ ಟರ್ಬೋ ಪೆಟ್ರೋಲ್ ಮತ್ತು1.6-ಲೀಟರ್ ಇನ್-ಲೈನ್ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಮಾದರಿಯನ್ನೇ ಉನ್ನತಿಕರಿಸಿ ಬಿಡುಗಡೆ ಮಾಡುವ ಯೋಜನೆ ಹೊಂದಲಾಗಿದೆ.
MOST READ:ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ಹೊಸ ಎಂಜಿನ್ ಅಭಿವೃದ್ದಿಗೆ ಒಂದಾಗಿರುವ ರೆನಾಲ್ಟ್, ನಿಸ್ಸಾನ್ ಮತ್ತು ಮಿಟ್ಸುಬಿಷಿ ಸಂಸ್ಥೆಗಳು ಒಂದಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ಕೆಲವು ಮಹತ್ವದ ಬದಲಾವಣೆಗಳೊಂದಿಗೆ ಹೊಸ ಕಾರು ಮಾರಾಟದಲ್ಲಿ ಬದಲಾವಣೆಗೆ ಮುಂದಾಗಿವೆ.


Click it and Unblock the Notifications